ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಸಂತೋಷ್ ಕುಮಾರ್ (27), ತಂದೆ: ಉಮೇಶ್ ಆಚಾರ್ಯ, ವಾಸ: ಮನೆ ನಂ: 3-349 ಗಾಯತ್ರಿ ನಿಲಯ ಮೂಡಬೆಟ್ಟು ಗ್ರಾಮ, ಕಟಪಾಡಿ ಅಂಚೆ , ಉಡುಪಿ ಜಿಲ್ಲೆ ಇವರು ದಿನಾಂಕ 30/08/2021ರಂದು ತನ್ನ  ಸ್ನೇಹಿತ ಸಚಿನ್ ಕುಲಾಲ್ ರವರೊಂದಿಗೆ ಸಚಿನ್ ಕುಲಾಲ್ ರವರ  KA-29-EA-1134 ನೇ ಮೋಟಾರು ಸೈಕಲ್ ನಲ್ಲಿ  ಸಹ ಸವರನಾಗಿ ಕುಳಿತುಕೊಂಡು ಕಾನ್ವೆಂಟ್ ರಸ್ತೆಯಿಂದ ಬ್ರಹ್ಮಗಿರಿ ಕಡೆಗೆ ಬರುತ್ತಿರುವಾಗ ಮಧ್ಯಾಹ್ನ 2:30 ಗಂಟೆಗೆ ವಿಜಯ ಅಪಾರ್ಟಮೆಂಟ್ ನ ಮುಂಭಾಗ ತಲುಪುವಾಗ MH-03-BX-1510 ನೇ ಸ್ಕೂಟರ್ ಸವಾರ ರೋನಾಟ್ ಪ್ರಕಾಶ್ ಮಾಬೆನ್ ನು ಸಹಸವಾರರನ್ನು ಕುಳ್ಳಿರಿಸಿಕೊಂಡು ಬ್ರಹ್ಮಗಿರಿ ಕಡೆಯಿಂದ ಸವಾರಿ ಮಾಡಿಕೊಂಡು ಬಂದು ಬಲಬದಿಯ ಇಂಡಿಕೇಟರ್ ಹಾಕದೇ ಒಮ್ಮೆಲೇ ಬಲಬದಿಗೆ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ತಿರುಗಿಸಿದ ಪರಿಣಾಮ ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಬರುತ್ತಿದ್ದ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು, ಎಡ ಕೈ ಯ ಮೂಳೆಮುರಿತದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಉಡುಪಿ ಸಿ.ಟಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 53/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಅಜೆಕಾರು: ದಿನಾಂಕ 30/08/2021 ರಂದು ಸಂಜೆ 17:30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ. ವಿಜೇತಾ ಪೈ (42), ಗಂಡ: ಉಮಾನಾಥ, ಪೈ ವಾಸ: ಶ್ರೀನಾಥ್, ಹೆಚ್.ಎಸ್.ಪಿ ಆಯಿಲ್ ಮಿಲ್ ಹಿಂಬದಿ,  ಅಜೆಕಾರು ಮರ್ಣೆ ಗ್ರಾಮ, ಕಾರ್ಕಳ ತಾಲೂಕು ಇವರು ಅಜೆಕಾರು ನೂಜಿಗುರಿ ತಿರುವು ಎಂಬಲ್ಲಿ ತಲುಪುತ್ತಿರುವಾಗ ಮುಂದೆ ಓರ್ವ ಚೆವರ್‌ಲೆಟ್ ಟವೇರಾ ಕಾರು ನಂಬ್ರ KA-20-D-9609 ನೇಯದನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಹೆಬ್ರಿ ಕಡೆಯಿಂದ ಅಜೆಕಾರು ಕಡೆಗೆ ಚಲಾಯಿಸಿಕೊಂಡು ಬಂದು ನೂಜಿಗುರಿ ತಿರುವು ಬಳಿ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಎದುರುಗಡೆಯಿಂದ ಅಜೆಕಾರು ಕಡೆಯಿಂದ ಹೆಬ್ರಿ ಕಡೆಗೆ ಬರುತ್ತಿದ್ದ ಆಟೋ ರಿಕ್ಷಾ ನಂಬ್ರ KA-20-AA-0264 ನೇಯದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಆಟೋರಿಕ್ಷಾ ಮುಂಭಾಗ ಜಖಂಗೊಂಡು ಅದರ ಚಾಲಕ ಶೇಖರ ಮೂಲ್ಯರವರು ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಬಗ್ಗೆ ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಶೇಖರ ಮೂಲ್ಯರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 23/2021  ಕಲಂ: 279, 304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಸದಾನಂದ (41), ತಂದೆ: ಮಂಜುನಾಥ ನಾಯಕ್, ವಾಸ: ಗುಂಡುಕಲ್ಲು ಹೌಸ್, ಜಾರ್ಕಳ, ಯರ್ಲಪಾಡಿ ಗ್ರಾಮ, ಕಾರ್ಕಳ ತಾಲೂಕು ಇವರ ಅಣ್ಣ ಪುತ್ತು ನಾಯಕ್ (49) ಇವರು ಹಿಂದೆ ಪಿರ್ಯಾದಿದಾರರ ಜೊತೆಯಲ್ಲಿಯೇ ವಾಸವಾಗಿದ್ದು 15 ವರ್ಷಗಳ ಹಿಂದೆ ಅವರ ಹೆಂಡತಿ ಶ್ರೀಮತಿ ಮಾಲತಿರವರು ಮೃತಪಟ್ಟ ನಂತರ ಮನೆ ಬಿಟ್ಟುಹೋಗಿದ್ದು  ಜಾರ್ಕಳ ಬಸ್ ಸ್ಟಾಂಡ್  ಆಸುಪಾಸಿನಲ್ಲಿ ಸಣ್ಣ ಪುಟ್ಟ ಕೂಲಿಕೆಲಸ ಮಾಡಿಕೊಂಡು ಅಲ್ಲಯೇ ಮಲಗುತ್ತಿದ್ದರು. ಈಗ 1 ವರ್ಷದಿಂದ ಜಾರ್ಕಳದಲ್ಲಿ ಕಂಡುಬಂದಿರುವುದಿಲ್ಲ.  ಪುತ್ತು ನಾಯಕ್  ರವರು ಕಾರ್ಕಳ ಆಸುಪಾಸಿನಲ್ಲಿ ಇರುವ ಬಗ್ಗೆ ಮಾಹಿತಿ ಇದ್ದಿತ್ತು. ದಿನಾಂಕ 30/08/2021 ರಂದು ಬಂಡಿಮಠ ರಾಮ ಸಭಾ ಭವನದ ಮಾಲಿಕರು ಪಿರ್ಯಾದಿದಾರರಿಗೆ ಸಂಜೆ 6:00 ಗಂಟೆಗೆ ಫೋನ್ ಮಾಡಿ ಮಧ್ಯಾಹ್ನ 3:00 ಗಂಟೆಗೆ ಸಭಾಭವನದ ಹತ್ತಿರ  ಪರಿಚಿತ ಗಂಡಸು ಮೃತಪಟ್ಟಿದ್ದು ವಿಚಾರಿಸಲಾಗಿ ಪುತ್ತು ನಾಯಕ್ ರವರ ಮೃತದೇಹವಾಗಿರುವುದಾಗಿ ತಿಳಿದು ಬಂದಿದ್ದು,  ಪಿರ್ಯಾದಿದಾರರು ಕೂಡಲೇ ಮನೆಯಿಂದ  ಹೊರಟು ಬಂದಾಗ ಮೃತದೇಹವನ್ನು ಪೊಲೀಸರಿಗೆ ಮಾಹಿತಿ ನೀಡಿದಂತೆ ಕಾರ್ಕಳ ತಾಲೂಕು ಆಸ್ಪತ್ರೆಯ  ಶವಾಗಾಗಾರದಲ್ಲಿ ಇಟ್ಟಿರುವುದಾಗಿ ತಿಳಿದುಬಂದ ನಂತರ ಕಾರ್ಕಳ ಆಸ್ಪತ್ರೆಗೆ ಹೋಗಿ ಶವಾಗಾರದಲ್ಲಿರುವ ಮೃತದೇಹವನ್ನು ನೋಡಿದ್ದು, ಪಿರ್ಯಾದಿದಾರರ ಅಣ್ಣ ಪುತ್ತು ನಾಯಕ್ ತುಂಬಾ ಮದ್ಯಪಾನ ಮಾಡುತ್ತಿದ್ದು ಸರಿಯಾದ ಆರೈಕೆ ಇಲ್ಲದೆ,   ಅನಾರೋಗ್ಯದ ಕಾರಣದಿಂದ ಮೃತಪಟ್ಟಿರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 26/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕೊಲೆ ಪ್ರಕರಣ

  • ಉಡುಪಿ: ದಿನಾಂಕ 30/08/2021 ರಂದು ಪಿರ್ಯಾದಿದಾರರಾದ ಸಚಿನ್‌ (20), ತಂದೆ: ಸಂಜೀವ, ವಾಸ: ಗುರುಕೃಪ ಮನೆ, ಪಡ್ಡಾಯಿಗುಡ್ಡೆ, ಸಾಣೂರು, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರು ಕೆಲಸದ ನಿಮಿತ್ತ ಉಪ್ಪೂರಿಗೆ ತನ್ನ ಸ್ನೇಹಿತ ಪ್ರವೀಣ ಎಂಬುವವರೊಂದಿಗೆ ಮೋಟಾರ್‌ ಸೈಕಲ್‌ ನಲ್ಲಿ ಹೋಗಿದ್ದು, ಕೆಲಸ ಮುಗಿಸಿ ವಾಪಾಸು 16:55 ಗಂಟೆಗೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ಸಂತೆಕಟ್ಟೆ ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್‌ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬರುತ್ತಿರುವಾಗ ಅದೇ ರಸ್ತೆಯಲ್ಲಿ ಎದುರುಗಡೆ ಸೌಮ್ಯಶ್ರೀ ಭಂಡಾರಿ ಎಂಬುವವರು ತನ್ನ ಸ್ಕೂಟಿ ನಂಬ್ರ KA-20-EX-3158 ನೇದರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಆರೋಪಿ ಸಂದೇಶ್‌ ಕುಲಾಲ್‌ ಎಂಬಾತನು ಆತನ ಮೋಟಾರ್‌ ಸೈಕಲ್‌ ನಂಬ್ರ KA-20-EC-7246 ನೇದರಲ್ಲಿ ಪಿರ್ಯಾದಿದಾರರ ಮೋಟಾರ್‌ಸೈಕಲ್‌ನ್ನು ಓವರ್‌ಟೇಕ್‌ ಮಾಡಿಕೊಂಡು ಬಂದು ಸೌಮ್ಯಶ್ರೀ ರವರ ಸ್ಕೂಟಿಗೆ ಅಡ್ಡ ಇಟ್ಟು ತಡೆದು ನಿಲ್ಲಿಸಿ, ತನ್ನ ಬಳಿ ಇದ್ದ ಚೂರಿಯಿಂದ ಏಕಾಏಕಿಯಾಗಿ ಸೌಮ್ಯಶ್ರೀಯವರ ಕುತ್ತಿಗೆಗೆ ತಿವಿದಿದ್ದು, ಆಕೆ ಸ್ಕೂಟಿಯಿಂದ ಇಳಿಯಲು ಪ್ರಯತ್ನಿಸಿದಾಗ ಪುನಃ 2-3 ಬಾರಿ ಚೂರಿಯಿಂದ ಕುತ್ತಿಗೆಗೆ ತಿವಿದಿದ್ದು, ಪಿರ್ಯಾದಿದಾರರು ಹತ್ತಿರ ಹೋದಾಗ ಆರೋಪಿಯು ಅದೇ ಚೂರಿಯಿಂದ ತನ್ನ ಕುತ್ತಿಗೆಗೆ 2-3 ಬಾರಿ ತಿವಿದುಕೊಂಡಿರುತ್ತಾರೆ. ಇಬ್ಬರೂ ರಸ್ತೆಯಲ್ಲಿ ಬಿದ್ದಿದ್ದು, ಕೂಡಲೇ ಇಬ್ಬರನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ 108 ವಾಹನದಲ್ಲಿ ಕರೆದುಕೊಂಡು ಹೋದಾಗ ಸೌಮ್ಯಶ್ರೀ ಭಂಡಾರಿ ರವರು ಮೃತಪಟ್ಟಿರುವುದಾಗಿ ಹಾಗೂ ಆರೋಪಿ ಸಂದೇಶ್‌ ಕುಲಾಲ್‌ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದಾಗಿ ತಿಳಿದು ಬಂದಿರುತ್ತದೆ. ಆರೋಪಿ ಸಂದೇಶ್‌ ಕುಲಾಲ್‌ ನು ಯಾವುದೋ ದ್ವೇಷದಿಂದ ಸೌಮ್ಯಶ್ರೀ ಭಂಡಾರಿ ಯವರ ಕುತ್ತಿಗೆಗೆ ಚೂರಿಯಿಂದ ತಿವಿದು ಕೊಲೆ ಮಾಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 122/2021 ಕಲಂ: 341, 302, 309 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

ಇತ್ತೀಚಿನ ನವೀಕರಣ​ : 31-08-2021 10:01 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080