Feedback / Suggestions

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀವಿಷ್ಣುವರ್ಧನ,ಐ.ಪಿ.ಎಸ್. ಇವರ ನಿರ್ದೇಶನದಲ್ಲಿ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕುಮಾರ ಚಂದ್ರ ಇವರ ಮಾರ್ಗದರ್ಶನದಲ್ಲಿ, ಉಡುಪಿ ಜಿಲ್ಲಾ CEN ಅಪರಾಧ ಪೊಲೀಸ್ ಠಾಣಾ ನಿರೀಕ್ಷಕನಾದ ರಾಮಚಂದ್ರ ನಾಯಕ್ ಇವರು, ಸಿ.ಇ.ಎನ್. ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅ.ಕ್ರ. 03/2021 ಕಲಂ: 66(c), 66(d) ಐ.ಟಿ. ಆಕ್ಟ್ ಮತ್ತು ಕಲಂ: 420 ಐ.ಪಿ.ಸಿ. ಪ್ರಕರಣದಲ್ಲಿ, ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಮುಖಾಂತರ ಸಾರ್ವಜನಿಕರನ್ನು ಸಂಪರ್ಕಿಸಿ, ಸರ್ಕಾರಿ ಉದ್ಯೋಗ ನೀಡುವುದಾಗಿ ನಂಬಿಸಿ, ಅವರಿಂದ ಹಣ ಮತ್ತು ಲ್ಯಾಪ್ ಟಾಪ್ ಗಳನ್ನು ಪಡೆದು, ವಂಚಿಸುತ್ತಿದ್ದ  ಆರೋಪಿ ನಿಶಾಂತ ಎಸ್. ಕುಮಾರ್ @ ನಿತಿನ್, ಪ್ರಾಯ 21 ವರ್ಷ, ತಂದೆ: ದಿ. ಶಿವರಾಮ ಮುಂಡಾಳ ವಾಸ: ದೇವಕಿ ನಿವಾಸ, ಉಳಿಯಾರಗೋಳಿ ಗ್ರಾಮ, ಕಾಪು ತಾಲೂಕು ಉಡುಪಿ ಜಿಲ್ಲೆ ಎಂಬಾತನನ್ನು ದಿನಾಂಕ 06.02.2021 ರಂದು ದಸ್ತಗಿರಿಗೊಳಿಸಿ, ಆರೋಪಿಯಿಂದ ಕೃತ್ಯಕ್ಕೆ ಬಳಸಿದ 7 ಲ್ಯಾಪ್ ಟಾಪ್ ಹಾಗೂ 1 ಮೊಬೈಲ್ ಹ್ಯಾಂಡ್ ಸೆಟ್  ( ಅಂದಾಜು ಮೌಲ್ಯ ರೂ. 1,50,000/-) ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ.ಈ ಕಾರ್ಯಾಚರಣೆಯಲ್ಲಿ CEN ಅಪರಾಧ ಪೊಲೀಸ್ ಠಾಣಾ ಎ.ಎಸ್.ಐ. ಕೇಶವ ಗೌಡ, ಸಿಬ್ಬಂದಿಗಳಾದ ಪ್ರಸನ್ನ, ಜೀವನ್, ರಾಘವೇಂದ್ರ  ಹಾಗೂ ಜೀಪು ಚಾಲಕ ನವೀನ್ ಪಾಲ್ಗೊಂಡಿರುತ್ತಾರೆ.

Last Updated: 08-02-2021 11:51 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080