ಅಭಿಪ್ರಾಯ / ಸಲಹೆಗಳು

ದಿನಾಂಕ: 17/11/2021  ರಂದು ಪಿರ್ಯಾದಿದಾರರಾದ ಬಾಬು ಆಚಾರ್ಯ  ರವರು ನೀಡಿದ ದೂರಿನ ಸಾರಾಂಶವೇನೆಂದರೆ ಶಿವಳ್ಳಿ ಗ್ರಾಮದ ಗುಂಡಿಬೈಲು ಜುಮಾದಿಕಟ್ಟೆ ದೇವಸ್ಥಾನದ ಹಿಂಬದಿ ದುಗ್ಗಣ್ಣಬೆಟ್ಟು ಮಾರ್ಗ ಎಂಬಲ್ಲಿ ಹಳೆ ಮನೆಯ ಹಿಂಬದಿ  ಹೊಸ ಮನೆ ನಿರ್ಮಾಣ ಮಾಡಿದ್ದು, ರಾತ್ರಿ ವೇಳೆ ಹೊಸ ಮನೆಯಲ್ಲಿ ಹೋಗಿ ಮಲಗುತ್ತಿದ್ದರು. ದಿನಾಂಕ 16/11/2021 ರಂದು 21:15 ಗಂಟೆಯಿಂದ ದಿನಾಂಕ 17/11/2021 ರಂದು ಬೆಳಿಗ್ಗೆ 05:30 ಗಂಟೆ ನಡುವೆ ಯಾರೋ ಕಳ್ಳರು ಹಳೆ ಮನೆಯ ಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿ, ಕಪಾಟಿನಲ್ಲಿದ್ದ ಬೀಗದಿಂದ ಲಾಕರ್‌ ತೆಗೆದು ಅದರಲ್ಲಿದ್ದ ಒಟ್ಟು 90 ಗ್ರಾಂ ತೂಕದ ರೂ. 3,60,000/- ಮೌಲ್ಯದ ಚಿನ್ನಾಭರಣಗಳು ಹಾಗೂ ಬೆಳ್ಳಿ ಸಾಮಾಗ್ರಿಗಳು ಒಟ್ಟು ರೂ. 10,000/- ಮೌಲ್ಯದ ಹಾಗೂ ದೇವರ ಡಬ್ಬದಲ್ಲಿದ್ದ ಅಂದಾಜು ರೂ. 400/- ಒಟ್ಟು ಮೌಲ್ಯ ರೂ. 3,70,400/- ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಎಂಬಿತ್ಯಾದಿಯಾಗಿದ್ದು  ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿ ಇರುತ್ತದೆ.   

                   ಪ್ರಕರಣದಲ್ಲಿ  ತಕ್ಷೀರು  ಸ್ಥಳದ ಪರಿಶೀಲನೆ ವೇಳೆ  ಸ್ಥಳದಲ್ಲಿ  ಸಿಕ್ಕಿರುವ  ಬೆರಳುಮುದ್ರೆ   ಉಡುಪಿ ನಗರ ಠಾಣೆಯ ಎಂ.ಓ.ಬಿ ಸುಕೇಶ್  ನಾಯ್ಕ  ಎಂಬವನ ಬೆರಳು ಮುದ್ರೆಗೆ  ಹೊಂದಾಣಿಕೆ  ಆಗಿರುವ ಬಗ್ಗೆ ಉಡುಪಿ ಬೆರಳು  ಮುದ್ರೆ ಘಟಕದವರು ಪಿ.ಐ ಉಡುಪಿ  ರವರಿಗೆ ನೀಡಿರುವ ಮಾಹಿತಿಯಂತೆ ಸಿಬ್ಬಂದಿಯರನ್ನು ಆರೊಪಿ ಮತ್ತು ಸೊತ್ತು ಪತ್ತೆಯ ಬಗ್ಗೆ ಕಳುಹಿಸಿಕೊಟ್ಟಿದ್ದು  ಸಿಬ್ಬಂದಿಯವರು ಆರೋಪಿ ಸುಕೇಶ್ ನಾಯ್ಕ್ ನ್ನು ದಿನಾಂಕ  21-11-2021  ರಂದುಸಂಜೆ  ಬೆಳ್ಳಂಪಳ್ಳಿ  ಕ್ವಾಲಿಟಿ ವೈನ್ ಶಾಪ್  ಬಳಿ ವಶಕ್ಕೆ ಪಡೆದು ಆತನನ್ನು ಠಾಣೆಗೆ ತಂದು ಹಾಜರುಪಡಿಸಿದ್ದು ಆರೋಪಿತನನ್ನು ದಸ್ತಗಿರಿ ಮಾಡಿ .  ಆರೋಪಿತನು ತೋರಿಸಿಕೊಟ್ಟಂತ  ಗುಂಡಿಬೈಲು ಪಂಚಧೂಮಾವತಿ ದೈವಸ್ದಾನದ ಬಳಿ ಶ್ರೀಕರ ಕಾಮತ್ ಎಂಬವರ ಪೊದರು ಜಾಗದಲ್ಲಿ ಮಣ್ಣಿನ ಅಡಿಯಲ್ಲಿ ಹೂತ್ತಿಟ್ಟಿದ್ದ 3,60,000/- ಮೌಲ್ಯದ ಚಿನ್ನಾಭರಣಗಳನ್ನು ಸ್ವಾಧೀನಪಡಿಸಲಾಗಿದೆ. ಆರೋಪಿತನು ಈ ಹಿಂದೆ ಹಿರಿಯಡ್ಕ, ಮಣಿಪಾಲ ಉಡುಪಿ ನಗರ ಠಾಣೆ, ಬ್ರಹ್ಮಾವರ ಠಾಣೆ ಪ್ರಕರಣಗಳಲ್ಲಿ ಆರೋಪಿತನಾಗಿದ್ದು, ಜೈಲಿನಿಂದ ಒಂದು ತಿಂಗಳ ಹಿಂದ ಬಿಡುಗಡೆಗೊಂಡವನಾಗಿರುತ್ತಾನೆ.  

                  ಪ್ರಕರಣದಲ್ಲಿ ಆರೋಪಿ ಪತ್ತೆಯ ಬಗ್ಗೆ ಮಾನ್ಯ ಪೊಲೀಸ್‌ ಅಧೀಕ್ಷಕರಾದ ಶ್ರೀ ಎನ್‌. ವಿಷ್ಣುವರ್ಧನ್‌, ಐ.ಪಿ.ಎಸ್‌ ರವರ ಆದೇಶದಂತೆ, ಶ್ರೀ ಕುಮಾರಚಂದ್ರ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು, ಶ್ರೀ ಸುಧಾಕರ ಸದಾನಂದ ನಾಯ್ಕ್, ಡಿವೈಎಸ್‌ಪಿ ಉಡುಪಿ ರವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಮೋದ ಕುಮಾರ್ ಪಿ, ಪ್ರೋಬೆಷನರಿ ಪಿಎಸ್‌ಐ ರವರಾದ ಸುಹಾಸ್‌. ಆರ್‌,  ಪ್ರಸಾದ್‌ ಕುಮಾರ್‌, , ಸಿಬ್ಬಂದಿಯವರಾದ, ರಾಜೇಶ್ ,ಸತೀಶ , ಜೀವನ್ ಕುಮಾರ್ , ಲೋಕೇಶ್, ಸಂತೋಷ ರಾಥೋಡ , ಕಾರ್ತಿಕ್ , ಬಾಲಕೃಷ್ಣ, ಶಿವಕುಮಾರ್ , ಚೇತನ್‌, ಹೇಮಂತ್‌, ರವರು ಪಾಲ್ಗೋಂಡಿರುತ್ತಾರೆ. ಆರೋಪಿ ಆರೋಪಿ ಸುಕೇಶ್ ನಾಯ್ಕ  ಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿಇರುತ್ತಾನೆ.

                                            ಆರೋಪಿತನ  ಹೆಸರು ವಿಳಾಸ 

ಸುಕೇಶ್  ನಾಯ್ಕ ,  ಪ್ರಾಯ:  34  ವರ್ಷ,  ತಂದೆ: ರಾಮಚಂದ್ರ ನಾಯ್ಕ,  ವಾಸ: ಶ್ರೀದೇವಿ ನಿಲಯ , ಕುಕ್ಕಿಕಟ್ಟೆ ,ಮಂಗಳಾ ರೈಸ್ ಮಿಲ್ ಬಳಿ , ಕುಕ್ಕೆಹಳ್ಳಿಗ್ರಾಮ ,  ಉಡುಪಿ ತಾಲೂಕು  ಮತ್ತು  ಜಿಲ್ಲೆ

ಇತ್ತೀಚಿನ ನವೀಕರಣ​ : 23-11-2021 10:04 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080