ಅಭಿಪ್ರಾಯ / ಸಲಹೆಗಳು

          

ದಿನಾಂಕ:08/03/2022 ಎ.ಎಸ್.ಐ ವಿಜಯ್  ರವರು   ಹಗಲು  ಠಾಣಾ  ಪ್ರಭಾರ ಕರ್ತವ್ಯದಲ್ಲಿರುತ್ತಾ ಸೈಮನ್ ಡಿ ಸೋಜ ಪ್ರಾಯ 37 ವರ್ಷ, ತಂದೆ: ಲೀಯೋ ಡಿ ಸೋಜ ವಾಸ: ಸೂಜಲ್ ವಿಲ್ಲಾ,ಮನ್ನೊಳ್ಳಿಗುಜ್ಜಿ, ದೊಡ್ಡಣ್ಣಗುಡ್ಡೆ, ಕುಂಜಿಬೆಟ್ಟು ಪೋಸ್ಟ್, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ  ಠಾಣೆಗೆ ಹಾಜರಾಗಿ ನೀಡಿ ಲಿಖಿತ ದೂರಿನ ಸಾರಾಂಶವೇನೆಂದರೆ. ಪಿರ್ಯಾದುದಾರರು ELECTRONIC PAYMENT SERVICES Ltd  ಕಂಪೆನಿಯಲ್ಲಿ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು, ಉಡುಪಿ ಮತ್ತು ಮಂಗಳೂರಿನ ಕೆನರಾ ಬ್ಯಾಂಕ್‌ ಎಟಿಎಂ ಶಾಖೆಗಳಿಗೆ ಹಣವನ್ನು ತುಂಬಿಸುವ ಕೆಲಸ ಮಾಡುತ್ತಿದ್ದು, ದಿನಾಂಕ:07/03/2022 ಹಾಗೂ 08/03/2022 ರ ಮಧ್ಯದ ರಾತ್ರಿಯಲ್ಲಿ ಯಾರೋ ಕಳ್ಳರು ಅಂಬಾಗಿಲು ಪೆರಂಪಳ್ಳಿ ಕ್ರಾಸ್‌ನ ಕೆನರಾ ಬ್ಯಾಂಕ್‌ ಎಟಿಎಂ ನಲ್ಲಿರುವ ಹಣವನ್ನು ಕಳವು ಮಾಡುವ ಉದ್ದೇಶದಿಂದ  ಎಟಿಎಂ ಲಾಕರ್‌ ಡೋರ್‌ನ್ನು ಮುರಿದು ಕಳವು ಮಾಡಲು ಪ್ರಯತ್ನಿಸಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ. 15:15 ಗಂಟೆಗೆ  ಸದ್ರಿ  ದೂರಿನ ಆಧಾರದ ಮೇರೆಗೆ ಠಾಣಾ ಅ.ಕ್ರ 44/2022 ಕಲಂ 454,457,380 ಐ.ಪಿ.ಸಿ ರಂತೆ  ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿ ಇರುತ್ತದೆ.   

                   ಪ್ರಕರಣದಲ್ಲಿ  ಆರೋಪಿ ಪತ್ತೆಯ ಬಗ್ಗೆ ಹಗರಿಬೊಮ್ಮನಹಳ್ಳಿ  ತಾಲೂಕು, ವಿಜಯನಗರ ಜಿಲ್ಲೆ ಎಂಬಲ್ಲಿಗೆ ಹೋಗಿ  ಆರೋಪಿಯನ್ನು ಪತ್ತೆ ಹಚ್ಚಿ ಠಾಣೆಗೆ ಕರೆತಂದು ದಸ್ತಗಿರಿ ನಿಯಮ ಪಾಲಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದಲ್ಲಿ ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

                  ಪ್ರಕರಣದಲ್ಲಿ ಆರೋಪಿ ಪತ್ತೆಯ ಬಗ್ಗೆ ಮಾನ್ಯ ಪೊಲೀಸ್‌ ಅಧೀಕ್ಷಕರಾದ ಶ್ರೀ ಎನ್‌. ವಿಷ್ಣುವರ್ಧನ್‌, ಐ.ಪಿ.ಎಸ್‌, ಉಡುಪಿ ರವರ ಆದೇಶದಂತೆ, ಶ್ರೀ ಸಿದ್ದಲಿಂಗಪ್ಪ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು, ಶ್ರೀ ಸುಧಾಕರ ಸದಾನಂದ ನಾಯ್ಕ್, ಡಿವೈಎಸ್‌ಪಿ ಉಡುಪಿ ರವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಮೋದ ಕುಮಾರ್ ಪಿ, ಪಿ.ಎಸ್‌.ಐ-1 ಮಹೇಶ್ ಟಿ.ಎಮ್  , ಪಿ.ಎಸ್.ಐ-2  ವಾಸಪ್ಪ ನಾಯ್ಕ್, ಎಎಸ್‌ಐ ವಿಜಯ ಸಿ ಹಾಗೂ  ಸಿಬ್ಬಂದಿಯವರಾದ, ಸತೀಶ, ಕಿರಣ್, ಸಂತೋಷ ರಾಠೋಡ್  ರವರು ಸಹಕರಿಸಿರುತ್ತಾರೆ.

                                            ಆರೋಪಿತನ  ಹೆಸರು ವಿಳಾಸ 

     ಹನುಮಂತ ಪ್ರಾಯ 19 ವರ್ಷ ತಂದೆ: ಪರಶರಾಮಪ್ಪ ದನಕಾಯೋರು ವಾಸ: ಕೆಳಗಿನ ಸರ್ಕಲ್, ಬೆಣ್ಣೆಕಲ್ಲು, ಹಗರಿಬೊಮ್ಮನಹಳ್ಳಿ  ತಾಲೂಕು, ವಿಜಯನಗರ ಜಿಲ್ಲೆ

ಇತ್ತೀಚಿನ ನವೀಕರಣ​ : 08-04-2022 10:17 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080