ಅಭಿಪ್ರಾಯ / ಸಲಹೆಗಳು

ಪತ್ರಿಕಾ ಪ್ರಕಟಣೆ

ವಿದೇಶೀಯರ ಕಾಯ್ದೆ 1946ರ ಕಲಂ. 7 ರಂತೆ ಯಾವುದೇ ವಿದೇಶಿಯರು ತಂಗುವ ಸ್ಥಳಗಳಾದ ಹೊಟೇಲ್/ಗೆಸ್ಟ್ ಹೌಸ್/ಧರ್ಮಶಾಲಾ/ಪ್ರತ್ಯೇಕ ಮನೆ/ಯುನಿವರ್ಸಿಟಿ /ವಿದ್ಯಾ ಸಂಸ್ಥೆ/ಇತರೆ ಸ್ಥಳಗಳಲ್ಲಿ ವಿದೇಶಿಯರು ತಂಗಿದ ಬಗ್ಗೆ ಮಾಹಿತಿಯನ್ನು ಫಾರ್ಮ್‌ “ಸಿ” ಯನ್ನು ಸಂಬಂಧಪಟ್ಟ ಮಾಲೀಕರು ನೋಂದಣಿ ಅಧಿಕಾರಿಗಳಿಗೆ(ಸಂಬಂಧಪಟ್ಟ ಜಿಲ್ಲೆಯ ಪೊಲೀಸ್ ಅಧೀಕ್ಷಕರು) 24 ಗಂಟೆಯೊಳಗೆ ನೀಡುವುದು ಖಡ್ಡಾಯವಾಗಿರುತ್ತದೆ.

೧) ಸದ್ರಿ ನಿಭಂದನೆಯ ಉಲ್ಲಂಘನೆಯಾದಲ್ಲಿ ಸಂಭಂದಪಟ್ಟವರ ವಿರುದ್ದ ಕಲಂ 14 ವಿದೇಶಿಯರ ಕಾಯ್ದೆ 1946 ರಂತೆ ಕ್ರಮ ಜರುಗಿಸಬಹುದಾಗಿದೆ. ಸದ್ರಿ ಪ್ರಕರಣದಲ್ಲಿ 5 ವರ್ಷ ಜೈಲು ಶಿಕ್ಷೆ ಮತ್ತು ದಂಡಕ್ಕೆ ಅರ್ಹರಾಗಿರುತ್ತಾರೆ.

೨) https://indianfrro.gov.in/frro/FormC ಲಿಂಕ್‌ ಮೂಲಕ ನೊಂದಣಿ ಮಾಡಬಹುದಾಗಿದೆ.

೩) ಫಾರ್ಮ್‌ “ಸಿ” ಆನ್ಲೈನ್‌ ನಲ್ಲಿ ಭರ್ತಿಗೊಳಿಸುವುದು ಖಡ್ಡಾಯವಾಗಿ ಹೋಟೆಲ್/ಗೆಸ್ಟ್ ಹೌಸ್/ಧರ್ಮಶಾಲಾ/ಪ್ರತ್ಯೇಕ ಮನೆ/ ಯುನಿವರ್ಸಿಟಿ /ವಿದ್ಯಾ ಸಂಸ್ಥೆ/ಇತರೆ ಸ್ಥಳಗಳ ಮಾಲಿಕರ ಜವಾಬ್ದಾರಿಯಾಗಿರುತ್ತದೆ. ವಿದೇಶಿಯರಿಗೆ ಫಾರ್ಮ್‌ “ಸಿ”  ಭರ್ತಿ ಗೊಳಿಸುವ ಅವಕಾಶವಿರುವುದಿಲ್ಲ,

೪) ಪ್ರತ್ಯೇಕ ಮನೆಯ ಮಾಲೀಕರಿಗೆ ಓ.ಟಿ.ಪಿ ಮೂಲಕ ಸ್ವಯಂ ನೋಂದಣಿಗೆ ಅವಕಾಶವಿರುತ್ತದೆ.

೫) ಫಾರ್ಮ್‌ “ಸಿ” ಆನ್ಲೈನ್‌ ನಲ್ಲಿ ಭರ್ತಿಗೊಳಿಸುವ ಸಂಭಂಧ ತಾಂತ್ರಿಕ ಕಾರಣಗಳಿಗೆ ಮೋಜಿಲ್ಲಾ ಪೈರ್ಫಾಕ್ಸ್  ಉಪಯೋಗಿಸುವುದು.

ಇತ್ತೀಚಿನ ದಿನಗಳಲ್ಲಿ ವಿದೇಶದಲ್ಲಿ ಕಲಸ ಕೊಡಿಸುವುದಾಗಿ ನಂಬಿಸಿ, ಮುಂಗಡವಾಗಿ ಹಣ ಪಡೆದು ವಿದೇಶಕ್ಕೆ ತೆರಳಿದ ನಂತರ ಸರಿಯಾದ ಕೆಲಸವಿಲ್ಲದೆ, ಹಣ ಕಾಗೂ ಕೆಲಸವನ್ನು ಕಳೆದುಕೊಂಡು ವಂಚನೆಗೊಳಗಾದ ಉದಾಹರಣೆಗಳು ಕಂಡುಬಂದಿರುತ್ತದೆ. ಆದುದರಿಂದ ನಾಗರೀಕರು ಜಾಗರುಕತೆಯಿಂದ ಅನಧಿಕೃತ ಎಜೆಂಟರನ್ನು ಸಂಪರ್ಕಿಸದೆ ಮಿನಿಸ್ಟ್ರೀ ಆಫ್ ಎಕ್ಸ್ಟರನಲ್ ಎಫೇರ್ಸ್ ನೊಂದಿಗೆ ನೋಂದಾಯಿತ ಎಜೆಂಟರುಗಳನ್ನು ಸಂಪರ್ಕಿಸಿ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಬಹುದಾಗಿದೆ. ಉಡುಪಿ ಜಿಲ್ಲೆಯಲ್ಲಿ ಅಧಿಕೃತವಾಗಿ ನೊಂದಾಯಿತರ ಮಾಹಿತಿಯನ್ನು https://www.emigrants.gov.in ನಿಂದ ಪಡೆದುಕೊಳ್ಳಬಹುದಾಗಿದೆ.

ಹೊಸ ಅಥವಾ ನವೀಕೃತ ಪಾಸ್‌ ಪೋರ್ಟ್‌ ಅರ್ಜಿ ಸಲ್ಲಿಸುವ ಬಗ್ಗೆ ಸ್ಥಳೀಯ ಅಧೀಕೃತ ಪಾಸ್‌ ಪೋರ್ಟ್‌ ಸೇವಾ ಕೇಂದ್ರಗಳನ್ನು(ಬೃಹ್ಮಾವರ/ಮಂಗಳೂರು) ಸಂಪರ್ಕಿಸಿ ಸರಿಯಾದ ಮಾಹಿತಿಯನ್ನು ಪಡೆಯಬಹುದಾಗಿದೆ. ಪ್ರಾದೇಶಿಕ ಪಾಸ್‌ ಪೋರ್ಟ್‌ ಕಚೇರಿಯ ಪ್ರಕಟಣೆಯಂತೆ ಯಾವುದೇ ಅಧಿಕೃತ ನೋಂದಾಯಿತ ಎಜೆಂಟ್‌ ಗಳು ಇರುವುದಿಲ್ಲ. ಹೆಚ್ಚಿನ ಮಾಹಿತಿಯನ್ನು https://www.passportindia.gov.in ನಲ್ಲಿ ಪಡೆದುಕೊಳ್ಳುಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ನಕಲಿ ಪಾಸ್‌ ಪೋರ್ಟ್‌ ಪಡೆದ ಪ್ರಕರಣಗಳು ಬೆಳಕಿಗೆ ಬಂಧಿದ್ದು, ಇನ್ನು ಮುಂದೆ ನಕಲಿ ಪಾಸ್‌ ಪೋರ್ಟ್‌ ಪಡೆಯಲು ಸಹಕರಿಸುವ ಎಜೆಂಟ್ ಹಾಗೂ ಅರ್ಜಿದಾರರು ಪತ್ತೆಯಾದಲ್ಲಿ ಅವರ ವಿರುದ್ದ ಕಾನೂನು ಕ್ರಮ ಜರಗಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.

ಇತ್ತೀಚಿನ ನವೀಕರಣ​ : 30-11-2022 06:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080