ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ನಿತ್ಯಾನಂದ, ಸಾಧು ಮೂಲ್ಯ, ವಾಸ: ಶ್ರೀ ರಾಮಗುಡ್ಡೆ, ಅಂಡಾರು ಗ್ರಾಮ, ಕಾರ್ಕಳ ತಾಲೂಕು ಇವರು ದಿನಾಂಕ 30/12/2022 ರಂದು ಬೆಳಗ್ಗೆ ತನ್ನ KA-20 EP-0766 ನೇ ನಂಬ್ರದ ಮೋಟಾರ್ ಸೈಕಲ್‌ ನಲ್ಲಿ ತಂಗಿ ಮಗಳು ರಿಷಿಕ, (09) ರವರನ್ನು ಹಿಂಬದಿ ಕುಳ್ಳಿರಿಸಿಕೊಂಡು ಕಾರ್ಕಳ ಕಡೆಯಿಂದ ಅಜೆಕಾರು ಕಡೆಗೆ ಸವಾರಿ ಮಾಡಿಕೊಂಡು ಸಾಗುತ್ತಿದ್ದು ಸಮಯ ಸುಮಾರು ಬೆಳಗ್ಗೆ 10:15 ಗಂಟೆಗೆ ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಕುಮೇರಿ ಎಂಬಲ್ಲಿಗೆ ತಲುಪಿದಾಗ ಅಜೆಕಾರು ಕಡೆಯಿಂದ ಕಾರ್ಕಳ ಕಡೆಗೆ KA-02 MS-7470 ನೇ ನಂಬ್ರದ ಕಾರು ಚಾಲಕ ನಿಖಿಲ್‌ ಹೆಗ್ಡೆ ಎಂಬಾತನು ಅತಿವೇಗ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ನಿತ್ಯಾನಂದ, ರವರು ಸವಾರಿ ಮಾಡುತ್ತಿದ್ದ ಮೋಟಾರ್‌ ಸೈಕಲ್‌ ಗೆ ಎದುರಿನಿಂದ ಡಿಕ್ಕಿಹೊಡೆದ ಪರಿಣಾಮ ನಿತ್ಯಾನಂದ, ರವರು ರಿಷಿಕಾಳೊಂದಿಗೆ ಮೋಟಾರ್‌ ಸೈಕಲ್‌ ಸಮೇತ ಚರಂಡಿಗೆ ಬಿದ್ದಿದ್ದು ಈ ಅಪಘಾತದಿಂದ ನಿತ್ಯಾನಂದ, ರವರ ತಲೆಯ ಮುಂಭಾಗಕ್ಕೆ ರಕ್ತ ಗಾಯ ಹಾಗೂ ಎರಡು ಕಾಲುಗಳಿಗೆ ತರಚಿದ ಗಾಯವಾಗಿರುತ್ತದೆ ಹಾಗೂ ರಿಷಿಕಾಳ ಬಲಗಾಲು ಮೂಳೆಮುರಿತಗೊಂಡು ಎರಡು ಕೈಗಳಿಗೆ ತರಚಿದ ಗಾಯವಾಗಿರುತ್ತದೆ. ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ನರ್ಸಿಂಗ್‌ ಹೋಮ್‌ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಪಿರ್ಯಾದಿದಾರರಿಗೆ ಹೊರ ರೋಗಿಯಾಗಿ ಚಿಕಿತ್ಸೆ ನೀಡಿದ್ದು, ರಿಷಿಕಾಳನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 159/2022 ಕಲಂ 279, 337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 30/12/2022 ರಂದು ಮಧ್ಯಾಹ್ನ 15:00 ಗಂಟೆಗೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ನಿಟ್ಟೆ ವಿದ್ಯಾ ಸಂಸ್ಥೆಯ ಬಳಿ ಅಕ್ಷಯ ಕೋಳಿ ಫಾರಂ ಮುಂಭಾಗದಲ್ಲಿ ಹಾದುಹೋಗಿರುವ ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ಪಿರ್ಯಾದಿದಾರ ಮುರಳೀಧರ (38) ತಂದೆ: ಆನಂದ ಆಚಾರ್ಯ  ವಾಸ: ಗಾಯತ್ರಿ ನಿವಾಸ ಗರಡಿನಗರ ಕಲ್ಯಾ   ಗ್ರಾಮ, ಉಡುಪಿ ತಾಲೂಕು ಇವರು ಕಾರ್ಕಳ ಕಡೆಯಿಂದ ನಿಟ್ಟೆ ಕಡೆಗೆ KA-20-EE-3013 ನೇ ನಂಬ್ರದ ಮೋಟಾರ್ ಸೈಕಲಿನಲ್ಲಿ  ಅವರ ಅಣ್ಣ ಮಾಧವ ಆಚಾರ್ಯ ರವರನ್ನು ಸಹಸವಾರನ್ನಾಗಿ ಕೂರಿಸಿಕೊಂಡು ಮೋಟಾರ್ ಸೈಕಲ್ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿದ KA-53-MF-2421  ನೇ ನಂಬ್ರದ ಕಾರು ಚಾಲಕ ಅಶೋಕ್ ಅಡ್ಯಂತಾಯ ಎಂಬಾತನು ತನ್ನ ಕಾರನ್ನು ನಿರ್ಲಕ್ಷತನದಿಂದ ಯಾವುದೇ ಸೂಚನೆ ನೀಡದೇ ಏಕಾಏಕಿ ಆತನ ಬಲಬದಿಗೆ ಚಲಾಯಿಸಿ ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಅವರ ಅಣ್ಣ ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದಿದ್ದು, ಪಿರ್ಯಾದಿದಾರರ ಎಡಕೈಗೆ ಗುದ್ದಿದ ರೀತಿಯಲ್ಲಿ ನೋವಾಗಿದ್ದು, ಸಹಸವಾರನಿಗೆ ಯಾವುದೇ ಗಾಯನೋವು ಆಗಿರುವುದಿಲ್ಲವಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 155/2022 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಪಡುಬಿದ್ರಿ: ಪಿರ್ಯಾದಿದಾರರಾಧ ಶ್ರೀಮತಿ ಶ್ರೀದೇವಿ, (35) ಗಂಡ: ಕರಿಯಪ್ಪ, ವಾಸ: ಜಟ್ಟಿಗಾ ಗ್ರಾಮ, ಹುಲ್ಲೂರು ಅಂಚೆ, ಮುದ್ದೆಬಿಹಾಳ ತಾಲೂಕು, ವಿಜಯಪುರ ಇವರು ವಿಜಯಪುರ ಜಿಲ್ಲೆಯ ಮೂಲದವರಾಗಿದ್ದು, ಕಳೆದ 7 ವರ್ಷಗಳಿಂದ ಕಾಪು ತಾಲೂಕು ತೆಂಕ ಎರ್ಮಾಳು ಗ್ರಾಮದ ಪಡುಬಿದ್ರಿ ಸಿ.ಎ. ಬ್ಯಾಂಕ್ ಬಳಿಯ ವಿಶ್ವನಾಥ ಶೆಟ್ಟಿ ಎಂಬುವರ ಮನೆಯಲ್ಲಿ ಬಾಡಿಗೆಗೆ ಕುಟುಂಬದೊಂದಿಗೆ ವಾಸವಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿರುವುದಾಗಿದೆ. ಪಿರ್ಯಾದಿದಾರರ ಗಂಡ ಕರಿಯಪ್ಪ (45) ಎಂಬುವರು ದಿನಾಂಕ 27/12/2022 ರಂದು ಬೆಳಿಗ್ಗೆ ಹಾಲು ತರಲು ಮನೆಯಿಂದ ಅಂಗಡಿಗೆ ಹೋಗಿ, ಹಾಲು ತೆಗೆದುಕೊಂಡು ಸಮಯ ಸುಮಾರು 08:00 ಗಂಟೆಗೆ ರಾಷ್ಟ್ರೀಯ ಹೆದ್ದಾರಿ-66 ರ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಂಚರಿಸುವ ರಸ್ತೆಯ ಕಾಮಗಾರಿ ಕೆಲಸ ನಡೆಯುತ್ತಿದ್ದು, ವಾಹನಗಳನ್ನು ನಾರಳ್ತಾಯ ಗುಡಿ ಡಿವೈಡರ್ ಬಳಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುವ ಏಕಮುಖ ರಸ್ತೆಗೆ ಡೈವರ್ಶನ್ ಮಾಡಿ ಬಿಟ್ಟಿದ್ದು, ಎರಡೂ ಕಡೆಗೆ ಸಾಗುವ ವಾಹನಗಳು ಒಂದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು, ರಾಷ್ಟ್ರೀಯ ಹೆದ್ದಾರಿ-66 ರ ಮಂಗಳೂರು-ಉಡುಪಿ ರಸ್ತೆಯನ್ನು ದಾಟಿ, ಉಡುಪಿ-ಮಂಗಳೂರು ಏಕಮುಖ ಸಂಚಾರ ರಸ್ತೆಯನ್ನು ದಾಟಲು ರಸ್ತೆಯ ಪಶ್ಚಿಮ ಡಿವೈಡರ್ ಬಳಿ ಕರಿಯಪ್ಪನವರು  ನಿಂತಿದ್ದಾಗ  KA-70-E-1612  ನೇ ನಂಬ್ರದ  ಮೋಟಾರ್ ಸೈಕಲ್ ಸವಾರ ಹಸೈನಾರ್ ಎಂಬಾತನು ತನ್ನ ಮೋಟಾರ್‌ನಲ್ಲಿ ಸಮೀರ್ ಎಂಬಾತನನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು, ತನ್ನ ಮೋಟಾರ್ ಸೈಕಲ್ಲನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಪಡುಬಿದ್ರಿ ಕಡೆಯಿಂದ ಉಡುಪಿ ಕಡೆಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಗಂಡ ಕರಿಯಪ್ಪನಿಗೆ ಡಿಕ್ಕಿ ಹೊಡೆದ ಪರಿಣಾಮ ಕರಿಯಪ್ಪ ರವರು ರಸ್ತೆಗೆ ಬಿದ್ದಿದ್ದು, ಮೋಟಾರ್‌ಸೈಕಲ್ ಸವಾರ ಹಾಗೂ ಸಹ ಸವಾರ ಮೋಟಾರ್‌‌ಸೈಕಲ್ ಸಮೇತ ರಸ್ತೆಗೆ ಬಿದ್ದಿರುತ್ತಾರೆ. ಸದ್ರಿ  ಅಪಘಾತದಿಂದ ಕರಿಯಪ್ಪನ ತಲೆಯ ಹಿಂಭಾಗಕ್ಕೆ, ಹಣೆಗೆ ಗಂಭೀರ ಗಾಯ ಹಾಗೂ ಕೈಕಾಲುಗಳಿಗೂ ಗಾಯವಾಗಿರುತ್ತದೆ. ಎದ್ರಿ ಮೋಟಾರ್ ಸೈಕಲ್ ಸವಾರ ಹಾಗೂ ಸಹ ಸವಾರನಿಗೂ ಗಾಯ ನೋವುಗಳಾಗಿರುತ್ತದೆ. ನಂತರ ಕರಿಯಪ್ಪನವರನ್ನು ಪಡುಬಿದ್ರಿಯ ಸಿದ್ದಿವಿನಾಯಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಉಡುಪಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ, ಅಲ್ಲಿನ ವೈದ್ಯರ ಸಲಹೆಯಂತೆ ಮಂಗಳೂರಿಗೆ ವೆನ್‌‌ಲಾಕ್‌ ‌ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 155/2022 ಕಲಂ 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಪಡುಬಿದ್ರಿ: ಪಿರ್ಯಾದಿದಾರರಾದ ದಿನೇಶ್ ಕುಮಾರ್, (36), ತಂದೆ: ದಿ. ಶಿವರಾಮ ಪೂಜಾರಿ, ವಾಸ: ಶಾಂತಿಗುಡ್ಡೆ, ಜೋಕಟ್ಟೆ, ಕೆಂಜಾರು ಗ್ರಾಮ, ಮಂಗಳೂರು ತಾಲೂಕು ಇವರು ಅವರ KA-19-HH-1127 ನೇ ನಂಬ್ರದ ಸ್ಕೂಟಿಯಲ್ಲಿ ಅವರ ಮಾವ ಲೋಕೇಶ್ ಕೋಟ್ಯಾನ್ ಎಂಬುವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಉಡುಪಿಯ ಮಂತ್ರದೇವತೆ ದೇವಸ್ಥಾನಕ್ಕೆಂದು ಮನೆಯಿಂದ ಹೊರಟು ರಾಷ್ಟ್ರೀಯ ಹೆದ್ದಾರಿ-66 ರ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯಲ್ಲಿ ಬರುತ್ತಾ ಸಮಯ ಸುಮಾರು 08:15 ಗಂಟೆಗೆ ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿಯ ಕಾರ್ಕಳ ಜಂಕ್ಷನ್ ಬಳಿ ತಲುಪುತ್ತಿದ್ದಂತೆ KA-20-AA-1283  ನೇ ನಂಬ್ರದ  ರಿಕ್ಷಾ ಚಾಲಕ ರಾಜು ಮೂಲ್ಯ ಎಂಬುವರು ಅವರ ರಿಕ್ಷಾವನ್ನು ಪಡುಬಿದ್ರಿ ಸರ್ವಿಸ್ ರಸ್ತೆಯಿಂದ ಕಾರ್ಕಳ ರಸ್ತೆ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದಿನೇಶ್ ಕುಮಾರ್ ರವರ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ, ದಿನೇಶ್ ಕುಮಾರ್ ರವರು ಹಾಗೂ ಅವರ ಮಾವ ಸ್ಕೂಟಿ ಸಮೇತ ರಸ್ತೆಯ ಬದಿಯ ಡಿವೈಡರ್ ಮೇಲೆ ಬಿದ್ದಿರುತ್ತಾರೆ. ಸದ್ರಿ ಅಪಘಾತದಿಂದ  ಲೋಕೇಶ್ ಕೋಟ್ಯಾನ್ ರವರ ಎಡಕಾಲಿನ ಮೊಣಗಂಟಿಗೆ, ಎಡಕೈಗೆ ರಕ್ತಗಾಯವಾಗಿದ್ದು, ದಿನೇಶ್ ಕುಮಾರ್ ರವರ ಎಡಕೈಗೆ ಗುದ್ದಿದ ನೋವಾಗಿದ್ದು, ಸ್ಕೂಟಿ ಜಖಂಗೊಂಡಿದ್ದು, ರಿಕ್ಷಾದ ಸೈಡ್ ಮಿರರ್ ಜಖಂಗೊಂಡಿರುತ್ತದೆ. ನಂತರ ಗಾಯಾಳು ಲೋಕೇಶ್ ಕೋಟ್ಯಾನ್ ರವರನ್ನು ಪಡುಬಿದ್ರಿಯ ಸಿದ್ದಿವಿನಾಯಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯ ಬಗ್ಗೆ ದಾಖಲಾಗಿರುವುದಾಗಿದೆ, ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 171/2022 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಶಿರ್ವಾ: ಪಿರ್ಯಾದಿದಾರರಾಧ ಶ್ರೀಮತಿ ದೀಪಾ(35) ಗಂಡ: ದಿ ವಿಜೇಂದ್ರ, ವಾಸ:ಮನೆ ನಂಬ್ರ:3-67(3) ರೆಡ್‌ಹಿಲ್‌ಹೌಸ್‌ ಕೆಂಪು ಜೋರ ಮೂಡುಬೆಳ್ಳೆ  ಅಂಚೆ,ಬೆಳ್ಳೆ  ಗ್ರಾಮ,ಕಾಫು ತಾಲೂಕು ಇವರ ತಂದೆ ರಮೇಶ್‌ಮೂಲ್ಯ (65) ರವರು ದಿನಾಂಕ 29/12/2022 ರಂದು ಮನೆಯಿಂದ ಮೂಡುಬೆಳ್ಳೆ ಪೇಟೆ ಕಡೆಗೆ ಮೂಡುಬೆಳ್ಳೆಯ ಚೇತನ್‌ವೈನ್‌ಶಾಫ್‌ಎದುರು ಇರುವ ಅಕ್ಷಯ ಪಾನ್‌ಸ್ಟಾಲ್‌ಗೆ ತಿಂಡಿ ತಿನಿಸು ತರಲು ಅಂಗಡಿಗೆ ನಡೆದುಕೊಂಡು ಹೋಗುತ್ತಿರುವಾಗ ಸಂಜೆ 06:55 ಗಂಟೆಗೆ ಅಕ್ಷಯ ಪಾನ್‌ಸ್ಟಾಲ್‌ಬಳಿ ತಲುಪಿದಾಗ ಶ್ರೀಮತಿ ದೀಪಾ ರವರ ತಂದೆ ರಮೇಶ್‌ಮೂಲ್ಯ ರವರ ಹಿಂದುಗಡೆಯಿಂದ ಓರ್ವ ಕಾರಿನ ಚಾಲಕ ತಾನು ಚಲಾಯಿಸುತ್ತಿದ್ದ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗಿತ್ತಿದ್ದ ಶ್ರೀಮತಿ ದೀಪಾ ರವರ ತಂದೆ ರಮೇಶ್‌ಮೂಲ್ಯ ರವರಿಗೆ ಡಿಕ್ಕಿ ಹೊಡೆದಿರುತ್ತಾನೆ. ಪರಿಣಾಮ ರಮೇಶ್‌ಮೂಲ್ಯ ರವರ ಬಲಕಾಲು ಕಾರಿನ ಚಕ್ರದ ಅಡಿಗೆ ಸಿಲುಕಿ ಮೊಣಗಂಟಿನ ಕೆಳಗೆ ಕೋಲು ಕಾಲಿಗೆ ತೀವ್ರತರಹದ ಒಳ ಜಖಂ ಆಗಿರುತ್ತದೆ. ಗಾಯಗೊಂಡ ಶ್ರೀಮತಿ ದೀಪಾ ರವರ ತಂದೆಯನ್ನು ಕರುಣಾಕರ ಶೆಟ್ಟಿರವರು ಉಪಚರಿಸಿ ಚಿಕಿತ್ಸೆಯ ಬಗ್ಗೆ ಉಡುಪಿ ಸಿಟಿ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ಅಪಘಾತಪಡಿಸಿದ ವಾಹನದ KA-20 Z-4065 ನೇಯ ಕಾರು ಆಗಿದ್ದು,  ಚಾಲಕ  ಹೆಸರು ರಾಜೇಶ್‌ಲಮಾಣಿ ಆಗಿರುತ್ತಾರೆ. ಈ ಅಪಘಾತಕ್ಕೆ ವಾಹನದಕಾರಿನ ಚಾಲಕನ ರಾಜೇಶ್‌ಲಮಾಣಿ ರವರ ಅತೀ ವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 95/2022 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾಧ ಶರತ್ ಕಿಣಿ (31) ತಮದೆ: ಅಚ್ಚುತ್ ಕಿಣಿ ವಾಸ: ಶ್ರೀ ಮಹಾಲಸಾ ಸಭಾಭವನ ಮಲ್ಪೆ ಕೊಡವೂರು ಇವರು  ತಂದೆ ಅಚ್ಚುತ್ ಕಿಣಿ (69) ರವರಿಗೆ  ಚಿಕ್ಕದಿನಿಂದಲೆ  ಮೈತುಂಬಾ  ಚರ್ಮದ ಮೇಲೆ  ಬಿಳಿ ಕಲೆಯ ರೋಗವಿದ್ದು , ಇತ್ತೀಚಿಗೆ ಒಂದು ವಾರದ ಹಿಂದೆ  ಹರ್ನಿ ಶಸ್ತ್ರಚಿಕಿತ್ಸೆ  ಆಗಿರುತ್ತದೆ.  ಶಸ್ತ್ರ ಚಿಕಿತ್ಸೆಗೆ ಹೆಚ್ಚು ಹಣ ಖರ್ಚಾಗಿದ್ದು, ನಾನು ಹೊರೆಯಾಗಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದು, ದಿನಾಂಕ 29/12/2022 ರಂದು ರಾತ್ರಿ 10:00 ಗಂಟೆಗೆ ಊಟ ಮಾಡಿ ಮಲಗಿದವರು  ದಿನಾಂಕ 30/12/2022  ರಂದು ಬೆಳಿಗ್ಗೆ 5:15 ಗಂಟೆಗೆ ಶರತ್ ಕಿಣಿ ರವರು ಎದ್ದು ನೋಡಿದಾಗ ಇವರ ತಂದೆ ಕಾಣದೆ  ಇದ್ದು ಮನೆಯ ಆಸುಪಾಸು  ಹುಡುಕಾಡಿದರೂ  ಸಿಕ್ಕಿರುವುದಿಲ್ಲ. ನಂತರ ಮನೆಯವರು ಹಾಗೂ ಇತರರೊಂದಿಗೆ  ಕಲ್ಮಾಡಿ, ಬಾಪುತೋಟ, ಬಂದರು ಕಡೆ ಹುಡುಕಾಡಿ , ಸೀವಾಕ್ ವೇ  ಬೀಚ್  ಕಡೆ ಹುಡುಕಾಡುವಾಗ ಬೆಳಿಗ್ಗೆ  06:30 ಗಂಟೆಗೆ  ಸಮುದ್ರದ  ತೀರದಲ್ಲಿ ಶರತ್ ಕಿಣಿ ರವರ ತಂದೆಯವರ ಮೃತದೇಹ ದೊರತಿದ್ದು, ಮೃತದೇಹವನ್ನು  ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಮೃತರ  ತಂದೆ ಚರ್ಮದ ಮೇಲೆ  ಬಿಳಿ ಕಲೆಯ ರೋಗ ಮತ್ತು ಇತ್ತೀಚಿಗೆ ಶಸ್ತ್ರಚಿಕಿತ್ಸೆ ಆಗಿದ್ದು ಯಾವುದೇ ಆದಾಯ ಇಲ್ಲದೆ ಇರುವುರಿಂದ ಜೀವನದಲ್ಲಿ  ಜಿಗುಪ್ಸೆಗೊಂಡು ಸಮುದ್ರದಲ್ಲಿ ಬಿದ್ದು ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 74/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 31-12-2022 10:19 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080