ಅಭಿಪ್ರಾಯ / ಸಲಹೆಗಳು

         ದಿನಾಂಕ 23/11/2021 ರಂದು 18:15 ಗಂಟೆಯಿಂದ 18:45 ಗಂಟೆ ನಡುವಿನ ಸಮಯದಲ್ಲಿ ಇಬ್ಬರು ಬುರ್ಖಾ ಧರಿಸಿದ ಮಹಿಳೆಯವರು ಓರ್ವ ಗಂಡಸು ಮಗುವಿನೊಂದಿಗೆ ಉಡುಪಿಯ ಸುಲ್ತಾನ್ ಡೈಮಂಡ್ & ಗೋಲ್ಡ್ ಜುವೆಲ್ಲರಿಗೆ ಬಂದು ಬೇರೆ ಬೇರೆ ಬಳೆಗಳನ್ನು ನೋಡುತ್ತಾ ಒಟ್ಟು 60 ಗ್ರಾಂ ತೂಕದ ರೂ. 3,00,000/- ಮೌಲ್ಯದ 4 ಚಿನ್ನದ ಬಳೆಗಳನ್ನು ಮೋಸದಿಂದ ತೆಗೆದುಕೊಂಡು ಹೋಗಿದ್ದು, ಈ ಬಗ್ಗೆ ಮೊಹಮ್ಮದ್ ಅಜ್ಮಲ್‌ ರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

                 ತನಿಖೆ ಕೈಗೊಂಡ ಉಡುಪಿ ನಗರ ಪೊಲೀಸರು ತಕ್ಷೀರು ಸ್ಥಳದ ಆಸುಪಾಸಿನ ಸಿ.ಸಿ ಟಿವಿ ಪುಟೆಜ್ ಪರಿಶೀಲನೆ ವೇಳೆ  MH-13-AF-4599  ನೇ ತವೇರಾ ಕಾರು ಕೃತ್ಯಕ್ಕೆ ಬಳಕೆಯಾದ ಬಗ್ಗೆ ಮಾಹಿತಿ ಕಲೆ ಹಾಕಿ, ಆರೋಪಿತರ ಜಾಡು ಹಿಡಿದು ಮಹಾರಾಷ್ಟ್ರ ರಾಜ್ಯದ ಸೋಲಾಪುರಕ್ಕೆ ಹೋಗಿ ಆರೋಪಿತರುಗಳನ್ನು ದಿನಾಂಕ: 18/12/2021 ರಂದು 16:00 ಗಂಟೆಗೆ ಸೋಲಾಪುರದ ನಯಿ ಜಿಂದಗಿ ಎಂಬಲ್ಲಿ ವಾಹನ ಸಮೇತ ವಶಕ್ಕೆ ಪಡೆದು ದಿನಾಂಕ: 19/12/2021 ರಂದು 17:00 ಗಂಟೆಗೆ ಠಾಣೆಗೆ ಹಾಜರುಪಡಿಸಿದ್ದು, ಆರೋಪಿತರಾದ 1)  ಆಸೀಫ್‌ ಅಸ್ಪಾಕ್‌ ಶೇಖ್‌ (32) ತಂದೆ: ಅಸ್ಪಾಕ್‌ ಹನೀಫ್‌ ಶೇಖ್‌, ವಾಸ; ನಯಿ ಜಿಂದಗಿ, ಸೋಲಾಪುರ , ಮಹಾರಾಷ್ಟ್ರ 2) ಶ್ರೀಮತಿ ನಾಜಿಯಾ ಆಸೀಫ್‌  ಶೇಖ್‌, (32) ಗಂಡ; ಆಸೀಫ್‌ ಅಸ್ಪಾಕ್‌ ಶೇಖ್‌,  ವಾಸ; ನಯಿ ಜಿಂದಗಿ, ಸೋಲಾಪುರ, ಮಹಾರಾಷ್ಟ್ರ  3) ಸೌದಾಗರ್ ದಿಲಿಪ್  ಗೋಂದ್ ಕರ್, (35) ತಂದೆ; ದಿಲಿಪ್, ವಾಸ; ಕುಂಬಾರಿಗ್ರಾಮ, ಸೋಲಾಪರ, ಮಹಾರಾಷ್ಟ್ರ ಎಂಬವರನ್ನು ವಿಚಾರಣೆ ನಡೆಸಿ, ದಸ್ತಗಿರಿ ಮಾಡಿ ಆರೋಪಿತರಿಂದ 1 ತವೇರಾ ವಾಹನ, 1 ಮೊಬೈಲ್  ಹಾಗೂ ರೂ 2,99,792/-  ಮೌಲ್ಯದ 4 ಚಿನ್ನದ ಬಳೆಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ. ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಎಲ್ಲಾ ಆರೋಪಿಗಳಿಗೆ ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

           ಪ್ರಕರಣದಲ್ಲಿ ಆರೋಪಿತರ ಪತ್ತೆಯ ಬಗ್ಗೆ ಮಾನ್ಯ ಪೊಲೀಸ್‌ ಅಧೀಕ್ಷಕರಾದ ಶ್ರೀ ಎನ್‌. ವಿಷ್ಣುವರ್ಧನ್‌, ಐ.ಪಿ.ಎಸ್‌, ಉಡುಪಿ ರವರ ಆದೇಶದಂತೆ, ಶ್ರೀ ಕುಮಾರಚಂದ್ರ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು, ಶ್ರೀ ಸುಧಾಕರ ಸದಾನಂದ ನಾಯ್ಕ್, ಡಿವೈಎಸ್‌ಪಿ ಉಡುಪಿ ರವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಮೋದ ಕುಮಾರ್ ಪಿ, ಪೊಲೀಸ್ ಉಪ-ನಿರೀಕ್ಷಕರಾದ ವಾಸಪ್ಪ ನಾಯ್ಕ್, ಪ್ರೋಬೇಷನರಿ ಪಿ.ಎಸ್.ಐ ರವರಾದ ಪ್ರಸಾದ, ಸುಹಾಸ್‌ ಸಿಬ್ಬಂದಿಯವರಾದ ಸತೀಶ್, ಸಂತೋಷ್ ರಾಠೋಡ್,  ಗಡ್ಡಯ್ಯ ಹೀರೆಮಠ್, ಮಲ್ಲಯ್ಯ, ನಾಗರತ್ನ, ಬಾಲಕೃಷ್ಣ, ಶ್ರೀಮತಿ ಸುಷ್ಮ, ರಿಯಾಜ್ ಅಹ್ಮದ್, ಲೋಕೇಶ್‌, ಜೀವನ್‌ ಕುಮಾರ್‌, ಆನಂದ ಗಾಣಿಗ, ಹೇಮಂತ್‌, ಶಿವಕುಮಾರ್‌ ಹಾಗೂ ಚಾಲಕ ರಾಘವೇಂದ್ರ ರವರು ರವರು ಪಾಲ್ಗೋಂಡಿರುತ್ತಾರೆ.

 

ಇತ್ತೀಚಿನ ನವೀಕರಣ​ : 20-12-2021 06:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080