ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಕಾರ್ಕಳ : ಪಿರ್ಯಾದಿದಾರರಾದ ಶೇಖರ ನಲ್ಕೆ (42), ವಾಸ: ಅನ್ನಾಲ್ ಗುಡ್ಡೆ, ಮಿಯಾರು ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು ಇವರು ದಿನಾಂಕ 30/10/2021 ರಂದು ಸಂಜೆ 16:45 ಗಂಟೆಗೆ ಅಜೆಕಾರಿನಿಂದ ಕಾರ್ಕಳ ಕಡೆಗೆ KA-15-M-2922 ನೇ ನೊಂದಣಿ ಸಂಖ್ಯೆಯ ಓಮಿನಿ ಕಾರಿನಲ್ಲಿ ಕಿಟ್ಟ, ರಾಜೇಶ, ಸುಧಾಕರ ಎಂಬುವವರನ್ನು ಕುಳ್ಳಿರಿಸಿಕೊಂಡು ಚಲಾಯಿಸಿಕೊಂಡು ಬರುತ್ತ್ತಾ ಹಿರ್ಗಾನ ಗ್ರಾಮದ ಮೂಜೂರು ಬಿ ಎಂ ಶಾಲೆ ಬಳಿ ತಲುಪುವಾಗ ಕಾರ್ಕಳ ಕಡೆಯಿಂದ ಹೆಬ್ರಿ ಕಡೆಗೆ KA-05-MG-0162 ನೇ ನೋಂದಣಿ ಸಂಖ್ಯೆಯ ಸ್ಯಾಂಟ್ರೋ ಕಾರಿನ ಚಾಲಕ ಸುರೇಶ ಕಾರನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಪಿರ್ಯಾದಿದಾರರು ಚಲಾಯಿಕೊಂಡು ಹೋಗುತಿದ್ದ ಮಾರುತಿ ಓಮಿನಿ ಕಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಎರಡೂ ವಾಹನಗಳು ಜಖಂಗೊಂಡಿದ್ದು ಪಿರ್ಯಾದಿದಾರರ ಮುಖಕ್ಕೆ ಬಲಕಾಲು ಎಡಕೈಗೆ ಹಾಗೂ ಕಿಟ್ಟ ರವರಿಗೆ ಎದೆಗೆ ಗುದ್ದಿದ ಗಾಯವಾಗಿರುತ್ತದೆ. ರಾಜೇಶ ರವರ ಬಲಕಾಲಿಗೆ, ಸುಧಾಕರರವರಿಗೆ ಮುಖಕ್ಕೆ ಗಾಯವಾಗಿರುತ್ತದೆ. ಹಾಗೂ KA-05-MG- 0162 ಕಾರಿನಲ್ಲಿದ್ದ ಪ್ರಯಾಣಿಕರಿಗೂ ಗಾಯಗಳಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 139/2021 ಕಲಂ: 279, 337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ 

  • ಬ್ರಹ್ಮಾವರ :ಪಿರ್ಯಾದಿದಾರರಾದ ಗೋವಿಂದ ಮರಕಾಲ (75), ತಂದೆ: ದಿ. ಬಚ್ಚ ಮರಕಾಲ, ವಾಸ: ಜನತಾ ಕಾಲೋನಿ, ಮಾಸ್ತಿ ನಗರ, ಹನೇಹಳ್ಳಿ ಗ್ರಾಮ, ಬ್ರಹ್ಮಾವರ ತಾಲೂಕು ಇವರ 2 ನೇ ಮಗಳು ಜ್ಯೋತಿ (39) ಎಂಬುವವರು ಉದ್ಯಾವರ ನಿವಾಸಿ ಜಯ ಎಂಬುವವರನ್ನು 11 ವರ್ಷಗಳ ಹಿಂದೆ ಮದುವೆಯಾಗಿದ್ದು, ಒಬ್ಬಳು ಹೆಣ್ಣು ಮಗಳು ಇರುತ್ತಾಳೆ. ಅವರು ಪ್ರಸ್ತುತ ಪಿರ್ಯಾದಿದಾರರ ಮನೆಯಲ್ಲಿ ವಾಸವಾಗಿದ್ದುಕೊಂಡು ರಂಗನ ಕೇರಿಯಲ್ಲಿ ಗೇರು ಬೀಜ ಪ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ಅವರು ಸುಮಾರು ಒಂದು ವರ್ಷದಿಂದ ಯಾವುದೋ ವಿಚಾರದಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದು ಒಬ್ಬಳೆ ಇರುತ್ತಿದ್ದು, 5 ತಿಂಗಳ ಹಿಂದೆ ಒಬ್ಬಳೇ ರಾತ್ರಿ ಮನೆ ಬಿಟ್ಟು ಹೋಗಿದ್ದು, ಹುಡುಕಾಡಿದಾಗ ಅಕ್ಕನ ಮನೆಯಲ್ಲಿ ಪತ್ತೆಯಾಗಿರುತ್ತಾಳೆ. ಅವಳಿಗಿರುವ ಮಾನಸಿಕ ಖಾಯಿಲೆ ಬಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿರುವುದಾಗಿದೆ. ಅಲ್ಲದೇ ಜ್ಯೋತಿಯ ಗಂಡನು ಕೂಡ ಅಸೌಖ್ಯದಿಂದ ಇದ್ದು ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಜ್ಯೋತಿ ತನಗಿದ್ದ ಮಾನಸಿಕ ಖಾಯಿಲೇಯಿಂದಲೋ ಅಥವಾ ಇನ್ಯಾವುದೋ ಹೇಳಿಕೊಳ್ಳಲಾಗದ ಕಾರಣದಿಂದಲೋ ಜೀವನದಲ್ಲಿ ಜೀಗುಪ್ಸೆಗೊಂಡು ದಿನಾಂಕ 31/10/2021 ರಂದು ರಾತ್ರಿ 00:45 ಗಂಟೆಯಿಂದ ಬೆಳಿಗ್ಗೆ 07:00 ಗಂಟೆಯ ಮಧ್ಯಾವಧಿಯಲ್ಲಿ ಮಾಸ್ತಿನಗರದ ಸರಕಾರಿ ಬಾವಿಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 65/2021 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  •  ಉಡುಪಿ : ಪಿರ್ಯಾದಿದಾರರಾದ ಶ್ರೀಮತಿ ಸುಮ(35)' ಗಂಡ: ನಾಗರಾಜ್, ವಾಸ:# 5-8123 ನ್ಯೂ ಕಾಲೋನಿ ಕೊಡಂಕೂರು, ನಿಟ್ಟೂರು ಪೋಸ್ಟ್ ಪುತ್ತೂರು ಗ್ರಾಮ ಉಡುಪಿ ಇವರು ಗಂಡ ಮಕ್ಕಳೊಂದಿಗೆ ವಾಸವಾಗಿದ್ದು ,ಪಿರ್ಯಾದಿದಾರರ ಗಂಡ ನಾಗರಾಜ್ (42) ರವರು ವಿಪರೀತ ಮಧ್ಯಪಾನ ಮಾಡುವ ಚಟ ಹೊಂದಿದ್ದು 1 ತಿಂಗಳಿಂದ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು ದಿನಾಂಕ 28/10/2021 ರಂದು ಪಿರ್ಯಾದಿದಾರರು ಕೆಲಸ ಮುಗಿಸಿಕೊಂಡು ಸಂಜೆ 5:00 ಗಂಟೆಗೆ ಮನೆಗೆ ಬಂದಾಗ ಗಂಡ ನಾಗರಾಜ್ ಅಸ್ವಸ್ಧಗೊಂಡು ಮನೆಯಲ್ಲಿ ಹಾಸಿಗೆ ಮಲಗಿಕೊಂಡಿದ್ದು ಪಕ್ಕದಲ್ಲಿ Lethal Super 505 ಎಂಬ ಔಷಧಿ ಬಾಟಲ್ ದೊರೆತ್ತಿದ್ದು ಅನುಮಾನ ಗೊಂಡು ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ICU ನಲ್ಲಿ ಚಿಕಿತ್ಸೆಯಲ್ಲಿರುತ್ತಾ ದಿನಾಂಕ: 30/10/2021 ರಂದು ಸಂಜೆ 7:15 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 44/2021ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ 

  • ಅಮಾಸೆಬೈಲು: ಪಿರ್ಯಾದಿದಾರರಾದ ಶ್ರೀಮತಿ ರೇಣುಕಮ್ಮ ( 56), ಗಂಡ: ದಿ.ರಾಮ ನಾಯ್ಕ, ವಾಸ ; ಮನೆ ನಂಬ್ರ T – 2 M – 11 ಕೆ ಪಿ ಸಿ ಕಾಲೋನಿ ಹೊಸಂಗಡಿ ಗ್ರಾಮ ಕುಂದಾಪುರ ತಾಲೂಕು ಇವರ ಮಗ ಲಿಂಗ ರಾಜ (38) ಇವರು 1 ವರ್ಷದ ಹಿಂದೆ ಕ್ಯಾಟರಿಂಗ್ ಕೆಲಸ ಮಾಡಿಕೊಂಡಿದ್ದು ನಂತರ ಒಂದು ವರ್ಷದಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದು, ಕುಡಿತದ ಚಟವಿದ್ದು ದಿನಾಂಕ 08/10/2021 ರಿಂದ 12/10/2021 ರ ವರೆಗೆ ಕೊಟೇಶ್ವರ ಎನ್ ಆರ್ ಆಚಾರ್ಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು ದಿನಾಂಕ 13/10/2021 ರಂದು ಮಧ್ಯಾಹ್ನ 14:00 ಗಂಟೆಗೆ ತನ್ನ ಮನೆಯಾದ ಹೊಸಂಗಡಿ ಕೆ.ಪಿ ಸಿ ಕಾಲೋನಿಯಿಂದ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 36/2021 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ 

  • ಕಾರ್ಕಳ : ಪಿರ್ಯಾದಿದಾರರಾದ ಶ್ರೀಮತಿ ಸರಳ ಶೆಟ್ಟಿ (63), ವಾಸ:ಕುಪ್ಪಬೆಟ್ಟುಹೌಸ್, ಗುಂಡ್ಯಡ್ಕ ಕುಕ್ಕುಂದೂರು ಗ್ರಾಮ, ಕಾರ್ಕಳ ತಾಲೂಕು ಇವರ ಮನೆಯಲ್ಲಿ ಕೆಲಸದವರಾದ ಜಯಪ್ರಕಾಶ ಮತ್ತು ವನಿತಾ ಎಂಬುವವರು ಇದ್ದು ದಿನಾಂಕ 15/08/2021 ರಂದು ಪಿರ್ಯಾದಿದಾರರು ಸಂಜೆ 16:00 ಗಂಟೆಗೆ 25,000/- ಮೌಲ್ಯದ 5 ಗ್ರಾಂ ತೂಕದ ಚಿನ್ನದ ಉಂಗುರವನ್ನು ಬೆಡ್ ರೂಮಿನ ಕಿಟಿಕಿಯಲ್ಲಿ ಇಟ್ಟು ಸ್ನಾನಕ್ಕೆ ಹೋಗಿದ್ದು ವಾಪಾಸು ಬಂದು ನೋಡಿದಾಗ ಚಿನ್ನದ ಉಂಗುರ ಕಳವಾಗಿದ್ದು ಮನೆಯವರೆಲ್ಲರೂ ಹುಡುಕಾಡಿದರೂ ಸಿಕ್ಕಿರುವುದಿಲ್ಲ ಜಯಪ್ರಕಾಶನ ಮೇಲೆ ಸಂಶಯ ಇರುವುದರಿಂದ ಆತನ ಚಲನವಲನದ ಮೇಲೆ ನಿಗಾ ಇಟ್ಟಿದ್ದು . ಜಯಪ್ರಕಾಶನು ಉಂಗುವರವನ್ನು ವೇಣೂರಿನ ನವೋದಯ ಸೊಸೈಟಿಯಲ್ಲಿ ಅಡವು ಇಟ್ಟು ಸಾಲ ಪಡೆದಿರುವುದಾಗಿ ಮಾಹಿತಿ ತಿಳಿದುಬಂದಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 140/2021 ಕಲಂ: 381 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 31-10-2021 06:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080