ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಕಿರಣ್ ಕುಮಾರ್(31) ತಂದೆ; ಕೃಷ್ಣ ಪೂಜಾರಿ ವಾಸ; ಶ್ರೀದೇವಿಕೃಪಾ, ಕುಂಟಲಪಾಡಿ, ಕಾಂತರಗೋಳಿ, ಎರ್ಲಪಾಡಿ ಗ್ರಾಮ, ಕಾರ್ಕಳ ಇವರು ದಿನಾಂಕ 31/12/2022 ರಂದು ಬೆಳಗ್ಗೆ 8:20 ಗಂಟೆಗೆ ತನ್ನ ಮೋಟಾರ್ ಸೈಕಲಿನಲ್ಲಿ ತನ್ನ ಅಕ್ಕನ ಮಗಳನ್ನು ಶಾಲೆಗೆ ಬಿಟ್ಟು ಬರುವರೇ ಮನೆಯಿಂದ ಬೈಲೂರಿಗೆ ಹೋಗುತ್ತಿರುವ ಸಮಯ ತನ್ನ ಮುಂದಿನಿಂದ ಎರ್ಲಪಾಡಿ ಗ್ರಾಮದ ಅಂಕಿತ ಎಂಬವರು KA-20 ET-9159 ನೇ ನೋದಣಿ ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ  ಕಾಲೇಜಿಗೆ ಹೋಗುತ್ತಿರುವ ವೇಳೆ ಕಾಂತರಗೋಳಿಯಿಂದ ಬೈಲೂರಿಗೆ ಬರುವ ರಸ್ತೆಯಲ್ಲಿ ಕಾರ್ಕಳ ತಾಲೂಕು ನೀರೆ ಗ್ರಾಮದ ರಾಮಕೃಷ್ಣ ರವರ ಕ್ರಷರ್‌ಗೆ ಹೋಗುವ ಕ್ರಾಸ್ ಬಳಿ ಟಾಟಾ ಕಂಪೆನಿಯ ಲಾರಿ ನಂಬ್ರ KA-20 C-6629  ನೇಯದನ್ನು  ಅದರ ಚಾಲಕ ವಸಂತ ಎಂಬಾತನು ಯಾವುದೇ ಮುನ್ಸೂಚನೆ ಇಲ್ಲದೇ ನಿರ್ಲಕ್ಷತನದಿಂದ ರಸ್ತೆಯಲ್ಲಿ ನಿಲ್ಲಿಸಿಕೊಂಡಿದ್ದು, ಅಂಕಿತಳು ಎದುರಿನಿಂದ ವಾಹನ ಬಂದುದನ್ನು ನೋಡಿ ದ್ವಿಚಕ್ರ ವಾಹನವನ್ನು ಎಡಕ್ಕೆ ತಿರುಗಿಸಿದಾಗ ರಸ್ತೆಯ ಬದಿ ನಿಲ್ಲಿಸಿದ್ದ ಲಾರಿಯ ಹಿಂಭಾಗಕ್ಕೆ ಸ್ಕೂಟಿಯು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯೊಂದಿಗೆ ಅಂಕಿತಾಳು ರಸ್ತೆಗೆ ಬಿದ್ದ ಪರಿಣಾಮ ಆಕೆಯ ತಲೆಯ ಮುಂಭಾಗ ಮತ್ತು ಮುಖಕ್ಕೆ ತೀವ್ರ ಸ್ವರೂಪದ ರಕ್ತ ಗಾಯವಾಗಿದ್ದು  ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳ ರೋಗಿಯಾಗಿ ದಾಖಲಿಸಿರುತ್ತಾರೆ. ಅಪಘಾತ ಸಮಯ ಅಂಕಿತರವರು ಹೆಲ್ಮೆಟ್‌ಧರಿಸಿರುವುದಿಲ್ಲವಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 160/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ದಿನಾಂಕ 31/12/2022 ರಂದು ಬೀರಲಿಂಗ ರವರು ಅವರ KA-20 AB-5894 ನೇ ಪಿಕಪ್‌ ವಾಹನದಲ್ಲಿ ತರಕಾರಿ ಲೋಡ್‌ ಮಾಡಿಕೊಂಡು ಜೊತೆಯಲ್ಲಿ ಕ್ಲೀನರ್‌ ಅಶ್ಪಕ್‌ ರವರನ್ನು ಕುಳ್ಳಿರಿಸಿಕೊಂಡು ಉಡುಪಿ ಕಡೆಗೆ ಬರುತ್ತಿರುವಾಗ ಮುಂಜಾನೆ ಸಮಯ ಸುಮಾರು 01:00 ಗಂಟೆಗೆ ನಾಡ್ಪಾಲು ಗ್ರಾಮದ ಸೊಮೇಶ್ವರ ಆಗುಂಬೆ ಘಾಟಿಯ 8 ನೇ ತಿರುವು ತಲುಪುವಾಗ ಪಿಕಪ್ ವಾಹನವನ್ನು ಅದರ ಚಾಲಕ ಬೀರಲಿಂಗ ರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಪಿಕಪ್‌ ವಾಹನವು ಚಾಲಕನ ನಿಯಂತ್ರಣ ತಪ್ಪಿ ಘಾಟಿಯಿಂದ ಕೆಳಕ್ಕೆ ಬಿದ್ದಿರುವುದಾಗಿದೆ.ಪರಿಣಾಮ ಚಾಲಕ ಬೀರಲಿಂಗ ನಿಗೆ ಯಾವುದೇ ಗಾಯಗಳು ಆಗಿರುವುದಿಲ್ಲ ಕ್ಲೀನರ್‌ ಅಶ್ಪಕ್‌ ನಿಗೆ ಮುಖದ ಬಳಿ ರಕ್ತಗಾಯವಾಗಿದ್ದು ಬೆನ್ನಿಗೆ ಗುದ್ದಿದ ನೋವಾಗಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 75/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಚಂದ್ರಶೇಖರ ಶೆಟ್ಟಿ (60) ತಂದೆ: ಅನಂತ ಶೆಟ್ಟಿ ವಾಸ:ಶ್ರೀ ಕೃಷ್ಣ ನಿಲಯ ಮಣಿಗೇರಿ, ಹಾರ್ದಳ್ಳಿ-ಮಂಡಳ್ಳಿ ಗ್ರಾಮ ಕುಂದಾಪುರ ಇವರು ಹಾರ್ದಳ್ಳಿ-ಮಂಡಳ್ಳಿ ಗ್ರಾಮದ ಮಣಿಗೇರಿ ಎಂಬಲ್ಲಿ ಮನೆ ಕಟ್ಟಿಸುತ್ತಿದ್ದೂ ದಿನಾಂಕ 30/12/2022 ರಂದು 13:20 ಗಂಟೆಗೆ ಕಾಂಪೌಂಡು ಗೋಡೆ ನಿರ್ಮಿಸುತ್ತಿರುವಾಗ ಆರೋಪಿಗಳಾದ ಬಾಲಕೃಷ್ಣ ಶೆಟ್ಟಿ ಮತ್ತು ಸುಧೀರ ಶೆಟ್ಟಿ ಎಂಬುವವರು ಏಕಾಎಕಿ ಚಂದ್ರಶೇಖರ ಶೆಟ್ಟಿ ರವರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಕೆಲಸ ಮಾಡುತ್ತಿರುವವರನ್ನು ದೂಡಿ “ ಇಲ್ಲಿ ಕೆಲಸ ಮಾಡಬೇಡಿ, ಮಾಡಿದರೆ ನಿಮ್ಮ ಮೇಲೆ ಎಲ್ಲ ಕೇಸು ದಾಖಲಿಸುತ್ತೇನೆ” ಎಂದು ಹೇಳಿ ಕೆಲಸಕ್ಕೆ ಅಡ್ಡಿಪಡಿಸಿರುತ್ತಾರೆ. ಚಂದ್ರಶೇಖರ ಶೆಟ್ಟಿ ರವರು ಮತ್ತು ಅವರ ಹೆಂಡತಿ ಮಕ್ಕಳು ಆರೋಪಿತರನ್ನು ಪ್ರಶ್ನಿಸಿದಾಗ ಚಂದ್ರಶೇಖರ ಶೆಟ್ಟಿ ರವರ ಹೆಂಡತಿಯಾದ ಶ್ಯಾಮಲ ಶೆಟ್ಟಿ ಯವರನ್ನು ಆರೋಪಿಗಳು ಕೈಯಿಂದ ದೂಡಿ ನೆಲಕ್ಕೆ ಬೀಳಿಸಿದ್ದಲ್ಲದೇ ಚಂದ್ರಶೇಖರ ಶೆಟ್ಟಿ ರವರಿಗೂ ಹಾಗೂ ಮಕ್ಕಳಿಗೂ ಕೆಲಸ ಮುಂದುವರೆಸಿದರೆ ನಿನ್ನನ್ನು ಹಾಗೂ ನಿನ್ನ ಹೆಂಡತಿ ಮಕ್ಕಳನ್ನು ಜೀವ ಸಹಿತ ಬಿಡುವುದಿಲ್ಲ ” ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 235/2022 ಕಲಂ: 447, 323, 354, 504, 506 RW 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 31-12-2022 05:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080