ಅಭಿಪ್ರಾಯ / ಸಲಹೆಗಳು

    

ದಿನಾಂಕ: 24/02/2021  ರಂದು ಉಡುಪಿ ತಾಲೂಕು ಮೂಡನಿಂಬೂರು ಗ್ರಾಮದ ಅಜ್ಜರಕಾಡು ಭುಜಂಗ ಪಾರ್ಕ ಬಳಿ  ಬಸವರಾಜ್ ರವರು  ಇರಿಸಿದ್ದ  KA36,EW4967 ನೇ ಪಲ್ಸರ್ ಬೈಕ್ ಅಂದಾಜು ಮಾಲ್ಯ 95,000/-  ಹಾಗೂ ಹಳಿಯಾಳ ಪೊಲೀಸ್ ಠಾಣಾ ವ್ಯಾಪ್ತಿಯ ಬೈಕ್  KA 45,S –6723 ನೇ ಹಿರೋ ಹೊಂಡಾ ಸ್ಪ್ಲೆಂಡರ್ ಬೈಕ್‌ಗಳನ್ನು ಕಳವು ಮಾಡಿದ ಆರೋಪಿಯನ್ನು ಬಂಧಿಸಿರುವ ಬಗ್ಗೆ   

          ಈ ಪ್ರಕರಣದಲ್ಲಿ ಆರೋಪಿ ಮತ್ತು ಕಳವಾದ ಬೈಕ್  ಪತ್ತೆ ಮಾಡುವ ಬಗ್ಗೆ ಮೇಲಾಧಿಕಾರಿಯವರ ನಿರ್ದೇಶನ ಮತ್ತು ಮಾರ್ಗದರ್ಶನದಲ್ಲಿ  ಉಡುಪಿ ನಗರ ಪೊಲೀಸ್ ಠಾಣಾ ಅಪರಾಧ ಶಾಖೆಯ ಪೊಲೀಸ್ ಉಪ-ನಿರೀಕ್ಷಕರಾದ ವಾಸಪ್ಪ ನಾಯ್ಕ್, ಸಿಬ್ಬಂದಿಯವರಾದ  ಮರಿಗೌಡ, ಜೀವನ್, ಸಂತೋಷ ರಾಠೋಡ್, ಮಾಲ್ತೇಶ್ ರವರೊಂದಿಗೆ  ಈ ದಿನ ದಿನಾಂಕ: 14/04/2021  ರಂದು ಬೆಳಿಗ್ಗೆ ಉಡುಪಿಯ ಐರೋಡಿಕರ್ ಜಂಕ್ಷನ ಬಳಿ ಇರುವ ತಲ್ಲೂರು ವೈನ್ಸ್ ಎದುರು  ಪ್ರಕರಣದ ಆರೋಪಿಯಾದ ಸಾಗರ್ ಸುದೀರ್ ಹರ್ಗಾಪುರೆ  ಪ್ರಾಯ 26 ವರ್ಷ, ತಂದೆ: ಸುದೀರ್ ಹರ್ಗಾಪುರೆ  ವಾಸ: ಮನೆ ನಂಬ್ರ 606 ಶಿರಾಹಟ್ಟಿ ಬುದ್ರುಕ್, ಹುಕ್ಕೇರಿ ತಾಲೂಕು ಬೆಳಗಾಂ ಜಿಲ್ಲೆ. ಎಂಬವರನ್ನು ವಶಕ್ಕೆ ಪಡೆದು, ದಸ್ತಗಿರಿ ಮಾಡಿ, ಆತನಿಂದ  2 ಬೈಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದು  1 ಬೈಕ್‌ನ್ನು ಆರೋಪಿತನು  ಮೈಸೂರಿನ ಲಷ್ಕರ್   ಠಾಣಾ ಸರಹದ್ದಿನಲ್ಲಿ ಕಳವು ಮಾಡಿದ್ದೆಂದು ಹೇಳಿದ್ದು ಮೋಟಾರು ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿತನು ಬಿ.ಎಸ್.ಸಿ ಪದವಿ ಅನುತ್ತೀರ್ಣನಾಗಿದ್ದು ಮಂಗಳೂರು ಮತ್ತು ಉಡುಪಿಯಲ್ಲಿ  ಕೆಲವು ಖಾಸಗಿ ಮಾಲ್‌ಗಳಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದ, ಉಡುಪಿಯ ಚಾರ್ವಿ ಪಿ.ಜಿಯಲ್ಲಿ ವಾಸವಾಗಿದ್ದು, ಇತನು ಕೀ ಸಮೇತವಾಗಿ ಬಿಟ್ಟು ಹೋಗುವ   ಬೈಕ್‌ನ್ನು ಕಳ್ಳತನ ಮಾಡುವ ಪ್ರವೃತ್ತಿಯವನಾಗಿರುತ್ತಾನೆ.

ಇತ್ತೀಚಿನ ನವೀಕರಣ​ : 15-04-2021 06:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ