ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಅಭಿಷೇಕ್‌ (22), ತಂದೆ:ಚಂದ್ರಹಾಸ, ವಾಸ:ಪಂಚಮಿ, ಮೂಡಬೆಟ್ಟು, ಎರ್ಮಾಳ್‌,ಅದಮಾರು ಅಂಚೆ, ಬಡಾ ಗ್ರಾಮ, ಕಾಪು ತಾಲೂಕು ಇವರ ತಂದೆ ಚಂದ್ರಹಾಸ(52) ಎಂಬುವವರು ಉಡುಪಿಯ  ಸಂಕಪ್ಪ ಎಂಬುವವರ ದಿನಾಂಕ 29/10/2022 ರಂದು ಮಧ್ಯಾಹ್ನ 12:10 ಗಂಟೆಗೆ ನೆರೆಮನೆಯವರಾದ  ಸುನೀಲ್‌ ದೇವಾಡಿಗರವರ KA-20-EL-6084  ನೇ ಬೈಕಿನಲ್ಲಿ ಸಹಸವಾರರಾಗಿ ಉಡುಪಿಗೆ ಹೊರಟಿದ್ದು, ಮದ್ಯಾಹ್ನ 12:30 ಗಂಟೆಗೆ ಕಾಪು ತಾಲೂಕು ಬಡಾ ಗ್ರಾಮದ ಉಚ್ಚಿಲ ಮೋಗವೀರ ಸಬಾಭವನದ ಎದುರು ರಾಷ್ಟ್ರೀಯ ಹೆದ್ದಾರಿ 66 ರ  ಮಂಗಳೂರು- ಉಡುಪಿ ಎಕಮುಖ ರಸ್ತೆಯಲ್ಲಿ ಹೋಗುತ್ತಿರುವಾಗ ಅದೇ ರಸ್ತೆಯಲ್ಲಿ  ಮಂಗಳೂರು ಕಡೆಯಿಂದ KA-19-AC-9245 ದೋಸ್ತ ವಾಹನದ ಚಾಲಕ  ನವೀನ್‌  ಕುಮಾರ್‌ ವಾಹನವನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ  ಚಲಾಯಿಸಿಕೊಂಡು ಬಂದು ಸುನೀಲ್‌  ದೇವಾಡಿಗ ರವರು  ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕಿನ ಬಲಬದಿಯ ಸೈಲನ್ಸರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಚಂದ್ರಹಾಸ ಮತ್ತು ಸುನೀಲ್‌ ದೇವಾಡಿಗರವರು ಮೋಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದ ಪರಿಣಾಮ  ಚಂದ್ರಹಾಸರವರ ಬಲ ಕಾಲಿನ ಬಳಿ  ತೀವ್ರ ಗಾಯವಾಗಿದ್ದು, ಬಲ ಕೈಗೆ ಮಣಿಕಟ್ಟಿನ  ಬದಿ,ತಲೆಯ ಹಿಂಬದಿ ತರಚಿದ ಗಾಯ ಹಾಗೂ ಸೊಂಟಕ್ಕೆ ಒಳನೋವು ಆಗಿರುತ್ತದೆ, ಸುನೀಲ್‌ ದೇವಾಡಿಗರವರ ಬಲಕೈಗೆ,ಬಲ ಭುಜಕ್ಕೆ, ಬಲಕಾಲಿಗೆ, ಬಲ ತೊಡೆಗೆ ತರಚಿದ ಗಾಯವಾಗಿದ್ದು, ಪಾದದ ಗಂಟಿನ ಬಳಿ ಗಾಯವಾಗಿರುತ್ತದೆ. ಇಬ್ಬರು ಗಾಯಾಳುಗಳನ್ನು ಚಿಕಿತ್ಸಯ ಬಗ್ಗೆ ಮಣಿಪಾಲ ಕೆ ಎಮ್‌ ಸಿ ಆಸ್ಪತ್ರೆಯಲ್ಲಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 138/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣದ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಪ್ರಶಾಂತ್ (45), ತಂದೆ:ದಿ.ಜಗನ್ನಾಥ ಶೆಟ್ಟಿ, ವಾಸ:ಮನೆ  ನಂಬ್ರ:1-54ಎಫ್‌,ಪಿಲಾರು, ಮೇಗಿನ ಮನೆ, ಪ್ರಕಾಶ್‌ ನಗರ, ಕೋಟೆಕಾರು  ಅಂಚೆ, ಸೋಮೇಶ್ವರ ಗ್ರಾಮ,ಮಂಗಳೂರು  ತಾಲೂಕು, ದ.ಕ ಜಿಲ್ಲೆ ಇವರು  ಮಂಗಳೂರು ನಗರದ ಸಿಸಿಬಿ ಘಟಕದಲ್ಲಿ ಕರ್ತವ್ಯ ಮಾಡಿಕೊಂಡಿದ್ದು,   ದಿನಾಂಕ 30/10/2022 ರಂದು  ವಿಶೇಷ ಕರ್ತವ್ಯದಲ್ಲಿ  ಹೊರಟವರು ತನ್ನ KA-19-ML-8669 ನೇ ಕ್ರೇಟಾ ಕಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ  ಮಂಗಳೂರು-ಉಡುಪಿ ಏಕಮುಖ ರಸ್ತೆಯಲ್ಲಿ ಉಡುಪಿ ಕಡೆಗೆ  ಬರುತ್ತಾ ಮಧ್ಯಾಹ್ನ 12:30 ಗಂಟೆಗೆ ಕಾಪು ತಾಲೂಕು  ನಡ್ಸಾಲು  ಗ್ರಾಮದ ಬೀಡು ಬಳಿ ತಲುಪುವಾಗ  ಉಡುಪಿ-ಮಂಗಳೂರು ಏಕಮುಖ ರಸ್ತೆಯಲ್ಲಿ  ಉಡುಪಿ  ಕಡೆಯಿಂದ ಮಂಗಳೂರು ಕಡೆಗೆ  KA-19-AC-2022 ನೇ  ನಂಬ್ರದ  ಲಾರಿಯನ್ನು ಅದರ  ಚಾಲಕ ಸುರೇಂದ್ರ ಎಂಬುವವರು ಅತೀವೇಗ ಹಾಗೂ ನಿರ್ಲಕ್ಷತನದಿಂದ  ಚಲಾಯಿಸಿಕೊಂಡು ಬಂದು ಲಾರಿಯು ಚಾಲಕನ  ನಿಯಂತ್ರಣ ತಪ್ಪಿ  ರಸ್ತೆಯ ಬಲಬದಿಯ   ಡಿವೈಡರ್‌  ಮೇಲೆ  ಹತ್ತಿ ಅದರ  ಪಕ್ಕದ ಮಂಗಳೂರು -ಉಡುಪಿ ಏಕಮುಖ  ಸಂಚಾರ ರಸ್ತೆಗೆ ಚಲಿಸಿ  ಪಿರ್ಯಾದಿದಾರರ  ಕಾರಿಗೆ ಡಿಕ್ಕಿ ಹೊಡೆದು ಲಾರಿಯು ರಸ್ತೆಯ ಬದಿಯಲ್ಲಿ ಮುಗುಚಿ ಬಿದ್ದಿರುತ್ತದೆ. ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ  ಕಾರು ಸಂಪೂರ್ಣ  ಜಖಂಗೊಂಡಿರುತ್ತದೆ ಹಾಗೂ   ಅವರ ಎರಡೂ  ಕೈಗಳಿಗೆ  ಗುದ್ದಿದ  ಒಳ ಜಖಂ ಆಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 139/2022 ಕಲಂ: 279,  337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ದಿನಾಂಕ 30/10/2022  ರಂದು ಮಧ್ಯಾಹ್ನ 12:20 ಗಂಟಗೆ  ಆರೋಪಿ ಶತಾನಂದ ಕಾಮತ್ ಎಂಬುವವರು KA-19-MA-3906  ನೇ ವ್ಯಾಗನರ್‌ ಕಾರನ್ನು ಪಡುಬಿದ್ರಿ ಕಡೆಯಿಂದ ಮಂಗಳೂರು  ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಚಾಲಾಯಿಸಿಕೊಂಡು ಹೋಗುತ್ತಾ ನಡ್ಸಾಲು ಗ್ರಾಮದ ಪಡುಬಿದ್ರಿ ಎಸ್ ಎಸ್ ಬಾರ್ ಹತ್ತಿರ ಇರುವ ಯು ಟರ್ನನಲ್ಲಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹಾದುಹೋಗುವ  ರಾಷ್ಟ್ರೀಯ ಹೆದ್ದಾರಿ 66 ಕ್ಕೆ ಪ್ರವೇಶಿಸಲು ಒಮ್ಮೆಲೇ ನಿರ್ಲಕ್ಷತನದಿಂದ ಹಾಗೂ ದುಡುಕುತನದಿಂದ ಚಲಾಯಿಸಿ, ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ KA-20-EJ-4029ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ, ಸ್ಕೂಟಿ ಸವಾರ ಹಪೀಜ್‌ ರೆಹಮಾನ್‌ ಮತ್ತು ಸಹ ಸವಾರ ಅಜೀಜ್‌ ರೆಹಮಾನ್‌ ರವರು ರಸ್ತೆಗೆ ಬಿದ್ದು ಅವರುಗಳ ತಲೆಗೆ, ಮುಖಕ್ಕೆ, ಎದೆಗೆ, ಗಂಭೀರ ಗಾಯಗೊಂಡು ಮಾತನಾಡುವ ಸ್ಥಿತಿಯಲ್ಲಿ ಇಲ್ಲದ ಗಾಯಾಳುಗಳನ್ನು ಸ್ಥಳದಲ್ಲಿ ಸೇರಿದ ಜನರ ಪೈಕಿ ರಕ್ಷಿತ್ ರವರು ರಿಕ್ಷಾವೊಂದರಲ್ಲಿ ಸಿದ್ದಿವಿನಾಯಕ ಆಸ್ಪತ್ರೆಗೆ  ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ.  ಬಳಿಕ  ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ.   ಆಸ್ಪತ್ರೆಗೆ ಸಾಗಿಸಿದ್ದು,  ಎ ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 140/2022 ಕಲಂ: 279,  338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ದತ್ತಮೂರ್ತಿ ಚಾತ್ರ (48), ತಂದೆ: ಸುಬ್ರಾಯ ಚಾತ್ರ, ವಾಸ: ಮಯಿರಕೋಡಿ ಹಳ್ಳಿಹೊಳೆ ಅಂಚೆ ಬೈಂದೂರು ತಾಲೂಕು ರವರ ತಮ್ಮ  ಶ್ರೀಧರ ಚಾತ್ರ (36) ರವರು 2009ರಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಕುಂದಾಪುರ ಮಣಿಪಾಲ ಕೆ ಎಂ ಸಿ  ಮತ್ತು  ಉಡುಪಿಯ ಬಾಳೀಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಸರಿಯಾಗಿ ಗುಣಮುಖವಾಗದೆ ಇದ್ದು ಎರಡು ಮೂರು ಬಾರಿ ಶ್ರೀಧರ ಚಾತ್ರನ ಸಾಯುತ್ತೆನೆಂದು ಪಿರ್ಯಾದಿದಾರರ ಆಡಿಕೆ ತೋಟದಲ್ಲಿರುವ ಕೆರೆಗೆ ಹಾರುವುದನ್ನು  ಪಿರ್ಯಾದಿದಾರರು ತಪ್ಪಿಸಿರುತ್ತಾರೆ. ದಿನಾಂಕ 30/10/2022 ರಂದು ಪಿರ್ಯಾದಿದಾರರು ಮತ್ತು ಶ್ರೀಧರ ಚಾತ್ರರವರು ಮನೆಯಲ್ಲಿರುವಾಗ ಶ್ರೀಧರ ಚಾತ್ರರವರು  ಮಧ್ಯಾಹ್ನ 2;00  ಗಂಟೆಗೆ ಸಾಯುತ್ತೆನೆಂದು ಹೊರಗೆ ಓಡಿ ಬಂದು ಮಧ್ಯಾಹ್ನ 2:10 ಗಂಟೆಗೆ ಮನೆಯ ತೋಟದಲ್ಲಿರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 37/2022  ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಹಿರಿಯಡ್ಕ: ಅರ್ಜಿದಾರರರಾದ ಕೃಷ್ಣ ಕುಲಾಲ್  (43), ತಂದೆ: ತನ್ಯಾ ಕುಲಾಲ್, ವಾಸ: ಪ್ರಾಪ್ತಿ ನಿವಾಸ, ಕುಂಟಲಕಟ್ಟೆ, ಭೈರಂಪಳ್ಳಿ ಗ್ರಾಮ, ಉಡುಪಿ ತಾಲೂಕು ಇವರು ಕುಂಟಲಕಟ್ಟೆಯಲ್ಲಿ ಅರುಣೋದಯ ಹೋಲೋಬ್ಲಾಕ್ ಫ್ಯಾಕ್ಟರಿಯನ್ನು ಹೊಂದಿದ್ದು,  ಫ್ಯಾಕ್ಟರಿಯಲ್ಲಿ ಬಿಹಾರ ಮೂಲದ 10 ಜನ ಕೆಲಸಗಾರರು ಕೆಲಸ ಮಾಡಿಕೊಂಡಿರುತ್ತಾರೆ. ಅವರಿಗೆ ಅವರ ಕಚೇರಿಯ ಹಿಂಬದಿ ರೂಮಿನಲ್ಲಿ ಉಳಕೊಳ್ಳಲು ವ್ಯವಸ್ತೆ ಮಾಡಿಕೊಟ್ಟಿದ್ದು, ಅವರು ಅಲ್ಲಿಯೇ ಅಡುಗೆ ಮಾಡಿಕೊಂಡು ಊಟ ಮಾಡುವುದಾಗಿದೆ. ಕೆಲಸಗಾರರಲ್ಲಿ ಎಲ್ಲರೂ  ಬಿಹಾರ ರಾಜ್ಯದ ಅರಾರಿಯ ಜಿಲ್ಲೆಯವರಾಗಿದ್ದು, ಅದರಲ್ಲಿ 5 ಜನರು ಒಂದೇ ಊರಿನವರಾಗಿದ್ದು ಸಂಬಂಧಿಗಳಾಗಿರುತ್ತಾರೆ. ದಿನಾಂಕ 30/10/2022 ರಂದು ಅದಿತ್ಯವಾರ ಆಗಿದ್ದುದರಿಂದ ಕೆಲಸಕ್ಕೆ ರಜೆ ಇರುತ್ತದೆ. ಸಂಜೆ  7 ಗಂಟೆ ಸುಮಾರಿಗೆ ಪಿರ್ಯಾದಿದಾರರು ಅವರ ಹೆಂಡತಿ ಮನೆಯಾದ ಕೊಳಲಗಿರಿಯಲ್ಲಿ ಇದ್ದ ಸಮಯ ಅವರಲ್ಲಿ ಕೆಲಸ ಮಾಡುವ  ಪ್ರಕಾಶ್ ರಿಶಿದೇವ್ ಕರೆ ಮಾಡಿ ದೀಪಕ್ ರಿಶಿದೇವ್ ಎಂಬುವವನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ,  ಎಂದು ತಿಳಿಸಿದ್ದು, ಪಿರ್ಯಾದಿದಾರರು ಕೂಡಲೇ ಫ್ಯಾಕ್ಟರಿಗೆ ಬಂದು ನೋಡಿದಾಗ ಅಲ್ಲಿ ದೀಪಕ್ ನನ್ನು ಫ್ಯಾಕ್ಟರಿಯ ಒಳಗಡೆ ಇಂಟರ್ ಲಾಕ್ ತಯಾರಿ ಮಾಡುವ ಶೆಡ್ ನಲ್ಲಿ ಚಾಪೆ ಮೇಲೆ ಅಂಗಾತನೆ ಮಲಗಿಸಿ ಇಟ್ಟಿರುತ್ತಾರೆ. ಅವರಲ್ಲಿ ವಿಚಾರಿಸಿದಾಗ ಆತನು ಶೆಡ್ ನ ಮಾಡಿನ ಕಬ್ಬಿಣದ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದು, ಆತನು ನೇಣು ಬಿಗಿದ  ಹಗ್ಗವನ್ನು ತುಂಡು ಮಾಡಿ ಕೆಳಗೆ ಇಳಿಸಿರುವುದಾಗಿ ಕೆಲಸಗಾರರು ತಿಳಿಸಿರುತ್ತಾರೆ. ದೀಪಕ್ ರಿಶಿದೇವ್ (20) ಬಗ್ವಾ ಟೋಲಾ, ವಾರ್ಡ್ ನಂಬ್ರ 5, ಹಸನ್ ಪುರ, ಮೇರಿಗಂಜ್, ಅರಾರಿಯಾ ಜಿಲ್ಲಾ, ಬಿಹಾರ್ ನು ಸುಮಾರು 3 ತಿಂಗಳ ಹಿಂದೆ ಮದುವೆಯಾಗಿದ್ದು, ಮದುವೆಯಾಗಿ ಒಂದು ತಿಂಗಳ ಬಳಿಕ ಕೆಲಸಕ್ಕೆ ಬಂದಿರುತ್ತಾನೆ. ಅವರಲ್ಲಿ ಕೆಲಸ ಮಾಡುವ ವಿನೋದ್ ರಿಶಿದೇವ್ ಹಾಗೂ ಪ್ರಕಾಶ್ ರಿಶಿದೇವ್ ರವರು ಆತನ ಸಂಭಂಧಿಕರಾಗಿರುತ್ತಾರೆ. ಈ ಬಗ್ಗೆ ಅವರಲ್ಲಿ ವಿಚಾರಿಸಿದಾಗ ದೀಪಕನು ಈ ದಿನ ಮೊಬೈಲ್ ನಲ್ಲಿ ಮದ್ಯಾಹ್ನ ಯಾರೊಂದಿಗೊ ಗಲಾಟೆ ಮಾಡುತ್ತಿದ್ದು, ಬಳಿಕ ಸಿಟ್ಟಿನಲ್ಲಿ ಮೊಬೈಲನ್ನು ಒಡೆದು ಹಾಕಿ ಬೆಂಕಿ ಹಾಕಿ ಸುಟ್ಟು ರೂಮಿನಲ್ಲಿ ಮಲಗಿದ್ದು, ಬಳಿಕ ಸುಮಾರು  5:00 ಗಂಟೆಗೆ ಎದ್ದು ಅಂಗಡಿಯಿಂದ ಅಡುಗೆಗೆ ಸಾಮಾನನ್ನು ತಂದಿರುವುದಾಗಿ ತಿಳಿಸಿರುತ್ತಾರೆ. ಬಳಿಕ ಆತನು ಶೆಡ್ ನಲ್ಲಿ ಇಂಟರ್ ಲಾಕ್ ತಯಾರಿಸುವ ವೈಬ್ರೆಟರ್ ಟೇಬಲ್ ನ ಬಳಿ ಹೋಗಿ ಅಲ್ಲಿ ಇದ್ದಿರುವುದಾಗಿ ಅವರು ತಿಳಿಸಿರುತ್ತಾರೆ.  ಆತನು ಸಂಜೆ 6:00 ಗಂಟೆಯಿಂದ 6:45 ಗಂಟೆಯ ಮದ್ಯಾವಧಿಯಲ್ಲಿ ಹೋಲೋ ಬ್ಲಾಕ್ ಶೆಡ್ ನ ಇಂಟರ್ ಲಾಕ್ ತಯಾರಿಸುವ ವೈಬ್ರೆಟರ್ ಟೇಬಲ್ ನ ಬಳಿ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು. ಆತನು ತನಗಿರುವ ಯಾವುದೋ ವೈಯಕ್ತಿಕ ಸಮಸ್ಯೆಯಿಂದ ಅಥವಾ ಇನ್ಯಾವುದೋ ಕಾರಣದಿಂದ ಜೀವನದಲ್ಲಿ ನೊಂದು ಜಿಗುಪ್ಸೆಗೊಂಡು ಸಂಜೆ 6:00 ಗಂಟೆಯಿಂದ 6:45 ಗಂಟೆಯ ಮಧ್ಯಾವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 41/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .  

ಇತರ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಮಾಲತಿ (32), ಗಂಡ: ಸಂತೋಷ ಪೂಜಾರಿ, ವಾಸ: ಸಮೃದ್ಧಿ ನಿಲಯ, ಅಂಬ್ಲಾಡಿ, ಕಟ್‌ಬೆಲ್ತೂರು ಗ್ರಾಮ, ಕುಂದಾಪುರ ತಾಲೂಕು ಹಾಗೂ ಆರೋಪಿಗಳಾದ ರಾಜೇಶ, ಕಾವ್ಯ ದಂಪತಿಗಳಿಗೂ ಕಂಪೌಂಡ್‌ ಕಟ್ಟುವ ವಿಚಾರದಲ್ಲಿ ತಕರಾರು ಇದ್ದು ಇದೇ ವಿಚಾರದಲ್ಲಿ ಪಿರ್ಯಾದಿದಾರರಿಗೂ ಹಾಗೂ ಆರೋಪಿಗಳಿಗೂ ಪರಸ್ಪರ ವೈಮನಸ್ಸು ಇದ್ದು, ಇದೇ ವಿಚಾರದಲ್ಲಿ ಪದೇ-ಪದೇ ಗಲಾಟೆ ನಡೆಯುತ್ತಿದ್ದು ದಿನಾಂಕ 29/10/2022 ರಂದು 18:15 ಗಂಟೆಗೆ ಕುಂದಾಪುರ ತಾಲೂಕು ಕಟ್‌ಬೆಲ್ತೂರು ಗ್ರಾಮದ ಅಂಬ್ಲಾಡಿ ಎಂಬಲ್ಲಿ ಆರೋಪಿಗಳು ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದು ಅದನ್ನು ಪಿರ್ಯಾದಿದಾರರು ಪ್ರಶ್ನಿಸಿದ್ದಕ್ಕೆ ಆರೋಪಿಗಳು ಪಿರ್ಯಾದಿದಾರರ ಮನೆಯ ಎದುರಿಗೆ ಬಂದು ಪಿರ್ಯಾದಿದಾರರಿಗೆ ಆರೋಪಿ ಕಾವ್ಯಳು ಕೈಯಿಂದ ಹಲ್ಲೆ ಮಾಡಿದ್ದು, ಆರೋಪಿ ರಾಜೇಶನು ಹಲ್ಲೆ ಮಾಡಿರುತ್ತಾನೆ. ಆ ಸಮಯ ಗಲಾಟೆಯನ್ನು ಬಿಡಿಸಲು ಬಂದ ಪಿರ್ಯಾದಿದಾರರ ಗಂಡ ಬಂದಿದ್ದು ಆರೋಪಿ ರಾಜೇಶನು ಪಿರ್ಯಾದಿದಾರರ ಗಂಡನಿಗೂ ಹೆಲ್ಮೆಟ್‌ನಿಂದ ಹಲ್ಲೆ ಮಾಡಿ ನಂತರ ಪಿರ್ಯಾದಿದಾರರು ಹಾಗೂ ಪಿರ್ಯಾದಿದಾರರ ಗಂಡ ಬೊಬ್ಬೆ ಹಾಕಿಕೊಂಡಾಗ ಆರೋಪಿಗಳು ಅಲ್ಲಿಂದ ಹೋಗಿದ್ದು ಹೋಗುವಾಗ ಆರೋಪಿಗಳ ಪೈಕಿ ರಾಜೇಶನು ಜೀವ ಸಹಿತ ಬಿಡುವುದಿಲ್ಲವೆಂಬುದಾಗಿ  ಜೀವ ಬೆದರಿಕೆ ಹಾಕಿರುತ್ತಾರೆ. ಅಲ್ಲದೇ ಘಟನೆಯ ಸಮಯ ಪಿರ್ಯಾದಿದಾರರು ಧರಿಸಿದ್ದ 2 1/2 ಪವನ್‌ ತೂಕದ ಚಿನ್ನದ ಸರ ತುಂಡಾಗಿ ಬಿದ್ದು ಹೋಗಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 61/2022 ಕಲಂ: 354, 323, 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 31-10-2022 09:50 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080