ಅಭಿಪ್ರಾಯ / ಸಲಹೆಗಳು

 

      ದಿನಾಂಕ:13.01.2022 ರಂದು ಖಚಿತ ಮಾಹಿತಿ ಮೇಲೆ ಮಣಿಪಾಲದ ವಿ.ಪಿ ನಗರದ ಅನಂತ ರೆಸಿಡೆನ್ಸಿಯಲ್ಲಿ ಐದು ಜನರು ಅಕ್ರಮ ಗುಂಪುಗೂಡಿ ದರೋಡೆಗೆ ಸಂಚು ರೂಪಿಸಿ ಗಾಂಜಾ ಮತ್ತು ಮಾದಕ ದ್ರವ್ಯ ವನ್ನು ಮನೆಯಲ್ಲಿಟ್ಟುಕೊಂಡು ಅದನ್ನು ಸೇವಿಸಿ ದರೋಡೆಗೆ  ಸಂಚು ರೂಪಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯಂತೆ ಸ್ಥಳಕ್ಕೆ ದಾಳಿ ಮಾಡಿ 4 ಜನ ಆರೋಪಿತರುಗಳನ್ನು ದಸ್ತಗಿರಿ ಮಾಡಿದ್ದು , ಒಬ್ಬ ಆರೋಪಿ ಪರಾರಿಯಾಗಿರುತ್ತಾನೆ. ದಸ್ತಗಿರಿ ಮಾಡಿದ ಆರೋಪಿಗಳ ವಿವರ 1) ಮುಝಾಮಿಲ್ ಪ್ರಾಯ: 27 ವರ್ಷ,ತಂದೆ: ಮೊಯಿದ್ದೀನ್ ವಾಸ: ಕೋಟೆ ರಸ್ತೆ, ಮಲ್ಲಾರು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ, 2) ಮೊಹಮ್ಮದ್ ಅನಾಸ್ ಸಾಹೇಬ್ ಪ್ರಾಯ: 25 ವರ್ಷ, ತಂದೆ: ಮೊಹಮ್ಮದ್ ಅಸ್ಲಾಂ ಸಾಹೇಬ್ ವಾಸ: ಸಂಪಿಗೆ ನಗರ,ಸಾಜಾ ಕಂಪೌಂಡ್, ಉದ್ಯಾವರ,ಕಾಪು ತಾಲೂಕು, ಉಡುಪಿ ಜಿಲ್ಲೆ. 3) ಮಹಮ್ಮದ್ ರಫೀಕ್ ಪ್ರಾಯ: 26 ವರ್ಷ, ತಂದೆ: ದಿ: ಹಮೀದ್, ವಾಸ: ಅನಂತ ರೆಸಿಡೆನ್ಸಿ, ಪ್ಲಾಟ್ ನಂ: 201,  ವಿ.ಪಿ.ನಗರ, ಶಿವಳ್ಳಿ  ಗ್ರಾಮ, ಉಡುಪಿ ತಾಲೂಕು. 4) ನಿಹಾಲ್ ಪ್ರಾಯ: 18 ವರ್ಷ, ತಂದೆ: ಷರೀಫ್ ಮೊಹಮ್ಮದ್ ವಾಸ: 2/254, ಬಾರೆಕಾಡು, ಬಿ. ಕಸಬಾ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ. ಆಗಿರುತ್ತದೆ.   ಆರೋಪಿತರಿಂದ  ದರೋಡೆ ಮಾಡಲು ತಮ್ಮ ಬಳಿ ಇಟ್ಟುಕೊಂಡಿದ್ದ  ಮಚ್ಚು -1, ಚೂರಿ -1 , ಕಬ್ಬಿಣದ ಸುತ್ತಿಗೆ -1, ಮರದ ಸೋಂಟೆ -1, ಮೊಬೈಲ್ ಫೋನ್- 5, ಹಾಗೂ  ಒಟ್ಟು 25,000/- ರೂ ಮೌಲ್ಯದ 6 ಗ್ರಾಂ ಎಂಡಿಎಂಎ ಮಾದಕ ದ್ರವ್ಯ ಮತ್ತು110 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಯಿತು. ಸದರಿ  ಆರೋಪಿತರಿಂದ ಮುಂದೆ ಒದಗುವ ಸಂಭಾವ್ಯ ಘಟನೆಯನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿ ಕಾರ್ಯಾಚರಣೆಯನ್ನು ನಡೆಸಲಾಯಿತು.

      ಉಡುಪಿ ಜಿಲ್ಲಾ  ಪೊಲೀಸ್  ಅಧೀಕ್ಷಕರಾದ ಶ್ರೀ ಹಾಕೆ ಅಕ್ಷಯ್‌ ಮಚ್ಚಿಂದ್ರ, ಐಪಿಎಸ್‌ ರವರ  ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ  ಶ್ರೀ ಸಿದ್ಧಲಿಂಗಪ್ಪ ಟಿ ಕೆ.ಎಸ್‌.ಪಿ.ಎಸ್ ರವರು ತಮ್ಮ ತಂಡದ ಸದಸ್ಯರಾದ  ದಿನಕರ ಕೆ.ಪಿ, ಡಿ.ವೈ.ಎಸ್.ಪಿ ಉಡುಪಿ , ದೇವರಾಜ ಟಿ.ವಿ ಪೊಲೀಸ್‌ ನಿರೀಕ್ಷಕರು ಮಣಿಪಾಲ ಠಾಣೆ, ಅಬ್ದುಲ್ ಖಾದರ್ ಪಿ.ಎಸ್.ಐ ಮಣಿಪಾಲ ಠಾಣೆ , ಡಿ.ವಿ.ಬಿ.ಡಿ.ಸಿ ಕಚೇರಿಯ ಸಿಬ್ಬಂದಿ ವಸಂತ ಕುಮಾರ್ ಮತ್ತು ಮಣಿಪಾಲ ಪಿ.ಹೆಚ್.ಸಿ. ಯ ಸಿಬ್ಬಂದಿ ಪರಶುರಾಮ್ ಅಲ್ಲದೆ ಮಣಿಪಾಲ ಠಾಣೆಯ ಸಿಬ್ಬಂದಿಗಳಾದ ಎ.ಎಸ್.ಐ ನಾಗೇಶ್ ನಾಯಕ್,  ಸುಕುಮಾರ್ ಶೆಟ್ಟಿ, ಇಮ್ರಾನ್,  ಪ್ರಸನ್ನ,  ಸಲ್ಮಾನ್ ಖಾನ್‌‌,  ಅರುಣ್ ಕುಮಾರ್,  ಶುಭಾ, ಚೆನ್ನೇಶ್,  ಆನಂದಯ್ಯ,  ಸುದೀಪ್, ಮಲ್ಲನಗೌಡ  ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದಾರೆ.

ಇತ್ತೀಚಿನ ನವೀಕರಣ​ : 15-01-2023 09:44 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080