ಅಭಿಪ್ರಾಯ / ಸಲಹೆಗಳು

 

ಆರೋಪಿ ಗುರುರಾಜ್ನಾಯ್ಕ ಪ್ರಾಯ 35 ವರ್ಷ

ದಿನಾಂಕ: 26/03/2022 ರಂದು ಉಡುಪಿ  ನಗರ  ಪೊಲೀಸ್‌ ಠಾಣೆಯಲ್ಲಿ  ಶ್ರೀಮತಿ  ಸುನೀತಾ, ಪ್ರಾಯ:  40  ವರ್ಷ, ಗಂಡ:  ರಮಾನಂದ ಕೋಟ್ಯಾನ್‌, ವಾಸ:  ಮನೆನಂಬ್ರ  1-3-7ಎ3,  'ನಂದಗೋಕುಲ'  ಪಾಡಿಗಾರ ರಸ್ತೆ,  ಗುಂಡಿಬೈಲು,  ಶಿವಳ್ಳಿ  ಗ್ರಾಮ,  ಉಡುಪಿ  ಜಿಲ್ಲೆ ಎಂಬವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದುದಾರರು ತನ್ನ ಸಂಸಾರದೊಂದಿಗೆ ಮನೆ ನಂಬ್ರ: 1-3-7A3 ರಲ್ಲಿ ವಾಸ ಮಾಡಿಕೊಂಡಿದ್ದು, ದಿನಾಂಕ 25/03/2022 ರಂದು 23:50 ಗಂಟೆಯಿಂದ ದಿನಾಂಕ 26/03/2022 ರಂದು ಬೆಳಿಗ್ಗೆ 06:00 ಗಂಟೆ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಪಿರ್ಯಾದುದಾರರ ಮನೆಯ ಹಾಲ್‌ನ ಟಿಪಾಯಿ ಮೇಲೆ ಇಟ್ಟಿದ್ದ 6½ ಪವನ್‌ ತೂಕದ ಚಿನ್ನದ ತೆಂಡೂಲ್ಕರ್‌ ಚೈನ್‌ ಮತ್ತು ನೀಲಿ ಹರಳಿನ ಲೋಕೆಟ್‌ ಇರುವ 3½ ಪವನ್‌ ತೂಕದ ಚಿನ್ನದ ಚೈನ್‌ ನ್ನು ಮನೆಯ ಕಿಟಕಿಯ ಮೂಲಕ ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತಿನ ಅಂದಾಜು ಮೌಲ್ಯ ರೂ. 3,60,000/- ಆಗಬಹುದು ಎಂಬಿತ್ಯಾದಿಯಾಗಿರುತ್ತದೆ. ಸದ್ರಿ ದೂರಿನಂತೆ ಠಾಣಾ ಅ.ಕ್ರ 49/2022, ಕಲಂ: 457,380 ಐಪಿಸಿಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿ ಇರುತ್ತದೆ.

             ಪ್ರಕರಣದಲ್ಲಿ  ಆರೋಪಿ ಪತ್ತೆಯ ಬಗ್ಗೆ ವಿಶೇಷ ಕರ್ತವ್ಯದಲ್ಲಿ ಹೋದ ಶ್ರೀ ಪ್ರಸಾದ್‌ಕುಮಾರ್‌ ಕೆ. ಪೊಲೀಸ್‌ ಉಪ ನಿರೀಕ್ಷಕರು ತನಿಖೆ-1, ಹಾಗೂ ಸಿಬ್ಬಂದಿಯವರು ಆರೋಪಿತನನ್ನು, ಕಳವಾಗಿದ್ದ ಚಿನ್ನದ ಚೈನ್‌ ಹಾಗೂ ಮಣಿಪಾಲ ಠಾಣಾ  ವ್ಯಾಪ್ತಿಯಲ್ಲಿ ಕದ್ದ  ಸ್ಕೂಟರ್‌ ನ ಸಮೇತ ಕುಕ್ಕಿಕಟ್ಟೆ ರೈಲ್ವೇ ಬ್ರಿಡ್ಜ್ ಬಳಿ ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದು  ದಸ್ತಗಿರಿ ನಿಯಮ ಪಾಲಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದಲ್ಲಿ ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

                  ಪ್ರಕರಣದಲ್ಲಿ ಆರೋಪಿ ಪತ್ತೆಯ ಬಗ್ಗೆ ಮಾನ್ಯ ಪೊಲೀಸ್‌ ಅಧೀಕ್ಷಕರಾದ ಶ್ರೀ ಎನ್‌. ವಿಷ್ಣುವರ್ಧನ್‌, ಐ.ಪಿ.ಎಸ್‌, ಉಡುಪಿ ರವರ ಆದೇಶದಂತೆ, ಶ್ರೀ ಸಿದ್ದಲಿಂಗಪ್ಪ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು, ಶ್ರೀ ಸುಧಾಕರ ಸದಾನಂದ ನಾಯ್ಕ್, ಡಿವೈಎಸ್‌ಪಿ ಉಡುಪಿ ರವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಮೋದ ಕುಮಾರ್ ಪಿ, ಪಿ.ಎಸ್‌.ಐ-1 ಮಹೇಶ್ ಟಿ.ಎಮ್, ಪ್ರಸಾದ್‌ಕುಮಾರ್‌ ಕೆ. ಪೊಲೀಸ್‌ ಉಪ ನಿರೀಕ್ಷಕರು ತನಿಖೆ-1, ಪಿ.ಎಸ್.ಐ-2  ವಾಸಪ್ಪ ನಾಯ್ಕ್, ಹಾಗೂ  ಸಿಬ್ಬಂದಿಯವರಾದ ಎ.ಎಸ್.ಐ ವಿಜಯ್‌, ಸತೀಶ್, ಜೀವನ್, ಕಿರಣ್, ಸಂತೋಷ ರಾಠೋಡ್‌, ಹೇಮಂತ್  ರವರು ಸಹಕರಿಸಿರುತ್ತಾರೆ.

                                            ಆರೋಪಿತನ  ಹೆಸರು ವಿಳಾಸ 

               ಗುರುರಾಜ್‌ ನಾಯ್ಕ,  ಪ್ರಾಯ:  35  ವರ್ಷ,  ತಂದೆ: ವಿಠಲ ನಾಯ್ಕ,  ವಾಸ: ಶ್ರೀದೇವಿ ನಿಲಯ, ದುರ್ಗಾನಗರ, ಮಂಚಿಕೆರೆ ಬಳಿ,ಶಿವಳ್ಳಿ ಗ್ರಾಮ, ಇಂದ್ರಾಳಿ, ಉಡುಪಿ ತಾಲೂಕು  ಮತ್ತು ಜಿಲ್ಲೆ

ಇತ್ತೀಚಿನ ನವೀಕರಣ​ : 18-04-2022 11:53 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080