ಅಭಿಪ್ರಾಯ / ಸಲಹೆಗಳು

ಪತ್ರಿಕಾ ಪ್ರಕಟಣೆ

                                                            ಕೊಲೆ ಪ್ರಯತ್ನ ಪ್ರಕರಣದ ಆರು ಆರೋಪಿತರ ಬಂಧನ

 

       ದಿನಾಂಕ: 23/05/2021 ರಂದು ಶ್ಯಾಮ್ ತನ್ನ ಸ್ನೇಹಿತರೊಂದಿಗೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ರಾಜೀವ ನಗರದಲ್ಲಿರುವ ಬಾವಿ ಕಟ್ಟೆಯಲ್ಲಿ ಕುಳಿತುಕೊಂಡು ಮಾತನಾಡುತ್ತಿರುವಾಗ ರಾತ್ರಿ 8:40 ಗಂಟೆಯ ಸಮಯಕ್ಕೆ ಚರಣ್, ಪುನೀತ್, ಫರ್ವೆಜ್, ಅಭಿ ಮತ್ತು ಇತರ ಇಬ್ಬರು ವ್ಯಕ್ತಿಗಳು ಏಕಾಏಕಿಯಾಗಿ ತಲ್ವಾರ್ ಮತ್ತು ಮಂಡೆಕತ್ತಿಯಿಂದ ಪಿರ್ಯಾದಿದಾರರನ್ನು ಪೂರ್ವ ದ್ವೇಷದಿಂದ ಕೊಲ್ಲುವ ಉದ್ದೇಶದಿಂದ ಮಾರಾಣಾಂತಿಕವಾಗಿ ಹಲ್ಲೆ ನಡೆಸಿದ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಕೊಲೆ ಪ್ರಯತ್ನ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
       ಈ ಪ್ರಕರಣದಲ್ಲಿ ಆರೋಪಿಗಳು ಪತ್ತೆ ಮಾಡುವ ಬಗ್ಗೆ ಶ್ರೀ ಎನ್‌. ವಿಷ್ಣುವರ್ಧನ್‌, ಐ.ಪಿ.ಎಸ್‌, ಮಾನ್ಯ ಪೊಲೀಸ್‌ ಅಧೀಕ್ಷಕರು, ಉಡುಪಿ ಜಿಲ್ಲೆ ರವರ ಆದೇಶದಂತೆ, ಶ್ರೀ ಕುಮಾರಚಂದ್ರ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು, ಶ್ರೀ ಸುಧಾಕರ ಸದಾನಂದ ನಾಯ್ಕ್, ಪೊಲೀಸ್‌ ಉಪಾಧೀಕ್ಷಕರು ಉಡುಪಿ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಮೋದ ಕುಮಾರ್ ಪಿ, ಉಡುಪಿ ನಗರ ಪೊಲೀಸ್ ಠಾಣೆಯ ಅಪರಾಧ ಶಾಖೆಯ ಪೊಲೀಸ್ ಉಪ-ನಿರೀಕ್ಷಕರಾದ ವಾಸಪ್ಪ ನಾಯ್ಕ್, ಪಿ.ಎಸ್.ಐ ವೈಲೆಟ್ ಫೇಮಿನಾ ಎ.ಎಸ್.ಐ ವಿಜಯ್ , ಸಿಬ್ಬಂದಿಯವರಾದ  ಜೀವನ್, ರಾಜೇಶ್,ಮನೋಹರ್,  ಚೇತನ್, ರಿಯಾಜ್ ಮತ್ತು ವಿಶ್ವನಾಥ ರವರ  ಪತ್ತೆಯ ಕಾರ್ಯದಲ್ಲಿದ್ದು ದಿನಾಂಕ: 04/06/2021  ರಂದು 00:30 ಗಂಟೆಗೆ  ದೊರೆತ ಮಾಹಿತಿ  ಯಂತೆ ಪ್ರಕರಣದ ಆರೋಪಿಗಳಾದ 1) ಚರಣ್  2) ಪುನೀತ್ 3) ಮೊಹಮ್ಮದ್ ಫರ್ವೆಜ್ 4) ಅಭಿಜೀತ್ ರವರನ್ನು ಮುಂಜಾನೆ  03:15  ಗಂಟೆಗೆ  ಉಡುಪಿಯ ರಾಜಾಂಗಣ  ಪಾರ್ಕಿಂಗ್ ಬಳಿ ಇರುವ ಮಥುರ ಕಂಫ್‌ರ್ಟಸ್ ನಲ್ಲಿ ವಶಕ್ಕೆ ಪಡೆದು, ದಸ್ತಗಿರಿ ಮಾಡಿರುವುದಾಗಿದೆ. ಆರೋಪಿತರಿಗೆ ವಸತಿ ಗೃಹದಲ್ಲಿ ರೂಮ್ ನೀಡಿದ ಬಗ್ಗೆ ಕೋವಿಡ್ -19 , ಲಾಕ್  ಡೌನ್ ನಿಮಯ ಉಲ್ಲಂಘನೆ ಮಾಡಿದ ಬಗ್ಗೆ ಸದ್ರಿ ವಸತಿ ಗ್ರಹದ ಮ್ಯಾನೇಜರ್ ಆದ ಸುರೇಶ್ ಶೆಟ್ಟಿಗಾರ್ ಮತ್ತು ವಸತಿ ಗೃಹದ ಮಾಲೀಕರ  ಮೇಲೆ ಪ್ರಕರಣ ದಾಖಲಾಗಿರುತ್ತದೆ. ಕೊಲೆ ಪ್ರಕರಣದಲ್ಲಿ ಭಾಗಿಯಾದ 5) ಶ್ಯಾನ್‌ವಾಜ್ ಮತ್ತು 6) ರತನ್ ರವರನ್ನು ಆರೋಪಿ ಚರಣ್ ನೀಡಿದ ಮಾಹಿತಿಯ ಮೇರೆಗೆ ಆದಿ ಉಡುಪಿಯಿಂದ ದಸ್ತಗಿರ ಮಾಡಲಾಗಿದೆ. ಸದ್ರಿ ಪ್ರಕರಣದ ಇನ್ನೊಬ್ಬ  ಆರೋಪಿಯಾದ ಕಿಶೋರ್ ತಲೆಮರೆಸಿಕೊಂಡಿರುತ್ತಾನೆ. ಆರೋಪಿತರುಗಳಿಂದ 1 ಮಂಡೆ ಕತ್ತಿ-1 ತಲವಾರ್- 3 ದ್ಚಿಚಕ್ರ ವಾಹನವನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಪತ್ತೆ ಕಾರ್ಯದ ಬಗ್ಗೆ ಮೇಲಾಧಿಕಾರಿಯವರು ಪ್ರಶಂಸೆಯನ್ನು ವ್ಯಕ್ತ ಪಡಿಸಿರುತ್ತಾರೆ.
         ಆರೋಪಿ ಚರಣ್ ಮೇಲೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ 1) ಪೊಕ್ಸೊ ಕಾಯ್ದೆ ಮತ್ತು ದಲಿತ ದೌರ್ಜ್ಯನ್ ಪ್ರಕರಣಗಳು ಮತ್ತು  ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಆರ್ಮ್ಸ ಆ್ಯಕ್ಟ್ ನಂತೆ ಪ್ರಕರಣಗಳು ದಾಖಲಾಗಿರುತ್ತದೆ. ಆರೋಪಿ ಪುನೀತ್ ಮೇಲೆ ಉಡುಪಿ ನಗರ ಠಾಣೆಯಲ್ಲಿ, ಸೆನ್ ಪೊಲೀಸ್ ಠಾಣೆಯಲ್ಲಿ ಮತ್ತು ಮಣಿಪಾಲ ಠಾಣೆಯಲ್ಲಿ ಗಾಂಜಾ ಸೇವನೆ ಪ್ರಕರಣಗಳು ದಾಖಲಾಗಿರುತ್ತವೆ.

ಇತ್ತೀಚಿನ ನವೀಕರಣ​ : 05-06-2021 05:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ