ಅಭಿಪ್ರಾಯ / ಸಲಹೆಗಳು

 

ದಿನಾಂಕ: 24/09/2021 ರಂದು ಡಾ. ಶಕಿಲಾ ಸಚಿನ್‌(47 ವರ್ಷ) ಎಂಬವರು  ದಿನಾಂಕ 24-9-2021  ರಂದು ನೀಡಿರುವ  ದೂರಿನಲ್ಲಿ  ಪಿರ್ಯಾದುದಾರರು ಬನ್ನಂಜೆಯಲ್ಲಿರುವ ಮಂಜುನಾಥ ಕಣ್ಣಿನ ಆಸ್ಪತ್ರೆಯಲ್ಲಿ ನೇತ್ರ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದು, ದಿನಾಂಕ: 23/09/2021 ರಂದು 19:30 ಗಂಟೆಯಿಂದ ದಿನಾಂಕ: 24/09/2021 ರಂದು ಬೆಳಿಗ್ಗೆ 08:30 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಮಂಜುನಾಥ ಕಣ್ಣಿನ ಆಸ್ಪತ್ರೆಯ ಶೆಟರ್‌ನ ಬೀಗವನ್ನು ಮುರಿದು, ಪಿರ್ಯಾದುದಾರರು ಕೆಲಸ ಮಾಡುವ ತಪಾಸಣಾ ಕೊಠಡಿಯ ಡ್ರಾವರ್‌ನ ಚಿಲಕವನ್ನುಯಾವುದೋ ಆಯುಧದಿಂದ ಮೀಟಿ ತೆಗೆದು, ಮೇಲಿನ ಡ್ರಾವರ್‌ನಲ್ಲಿದ್ದ ರೂ. 20,000/-, ಕೆಳಗಡೆ ಡ್ರಾವರ್‌ನಲ್ಲಿ ಇಟ್ಟಿದ್ದ ರೂ. 4,50,000/- ಹಣ ಹಾಗೂ ರಿಸೆಪ್ಷನ್‌ನಲ್ಲಿದ್ದ ರೂ. 4,500/- ಹಣವನ್ನು ಮತ್ತು ಸಿಸಿ ಟಿವಿ ಡಿವಿಆರ್‌ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರೂ. 4,79,500/- ಆಗಬಹುದು ಎಂಬುದಾಗಿ  ದೂರು ನೀಡಿದ್ದು ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಅ.ಕ್ರ 138 /2021, ಕಲಂ 457,380  ಐ.ಪಿ.ಸಿ ರಂತೆ   ಪ್ರಕರಣ ದಾಖಲಿಸಿಕೊಂಡು ತನಿಖೆ  ಕೈಗೊಳ್ಳಲಾಗಿರುತ್ತದೆ.
                 ಪ್ರಕರಣದ ತನಿಖೆ ಕೈಗೊಂಡು ಆರೋಪಿ ಹಾಗೂ  ಸ್ವತ್ತು  ಪತ್ತೆಯ ಬಗ್ಗೆ ಕೃತ್ಯ ನಡೆದ ಆಸ್ಪತ್ರೆಯ ಆಸುಪಾಸಿನ  ಕಟ್ಟಡ , ಮನೆ , ಅಂಗಡಿಗಳಲ್ಲಿರುವ ಸಿ.ಸಿ ಕ್ಯಾಮರಾ ಪುಟೇಜ್‌ಗಳನ್ನು ಪರಿಶೀಲನೆ ಮಾಡಿ ಆರೋಪಿಯ  ಪತ್ತೆ ಬಗ್ಗೆ ಮಾಹಿತಿ ಪಡೆಯಲಾಗಿ ಆತನ  ಚಹರೆಗಳು  ಕಾರ್ಕಳ ನಗರ ಪೊಲೀಸ್ ಠಾಣೆಯ ಎಂ.ಓ.ಬಿ ಆಸಾಮಿಯಾದ ಸುರೇಶ್‌ ಪೂಜಾರಿ ಎಂಬಾತನಿಗೆ  ಹೋಲಿಕೆ ಯಾಗಿದ್ದು  ಆರೋಪಿ  ಮತ್ತು ಸ್ವತ್ತು  ಪತ್ತೆ ಬಗ್ಗೆ ವಿಶೇಷ  ಕರ್ತವ್ಯದಲ್ಲಿ    ತೆರಳಿದ ಉಡುಪಿ  ನಗರ ಠಾಣೆಯ ಲೋಕೇಶ ಈ.  ಹೆಚ್‌‌ಸಿ  62 ,ಹಾಗೂ  ಪಿ.ಸಿ 2567ನೇ ಸಂತೋಷ ರಾಥೋಡರವರು ಆತನನ್ನು ದಿನಾಂಕ: 11/10/2021ರಂದು  ಮುಂಜಾನೆ 5:30 ಗಂಟೆಯ ಸುಮಾರಿಗೆ  ಉಡುಪಿ  ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಬಳಿ ವಶಕ್ಕೆ  ಪಡೆದು  ಠಾಣೆಗೆ  ಹಾಜರುಪಡಿಸಿದವನ್ನು  ವಿಚಾರಣೆ  ನಡೆಸಲಾಗಿ ಆರೋಪಿತನು ಈ ಹಿಂದೆ ಶಿರ್ವ, ಹಿರಿಯಡ್ಕ, ಕಾರ್ಕಳ ನಗರ ಠಾಣೆ, ಪಡುಬಿದ್ರಿ, ದಾವಣಗೆರೆ , ಬೆಳಗಾಂ, ಮೂಲ್ಕಿ ಗಳಲ್ಲಿ  ಕಳ್ಳತನ  ನಡೆಸಿದ್ದು  ಇತ್ತಿಚೆಗೆ ಉಡುಪಿಯ  ಮಂಜುನಾಥ ಕಣ್ಣಿನ ಆಸ್ಪತ್ರೆ, ಉಡುಪಿ ಮತ್ತು ಮಲ್ಪೆ ಸೋಸೈಟಿ ಯಲ್ಲಿ ನಗದು  ಹಾಗೂ ಉಡುಪಿಯ ಗರಡಿ ರಸ್ತೆಯಲ್ಲಿ ಬೈಕ್  ಕಳ್ಳತನ ನಡೆಸಿರುವುದನ್ನು ಒಪ್ಪಿಕೊಂಡಿರುತ್ತಾನೆ. ಆರೋಪಿತನನ್ನು ದಸ್ತಗಿರಿ ಮಾಡಿ  ಆರೋಪಿತನಿಂದ ಒಟ್ಟು ನಗದು ರೂ.  4,33,000/-,  2 ಮೋಟಾರ್‌ಸೈಕಲ್‌ಗಳು ಹಾಗೂ 2 ಮೊಬೈಲ್  ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಪ್ರಕರಣದಲ್ಲಿ ಆರೋಪಿತರ ಪತ್ತೆಯ ಬಗ್ಗೆ ಮಾನ್ಯ ಪೊಲೀಸ್‌ ಅಧೀಕ್ಷಕರಾದ ಶ್ರೀ ಎನ್‌. ವಿಷ್ಣುವರ್ಧನ್‌, ಐ.ಪಿ.ಎಸ್‌, ಉಡುಪಿ ರವರ ಆದೇಶದಂತೆ, ಶ್ರೀ ಕುಮಾರಚಂದ್ರ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು, ಶ್ರೀ ಸುಧಾಕರ ಸದಾನಂದ ನಾಯ್ಕ್, ಡಿವೈಎಸ್‌ಪಿ ಉಡುಪಿ ರವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಮೋದ ಕುಮಾರ್ ಪಿ, ಪ್ರೋಬೆಷನರಿ ಪಿಎಸ್‌ಐ ರವರಾದ ಸುಹಾಸ್‌. ಆರ್‌,  ಪ್ರಸಾದ್‌ಕುಮಾರ್‌, ಎಎಸ್‌ಐ ಜಯಕರ, ಅರುಣ್‌ ಸಿಬ್ಬಂದಿಯವರಾದ ಲೋಕೇಶ್‌, ಸಂತೋಷ ರಾಠೋಡ್, ಬಾಲಕೃಷ್ಣ, ರಿಯಾಜ್‌ ಅಹಮ್ಮದ್‌, ರಾಜೇಶ್‌, ದೇವರಾಜ್‌, ಕಿರಣ್, ಚೇತನ್‌, ಆನಂದ ಗಾಣಿಗ, ವಿಶ್ವನಾಥ ಶೆಟ್ಟಿ, ಹೇಮಂತ್‌, ಕಾರ್ತಿಕ್‌, ಲಿಂಗರಾಜು, ರಾಕೇಶ್‌ರವರು ಪಾಲ್ಗೊಂಡಿರುತ್ತಾರೆ. ಆರೋಪಿ ಸುರೇಶ್‌ ಪೂಜಾರಿ ಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿಇರುತ್ತಾನೆ.
ಆರೋಪಿತನ  ಹೆಸರು ವಿಳಾಸ  ಹಾಗೂ ಆತನ  ವಿರುದ್ದ  ದಾಖಲಾದ ಪ್ರಕರಣಗಳ  ವಿವರ

ಸುರೇಶ ಪೂಜಾರಿ,  ಪ್ರಾಯ:  49  ವರ್ಷ,  ತಂದೆ: ದಿ||  ಕೊರಗ  ಪೂಜಾರಿ,  ವಾಸ: ಅಚ್ಚೊಟ್ಟು ದರ್ಖಾಸು  ಮನೆ,  ಅತ್ತೂರು  ಗ್ರಾಮ,  ನಿಟ್ಟೆ,  ಕಾರ್ಕಳ  ತಾಲೂಕು,  ಉಡುಪಿ  ಜಿಲ್ಲೆ
1)    ಶಿರ್ವ ಪೊಲೀಸ್‌ಠಾಣಾ  ಅ.ಕ್ರ. 54/2010, ಕಲ:  457,  380  ಐಪಿಸಿ,  
2)    ಹಿರಿಯಡ್ಕ ಪೊಲೀಸ್‌ ಠಾಣಾ ಅ.ಕ್ರ.  125/2010, ಕಲಂ:  379 ಐಪಿಸಿ,
3)     ಕಾರ್ಕಳ  ನಗರ ಠಾಣಾ ಅ.ಕ್ರ. 221/2010, ಕಲ:  457,  511  ಐಪಿಸಿ,
4)    ಪಡುಬಿದ್ರಿ ಪೊಲೀಸ್ ಠಾಣಾ ಅ.ಕ್ರ.  111/2010, ಕಲ:  457,  380  ಐಪಿಸಿ
5)    ಪಡುಬಿದ್ರಿ ಪೊಲೀಸ್ ಠಾಣಾ  189/2010,  ಕಲ:  457,  380  ಐಪಿಸಿ,
6)    ಮೂಲ್ಕಿ  ಪೊಲೀಸ್‌ಠಾಣಾ ಅ.ಕ್ರ. 99/2020, ಕಲ:  457,  380  ಐಪಿಸಿ,
7)     ದಾವಣಗೆರೆ ಜಿಲ್ಲೆಯ  ಕೆಟಿಜೆ  ನಗರ  ಠಾಣಾ ಅ.ಕ್ರ.  18/2015,  ಕಲ: 454,  457,  380,511  ಐಪಿಸಿ,
8)    ಬೆಳಗಾಂ ಜಿಲ್ಲಾ ಸಿಟಿ  ಮಾರ್ಕೆಟ್‌ ಠಾಣಾ ಅ.ಕ್ರ.  116/2019, ಕಲ:  457,  380  ಐಪಿಸ
9)    ಉಡುಪಿ ನಗರ  ಠಾಣಾ ಅ.ಕ್ರ. 128/2021, ಕಲಂ: 454,  457,380 ಐ.ಪಿ.ಸಿ
10)    ಮಲ್ಪೆ ಠಾಣಾ ಅ.ಕ್ರ. 105/2021, ಕಲಂ: 457, 380 ಐ.ಪಿ.ಸಿ
11)    ಉಡುಪಿ ನಗರ  ಠಾಣಾ ಅ.ಕ್ರ. 144/2021, ಕಲಂ: 379 ಐ.ಪಿ.ಸಿ ಪ್ರಕರಣದಲ್ಲಿ  ಆರೋಪಿಯಾಗಿರುತ್ತಾನೆ .

ಇತ್ತೀಚಿನ ನವೀಕರಣ​ : 13-10-2021 10:36 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ