ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

  • ಉಡುಪಿ:  ಪಿರ್ಯಾದು ಪ್ರೋ. ನಿರ್ಮಲ ಕುಮಾರಿ.ಕೆ ಇವರು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಕುಂಜಿಬೆಟ್ಟು ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ದಿನಾಂಕ 29/10/2021 ರಂದು 17:00 ಗಂಟೆಯಿಂದ ದಿನಾಂಕ 30/10/2021 ರಂದು 17:00 ಗಂಟೆ ನಡುವಿನ ಸಮಯದಲ್ಲಿ ಯಾರೋ ಕಳ್ಳರು  ವೈಕುಂಠ ಬಾಳಿಗ ಕಾನೂನು ಕಾಲೇಜಿನ ರೂಮ್‌ ನಂಬ್ರ: 2 ಕ್ಕೆ ಹಾಕಿದ್ದ ಬೀಗವನ್ನು ಎಕ್ಸಾಬ್ಲೇಡ್‌ನಿಂದ ತುಂಡು ಮಾಡಿ ರೂಮ್‌ನ ಒಳಗೆ ಪ್ರವೇಶಿಸಿ, ರೂಮ್‌ನಲ್ಲಿದ್ದ ಒಂದು Dell ಲ್ಯಾಪ್‌ಟಾಪ್‌ ಮತ್ತು ಒಂದು HP ಲ್ಯಾಪ್‌ಟಾಪ್‌ ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಲ್ಯಾಪ್‌ಟಾಪ್‌ಗಳ ಅಂದಾಜು ಮೌಲ್ಯ ರೂ. 50,000/- ಆಗಬಹುದು.ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 158/2021 ಕಲಂ 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಮಣಿಪಾಲ: ಪಿರ್ಯಾದಿ ಶಿಕಾ ವರ್ಮಾ ಇವರು ದಿನಾಂಕ : 29.10.2021 ರಂದು 23.30 ಗಂಟೆಗೆ ಸ್ನೇಹಿತ ಅಯುಷ್ಮಾನ್ ಗುಪ್ತಾ ರವರೊಂದಿಗೆ True edge ಪಬ್ ನಿಂದ ಹೊರಗೆ ಬರುತ್ತಿರುವಾಗ ಓರ್ವ ಹೆಸರು ವಿಳಾಸ ತಿಳಿಯದ ಗಡ್ಡದಾರಿ ಸರ್ದಾರ್ಜಿಯು ಪಿರ್ಯಾದಿದಾರರ ಸ್ನೇಹಿತ ಅಯುಷ್ಮಾನ್ ಗುಪ್ತಾ ರವರಿಗೆ ಬೈದು, ಹಲ್ಲೆ ಮಾಡಿ ಕಾಲರ್ ಹಿಡಿದು ದೂಡಿದ್ದು, ಆ ಸಮಯ ಪಿರ್ಯಾದಿದಾರರು ಹಲ್ಲೆ ಮಾಡಿದ ವ್ಯಕ್ತಿಯನ್ನು ಸಮಧಾನಪಡಿಸಲು ಪ್ರಯತ್ನಿಸುತ್ತಿರುವಾಗ ಆತನು ಅಸಭ್ಯ ಪದಗಳಿಂದ ಪಿರ್ಯಾದಿದಾರರಿಗೆ ಬೈದಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 129/2021 ಕಲಂ:504,323,354(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ನಿತ್ಯಾನಂದ ಶೆಟ್ಟಿರವರು ಬೆಳ್ಮಣ್ ಶ್ರೀ ದುರ್ಗಾ ಕೃಶರ್ ನಡೆಸಿಕೊಂಡಿದ್ದು ಆರೋಪಿ ರವಿ ಶೆಟ್ಟಿಯು ದಿನಾಂಕ:10/09/2021 ರಂದು ಪಿರ್ಯಾದುದಾರರ ಮೊಬೈಲ್ ಗೆ ಪೋನ್ ಮಾಡಿ ಭೇಟಿಯಾಗುವಂತೆ ತಿಳಿಸಿದ್ದು ದಿನಾಂಕ: 26/10/2021 ರಂದು ಮಧ್ಯಾಹ್ನ 1:30 ಗಂಟೆಗೆ ಆರೋಪಿ ರವಿ ಶೆಟ್ಟಿಯು ತನ್ನ ಇಬ್ಬರು ಸ್ನೇಹಿತರೊಂದಿಗೆ ಆತನ ಬಾಬ್ತು KA03-NJ-3930 ನೇ ನಂಬ್ರದ ಇನ್ನೋವಾ ಕಾರಿನಲ್ಲಿ ಬೆಳ್ಮಣ್ ಪೆಟ್ರೋಲ್ ಬಂಕ್ ಬಳಿ ಇದ್ದ ಪಿರ್ಯಾದುದಾರರ ಬಳಿ ಬಂದು “ ನೀವು ಹಾಗೂ ನಿಮ್ಮ ಪಕ್ಕದ ಕಶರ್ ನವರಾದ ಜೆ,ಎಲ್,ಕೃಶರ್ ನ ಮಾಲಿಕರಾದ ಲ್ಯಾನ್ಸಿ ಡಿಕೋಸ್ತಾ ಸೇರಿ ಒಟ್ಟು 1000000/- ಲಕ್ಷ ಹಣವನ್ನು ಹಾಗೂ ತನ್ನ ಉಡುಪಿ ಆಫೀಸಿನಲ್ಲಿ ಕೆಲಸ ಮಾಡುವ ಇಬ್ಬರ ಸಂಬಳವನ್ನು ನೀಡಬೇಕು ಇಲ್ಲದಿದ್ದರೆ ನಿಮ್ಮ ಕೃಶರ್ ನ್ನು ಬಂದ್ ಹೇಗೆ ಮಾಡುವುದು ಎಂದು ನನಗೆ ಗೊತ್ತಿದೆ ಎಂದು ಹೇಳಿ ಇನ್ನೋವಾ ಕಾರಿನಲ್ಲಿ ಹೊರಟು ಹೋಗಿದ್ದು ಅವನು ಸುಮ್ಮನೆ ಹೆದರಿಸಿರುತ್ತಾನೆ ಎಂದುಕೊಂಡು ಪಿರ್ಯಾದುದಾರರು ಸುಮ್ಮನೆ ಇದ್ದು ಆರೋಪಿತನು ದಿನಾಂಕ: 30/10/2021 ರಂದು ಬೆಳಿಗ್ಗೆ 11:00 ಗಂಟೆಗೆ ಕರ್ನಾಟಕ ಕಾರ್ಮಿಕ ಪರಿಷತ್ ಎಂದು ಬರೆದಿರುವ KA03-NJ-3930  ನೇ ನಂಬ್ರದ ಇನ್ನೋವಾ ಕಾರಿನಲ್ಲಿ ಆರೋಪಿ ರವಿ ಶೆಟ್ಟಿಯು ಇಬ್ಬರು ಗಂಡಸರು ಹಾಗೂ ಓರ್ವ ಹೆಂಗಸಿನೊಂದಿಗೆ ಪಿರ್ಯಾದುದಾರರ ಪಟ್ಟಾ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಅವರ  ಕೃಶರ್  ನಲ್ಲಿ ಕೆಲಸ ಮಾಡುತ್ತಿದ್ದವರಿಗೆ ಕೆಲಸ ಮಾಡದಂತೆ ಬೆದರಿಕೆ ಹಾಕಿ ಕೃಶರ್ ನ ಭಾವಚಿತ್ರವನ್ನು ತೆಗೆದು ತಾನು ಕೇಳಿದ 5,00000/- ರೂ ಹಣವನ್ನು ಈಗಲೇ ಕೊಡು ಇಲ್ಲದಿದ್ದರೆ ಈ ಭಾವಚಿತ್ರವನ್ನು ತನಗೆ ಬೇಕಾದ ಕಡೆ ಕೊಟ್ಟು ಕೃಶರ್ ನ್ನು ಬಂದ್ ಮಾಡುತ್ತೇನೆ ಎಂದು ಪಿರ್ಯಾದುದಾರರಿಗೆ ಹಣಕ್ಕಾಗಿ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆ ಅಪರಾಧ ಕ್ರಮಾಂಕ  126/2021 ಕಲಂ: 447,385,506 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿ ವಸಂತ ಹೆಗ್ಡೆ ಇವರು ಹಾಲಿ ಗೋಳಿಹೊಳೆ ಗ್ರಾಮ ಪಂಚಾಯತ್ ನ ಸದಸ್ಯರಾಗಿರುತ್ತಾರೆ, ದಿನಾಂಕ 26-10-2021 ರಂದು ಆರೋಪಿತರಾದ ರವಿ ಶೆಟ್ಟಿ, ಲೋಹಿತ ಶೆಟ್ಟಿ ಹಾಗೂ ಇತರರು ಗೋಳಿಹೊಳೆ ಗ್ರಾಮ ಪಂಚಾಯತ್ ನ ಎದುರುಗಡೆ ಪೆಂಡಾಲ್ ಹಾಕಿ ಬಂಕಿನಬೇರು ರಸ್ತೆ ವಿಚಾರದಲ್ಲಿ  ಶಾಸಕರ ಅನುದಾನದಲ್ಲಿ ಕೆಲಸಮಾಡಲು ಪಂಚಾಯತನಿಂದ ಪರವಾನಿಗೆ ನೀಡುವಂತೆ ಒತ್ತಾಯಿಸಿ ಪ್ರತಿಬಟನೆಯನ್ನು  ಬೆಳಿಗ್ಗೆ 10:00 ಗಂಟೆಯಿಂದ ರಾತ್ರಿ 8:00 ಗಂಟೆಯವರೆಗೆ ಮಾಡಿರುತ್ತಾರೆ.  ಬಂಕಿನಬೇರು ರಸ್ತೆ ವಿಚಾರವು ಕುಂದಾಪುರ ನ್ಯಾಯಾಲಯ ಹಾಗೂ ಲೋಕಾಯುಕ್ತದಲ್ಲಿ ವಿಚಾರಣೆಯಲ್ಲಿರುವುದಾಗಿ ಪಿರ್ಯಾದಿದಾರರು ,ಅದ್ಯಕ್ಷರಾದ ಇಂದಿರಾ, ಪಿಡಿಓ ದಿವಾಕರ ಶ್ಯಾನುಭೋಗ ಹಾಗೂ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಭಾರತಿ ರವರು ಆರೋಪಿತರಿಗೆ ತಿಳಿಸಿರುತ್ತಾರೆ ಹಾಗೂ ರಸ್ತೆಯ  ವಿಚಾರವಾಗಿ ಪ್ರತಿಭಟನೆ ಮಾಡಬಾರದಾಗಿ ತಿಳಿಸಿರುತ್ತಾರೆ, ಫಿರ್ಯಾದಿದಾರರು ಪಂಚಾಯತನಲ್ಲಿರುವಾಗ ಸಮಯ ಸುಮಾರು 7:30 ಗಂಟೆಗೆ ಆರೋಪಿತರಾದ ರವಿ ಶೆಟ್ಟಿ ಹಾಗೂ ಲೋಹಿತ ಶೆಟ್ಟಿ ರವರು ಪಿರ್ಯಾದಿದಾರರು ಮುಂದಕ್ಕೆ  ಹೋಗದಂತೆ ತಡೆದು ನಿಲ್ಲಿಸಿ  ನೀನು ಪಂಚಾಯತ್ ಸದಸ್ಯ ನಾಗಲು ನಾಲಾಯಕ್ ಎಂದು ಅವಾಚ್ಯ ಶಬ್ಧಗಳಿಂದ ಬೈದು, ಜೀವ ಬೆದರಿಕೆ ಹಾಕಿರುತ್ತಾರೆ ಆರೋಪಿತರ ಜೊತೆಗೆ  ಬಂದವರು ಸಹಾ ಪಿರ್ಯಾದಿದಾರರ ವಿರುದ್ದ ದಿಕ್ಕಾರ ಕೂಗಿರುತ್ತಾರೆ, ಪಿರ್ಯಾದಿದಾರರಿಗೆ ಪಂಚಾಯತನಲ್ಲಿ ಕೆಲಸಮಾಡಲು ಭಯವಾಗಿರುವುದರಿಂದ  ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ  ದೂರು ನೀಡಿರುತ್ತಾರೆ. ಈ ಬಗ್ಗೆ ಬೈಂದೂರು ಠಾಣೆ ಅಪರಾಧ ಕ್ರಮಾಂಕ  172/2021 ಕಲಂ:341, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಫಿರ್ಯಾದಿ ಗಗನ ಇವರ ತಂದೆ 5 ವರ್ಷಗಳಿಂದ ಪಾರ್ಶ್ವವಾಯು ಪೀಡಿತರಾಗಿದ್ದು ಮನೆಯಲ್ಲಿಯೇ ಇರುತ್ತಾರೆ. ದಿನಾಂಕ 10-10-2021 ರಂದು ಕಾರಿನಲ್ಲಿ  ಅಪಾದಿತರಾದ  ಓಬಯ್ಯ ಮತ್ತು ಅಜೇಯ  ಎಂಬವರು ಬಂದು ಮನೆಯಲ್ಲಿ ಯಾರಾದರೂ  ಪಾರ್ಶ್ವವಾಯು ಪೀಡಿತರು ಇದ್ದಾರೆಯೆ ಎಂದು ವಿಚಾರಿಸಿ ಪಾರ್ಶ್ವವಾಯು ಇದ್ದವರಿಗೆ ಮದ್ದು ಕೊಡುತ್ತೇವೆಂದು ಫಿರ್ಯಾದುದಾರರ ತಂದೆಯ ಕಾಯಿಲೆಯನ್ನು  ಶೀಘ್ರ ಗುಣಪಡಿಸುತ್ತೇವೆಂದು ನಂಬಿಸಿ, ಚೀಲದಿಂದ ಎಣ್ಣೆಯ ಬಾಟಲಿಯನ್ನು ನೀಡಿ ದಿನಕ್ಕೆ 2 ಬಾರಿ ಉಜ್ಜಲು ತಿಳಿಸಿ 25000/ ರೂ ಹಣವನ್ನು ಪಡೆದು ಬಳಿಕ ತೋಟದಲ್ಲಿ ಸುತ್ತಾಡಿ ಈಜುಕೊಳದ ಬಳಿ ನಿಧಿ ಇರುವುದಾಗಿ ಹೇಳಿ ನಿಧಿಯನ್ನು ತೆಗೆಯಲು ಪೂಜೆ ಮಾಡಬೇಕಾಗುತ್ತದೆ  ಅದಕ್ಕಾಗಿ 50,000/ ರೂ ಹಣ ಖರ್ಚಾಗುತ್ತದೆ. ಮುಂದಿನ ವಾರ ಬರುವುದಾಗಿ ತಿಳಿಸಿ  ಹೋಗಿರುತ್ತಾರೆ. ದಿನಾಂಕ 19-10-2021 ರಂದು ಫಿರ್ಯಾದುದಾರರ ತಂದೆಗೆ ಫೋನ್ ಮಾಡಿ ದಿನಾಂಕ 20-10-2021 ಮನೆಗೆ ಬರುವುದಾಗಿ ಹಾಗೂ 50,000/ ಹಣವನ್ನು ಕೊಡಬೇಕೆಂದು  ತಿಳಿಸಿರುತ್ತಾರೆ.  ಹಾಗೂ ದಿನಾಂಕ 20-10-2021  ರಂದು ಬೆಳಿಗ್ಗೆ  11-00 ಗಂಟೆಗೆ ಅಪಾದಿತರಿಬ್ಬರೂ ಫಿರ್ಯಾದುದಾರರ ಮನೆಗೆ ಬಂದು ಈಜುಕೊಳದ ಹತ್ತಿರ ಹೋಗಿ ಓಬಯ್ಯ ಎಂಬಾತನು  ಪಿಕ್ಕಾಸು ತರಿಸಿ, ಮತ್ತೊಬ್ಬ ಪ್ಲಾಸ್ಟಿಕ್ ಚೀಲದಲ್ಲಿ ಲೋಹದ ವಸ್ತುಗಳನ್ನು ಹಿಡಿದುಕೊಂಡಿದ್ದು, ನಂತರ ಅವರು ದೊಡ್ಡ ಹೊಂಡವೊಂದನ್ನು ತೋಡಿ ಯಾರೂ ಅಲ್ಲಿಗೆ ಹೋಗಬೇಡಿ  ಯಾರೂ ನೋಡಬಾರದು ಎಂದು ನಂಬಿಸಿ 70,000/ ಖರ್ಚು ಆಗುತ್ತದೆ ಎಂದು ತಿಳಿಸಿ ಹಣ ಪಡೆದುಕೊಂಡು  ವಾರ  ಬಿಟ್ಟು ಬರುವುದಾಗಿ  ತಿಳಿಸಿ ಹೋಗಿದ್ದು  ಈ ದಿನ 30-10-2021 ರಂದು  ಬೆಳಿಗ್ಗೆ  10-30 ಗಂಟೆಗೆ  ಅಪಾದಿತರು KA 16 C 5295 ನಂಬ್ರದ  ಕಾರಿನಲ್ಲಿ ಬಂದು ಫಿರ್ಯಾದುದಾರರ ತಂದೆಯಲ್ಲಿ ಮಾತನಾಡಿ ನಂತರ ತೋಟಕ್ಕೆ ಹೋಗಿ  ಈ ಹಿಂದೆ ತೆಗೆದ ಹೊಂಡದಿಂದ ಒಂದು ಹಿತ್ತಾಳೆಯ ದೇವರ ಮುಖವಾಡ ಒಂದು ಹಿತ್ತಾಳೆಯ ಶಂಖವನ್ನು ಮನೆಯ ಮುಂದೆ ಬಂದು ಇದನ್ನು ದೇವರ ಕೋಣೆಯಲ್ಲಿ ಜೋಪಾನವಾಗಿ ಇಡಿ ಎಂದು ಹೇಳಿ 2 ವಾರ ಬಿಟ್ಟು ಬರುವುದಾಗಿ  ಕಾರಿನಲ್ಲಿ ವಾಪಾಸು  ಹೋಗಿರುತ್ತಾರೆ. ಅಪಾದಿತರು  ಫಿರ್ಯಾದುದಾರರ  ಹಿತ್ತಿಲಿನಲ್ಲಿ ನಿಧಿ ಇರುತ್ತದೆ ಎಂದು ನಂಬಿಸಿ  95,000/ ರೂ ಹಣವನ್ನು ಪಡೆದುಕೊಂಡು ಮೋಸ ಮಾಡಿರುತ್ತಾರೆ.  ಎಂಬಿತ್ಯಾದಿ .ಈ ಬಗ್ಗೆ ಕಾರ್ಕಳ ನಗರ ಠಾಣೆ ಅಪರಾಧ ಕ್ರಮಾಂಕ  138/2021 ಕಲಂ 406, 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 31-10-2021 10:29 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080