ಅಭಿಪ್ರಾಯ / ಸಲಹೆಗಳು

 

                                                                                                                   ಪರಶುರಾಮ ಭೀಮಪ್ಪ ಹರಿಜನ್ (50)

 

ದಿನಾಂಕ: 11/07/2021ರಂದು ಉಡುಪಿ ತಾಲೂಕು ಮೂಡನಿಡಂಬೂರು  ಗ್ರಾಮದ ಕರಾವಳಿ ಬೈಪಾಸ್  ಬಳಿಯ ತಗಡು ಶೀಟ್‌ನ ಮಾಡಿನ ಕೆಳಗೆ ವಾಸವಿದ್ದ  ಶ್ರೀಮತಿ ಭಾರತಿ ಮತ್ತು ಅರುಣ್ ಬಡಿಗೇರ ದಂಪತಿಗಳ  ಮಗ ಎರಡೂವರೆ ವರ್ಷದ ಶಿವರಾಜನನ್ನು ಚಾ ತಿಂಡಿ ಕೊಡಿಸಿಕೊಂಡು ಬರುವುದಾಗಿ ಹೇಳಿ ಪರಶು  ಎಂಬಾತನು ಮಗುವಿನ ತಾಯಿ ಭಾರತಿ ಯವರಿಂದ ಮಗುವನ್ನು ಕರೆದುಕೊಂಡು ಹೋಗಿರುತ್ತಾನೆ ಎಂಬುದಾಗಿ ಠಾಣೆಗೆ ಬಂದು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಕ್ರ:100/2021 ಕಲಂ: 363 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸಲಾಗಿರುತ್ತದೆ.
    ಈ ಪ್ರಕರಣದಲ್ಲಿ ಆರೋಪಿ ಪತ್ತೆಯ ಬಗ್ಗೆ ಶ್ರೀ ಎನ್‌. ವಿಷ್ಣುವರ್ಧನ್‌, ಐ.ಪಿ.ಎಸ್‌, ಮಾನ್ಯ ಪೊಲೀಸ್‌ ಅಧೀಕ್ಷಕರು, ಉಡುಪಿ ಜಿಲ್ಲೆರವರ ಆದೇಶದಂತೆ, ಶ್ರೀ ಕುಮಾರಚಂದ್ರ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು, ಶ್ರೀ ಸುಧಾಕರ ಸದಾನಂದ ನಾಯ್ಕ್, ಪೊಲೀಸ್‌ ಉಪಾಧೀಕ್ಷಕರು ಉಡುಪಿ ಉಪ ವಿಭಾಗರವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಮೋದ ಕುಮಾರ್ ಪಿ, ಉಡುಪಿ ನಗರ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆಯ ಪೊಲೀಸ್ ಉಪ-ನಿರೀಕ್ಷಕರಾದ ಅಶೋಕ್ ಕುಮಾರ್, ಅಪರಾಧ ಶಾಖೆಯ ಪೊಲೀಸ್ ಉಪ-ನಿರೀಕ್ಷಕರಾದ ವಾಸಪ್ಪ ನಾಯ್ಕ್,  ಹಾಗೂ ಸಿಬ್ಬಂದಿಯವರಾದ,ಮನೋಹರ್, ಅರುಣ್, ವಿಶ್ವನಾಥ ಶೆಟ್ಟಿ, ಮಂಜುನಾಥ ಅಸಂಗಿ,  ಲಿಂಗರಾಜು, ಬಾಹುಬಲಿ, ಶಿವಕುಮಾರ್ , ಸಂತೋಷ ರಾಠೋಡ್ ಚಾಲಕರಾದ ಸಂತೋಷ್, ರಾಘವೇಂದ್ರರವರನ್ನು ನೇಮಿಸಿದ್ದು, ಅವರು ಸ್ಥಳಿಯ ಸಿಸಿಟಿವಿ ಪೂಟೇಜ್ ಗಳನ್ನು ಪರಿಶೀಲಿಸಿದಾಗ ಆರೋಪಿತನು ಕರಾವಳಿ ಬೈಪಾಸ್ ನಿಂದ ಚೈತ್ರ ಎಂಬ ಸಿಟಿ ಬಸ್ ನಲ್ಲಿ ಸಂತೆಕಟ್ಟೆ ಕಡೆಗೆ ಹೋಗಿದ್ದು ಕಂಡು ಬಂದಿರುತ್ತದೆ.  ನಂತರ ಸಂತೆಕಟ್ಟೆ ಜಂಕ್ಷನ್‌ ನಲ್ಲಿ ಸಾರ್ವಜನಿಕ ಶೌಚಾಲಯದ ಸಿಬ್ಬಂದಿ ಹಾಗೂ ಓರ್ವ ಮಹಿಳೆ ಕೆಂಪು ಬಸ್ಸಿನಲ್ಲಿ ಕುಂದಾಪುರದ ಕಡೆಗೆ ಹೋಗಿರುವುದಾಗಿ ತಿಳಿಸಿದ್ದು,  ಸದ್ರಿ ಮಾಹಿತಿಯನ್ನು ಪಡೆದು ಬೆನ್ನು ಹತ್ತಿದ ತನಿಖಾ ತಂಡ ಸದ್ರಿ ಬಸ್ಸಿನ ಸಿಬ್ಬಂದಿಗಳ ಮಾಹಿತಿಯನ್ನು ಪಡೆದು ಕರೆ ಮಾಡಿ ವಿಚಾರಿಸಲಾಗಿ ಆತನನ್ನು ಭಟ್ಕಳದ ಬಸ್ ನಿಲ್ದಾಣದಲ್ಲಿ ಇಳಿಸಿದ್ದಾಗಿ ನೀಡಿದ ಖಚಿತ ಮಾಹಿತಿಯಂತೆ ಮಾನ್ಯ ಪೊಲೀಸ್ ಅಧೀಕ್ಷಕರು, ಕಾರವಾರ ಜಿಲ್ಲೆ ಹಾಗೂ ಇತರ ಪೊಲೀಸ್ ಅಧಿಕಾರಿ ಸಿಬ್ಬಂದಿಯವರಿಗೆ ಮಾಹಿತಿ ತಿಳಿಸಿದ್ದು, ಅದರಂತೆ ಅವರು  ನಾಕ ಬಂಧಿ ಮಾಡಿದ್ದು,  ಸಂಜೆಯ ವೇಳೆಗೆ ಕುಮಟಾ ಪಿ.ಎಸ್.ಐ ರವಿ ಹಾಗೂ ಸಿಬ್ಬಂದಿ ಪ್ರಮೋದ್ ನಾಯ್ಕ ಕುಮಟಾ ರೈಲ್ವೆ ನಿಲ್ದಾಣದಲ್ಲಿ ಪರಿಶೀಲಿಸಲಾಗಿ ಓರ್ವ ವ್ಯಕ್ತಿಯು ಒಂದು ಮಗುವಿನೊಂದಿಗೆ ಕುಳಿತಿದ್ದು, ಸದ್ರಿ ವ್ಯಕ್ತಿಯನ್ನು ಕೂಲಂಕೂಷವಾಗಿ ವಿಚಾರಿಸಿದ್ದು ಆತನು ತನ್ನ ಹೆಸರು ಪರಶುರಾಮ ಭೀಮಪ್ಪ ಹರಿಜನ್ (50) ಎಂಬುದಾಗಿ ತಿಳಿಸಿದ್ದು, ಆತನ ಬಳಿ ಇರುವ ಮಗುವಿನ ಬಗ್ಗೆ ಕೇಳಿದಾಗ ಉಡುಪಿಯಿಂದ ಅಪಹರಿಸಿರುವುದಾಗಿ ತಿಳಿಸಿರುತ್ತಾನೆ. ನಂತರ ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ಅಶೋಕ್ ಕುಮಾರ್ ರವರು ಮಹಿಳಾ ಸಿಬ್ಬಂದಿಯವರೊಂದಿಗೆ ತೆರಳಿ ಸದ್ರಿ ಆರೋಪಿತ ಹಾಗೂ ಮಗುವನ್ನು ಕರೆದುಕೊಂಡು ಮುಂದಿನ ತನಿಖೆ ಬಗ್ಗೆ ಕರೆದುಕೊಂಡು ಬಂದಿದ್ದು, ಸದ್ರಿ ಮಗುವನ್ನು ಮಕ್ಕಳ ರಕ್ಷಣಾ ಸಮಿತಿಗೆ ಹಸ್ತಾಂತರಿಸಿದ್ದು, ಮಗುವಿನ ತಾಯಿಯನ್ನು ಸರಿಯಾದ ನೆಲೆಯಿಲ್ಲದ ಕಾರಣ ಸಖಿ ಕೇಂದ್ರಕ್ಕೆ ಹಸ್ತಾಂತರಿಸಲಾಗಿದೆ  ಆರೋಪಿತನ ಮೇಲೆ  ರಾಮ ನಗರ , ಕುಂದಾಪುರ ಗ್ರಾಮಾಂತರ ಠಾಣೆಗಳಲ್ಲಿ ಹಲವು ಕಳವು ಹಾಗೂ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿದ್ದು, ಆರೋಪಿತನು ಕೆಲವು ದಿನಗಳ ಹಿಂದೆ ಹಿರಿಯಡ್ಕ ಜಿಲ್ಲಾ ಕಾರಾಗೃಹದಿಂದ ಬಿಡುಗಡೆಗೊಂಡು  ಉಡುಪಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾಗಿದ್ದು ಪ್ರಸ್ತುತ ಆತನಿಗೆ ಮೂರ್ಛೆರೋಗದ ಖಾಯಿಲೆ ಬಗ್ಗೆ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದು ಗುಣಮುಖನಾದ ಬಳಿಕ ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು.

ಇತ್ತೀಚಿನ ನವೀಕರಣ​ : 12-07-2021 05:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080