ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 31.10.2022 ರಂದು ಪಿರ್ಯಾದಿದಾರರಾದ ಲಕ್ಷ್ಮೀ ನಾಯ್ಕ ರವರು ಅವರ ಬಾಬ್ತು KA.20.EU.1875 ನೇ TVS XL ದ್ವಿಚಕ್ರ ವಾಹನವನ್ನು ಸವಾರಿ ಮಾಡಿಕೊಂಡು ಮನೆಯಿಂದ ಬ್ರಹ್ಮಾವರ ಕಡೆಗೆ ಹೊರಟು ಪೇತ್ರಿ ಬ್ರಹ್ಮಾವರ ರಸ್ತೆಯಲ್ಲಿ ಬರುತ್ತಾ ಬೆಳಿಗ್ಗೆ 08:00 ಗಂಟೆಯ ಸಮಯಕ್ಕೆ ಹೇರೂರು ಗ್ರಾಮದ ಬ್ರಹ್ಮಾವರ ಕೃಷಿಕೇಂದ್ರದ ಬಳಿ ತಲುಪಿದಾಗ ರುಡ್‌ಸೆಟ್‌ ಕಡೆಯಿಂದ ಆರೋಪಿ ತೇಜ ಎಂಬವರು ಅವರ ಬಾಬ್ತು  KA.14.C.1168 ನೇ ಮಹೇಂದ್ರ ಬೊಲೆರೋ ಟೆಂಪೊವನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಮುಖ್ಯ ರಸ್ತೆಗೆ ಬಂದು  ಪಿರ್ಯಾದಿದಾರರ ವಾಹನಕ್ಕೆ ಡಿಕ್ಕಿ ಹೊಡೆದಿರುವುದಾಗಿದೆ. ಈ ಅಪಘಾತದ ಪರಿಣಾಮ ಪಿರ್ಯಾದಿದಾರರು ತನ್ನ ವಾಹನ ಸಮೇತ ರಸ್ತೆಗೆ ಬಿದ್ದು, ಅವರ ಬಲಕೈಯ ಮಣಿಗಂಟಿನ ಬಳಿ ಒಳ ಜಖಂ,  ಮಣಿಗಂಟಿನ ಮೇಲೆ ತೀವ್ರ ತರದ ರಕ್ತಗಾಯ ಹಾಗೂ ತಲೆಯ ಎದುರು ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ  ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 181/2022 ಕಲಂ : 279, 338 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 31.10.2022 ರಂದು ಪಿರ್ಯಾದಿದಾರರಾದ ಸಂತೋಷ್ ಕುಮಾರ್‌ ಶೆಟ್ಟಿ ರವರು ಆರೋಪಿ ಮಲ್ಲಪ ಚಲಾಯಿಸುತ್ತಿದ್ದ KA.20.AB.1752 ನೇ ದುರ್ಗಾಂಬಾ ಬಸ್ಸಿನಲ್ಲಿ ಆಕಾಶವಾಣಿ ಜಂಕ್ಷನ್‌ ನಿಂದ ಬ್ರಹ್ಮಾವರ ಬಸ್ಸ್ ನಿಲ್ದಾಣದ ಕಡೆಗೆ  ಹೊರಟು, ಆರೋಪಿಯು ಬಸ್ಸನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬರುವಾಗ  ಬೆಳಿಗ್ಗೆ 08:30 ಗಂಟೆಯ ಸಮಯಕ್ಕೆ ವಾರಂಬಳ್ಳಿ ಗ್ರಾಮದ ಬ್ರಹ್ಮಾವರ ಅಂಡರ್‌ ಪಾಸ್‌ ಸಮೀಪ ಇರುವ ರಸ್ತೆಯ ಹಂಪ್‌ನ ಬಳಿ ಬಸ್ಸಿನ ಬ್ರೇಕ್‌ ಹಾಕದೇ ಒಮ್ಮೇಲೆ ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ  ಬಸ್ಸಿನ ಫುಟ್‌ ಬೋರ್ಡ್‌ನ ಬಾಗಿಲ ಬಳಿ ನಿಂತಿದ್ದ ಪಿರ್ಯಾದಿದಾರರು ಆಯ ತಪ್ಪಿ ಕೆಳಗೆ ಬಿದ್ದು, ಅವರ ಎಡಕಾಲಿನ ಪಾದದ ಬಳಿ ಮೂಳೆ ಮುರಿತ ಉಂಟಾಗಿರುತ್ತದೆ.    ಈ ಬಗ್ಗೆ ಬ್ರಹ್ಮಾವರ  ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 182/2022 ಕಲಂ : 279, 338 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ

  • ಹಿರಿಯಡ್ಕ: ದಿನಾಂಕ:29/10/2022 ರಂದು ಮಧ್ಯಾಹ್ನ 2:00 ಗಂಟೆಯಿಂದ ಈ ದಿನ ದಿನಾಂಕ: 31/10/2022 ರಂದು ಬೆಳಿಗ್ಗೆ 8:30 ಗಂಟೆಯ ಮಧ್ಯಾವದಿಯಲ್ಲಿ  ಹಿರಿಯಡ್ಕ ಬೊಮ್ಮರಬೆಟ್ಟು ಗ್ರಾಮದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು  ಹಾಗೂ ಪದವಿ ಪೂರ್ವ ಕಾಲೇಜಿನ ಪ್ರವೇಶದ್ವಾರದ ಬಾಗಿಲಿಗೆ ಹಾಕಿದ ಬೀಗವನ್ನು  ಯಾವುದೋ ಕಬ್ಬಿಣದ ರಾಡಿನಿಂದ ಮೀಟಿ ಬಿಗವನ್ನು ಮುರಿದು ಪ್ರಚಾರ್ಯರ ಕೋಣೆಗೆ ಪ್ರವೇಶ ಮಾಡಿ ಅಲ್ಲಿದ್ದ ಕಪಾಟಿನ ಬೀಗವನ್ನು ಮುರಿದು ಪ್ರಥಮದರ್ಜೆ ಕಾಲೇಜಿನ ಕಪಾಟಿನಲ್ಲಿದ್ದ ಸುಮಾರು 9000/- ರೂ ನಗದು ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಚಾರ್ಯರ ಕಪಾಟಿನಲ್ಲಿದ್ದ ನಗದು ರೂ 20,200/- ರೂಪಾಯಿಯನ್ನು ಒಟ್ಟು ಎರಡು ಕಾಲೇಜಿನಲ್ಲಿ 29,200/-ರೂವನ್ನು ಯಾರೋ ಅಪರಿಚಿತ ಕಳ್ಳರ ಎರಡೂ ಕಾಲೇಜಿನ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಕಳವು ಮಾಡುವ ಉದ್ದೇಶದಿಂದ ಈ ಕೃತ್ಯವನ್ನು ನಡೆಸಿದ್ದಾಗಿರುತ್ತದೆ. ಈ ಬಗ್ಗೆ ಹಿರಿಯಡ್ಕ  ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 71/2022 ಕಲಂ: 454,457,380  ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಅಜೆಕಾರು: ದಿನಾಂಕ 31.10.2022 ರಂದು ಬೆ. 01:35 ರ ಹೊತ್ತಿಗೆ  ಫಿರ್ಯಾದಿ ಜಯಶ್ರೀ ಇವರ ಮನೆಯ ಹತ್ತಿರ ರಸ್ತೆಯಲ್ಲಿ ಒಂದು ವಾಹನ ಬಂದು ನಿಂತಿರುವ ಶಬ್ದ ಕೇಳಿ ಮನೆಯಲ್ಲಿ ಮಲಗಿದ್ದ ಫಿರ್ಯಾದುದಾರರಿಗೆ ಎಚ್ಚರವಾಗಿ  ಮನೆಯ ಕಿಟಕಿಯಿಂದ ನೋಡುವಾಗ ಹೈಸ್ಕೂಲ್ ದ್ವಾರದ  ಬಳಿ ರಸ್ತೆಯಲ್ಲಿ  ಒಂದು  ಬಿಳಿ ಬಣ್ಣದ ರಿಡ್ಜ್  ಕಾರು  ನಿಂತಿದ್ದು  ಆ ಕಾರಿನಿಂದ ಇಬ್ಬರು ಕಾರಿನಿಂದ ಹೊರಗಿಳಿದು ರಸ್ತೆ ಬಳಿ ಮಲಗಿದ್ದ ಪಿರ್ಯಾದಿದಾರರ ಮನೆಯ ಎರಡು ದನಗಳನ್ನು ಕಳವು ಮಾಡಿ ಕಾರಿನಲ್ಲಿ ತುಂಬಿಕೊಂಡು ಕೆರ್ವಾಶೆ ಕಡೆ ಹೋಗಿದ್ದಾಗಿ ಇದನ್ನು ಪಿರ್ಯಾದಿದಾರರು ರಸ್ತೆ ಬದಿಯಲ್ಲಿನ ಸೋಲಾರ್ ಲೈಟ್ ಬೆಳಕಿನಲ್ಲಿ ಮತ್ತು ಸದ್ರಿ ಕಾರಿನ ಹೆಡ್ ಲೈಟ್ ಮೂಲಕ ನೋಡಿದ್ದಾಗಿಯೂ ಮತ್ತು ಕಳವಾದ  ಎರಡು ದನಗಳ ಬೆಲೆ ಸುಮಾರು  4,000/ ರೂಪಾಯಿ  ಆಗಬಹುದು. ಈ ಬಗ್ಗೆ ಅಜೆಕಾರು  ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 33/2022 ಕಲಂ: 379 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕುಂದಾಪುರ: ದಿನಾಂಕ 31.10.2022 ರಂದು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್‌ಐ (L&O) ಪವನ್‌ ನಾಯಕ್‌ ರವರು ಠಾಣಾ ಸಿಬ್ಬಂದಿಯವರೊಂದಿಗೆ ಇಲಾಖಾ ವಾಹನದಲ್ಲಿ  ರಾತ್ರಿ ವಿಶೇಷ ರೌಂಡ್ಸ್‌ ಕರ್ತವ್ಯದಲ್ಲಿ ಇರುವಾಗ ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮದ ಕಂಡ್ಲೂರು ಜುಲ್ಫಾ ಸ್ಟೋರ್‌ ಬಳಿ ಇರುವ ವರಾಹಿ ಹೊಳೆಯ ಬದಿಯಲ್ಲಿ ಹಸುವನ್ನು ಎಲ್ಲಿಂದಲೋ ಕಳವು ಮಾಡಿಕೊಂಡು ಬಂದು ಮಾಂಸ ಮಾಡಲು ಸಿದ್ದತೆ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು ಅದರಂತೆ ಪಂಚರು ಹಾಗೂ ಸಿಬ್ಬಂದಿ ಯವರೊಂದಿಗೆ ಹೊರಟು ಸದ್ರಿ ಸ್ಥಳಕ್ಕೆ ತಲುಪಿ ಮರೆಯಲ್ಲಿ ನಿಂತು ನೋಡಲಾಗಿ 1.ಶಾಹೀದ್‌ ಆಲಿ, 2.ಟಿ.ಕೆ ಮುಜಾಫರ್‌, 3.ಕರಾಣಿ ನದೀಮ್‌, 4.ಕರಾಣಿ ಮಂಜೂರ್‌ ಇವರುಗಳು ಒಂದು ಹಸುವಿನ ಪಕ್ಕದಲ್ಲಿ ನಿಂತಿರುವುದನ್ನು ಖಚಿತ ಪಡಿಸಿಕೊಂಡು 00:35 ಗಂಟೆಗೆ ದಾಳಿ ನಡೆಸಿದ್ದು ಇಬ್ಬರು ವ್ಯಕ್ತಿಗಳು ಸಮವಸ್ತ್ರದಲ್ಲಿದ್ದ ಪಿ.ಎಸ್‌.ಐ ಹಾಗೂ ಸಿಬ್ಬಂದಿಯವರನ್ನು ನೋಡಿ ಅಲ್ಲಿಂದ ಓಡಿ ಹೋಗಿದ್ದು ಉಳಿದ ಶಾಹೀದ್‌ ಆಲಿ ಮತ್ತು ಟಿ.ಕೆ ಮುಜಾಫರ್‌ ಇವರನ್ನು ಸಿಬ್ಬಂದಿಗಳ ಸಹಾಯದಿಂದ ಸುತ್ತುವರಿದು ವಶಕ್ಕೆ ಪಡೆದುಕೊಂಡು ಆರೋಪಿತರು ಕೃತ್ಯಕ್ಕೆ ಬಳಸಿದ್ದ ಒಂದು ಗಂಡು ಕರು,  ಮರದ ತುಂಡು 1, ಮಚ್ಚು 1, ಹಾಗೂ ಮೆಟ್‌ ಕತ್ತಿ 1 ನ್ನು ಸ್ವಾಧೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 62/2022 ಕಲಂ: 379 ಐಪಿಸಿ, ಕಲಂ:  4, 12 (1) (2) ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು  ಸಂರಕ್ಷಣಾ ಅಧ್ಯಾದೇಶ-2020 ಹಾಗೂ ಕಲಂ:11(1)(ಡಿ) ಪ್ರಾಣಿ ಹಿಂಸೆ ನಿಷೇಧ ಕಾಯ್ದೆ- 1960 ಯಂತೆ  ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ ‌

  • ಕಾರ್ಕಳ: ಕಾರ್ಕಳ ತಾಲೂಕು ಮಾಳ ಗ್ರಾಮದ ನೆಲ್ಲಿಕಟ್ಟೆ ದರ್ಖಾಸು ಮನೆಯ ನಿವಾಸಿ ಆನಂದ ಪೂಜಾರಿ (53) ಇವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ಕೊಡಿಸಿದರೂ  ಗುಣಮುಖವಾಗದೇ ಇದ್ದು, ಒಂದು ತಿಂಗಳಿನಿಂದ ಹೊಟ್ಟೆಗೆ ಆಹಾರವನ್ನು ಕೂಡ ತಿನ್ನಲು ಆಗದೇ ಇದ್ದಿದ್ದರಿಂದ ಮನನೊಂದು ತನ್ನ ಜೀವನದಲ್ಲಿ  ಜಿಗುಪ್ಸೆಗೊಂಡು ದಿನಾಂಕ 31/10/2022 ರಂದು  ಬೆಳಿಗ್ಗೆ 09:30 ಗಂಟೆಯಿಂದ ಮದ್ಯಾಹ್ನ 1:30 ಗಂಟೆಯ ಮದ್ಯ ಅವದಿಯಲ್ಲಿ ತಮ್ಮ ವಾಸ್ತವ್ಯದ ಮನೆಯ ಪಕ್ಕಾಸಿಗೆ ಲುಂಗಿಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯು.ಡಿ.ಆರ್ 35/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕೋಟ: ಪಿರ್ಯಾದಿ ಕೆ ಸುರೇಶ ಮೊಗವೀರ ಇವರ ತಮ್ಮ ಪ್ರಕಾಶ ಮೊಗವೀರ ಪ್ರಾಯ  35  ವರ್ಷ ರವರು ಮೀನು ಗಾರಿಕೆ ಹಾಗೂ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದು ಸುಮಾರು 10 ವರ್ಷಗಳಿಂದ ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದು ಮದ್ಯ ಸೇವಿಸಿದ ನಂತರ ಈ ಮೊದಲು ಆತ್ಮಹತ್ಯೆಗೂ  ಪ್ರಯತ್ನಿಸಿದ್ದರು.ಇದೇ ವಿಚಾರದಲ್ಲಿ ಮನನೊಂದು ವಿಪರೀತ ಮದ್ಯಪಾನ  ಸೇವಿಸಿ ಮನೆಗೆ ಬಂದವರು  ದಿನಾಂಕ: 30/10/2022 ರಂದು 22.45 ಗಂಟೆಯಿಂದ ದಿನಾಂಕ: 31/10/2022 ರಂದು 02.00 ಗಂಟೆಯ ಮಧ್ಯಾವಧಿಯಲ್ಲಿ  ನೇಣು ಬಿಗಿದು  ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಯು.ಡಿ.ಆರ್ 47/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

 

ಇತ್ತೀಚಿನ ನವೀಕರಣ​ : 31-10-2022 06:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080