ಅಭಿಪ್ರಾಯ / ಸಲಹೆಗಳು

ದಿನಾಂಕ: 21.09.2021 ರಂದು  ಬ್ರಹ್ಮಾವರ ಠಾಣಾ ವ್ಯಾಪ್ತಿಯ ಚೇರ್ಕಾಡಿ ಗ್ರಾಮದ ಬೀಟ್‌ ಸಿಬ್ಬಂದಿ ಕೋವಿ ಪರಿಶೀಲನೆಯ ಸಮಯದಲ್ಲಿ ಚೇರ್ಕಾಡಿ ಗ್ರಾಮದ ಬಾಯರ್‌‌ಬೆಟ್ಟು, ಹಲಗೆ ಗುಂಡಿ ಎಂಬಲ್ಲಿನ ಜಯನಾಯ್ಕರವರು SBML ಲೈಸನ್ಸ್‌‌ ಹೊಂದಿದ ಆಯುಧದೊಂದಿಗೆ ಅನಧೀಕೃತವಾಗಿ ಇನ್ನೊಂದು ಆಯುಧವನ್ನು ಹೊಂದಿದ ಬಗ್ಗೆ ಮಹತ್ವದ ಮಾಹಿತಿ ಪಡೆದ ಪೊಲೀಸರು, ಪೊಲೀಸ್‌‌ ವೃತ್ತ ನಿರೀಕ್ಷಕರಾದ ಶ್ರೀಅನಂತ ಪದ್ಮನಾಭರವರ ಮಾರ್ಗದರ್ಶನದಲ್ಲಿ ಬ್ರಹ್ಮಾವರ ಪೊಲೀಸ್‌ ಠಾಣಾ ಪಿ.ಎಸ್‌.‌ಐ ಗುರುನಾಥ ಹಾದಿಮನಿರವರು ಸಿಬ್ಬಂದಿಯವರೊಂದಿಗೆ ತೆರಳಿ ಮನೆಯನ್ನು ಶೋಧಿಸಿದಾಗ ಲೈಸನ್ಸ್‌ ಹೊಂದಿದ SBML ಕೋವಿಯೊಂದಿಗೆ ಅನಧಿಕೃತವಾಗಿ ಇನ್ನೊಂದು ಕೋವಿ ಹೊಂದಿರುವುದು ಕಂಡು ಬಂದಿರುತ್ತದೆ. ಆರೋಪಿ ಜಯನಾಯ್ಕ @ ಜಯಂತ ನಾಯ್ಕ ಪ್ರಾಯ: 46 ವರ್ಷ, ತಂದೆ: ತಿಮ್ಮಪ್ಪ ನಾಯ್ಕ, ವಾಸ:ಬಾಯರ್‌ಬೆಟ್ಟು, ಚೇರ್ಕಾಡಿ ಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ ಎಂಬಾತನನ್ನು ವಶಕ್ಕೆ ತೆಗೆದುಕೊಂಡು ಆತನ ವಶದಿಂದ ಲೈಸನ್ಸ್‌ ಹೊಂದಿದ SBML ಕೋವಿ ಹಾಗೂ ಅನಧಿಕೃತವಾಗಿ ಇಟ್ಟುಕೊಂಡಿದ್ದ ಇನ್ನೊಂದು ಕೋವಿ,  22 ಸೀಸದ ಬಾಲ್ಸ್‌ , 5 ಕೇಪು, ಚೂಪಾಗಿರುವ 7 ಸೀಸದ ಭಾಗಗಳು, ಒಂದು ಪ್ಲಾಸ್ಟಿಕ್‌ ಬಾಟಲಿಯಲ್ಲಿರುವ ಮಸಿ, ಚೆರಿಯನ್ನು ಹಾಗೂ ಆಯುಧ ಪರವಾನಿಗೆ ಇವುಗಳ ಒಟ್ಟು ಅಂದಾಜು ಮೌಲ್ಯ 30000/- ಆಗಬಹುದು. ಇವುಗಳನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಅ.ಕ್ರ 170/2021 ಕಲಂ 3(1),25 ಶಸ್ತ್ರಾಸ್ತ್ರ ನಿಷೇಧ ಕಾಯಿದೆ ಮತ್ತು ಕಲಂ 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

            ಉಡುಪಿ ಜಿಲ್ಲಾ ಮಾನ್ಯ ಪೊಲೀಸ್‌ ಅಧೀಕ್ಷಕರಾದ ಶ್ರೀ ವಿಷ್ಣುವರ್ಧನ ಐಪಿಎಸ್ , ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಶ್ರೀ ಕುಮಾರಚಂದ್ರರವರ ಮಾರ್ಗದರ್ಶನದಂತೆ ಶ್ರೀ ಸುಧಾಕರ‌ ನಾಯ್ಕ, ಪೊಲೀಸ್‌ ಉಪಾಧೀಕ್ಷಕರು, ಉಡುಪಿ ಉಪವಿಭಾಗರವರ ಹಾಗೂ ಶ್ರೀಅನಂತ ಪದ್ಮನಾಭ, ಬ್ರಹ್ಮಾವರ ಪೊಲೀಸ್‌‌ ವೃತ್ತ ನಿರೀಕ್ಷಕರ ರವರ ನಿರ್ದೇಶನದಂತೆ ದಿನಾಂಕ: 21.09.2021ರಂದು ಬ್ರಹ್ಮಾವರ ಪೊಲೀಸ್‌‌ ಉಪನಿರೀಕ್ಷಕರಾದ ಗುರುನಾಥ ಬಿ ಹಾದಿಮನಿ ಅವರ ವಿಶೇಷ ತಂಡ ಪತ್ತೆ ಹಚ್ಚಿರುವುದನ್ನು ಶಾಘ್ಲೀಸಿರುತ್ತಾರೆ.

             ಈ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಗುರುನಾಥ ಬಿ ಹಾದಿಮನಿ ಅವರೊಂದಿಗೆ ಮಪಿಎಸ್‌ಐ, ಶ್ರೀಮತಿ ಸುನೀತಾ ಕೆ.ಆರ್‌, ಬ್ರಹ್ಮಾವರ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಪ್ರವೀಣ್‌ ಶೆಟ್ಟಿಗಾರ್‌, ವೆಂಕಟರಮಣ ದೇವಾಡಿಗ, ಉದಯ ಅಮೀನ್‌‌, ದಿಲೀಪ್‌‌, ಸಬಿತ, ಶ್ರೀಮತಿ ಪುಷ್ಪಲತಾ, ಅಣ್ಣಪ್ಪ ಮತ್ತು ಸಂತೋಷ ಕುಮಾರ್‌‌ ಪತ್ತೆ ಹಚ್ಚುವಲ್ಲಿ ಸಹಕರಿಸಿರುತ್ತಾರೆ.

ಇತ್ತೀಚಿನ ನವೀಕರಣ​ : 22-09-2021 04:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080