ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 31/12/2021  ರಂದು  ಬೆಳಿಗ್ಗೆ  ಸುಮಾರು 08:25  ಗಂಟೆಗೆ ಕುಂದಾಪುರ  ತಾಲೂಕಿನ, ಕುಂಭಾಶಿ ಗ್ರಾಮದ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ  ಪಶ್ಚಿಮ ಬದಿಯ NH 66 ರಸ್ತೆಯಲ್ಲಿ,  ಆಪಾದಿತ ಸುಬ್ರಹ್ಮಣ್ಯ ಎಂಬವರು  KA20-D-8408ನೇ ಶಾಲಾ  ಬಸ್ನ್ನು  ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ  ಅತೀ ವೇಗ ಹಾಗೂ ಅಜಾಗೂರುಕತೆಯಿಂದ ಚಲಾಯಿಸಿಕೊಂಡು ಬಂದು, ಯಾವುದೇ ಸೂಚನೆ ನೀಡದೇ  ಏಕಾಏಕಿ ರಸ್ತೆಯಲ್ಲಿ ನಿಲ್ಲಿಸಿದಾಗ, ಸದ್ರಿ ಬಸ್ಸಿನ ಹಿಂಭಾಗದಲ್ಲಿ  ಅದೇ ದಿಕ್ಕಿ ನಲ್ಲಿ ಪಿರ್ಯಾದಿ ಗೌಡಪ್ಪ  ಗಿರಿಯಪ್ಪನವರ್‌  ಇವರು KA29-EG-6029ನೇ ಬೈಕನ್ನು ಸವಾರಿ ಮಾಡಿಕೊಂಡು ಬಂದು ಶಾಲಾ ಬಸ್ಸಿನ  ಹಿಂಭಾಗಕ್ಕೆ  ಡಿಕ್ಕಿ ಹೊಡೆದು  ಅಪಘಾತಕ್ಕೆ ಒಳಗಾಗಿ  ಪಿರ್ಯಾದಿದಾರರ ಬಲ ಕೈಗೆ  ಮೂಳೆ ಮುರಿತವಾದ ಗಾಯ ಹಾಗೂ ಎಡ ಎದೆಗೆ ಕಾಲುಗಳಿಗೆ  ಒಳನೋವಾದ ಗಾಯವಾಗಿ ಕೊಟೇಶ್ವರ  ಎನ್. ಆರ್ ಆಚಾರ್ಯ  ಆಸ್ಪತ್ರೆಯಲ್ಲಿ   ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 110 /2021 ಕಲಂ 279, 338 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾಪು: ಪಿರ್ಯಾದಿ ಶೋಭಾ ಎ ಬಂಗೇರಾ  ಇವರು  ದಿನಾಂಕ:30/12/2021 ರಂದು ಮಧ್ಯಾಹ್ನ 12:00 ಗಂಟೆ ಸಮಯಕ್ಕೆ ಉಳಿಯರಗೋಳಿ ಗ್ರಾಮದ ಕೈಪುಂಜಾಲು ಎಂಬಲ್ಲಿನ ಕೆಂಪುಗುಡ್ಡೆ ರಸ್ತೆಯಲ್ಲಿ ಇತರ ಕೆಲವು ಮಹಿಳೆಯರೊಂದಿಗೆ ನೆಡೆದುಕೊಂಡು ಹೋಗುತ್ತಿರುವಾಗ  ಉಳಿಯಾರಗೋಳಿ ಗ್ರಾಮದ ಕರಾವಳಿ ವಾರ್ಡಿನ  ನಿವಾಸಿಗಳಾದ ಸನತ್, ಸೂರಜ್ ಹಾಗೂ ಸಂಜಯ್ ಮತ್ತಿತರರು ಬೈಕಿನಲ್ಲಿ ವೇಗವಾಗಿ ಬಂದು  ಪಿರ್ಯಾದಿದಾರರನ್ನು ಹಾಗೂ ಅವರೊಂದಿಗೆ ಇದ್ದ ಇತರ ಮಹಿಳೆಯರನ್ನು ಎಳೆದಾಡಿ  ಪಿರ್ಯಾದಿದಾರರಿಗೆ ನೀನು ಕೈಪುಂಜಾಲು  ವಾರ್ಡಿನಲ್ಲಿ ಗೆದ್ದಿರುವೇ ನಾವು ನಮ್ಮ ವಾರ್ಡಿನಲ್ಲಿ ಜಯಗಳಿಸಿದ್ದೇವೆ  ನಿನ್ನನ್ನು ನೋಡಿಕೊಳ್ಳುತ್ತೇವೆ ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 191/2021 ಕಲಂ 323, 354, 506 ಜೊತೆಗೆ 34 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

 ಮನುಷ್ಯ ಕಾಣೆ ಪ್ರಕರಣ

  • ಕಾರ್ಕಳ: ಫಿರ್ಯಾದು ಜಾಜಿ ನಾಯಕ್ ಇವರ ಗಂಡ ವಾಸುದೇವ ನಾಯಕ್ (56 ವರ್ಷ) ಎಂಬವರು ಮರ ಕತ್ತರಿಸುವ ಕೆಲಸ ಮಾಡಿಕೊಂಡಿದ್ದು  ದಿನಾಂಕ 27-12-2021 ರಂದು ಫಿರ್ಯಾದುದಾರರು ಗೇರು ಬೀಜ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ  ಮನೆಗೆ ಬೀಗ ಹಾಕಿ ಮೊಬೈಲ್ ಫೋನ್ ಮತ್ತು ಸ್ಕೂಟರನ್ನು ಮನೆಯಲ್ಲಿಯೇ ಬಿಟ್ಟುಹೋಗಿದ್ದು ವಾಪಾಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 166/2021 ಕಲಂ: ಗಂಡಸು ಕಾಣೆ ಪ್ರಕರಣ ದಾಖಲಾಗಿರುತ್ತದೆ.
  • ಹಿರಿಯಡ್ಕ: ಫಿರ್ಯಾದಿ ಶ್ರೀಮತಿ ಮೀನಾ ಮೂಲ್ಯ ಇವರ ಗಂಡನಾದ  ಸಾಧು @ ಸದಾಶಿವ ಮೂಲ್ಯ (65) ಎಂಬವರು ಸುಮಾರು 16 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಉಡುಪಿಯ ಬಾಳಿಗ ಅಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದರು ಅವರು ಮಾನಸಿಕ ಕಾಯಿಲೆಯಿಂದ ಅಗಾಗ ಮನೆಯನ್ನು ಬಿಟ್ಟು ಹೋಗುತ್ತಿದ್ದರು. ದಿನಾಂಕ: 26/12/2021 ರಂದು ಸಂಜೆ 6:00 ಗಂಟೆಗೆ ಪಿರ್ಯಾದುದಾರರ ಗಂಡವರು  ಮನೆಯಿಂದ ಹೊರಟು ಹೋಗಿರುತ್ತಾರೆ. ಪಿರ್ಯಾದುದಾರರು ಎಲ್ಲಾಕಡೆ ನೆರೆಕೆರೆ, ಹಾಗೂ ಸಂಬಂದಿಕರ ಮನೆಯಲ್ಲಿ ಹುಡುಕಾಡಿದ್ದು ಈವರೆಗೂ ಸಿಕ್ಕಿರುವುದಿಲ್ಲ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 67/2021 ಕಲಂ: ಗಂಡಸು ಕಾಣೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಗಂಗೊಳ್ಳಿ : ಫಿರ್ಯಾದಿ ಶ್ರೀಮತಿ ವಿಮಲಾರವರ  ಗಂಡ ಗಿರೀಶ ಪೂಜಾರಿ, ಪ್ರಾಯ: 38 ವರ್ಷರವರು ಗಂಗೊಳ್ಳಿ ಬಂದರಿನಲ್ಲಿ  ಬೋಟ್ ಎಳೆಯುವ  ಕೆಲಸ ಮಾಡುತ್ತಿದ್ದು  ಕೆಲಸ ಮುಗಿಸಿ ಬಸ್ ಸ್ಟ್ಯಾಂಡ್ ನಲ್ಲಿ ಮಲಗುತ್ತಿರುವುದಾಗಿದೆ. ಫಿರ್ಯಾದಿದಾರರು ತನ್ನ ತವರು ಮನೆಯಾದ ಮಣೂರಿಗೆ ಹೋಗಿದ್ದು ಮನೆಯಲ್ಲಿರುವಾಗ ದಿನಾಂಕ: 31-12-2021 ರಂದು ಬೆಳಿಗ್ಗೆ ಸಮಯ 7:30 ಗಂಟೆಗೆ ಫಿರ್ಯಾದಿದಾರರ ಗಂಡನ ತಮ್ಮ ವಿನೋದ್ ರವರು ಫೋನ್ ಮಾಡಿ ಅಣ್ಣ ಗಿರೀಶ ಪೂಜಾರಿಯವರು ಗಂಗೊಳ್ಳಿ ಗ್ರಾಮದ ಗಂಗೊಳ್ಳಿ ಬಂದರ್ ಬಸ್ ಸ್ಟ್ಯಾಂಡ್ ನಲ್ಲಿ ಮಲಗಿದ್ದಲ್ಲಿಯೇ ಮೃತಪಟ್ಟಿರುವುದಾಗಿ  ತಿಳಿಸಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 36/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಮಲ್ಪೆ: ಪಿರ್ಯಾಧಿ ರಾಮಕೃಷ್ಣ ದುರ್ಗಪ್ಪ  ಇವರ ತಮ್ಮನಾದ  ಗೋಪಾಲ ಮೊಗೇರ (44ವರ್ಷ)  ಸುಮಾರು 20 ವರ್ಷದಿಂದ  ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ  ಕೆಲಸ ಮಾಡಿಕೊಂಡಿದ್ದು,  ಪ್ರಸ್ತುತ 5 ತಿಂಗಳಿಂದ ಪಡುತೋನ್ಸೆ ಗ್ರಾಮದ ರವೀಂದ್ರ  ಶ್ರೀಯಾನ್  ರವರ  “ಜಲವೀರ”  ಬಾರ್ -9 ಬೋಟ್ ನಲ್ಲಿ  ಕಲಾಸಿಯಾಗಿ ಕೆಲಸ ಮಾಡಿಕೊಂಡಿದ್ದು , ದಿನಾಂಕ:  30-12-2021 ರಂದು ಪುರುಷೋತ್ತಮ ಎಂಬವವರು  00:30 ಗಂಟೆಗೆ ಪಿರ್ಯಾಧಿದಾರರಿಗೆ ಕರೆ ಮಾಡಿ ಮೀನುಗಾರಿಕೆಯ ಬಗ್ಗೆ  ದಿನಾಂಕ: 29-12-2021 ರಂದು ರಾತ್ರಿ 10:30 ಗಂಟೆಗೆ ನಾನು ಮತ್ತು  ಕಲಾಸಿಗಲಾದ ಇಸಾಕ್ ಸಾಹೇಬ, ಗಣಪತಿ, ಮಂಜುನಾಥ, ಹಾಗೂ ಪಿರ್ಯಾಧಿದಾರರ ತಮ್ಮನಾದ ಗೋಪಾಲ ಮೋಗೇರ  ರವರೊಂದಿಗೆ ಹೊರಟು ಅರಬ್ಬಿ ಸಮುದ್ರದಲ್ಲಿ  ಸುಮಾರು 12 ನಾಟಿಕಲ್ ಮೈಲಿ ಪಿರ್ಯಾಧಿದಾರರ ತಮ್ಮ ಬಲೆ ಎಳೆಯುವ ಸಮಯ ಆಯತಪ್ಪಿ ಬೋಟಿನಿಂದ ಸಮುದ್ರ ನೀರಿಗೆ ಬಿದ್ದು ಕಾಣೆಯಾದ ಬಗ್ಗೆ ತಿಳಿಸಿದಂತೆ,ಪಿರ್ಯಾಧಿದಾರರು ಮತ್ತು ಜಲವೀರ ಬೋಟಿನ ಮಾಲಕರಾದ ರವೀಂದ್ರ ಶ್ರೀಯಾನ್ ರವರೊಂದಿಗೆ ಇನ್ನೊಂದು ಬೋಟಿನಲ್ಲಿ ಗೋಪಾಲ ಮೊಗೇರ ನನ್ನು ಹುಡುಕಾಡುತ್ತಿರುವಾಗ ದಿನಾಂಕ: 31-12-2021 ರಂದು  ಬೆಳಿಗ್ಗೆ 08:50 ಸಮಯಕ್ಕೆ ಗೋಪಾಲ ಮೊಗೇರ ನ ಮೃತದೇಹ ಸಮುದ್ರದ ನೀರಿನಲ್ಲಿ  ತೇಲುತ್ತಿದ್ದು ಮೃತದೇಹವನ್ನು ಮಲ್ಪೆ ಬಂದರಿಗೆ ತರಲಾಗಿದೆ. ಪಿರ್ಯಾಧಿದಾರರ ತಮ್ಮ ಗೋಪಾಲ ಮೊಗೇರ ದಿನಾಂಕ: 30-12-2021 ರ 00:30 ಗಂಟೆಗೆ ಮೀನುಗಾರಿಕೆ ಮಾಡುತ್ತಿರುವಾಗ ಆಯತಪ್ಪಿ  ಬೋಟಿನಿಂದ ಆ ಸಮುದ್ರದ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ ಎಂಬಿತ್ಯಾದಿ.  ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 52/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 31-12-2021 06:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080