ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಕೋಟ: ಪಿರ್ಯಾದಿದಾರರಾದ ಚಂದ್ರಶೇಖರ (53), ತಂದೆ: ಗೋವಿಂದ ದೇವಾಡಿಗ, ವಾಸ:ಶ್ರೀ ಚಂದ್ರ ನಿಲಯ, ಅರೆಹೊಳೆ, ನಾವುಂದ ಬೈಂದೂರು ಇವರು ದಿನಾಂಕ 30/12/2021 ರಂದು  KA-20-AA-5873 ನೇ ಗೂಡ್ಸ್ ವಾಹನದಲ್ಲಿ ನೀರಿನ ಬಾಟಲಿ ಸೇಲ್ಸ್ ಗೆಂದು ಬ್ರಹ್ಮಾವರಕ್ಕೆ ಹೋಗಿ ವಾಪಾಸ್ಸು ಕುಂದಾಪುರ ಕಡೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬರುವಾಗ ಸಂಜೆ 04:00 ಗಂಟೆಗೆ ಚಿತ್ರಪಾಡಿ ಗ್ರಾಮದ ಕೋಟ ವಿವೇಕ ಹೈಸ್ಕೂಲ್ ಎದುರು ಲಾರಿಯ ಚಾಲಕ ಯಾವುದೇ ಸೂಚನೇ ನೀಡದೇ ಒಮ್ಮೇಲೆ ರಸ್ತೆಯ ಮಧ್ಯಭಾಗಕ್ಕೆ ಚಲಾಯಿಸಿದ ಪರಿಣಾಮ ಪಿರ್ಯಾದಿದಾರರ ಗೂಡ್ಸ್ ವಾಹನಕ್ಕೆ ಗುದ್ದಿ  ಗೂಡ್ಸ್ ವಾಹನ  ಮಗುಚಿ ರಸ್ತೆಗೆ ಬಿದ್ದಿರುತ್ತದೆ. ಆಗ ಹಿಂಬದಿಯಿಂದ ಬರುತ್ತಿದ್ದ ಆ್ಯಕ್ಟಿವ್ ಹೋಂಡಾ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದು ಅದರಲ್ಲಿದ್ದ ಸವಾರರಿಬ್ಬರು ಬಿದ್ದಿರುತ್ತಾರೆ, ಸವಾರರಿಬ್ಬರಿಗೂ ತಲೆಗೆ, ಕೈಗೆ, ಕಾಲಿಗೆ ರಕ್ತ ಗಾಯವಾಗಿರುತ್ತದೆ. ಆ್ಯಕ್ಟಿವ್ ಹೋಂಡಾ ನಂಬ್ರ: KA-20-EV-8008 ಸವಾರ ವಿನೋದ, ಸಹಸವಾರ ರಂಜಿತ್ ಎಂಬುದಾಗಿದ್ದು, ಅವರಿಬ್ಬರನ್ನು ಚಿಕಿತ್ಸಗೆ ಕುಂದಾಪುರಕ್ಕೆ ಕರೆದುಕೊಂಡು ಹೋಗಿರುತ್ತಾರೆ, ಡಿಕ್ಕಿ ಹೊಡೆದ ಲಾರಿ ನಿಲ್ಲಿಸದೇ ಹೋಗಿದ್ದು ಕೋಟದಲ್ಲಿ ಸ್ಥಳೀಯರು ನಿಲ್ಲಿಸಿದ್ದು  ಅದರ ನಂಬ್ರ KL-23-J-8518 ಆಗಿರುತ್ತದೆ. ಲಾರಿ  ಚಾಲಕನ ಹೆಸರು ಶಾನು ಚಾಕಬ್ ಎಂಬುದಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 218/2021 ಕಲಂ: 279, 338 ಐಪಿಸಿ 134(ಎ) ಮತ್ತು (ಬಿ) ಐಎಂವಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ದೇವೇಂದ್ರ ಸುವರ್ಣ (43), ತಮದೆ: ರಾಜು ಅಮೀನ್‌, ವಾಸ: ಎಮ್‌ಜಿ ಕಾಲೋನಿ ವಡ್ಡರ್ಸೆ ಗ್ರಾಮ, ಉಡುಪಿ ತಾಲೂಕು ಇವರು ದಿನಾಂಕ 30/12/2021 ರಂದು ಮಧ್ಯಾಹ್ನ 02:00 ಗಂಟೆಗೆ ಉಡುಪಿ ಜಿಲ್ಲೆ ಬ್ರಹ್ಮಾವರ  ತಾಲೂಕು ಗಿಳಿಯಾರು ಗ್ರಾಮದ ಕೋಟ ಅಮೃತೇಶ್ವರಿ ಜಂಕ್ಷನ್‌ಬಳಿ ಇರುವ ಕೋಟ ಬಸ್ಸು ನಿಲ್ದಾಣದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 66 ರ ಬಳಿ ಇರುವಾಗ KA-20-AA -7464 ನೇ ನಂಬ್ರದ ಬಸ್ಸಿನ ಚಾಲಕ ಹಾಜಿ ಇಮ್ರಾನ ಅಹ್ಮದ್ ತನ್ನ ಬಸ್ಸನ್ನು ಉಡುಪಿ ಕಡೆಯಿಂದ ಕುಂದಾಪುರದ ಕಡೆಗೆ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೆ ಬಸ್ಸನ್ನು ಬಸ್ಸು ನಿಲ್ದಾಣದ ಎದುರು ನಿಲ್ಲಿಸಿದ್ದು, ಅದೇ ಸಮಯಕ್ಕೆ KA20-EJ-0423 ನೇ ನಂಬ್ರದ ಮೊಟಾರ್‌ಸೈಕಲ್ ಸವಾರ ಸುಬ್ರಹ್ಮಣ್ಯ ಬಿ  ಮೊಟಾರ್‌ ಸೈಕಲನ್ನು ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಕೋಟಾ ಬಸ್ ನಿಲ್ದಾಣದ ಬಳಿ ಬಂದಾಗ ಬಸ್ಸಿನ ಚಾಲಕ ಯಾವುದೇ ಸೂಚನೆ ನೀಡದೆ ಬಸ್ಸನ್ನು ಮುಂದಕ್ಕೆ ಚಲಾಯಿಸಿದಾಗ ಮೊಟಾರ್‌ಸೈಕಲ್‌ನ ಸವಾರ ಬಸ್ಸಿನ ಹಿಂಬದಿಗೆ ಬಂದು ಬಸ್ಸಿನ ಬದಿಗೆ ಬಿದ್ದಿದ್ದು ಆ ಸಮಯ  MH-48- P-1691 ನೇ ಚಾಲಕ ಡೆಸ್ಮಂಡ್‌ ಡಿಸೋಜಾ ಅವರ ಬಾಬ್ತು ಸ್ಕಾರ್ಪಿಯೊ ವಾಹನವನ್ನು ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಮತ್ತು ಅಜಾರೂಕತೆಯಿಂದ ಚಲಾಯಿಸಿಕೊಂಡು ಬಂದು ಮೊಟಾರ್‌ಸೈಕಲ್‌ಗೆ ಡಿಕ್ಕಿ ಹೊಡೆದಿರುತ್ತಾರೆ. ಇದರಿಂದ ಮೊಟಾರ್‌ ಸೈಕಲ್‌ ಸವಾರನ ತಲೆಗೆ ತೀವ್ರ ಸ್ವರೂಪದ ರಕ್ತ ಗಾಯವಾಗಿರುತ್ತದೆ.  ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 219/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಹೆಬ್ರಿ: ಪಿರ್ಯಾದಿದಾರರಾದ ಶೇಖರ ಕುಲಾಲ್ (48), ತಂದೆ: ಬಚ್ಚ ಹಾಂಡ, ವಾಸ: ಹುತ್ತುರ್ಕೆ. ದರ್ಖಾಸು. ಚಾರಾ  ಗ್ರಾಮ ಹೆಬ್ರಿ ತಾಲ್ಲೂಕು ಇವರ ತಂದೆ ಬಚ್ಚ ಹಾಂಡ (85) ರವರು ಪ್ರಾಯಸ್ಥರಾಗಿದ್ದು ಅವರಿಗೆ ಅನ್ನನಾಳದ ಆರೋಗ್ಯ ಸಮಸ್ಯೆ ಇರುತ್ತದೆ. ಈ ಬಗ್ಗೆ ಅವರು ಮನನೊಂದು ಮದ್ಯಪಾನ ಮಾಡುತ್ತಿದ್ದವರು ಇದೇ ವಿಚಾರದಲ್ಲಿ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 30/12/2021 ರಂದು ಮಧ್ಯಾಹ್ನ 01:30 ಗಂಟೆಯಿಂದ 02:00 ಗಂಟೆಯ ಮಧ್ಯಾವಧಿಯಲ್ಲಿ ಚಾರ ಗ್ರಾಮದ ಹುತ್ತುರ್ಕೆ ನಿವಾಸಿ ಸುದೇಶ ಬಲ್ಲಾಳ ರವರಿಗೆ ಸಂಬಂದಿಸಿದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 41/2021 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.  

ಕಳವು ಪ್ರಕರಣ

  • ಕುಂದಾಪುರ: ದಿನಾಂಕ 30/12/2021 ರಂದು  ನಿರಂಜನ್ ಗೌಡ ಬಿ ಎಸ್‌, ಪೊಲೀಸ್ ಉಪನಿರೀಕ್ಷಕರು, ಕುಂದಾಪುರ ಗ್ರಾಮಾಂತರ ಠಾಣೆ ಇವರು ಠಾಣೆಯಲ್ಲಿರುವಾಗ ಕರ್ಕುಂಜೆ ಗ್ರಾಮದ ನೇರಳಕಟ್ಟೆ ಎಂಬಲ್ಲಿ ರಸ್ತೆ ಬದಿ ಮಲಗಿದ್ದ  ಜಾನುವಾರುಗಳನ್ನು  ಬಿಳಿ ಬಣ್ಣದ ಕಾರನಲ್ಲಿ ಬಂದು ಕಳವು ಮಾಡಿಕೊಂಡು ಹೋಗಿದ್ದು, ಸಿಸಿ ಕೆಮರಾದಲ್ಲಿ ದಾಖಲಾದ ಬಗ್ಗೆ ತಿಳಿಸಿರುತ್ತಾರೆ. ಈ ಬಗ್ಗೆ ನೇರಳಕಟ್ಟೆಯ ಬ್ರಹ್ಮಶ್ರೀ ಕಾಂಪ್ಲೆಕ್ಷನ   ಸಿಸಿ ಕ್ಯಾಮರ ಪರಿಶೀಲಿಸಿದಾಗ ದಿನಾಂಕ: 28/12/2021 ರಂದು ಬೆಳಿಗ್ಗೆ 04:20 ಸಮಯಕ್ಕೆ 4 ಜನ ವ್ಯಕ್ತಿಗಳು ಮಾವಿನಕಟ್ಟೆ ಕಡೆಯಿಂದ ಬಿಳಿ ಬಣ್ಣದ ಕಾರಿನಿಂದ ಬಂದವರು ನೇರಳಕಟ್ಟೆಯ ಬ್ರಹ್ಮಶ್ರೀ ಕಾಂಪ್ಲೆಕ್ಷ್ ಕೆಳಗಡೆ ರಸ್ತೆ ಬದಿ ಮಲಗಿದ್ದ  2  ಜಾನುವಾರುಗಳನ್ನು  ಕಳವು ಮಾಡಿಕೊಂಡು ಹೋಗಿರುವ ದೃಶ್ಯ ದಾಖಲಾಗಿರುವುದು ಕಂಡು ಬಂದಿದ್ದು. ಈ ದನಗಳ ಮಾಲಿಕರು ಯಾರು ಎಂಬುದು ಪತ್ತೆಯಾಗಿರುವುದಿಲ್ಲ. ಈ ಎರಡು ಜಾನುವಾರುಗಳ ಮೌಲ್ಯ 8000/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 73/2021 ಕಲಂ:  379 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಸೂರಜ್ (21),  ತಂದೆ : ಗೋಪಾಲ, ವಾಸ : ಶಕುಂತಳ ನಿವಾಸ, ಗದ್ದಿಗೆಬೆಟ್ಟು, ಕೈಪುಂಜಾಲ ಊಳಿಯಾರಗೋಳಿ  ಗ್ರಾಮ ಕಾಪು ತಾಲೂಕು ಉಡುಪಿ ಜಿಲ್ಲೆ , ಸಂಜಯ ಮತ್ತು ಸನತ್ ಇವರು ಕಾಪು ಪುರಸಭೆಯಲ್ಲಿ ಮತ ಎಣಿಕೆಯಲ್ಲಿ ವಿಜಯಯಾದ ಕಿರಣ ಆಳ್ವ ಮತ್ತು ಇತರರೊಂದಿಗೆ ಊಳಿಯಾರಗೋಳಿ ಗ್ರಾಮದ ಕೈಪುಂಜಾಲ ಜಂಕ್ಷನ್ ಹತ್ತಿರ  ಮಧ್ಯಾಹ್ನ 2:30 ಗಂಟೆಯ ಸಮಯಕ್ಕೆ ಹೋಗುತ್ತಿರುವಾಗ  ಪಿರ್ಯಾದಿದಾರರ ಎದುರಿನಿಂದ ಇನ್ನೊಂದು ಪಕ್ಷದ ಕಡೆಯವರು ಬಂದು ಪಿರ್ಯಾದಿದಾರರು, ಸಂಜಯ ಮತ್ತು ಸನತ್ ರವರನ್ನು ಅಡ್ಡ ಗಟ್ಟಿ ಪಿರ್ಯಾದಿದಾರರಿಗೆ ನೋಡಿ ಅವರ  ಪರಿಚಯವಿರುವ  ಪ್ರಭಾಕರ, ಅಕ್ವಿಲ್, ನಿತೀನ್ ಮತ್ತು  ಇತರರು  ಏಕಾಏಕಿ ಸನತ್ ರವರಿಗೆ ಕೈಯಿಂದ ಬಲಕೈಗೆ  ಹೊಡೆದಿದ್ದು, ಆಗ ಪಿರ್ಯಾದಿದಾರರು ಮತ್ತು ಸಂಜಯ ರವರು ತಪ್ಪಿಸಲು ಹೋದಾಗ ಪ್ರಭಾಕರ, ಅಕ್ವಿಲ್ ಮತ್ತು ನಿತೀನ್ ರವರು ಪಿರ್ಯಾದಿದಾರರು ಸಂಜಯ ಮತ್ತು ಸನತ್ ನಿಗೆ ಬೈದು, ಪಿರ್ಯಾದಿದಾರರಿಗೆ ಮತ್ತು ಸಂಜಯ ರವರಿಗೆ ತಲೆಗೆ, ಮುಖಕ್ಕೆ  ಕೈಯಿಂದ ಹೊಡೆದಿದ್ದು ಅಲ್ಲದೇ   ಬೆದರಿಕೆ ಹಾಕಿ ಹೋಗಿರುತ್ತಾರೆ. ನಂತರ ಪಿರ್ಯಾದಿ ಸಂಜಯ ಮತ್ತು ಸನತ್ ಮನೆಗೆ ಹೋಗಿದ್ದು ಮನೆಯಲ್ಲಿ  ಪಿರ್ಯಾದಿದಾರರಿಗೆ ಮತ್ತು ಸಂಜಯ  ರವರಿಗೆ ನೋವು ಜಾಸ್ತಿಯಾಗಿರುವುದರಿಂದ ಪರಿಚಯದ ಸಂದೀಪರವರೊಂದಿಗೆ ಉಡುಪಿ ಸರಕಾರಿ ಆಸ್ಪತ್ರೆ ಬಂದಿದ್ದು, ಅಲ್ಲಿನ ವೈದ್ಯರು ಪಿರ್ಯಾದಿದಾರರು ಮತ್ತು ಸಂಜಯ ರವರನ್ನು  ಪರೀಕ್ಷಿಸಿ ಒಳರೋಗಿಯನ್ನಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿರುವುದಾಗಿ ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 190/2021 ಕಲಂ: 341, 323, 504, 506 ಜೊತೆಗೆ 34 ಐಪಿಸಿ. ಮತ್ತು ಕಲಂ: 3(1)(ಆರ್), 3(1)(ಎಸ್), 3(2)(ವಿ-ಎ) ಎಸ್.ಸಿ. /ಎಸ್.ಟಿ. ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕಾರ್ಕಳ: ಪಿರ್ಯಾದಿದಾರರಾದ ಜಿತಿನ್ ರಾಜ್ ಎಮ್‌ವಿ (34), ತಂದೆ:ವಾಸು ಎನ್‌ಕೆ, ವಾಸ:ಮಲಾಯಿಲ್ ಹೌಸ್, ಕಲ್ಲೋರ್,  ನೂಲ್‌ಪುಝ ಪೋಸ್ಟ್,  ಕುಪ್ಪಾಡಿ, ಸುಲ್ತಾನ್ ಬತ್ತೇರಿ,ವಯನಾಡು ಜಿಲ್ಲೆ ಕೇರಳ ರಾಜ್ಯ ಇವರು ಶ್ರೀಮತಿ ಫೌಝಿಯಾ, ಮಹಮ್ಮದ್ ಶಫಿ ಮತ್ತು ಅಪಾದಿತ ಮುರುಕೇಶ್ ಟಿ ಎಂಬುವವರೊಂದಿಗೆ ದಿನಾಂಕ 07/02/2020 ರಂದು ಕುಕ್ಕುಂದೂರು ಗ್ರಾಮದ ಜೀವನ್ ವಿಲ್ಲಾ ಡೋರ್ ನಂಬ್ರ 10/92 ರಲ್ಲಿ  ಪಾಲುದಾರಿಕೆಯಲ್ಲಿ ಏಶಿಯನ್ ಗ್ರಾನೈಟ್ ಫ್ಯಾಕ್ಟರಿ ಎಂಬ ಹೆಸರಿನಲ್ಲಿ ಗ್ರಾನೈಟ್ ಕತ್ತರಿಸುವ ಮತ್ತು ಪಾಲಿಷ್  ಮಾಡುವ  ವ್ಯವಹಾರವನ್ನು  ಪ್ರಾರಂಭಿಸಿರುತ್ತಾರೆ. ಪಾಲುದಾರಿಕಾ ಸಂಸ್ಥೆಯು ಕುಕ್ಕುಂದೂರು ಗ್ರಾಮದಲ್ಲಿರುವ ಸ ನಂ 549/5, 549/4, 549/2, 549/3  ಸ್ಥಿರಾಸ್ತಿಗಳನ್ನು ಖರೀದಿಸಲು ಉದ್ದೇಶಿಸಿದ್ದು ಇದಕ್ಕಾಗಿ ಪಿರ್ಯಾದಿದುದಾರರು ಮತ್ತು ಪಾಲುದಾರರಾದ  ಮಹಮ್ಮದ್ ಶಫಿರವರು ಅಪಾದಿತ ಮುರುಕೇಶ್ (53),ತಂದೆ ತಾಂಡ ಗೌಂಡರ್, ಸಿಂಡಿಕೇಟ್ ಬ್ಯಾಂಕ್ ಹತ್ತಿರ,ನಕ್ರೆ, ಕುಕ್ಕುಂದೂರು ಗ್ರಾಮ, ಕಾರ್ಕಳ ತಾಲೂಕು ಎಂಬಾತನಿಗೆ ರೂಪಾಯಿ 10 ಲಕ್ಷ ಮುಂಗಡ ಹಣವನ್ನು ಹಂತಹಂತವಾಗಿ ಬ್ಯಾಂಕ್ ಮುಖಾಂತರ  ನೀಡಿದ್ದಲ್ಲದೇ, ರೂಪಾಯಿ 18,00,000/ ಹಣವನ್ನು ಪಾಲುದಾರಿಕಾ ಸಂಸ್ಥೆಯ ಯಂತ್ರೋಪಕರಣಗಳನ್ನು ಖರೀದಿಸಲು ಮತ್ತು ಸಾಗಾಟ ಮತ್ತು  ಅಳವಡಿಸಲು 5,00,000/  ಖರ್ಚು ಮಾಡಿರುತ್ತಾರೆ. ದಿನಾಂಕ 13/09/2021 ರಂದು ಪಿರ್ಯಾದಿದಾರರು ಕುಕ್ಕುಂದೂರಿಗೆ ಬಂದು ಸ್ಥಿರಾಸ್ಥಿಗಳ ನೋಂದಣಿ ಬಗ್ಗೆ  ಪಾಲುದಾರಿಕಾ ಸಂಸ್ಥೆಗೆ ಬಂದಾಗ  ಯಂತ್ರೋಪಕರಣಗಳು ಇದ್ದಿರುವುದಿಲ್ಲ ಮತ್ತು  ಸಂಸ್ಥೆಯ ಹೆಸರು  ಏಷ್ಯನ್ ಗ್ರಾನೈಟ್ ಫ್ಯಾಕ್ಟರಿ ಬದಲಾಗಿ  ಏಷಿಯನ್ ಗ್ರಾನೈಟ್ಸ್ ಎಂದು ಬದಲಾಯಿಸಿದ್ದಲ್ಲದೇ ಡೋರ್ ನಂಬ್ರವನ್ನು ಸಹಾ 10/108 ಎಂದು ಬದಲಾಯಿಸಿದ್ದಲ್ಲದೇ ಸ್ಥಿರಾಸ್ತಿಗಳಾದ ಸನಂ 549/5 ನ್ನು ವೀರರಾಜ ಎಂಬುವವರ ಹೆಸರಿಗೆ , ಸನಂ 549/4 ಟಿ ಪಾಂಡ್ಯ ರಾಜನ್  ಎಂಬುವವರ ಹೆಸರಿಗೆ, ಸ ನಂ 549/2 ಹಾಗೂ ಸ ನಂ  549/3 ತನ್ನ ಹೆಸರಿಗೆ ಮೋಸದಿಂದ ವರ್ಗಾವಣೆ ಮಾಡಿ ನಂಬಿಕೆ ದ್ರೋಹ ಮಾಡಿದ್ದಲ್ಲದೇ ,ಸಂಸ್ಥೆಯ ಯಂತ್ರೋಪಕರಣಗಳನ್ನು ಕಳವು ಮಾಡಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 165/2021 ಕಲಂ: 379, 406, 420, 465, 468 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 31-12-2021 09:50 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080