ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 28/08/2022 ರಂದು ಮದ್ಯಾಹ್ನ 01:40 ಗಂಟೆಗೆ ಕಾರ್ಕಳ ತಾಲೂಕು, ನಿಟ್ಟೆ ಗ್ರಾಮದ ಕಲಂಬಾಡಿ ಪದವು ಎಂಬಲ್ಲಿ KA 20 AA 8035 ನೇ ನಂಬ್ರದ ಕಾರು ಚಾಲಕ ಅಶೋಕ್ ಎಸ್ ಕೊಟ್ಯಾನ್ ಎಂಬವರು ತಮ್ಮ ವಾಹನವನ್ನು ಕಾರ್ಕಳದಿಂದ ಕಲಂಬಾಡಿ ಪದವು ಕಡೆಗೆ ಅತೀ ವೇಗ  ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರ ಎಡ ಬಾಗಕ್ಕೆ ಚಲಾಯಿಸಿಕೊಂಡು ಹೋಗಿ ಮೆಸ್ಕಾಂ ಇಲಾಖೆಯ ವತಿಯಿಂದ ಹಾಕಲಾದ ವಿದ್ಯುತ್ ಕಂಬಕ್ಕೆ ಡಿಕ್ಕಿಹೊಡೆದ ಪರಿಣಾಮ ವಿದ್ಯುತ್ ಕಂಬ ತುಂಡಾಗಿ ಮೆಸ್ಕಾಂ ಇಲಾಖೆಗೆ ನಷ್ಟವುಂಟಾಗಿರುತ್ತದೆ,ಅಪಘಾತದಿಂದ ಅಶೋಕ್ ರವರಿಗೆ ಯಾವುದೇ ಗಾಯಗಳಗಿರುವುದಿಲ್ಲ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ : 108/2022 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕಾರ್ಕಳ: ದಿನಾಂಕ: 30/08/2022 ರಂದು ಬೆಳಗ್ಗೆ 11:45 ಗಂಟೆಗೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ನಿಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಹಾದು ಹೋಗುವ ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಕಾರ್ಕಳ ಕಡೆಯಿಂದ ನಿಟ್ಟೆ ಕಡೆಗೆ KA20C5341 ನೇ ನಂಬರ್ ನ 407 ವಾಹನದ ಚಾಲಕ ತನ್ನ ಬಾಬ್ತು ವಾಹನವನ್ನು ಅತಿವೇಗ ಮತ್ತು ಅಜಾರುಕತೆಯಿಂದ ತನ್ನ ತೀರಾ ಬಲಭಾಗಕ್ಕೆ ಚಲಾಯಿಸಿಕೊಂಡು ಹೋಗಿ ನಿಟ್ಟೆ ಕಡೆಯಿಂದ ನಿಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕಡೆಗೆ ಸಂಜೀವ ಪೂಜಾರಿ ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA20EE0944 ನೇ ನಂಬರ್ ನ  ದ್ವಿಚಕ್ರ ವಾಹನಕ್ಕೆ ಮುಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರನು ವಾಹನ ಸಮೇತ ಡಾಮಾರು ರಸ್ತೆಗೆ ಬಿದ್ದು  ಆತನ ತಲೆಯ ಹಿಂಭಾಗ, ಬೆನ್ನು ಹಾಗೂ ಎರಡು ಕಾಲಿನ ಗಂಟಿಗೆ ರಕ್ತಗಾಯವಾಗಿದ್ದು, ಅಲ್ಲದೆ ಅಪಘಾತದಿಂದ ಎರಡು ವಾಹನಗಳು ಜಖಂಗೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ : 109/2022 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತರ ಪ್ರಕರಣ

  • ಬೈಂದೂರು: ವಿನಯ ಕುಮಾರ್ ಆಹಾರ ನಿರೀಕ್ಷಕರು, ಬೈಂದೂರು ಇವರಿಗೆ ದಿನಾಂಕ 30/08/2022 ರಂದು ಕಿರಿಮಂಜೇಶ್ವರ ಗ್ರಾಮದ ಅರೆಹೊಳೆ ಬಳಿ ದಿನಾಂಕ 29/08/2022 ರಂದು 21:00 ಗಂಟೆಗೆ ಅಪಘಾತಕ್ಕೆ ಈಡಾದ ಲಾರಿ ನಂಬ್ರ KA45A3359 ನೇಯದನ್ನು ಪರಿಶೀಲಿಸಿ ಬೈಂದೂರು ಠಾಣೆಯಿಂದ ಮಾಹಿತಿ ಬಂದಂತೆ ಠಾಣಾ ಆವರಣದಲ್ಲಿದ್ದ ಟಾಟಾ ಕಂಪೆನಿಯ 1512 ಲಾರಿ ನಂಬ್ರ KA45A3359 ನೇಯದನ್ನು ಪಂಚಾಯತುದಾರರನ್ನು ಬರಮಾಡಿಕೊಂಡು ಪರಿಶೀಲಿಸಿಕೊಂಡು ಲಾರಿಯ ಚಾಲಕನನ್ನು ವಿಚಾರಿಸಿದಾಗ ಆರೋಪಿತರು ಬಾಡಿಗೆ ಬಗ್ಗೆ ಕರೆದುಕೊಂಡು ಬಂದು ಅರೆಹೊಳೆ ಜಂಕ್ಷನ್ ನಿಂದ ಒಳಭಾಗದ ಗೋಡೌನ್ ನಿಂದ ತುಂಬಿಸಿಕೊಟ್ಟಿದ್ದಾಗಿ ಲಾರಿಯಲ್ಲಿನ  ಲೋಡು ಅಕ್ಕಿ ತುಂಬಿದ ಚೀಲಗಳು 300 ಚೀಲಗಳು ಇರುವುದಾಗಿ ತಿಳಿಸಿದ್ದು, ಪಂಚರ ಸಮಕ್ಷಮ ಪರಿಶೀಲಿಸಲಾಗಿ ಲಾರಿಯಲ್ಲಿ 300 ಬಿಳಿ ಪಾಲಿಥೀನ್  ಚೀಲಗಳು ಇದ್ದು ಪರಿಶೀಲಿಸಲಾಗಿ ಪ್ರತಿ ಚೀಲವು 50 ಕೆಜಿ ಇದ್ದು ಒಟ್ಟು 15 ಟನ್ ನಷ್ಟು ಬೆಳ್ತಿಗೆ ಅಕ್ಕಿ ಇದ್ದಿರುತ್ತದೆ. ಸದ್ರಿ ಅಕ್ಕಿ ಮೌಲ್ಯ 3.60 ಲಕ್ಷ ರೂ ಆಗಬಹುದು. ಆಪಾದಿತರು ಮಾನ್ಯ ಸರಕಾರದಿಂದ ಉಚಿತವಾಗಿ ಪಡಿತರ ಚೀಟಿದಾರರಿಗೆ ನೀಡಲಾಗುವ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಾನೂನು ಬಾಹಿರವಾಗಿ ಸಂಗ್ರಹಿಸಿ ಯಾವುದೇ ದಾಖಲೆಗಳಿಲ್ಲದೇ ಅಕ್ರಮವಾಗಿ ಸಾಗಾಟ ಮಾಡಲು ಲಾರಿ ನಂಬ್ರ KA45A3359 ನೇಯದಕ್ಕೆ ಲೋಡು ಮಾಡಿಸಿ ಸಾಗಾಟ ಮಾಡುತ್ತಿದ್ದು, ಬೆಳ್ತಿಗೆ ಅಕ್ಕಿ ತುಂಬಿದ 300 ಪಾಲಿಥೀನ್ ಚೀಲಗಳು ಹಾಗೂ ಅದನ್ನು ಸಾಗಾಟ ಮಾಡುತ್ತಿದ್ದ ಟಾಟಾ ಕಂಪೆನಿಯ 1512 ಲಾರಿ ನಂಬ್ರ KA45A3359ನೇಯವುಗಳನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡಿದ್ದು  ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ : 175/2022 ಕಲಂ: 3,6,7 ಅವಶ್ಯಕ ವಸ್ತುಗಳ ಅಧಿನಿಯಮ ಕಾಯ್ದೆ 1955  ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮಟ್ಕಾ ಜುಗಾರಿ ಪ್ರಕರಣ

  • ಕಾರ್ಕಳ: ದಿನಾಂಕ 30/08/2022 ರಂದು ಮಧ್ಯಾಹ್ನ 2:30 ಗಂಟೆಗೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಬೆರಂದೊಟ್ಟು ಕ್ರಾಸ್ ಸಾರ್ವಜನಿಕ ಬಸ್ಸು ನಿಲ್ದಾಣದ ಬಳಿ ಆರೋಪಿ ನವೀನ್ ತನ್ನ ಸ್ವಂತ ಲಾಭಗೋಸ್ಕರ 1 ರೂ ಗೆ 70 ರೂಪಾಯಿ ನೀಡುವುದಾಗಿ ಸಾರ್ವಜನಿಕರಿಂದ ಹಣವನ್ನು ಪಣವಾಗಿಟ್ಟು ಹಣವನ್ನು ಪಡೆದುಕೊಂಡು ಮಟ್ಕಾ ಜುಗಾರಿ ಆಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯಂತೆ ಜನಾರ್ಧನ ಕೆ. ಪಿ.ಎಸ್.ಐ. (ತನಿಖೆ) ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ ಸದ್ರಿ ಸ್ಥಳಕ್ಕೆ ಸಂಜೆ 5:30 ಗಂಟೆಗೆ ದಾಳಿ ನಡೆಸಿ ಆರೋಪಿಯನ್ನು  ವಶಕ್ಕೆ ಪಡೆದು ಆರೋಪಿಯ ವಶದಲ್ಲಿ ಮಟ್ಕಾ ಜುಗಾರಿ  ಆಟದಿಂದ ಸಂಗ್ರಹಿಸಿದ  ನಗದು ರೂ 1315/-,  ಮಟ್ಕಾ ನಂಬ್ರ ಬರೆದ ಚೀಟಿ ಮತ್ತು ಬಾಲ್‌ ಪೆನ್‌ -1 ನ್ನು ಮಹಜರು  ಮುಖೇನ  ವಶಕ್ಕೆ ಪಡೆದು ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ : 110 /2022 ಕಲಂ 78 (i)(iii) ಕರ್ನಾಟಕ ಪೊಲೀಸ್ ಕಾಯ್ದೆ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 

ಅಸ್ವಾಭಾವಿಕ ಮರಣ ಪ್ರಕರಣ ‌

  • ಕಾರ್ಕಳ: ಪಿರ್ಯಾದಿ ಆಯಿಷಾ ಇವರು ಕಾರ್ಕಳ ತಾಲೂಕು ಕಸಬಾ ಗ್ರಾಮದ ಸಾಲ್ಮರ ಜರಿಗುಡ್ಡೆ ಎಂಬಲ್ಲಿ ಸುರಕ್ಷಾ ಸೇವಾಶ್ರಮ ನಡೆಸಿಕೊಂಡಿದ್ದು, ಸುಮಾರು 65 ಜನ ಹಿರಿಯರಿದ್ದು ಅವರನ್ನು ಆಶ್ರಮದ ವತಿಯಿಂದ ಉಪಚರಿಸುತ್ತಿರುವುದಾಗಿದೆ. ಸುಮಾರು 6 ವರ್ಷಗಳ ಹಿಂದೆ ಸುಂದರಿ ಶೆಟ್ಟಿ, ಪ್ರಾಯ: 92 ವರ್ಷ ರವರನ್ನು ಪೌಲ್ ಎಂಬುವವರು ಕರೆದುಕೊಂಡು ಬಂದು ಬಿಟ್ಟಿರುವುದಾಗಿದೆ. ಸುಂದರಿ ಶೆಟ್ಟಿ ರವರಿಗೆ ಒಬ್ಬ ಮಗನಿದ್ದು ಬೆಂಗಳೂರಿನಲ್ಲಿ ವಾಸಮಾಡಿಕೊಂಡಿದ್ದು, ಹಲವು ಬಾರಿ ವಿಷಯ ತಿಳಿಸಿದರು ಆಶ್ರಮಕ್ಕೆ ಬಂದಿರುವುದಿಲ್ಲ. ಸುಂದರಿ ಶೆಟ್ಟಿರವರು ಆಶ್ರಮಕ್ಕೆ ಬಂದ ದಿನದಿಂದ ಉಬ್ಬಸ ಹಾಗೂ ವೃದ್ದಾಪ್ಯ ಕಾಯಿಲೆಯಿಂದ ಬಳಲುತ್ತಿದ್ದು, 3 ದಿನದಿಂದ ತೀವ್ರ ಅಸೌಖ್ಯದಿಂದ ಇರುತ್ತಾರೆ. ದಿನಾಂಕ 30.08.2022 ರಂದು ಸಂಜೆ 5:30 ಗಂಟೆಗೆ ಆಶ್ರಮದಲ್ಲಿ ಮಲಗಿದ್ದ ಸುಂದರಿ ಶೆಟ್ಟಿವರನ್ನು, ಪಿರ್ಯಾದಿದಾರರು ಹೋಗಿ ದೇಹವನ್ನು ಮುಟ್ಟಿ ಅಲುಗಾಡಿಸಿದ್ದು ಏನು ಮಾತನಾಡುತ್ತಿರಲಿಲ್ಲ. ನಂತರ ಪಿರ್ಯಾದಿದಾರರು ಸುಂದರಿ ಶೆಟ್ಟಿ ರವರನ್ನು ಸ್ಪಂದನಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ತಿಳಿಸಿದ್ದು, ನಂತರ ಸಮಯ ಸುಮಾರು ಸಂಜೆ 7:55 ಗಂಟೆಗೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಸುಂದರಿ ಶೆಟ್ಟಿ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ಠಾಣೆ ಯು.ಡಿ.ಆರ್ 40/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

 

ಇತ್ತೀಚಿನ ನವೀಕರಣ​ : 31-08-2022 10:33 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080