ಅಭಿಪ್ರಾಯ / ಸಲಹೆಗಳು

 

ಉಡುಪಿ : ದಿನಾಂಕ 26/06/2021ರಂದು ಪೂರ್ವಾಹ್ನ 09:30 ಘಂಟೆಗೆ ಪಡುಬಿದ್ರಿ ಠಾಣಾ ಸರಹದ್ದಿನಲ್ಲಿರುವ  Ayush Envirotech Private Limited, Plot No.43, Nandikur Industrial Area, Padubidri – 574111ರಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಿವಿಧ 50 ಪ್ರಕರಣಗಳಲ್ಲಿ ವಶಪಡಿಸಿಕೊಂಡ ಒಟ್ಟು 103 ಕೆಜಿ 474 ಗ್ರಾಂ ಗಾಂಜಾ - ಅಂದಾಜು ಮೌಲ್ಯ ರೂಪಾಯಿ 30,13,100/-, 101 ಗ್ರಾಂ ಹೈಡ್ರೋವೀಡ್ ಗಾಂಜಾ - ಅಂದಾಜು ಮೌಲ್ಯ ರೂಪಾಯಿ 9,82,500/-, 1362 ಎಂ.ಡಿ.ಎಂ.ಎ. ನಿದ್ರಾಜನಕ ಮಾತ್ರೆಗಳು - ಅಂದಾಜು ಮೌಲ್ಯ ರೂಪಾಯಿ 30,33,300/- ಹಾಗೂ 990 ಎಲ್.ಎಸ್.ಡಿ. ಸ್ಟ್ರಿಪ್ಸ್ - ಅಂದಾಜು ಮೌಲ್ಯ ರೂಪಾಯಿ 30,00,000/- ಒಟ್ಟಾರೆ ಅಂದಾಜು ಮೌಲ್ಯ ರೂಪಾಯಿ 1,00,28,600 ಮೌಲ್ಯದ ಮಾದಕ ವಸ್ತುಗಳನ್ನು ಜಿಲ್ಲಾ ಡ್ರಗ್ ವಿಲೇವಾರಿ ಸಮಿತಿಯ ಅಧ್ಯಕ್ಷರು ಹಾಗೂ ಪೊಲೀಸ್ ಅಧೀಕ್ಷಕರಾದ ಶ್ರೀ ಎನ್. ವಿಷ್ಣುವರ್ಧನ ಐ.ಪಿ.ಎಸ್., ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕುಮಾರಚಂದ್ರ, ಸಮಿತಿಯ ಸದಸ್ಯರಾದ ಶ್ರೀ ಸುಧಾಕರ್ ಸದಾನಂದ ನಾಯ್ಕ್, ಡಿವೈಎಸ್‌ಪಿ, ಉಡುಪಿ ಉಪವಿಭಾಗ ಹಾಗೂ ಶ್ರೀ ಎಸ್. ವಿಜಯ ಪ್ರಸಾದ್, ಡಿವೈಎಸ್‌ಪಿ, ಕಾರ್ಕಳ ಉಪವಿಭಾಗರವರ ಸಮ್ಮುಖದಲ್ಲಿ ನಾಶಗೊಳಿಸಲಾಯಿತು.

          ವಿಲೇವಾರಿಗೊಳಿಸಲಾದ ಪ್ರಕರಣಗಳಲ್ಲಿ ಮಣಿಪಾಲ ಠಾಣೆಯ 12 ಪ್ರಕರಣ, ಉಡುಪಿ ನಗರ ಠಾಣೆಯ 10 ಪ್ರಕರಣ, ಸೆನ್ ಅಪರಾಧ ಠಾಣೆಯ 8 ಪ್ರಕರಣ, ಕುಂದಾಪುರ ಠಾಣೆಯ 6 ಪ್ರಕರಣ, ಕಾಪು ಠಾಣೆಯ 5 ಪ್ರಕರಣ, ಮಲ್ಪೆ, ಕುಂದಾಪುರ ಗ್ರಾಮಾಂತರ ಹಾಗೂ ಪಡುಬಿದ್ರೆ ಠಾಣೆಯ ತಲಾ 2 ಪ್ರಕರಣ ಹಾಗೂ ಗಂಗೊಳ್ಳಿ, ಹಿರಿಯಡ್ಕ ಮತ್ತು ಶಿರ್ವಾ ಠಾಣೆಯಿಂದ ತಲಾ 1 ಪ್ರಕರಣ ಒಟ್ಟು 50 ಪ್ರಕರಣ ಒಳಗೊಂಡಿರುತ್ತದೆ. ಇವುಗಳಲ್ಲಿ ಅಂತ್ಯಂತ ಹಳೆಯ ಕಾಪು ಠಾಣೆಯಲ್ಲಿ 2008ರಲ್ಲಿ ವರದಿಯಾದ 1 ಪ್ರಕರಣ, ಜಿಲ್ಲೆಯ ಇತರ ಠಾಣೆಗಳಲ್ಲಿ ವರದಿಯಾದ 2011ರ 2 ಪ್ರಕರಣ, 2012, 2013, 2016ರಲ್ಲಿ ತಲಾ 1 ಪ್ರಕರಣ, 2018ರ 3 ಪ್ರಕರಣ, 2019ರ 7 ಪ್ರಕರಣ, 2020ರ 27 ಹಾಗೂ 2021ರ 7 ಪ್ರಕರಣಗಳು ಒಳಗೊಂಡಿರುತ್ತದೆ. ಇವುಗಳ ಪೈಕಿ 6 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, 1 ಖುಲಾಸೆಗೊಂಡಿದ್ದು, 1 ಪ್ರಕರಣದಲ್ಲಿ ಆರೋಪಿತ ಮೃತನಾಗಿದ್ದು, 20 ಪ್ರಕರಣಗಳು ನ್ಯಾಯಾಲಯದ ವಿಚಾರಣೆಯಲ್ಲಿದ್ದು, ಉಳಿದ 22 ಪ್ರಕರಣಗಳು ತನಿಖೆಯಲ್ಲಿದೆ.

          ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪೊಲೀಸ್ ಅಧಿಕಾರಿಯವರ ಕಾರ್ಯಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಪೊಲೀಸ್ ವರಿಷ್ಟಾಧಿಕಾರಿಯವರು ಇನ್ನು ಮುಂದಕ್ಕೂ ಕೂಡಾ ಇಂತಹ ಪ್ರಕರಣಗಳನ್ನು ಹೆಚ್ಚು, ಹೆಚ್ಚು ಪತ್ತೆ ಹಚ್ಚಿ, ಉಡುಪಿ ಜಿಲ್ಲೆಯನ್ನು ಮಾದಕ ವ್ಯಸನಮುಕ್ತ ಜಿಲ್ಲೆಯನ್ನಾಗಿಸುವಲ್ಲಿ ಶ್ರಮಿಸಬೇಕೆಂದು ಕರೆ ನೀಡಿದರು. ಈ ಕಾರ್ಯಾಚರಣೆಯಲ್ಲಿ  ಶ್ರೀ ಮಂಜುನಾಥ್, ಪೊಲೀಸ್ ನಿರೀಕ್ಷಕರು ಸಿ.ಇ.ಎನ್. (ಡಿಸಿಬಿ) ಪೊಲೀಸ್ ಠಾಣೆ, ಶ್ರೀ ಮಂಜುನಾಥ ಗೌಡ, ಪೊಲೀಸ್ ನಿರೀಕ್ಷಕರು, ಮಣಿಪಾಲ ಠಾಣೆ, ಶ್ರೀ ಪ್ರಮೋದ್ ಕುಮಾರ್, ಪೊಲೀಸ್ ನಿರೀಕ್ಷಕರು, ಉಡುಪಿ ನಗರ ಠಾಣೆ, ಶ್ರೀ ಸಂಪತ್ ಕುಮಾರ್, ಪ್ರಭಾರ ಪೊಲೀಸ್ ವೃತ್ತ ನಿರೀಕ್ಷಕರು, ಕಾಪು ವೃತ್ತ ಮತ್ತು ಪಿ.ಎಸ್.ಐ.ರವರಾದ ಶ್ರೀ ರಾಘವೇಂದ್ರ, ಕಾಪು ಠಾಣೆ, ಶ್ರೀ ಸದಾಶಿವ ಗವರೋಜಿ, ಕುಂದಾಪುರ ಠಾಣೆ, ಶ್ರೀಮತಿ ಸುಧಾ ಪ್ರಭು, ಕುಂದಾಪುರ ಗ್ರಾಮಾಂತರ ಠಾಣೆ, ಶ್ರೀ ದಿಲೀಪ್, ಪಡುಬಿದ್ರಿ ಠಾಣೆ, ಶ್ರೀ ನಂಜಾನಾಯ್ಕ್, ಗಂಗೊಳ್ಳಿ ಠಾಣೆ, ಶ್ರೀ ಶ್ರೀಶೈಲ ಮುರಗೋಡ, ಶಿರ್ವ ಠಾಣೆ, ಶ್ರೀ ರಾಜಶೇಖರ ವಂದಲಿ, ಮಣಿಪಾಲ ಠಾಣೆ, ಶ್ರೀ ಮಾರುತಿ ಜಿ ಗೌಡ, ಆಯುಷ್ ಸಂಸ್ಥೆ, ನಂದಿಕೂರು ಹಾಗೂ ಶ್ರೀ ಪ್ರಕಾಶ್ ಎ.ಎಸ್.ಐ., ಡಿ.ಸಿ.ಆರ್.ಬಿ., ಉಡುಪಿ ಹಾಗೂ ವಿವಿಧ ಠಾಣೆಯ ಸಿಬ್ಬಂದಿಯವರು ಉಪಸ್ಥಿತರಿದ್ದರು.

https://udupipolice.karnataka.gov.in/gallery/Drug Disposal-2021/kn

ಇತ್ತೀಚಿನ ನವೀಕರಣ​ : 02-07-2021 12:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080