ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

 • ಹೆಬ್ರಿ: ದಿನಾಂಕ 31/08/2021 ರಂದು KA.20.B.6756 ನೇ ಟಿಪ್ಪರ್ ಲಾರಿಯನ್ನು ಅದರ ಚಾಲಕ ಪರಮೇಶ್ ಇವರು ಕಂಡೆಕ್ಟರ್ ಅಸ್ಸಾಂ ನ ನಿವಾಸಿ ಪಧುಂ ಗೋರಾ (PADUM GORH ) ಇವರೊಂದಿಗೆ ನಾಲ್ಕೂರು ಗ್ರಾಮದ ಮಿಯ್ಯಾರು ಎಂಬಲ್ಲಿರುವ ಪ್ರವೀಣ್ ಹೆಗ್ಡೆ ಇವರ ಮಾಲಕತ್ವದ ಯೂನಿಟಿ ರಾಕ್ ಕ್ರಷರ್ ನ ಬಳಿವಿರುವ ಸರ್ಕಾರಿ ಜಾಗದಲ್ಲಿ ಶೇಖರಿಸಿಟ್ಟ ಜಲ್ಲಿಯನ್ನು ತುಂಬಲು ತಂದಿಟ್ಟರು. ಪದುಂ ಗೋರಾ ಇವರು ಲಾರಿಯಿಂದ ಕೆಳಗಿಳಿದು ಲಾರಿಯ ಹಿಂದುಗಡೆ ಹೋಗಿ ನಿಂತು ಕೊಂಡಿರುವಾಗ ಸಮಯ ಸುಮಾರು ಬೆಳಿಗ್ಗೆ 06-30 ಗಂಟೆಗೆ ಟಿಪ್ಪರ್ ಲಾರಿಯ ಚಾಲಕ ಪರಮೇಶ್ ಇವರು ಯಾವುದೇ ಸೂಚನೆಯನ್ನು ನೀಡದೇ ಲಾರಿಯನ್ನು ನಿರ್ಲಕ್ಷತನದಿಂದ ಹಿಂದಕ್ಕೆ ಚಲಾಯಿಸಿ ಲಾರಿಯ ಹಿಂದುಗಡೆ ನಿಂತಿದ್ದ ಪದುಂ ಗೋರಾ ಇವರಿಗೆ  ಡಿಕ್ಕಿ ಹೊಡೆದ ಪರಿಣಾಮ ಅವರು ಕೆಳಗೆ ಬಿದಿದ್ದು. ಲಾರಿಯ ಎಡಬದಿಯ ಹಿಂದಿನ ಚಕ್ರವು ಪದುಂ ಗೋರಾ ಇವರ ಕಾಲಿನ ಮೇಲೆ ಹರಿದ ಪರಿಣಾಮ ಅವರ ಎಡಕಾಲಿನ ಗಂಟಿನ ಕೆಳಗೆ ಮೂಳೆ ಮುರಿತದ ತೀವ್ರ ಸ್ವರೂಪದ ಗಾಯವಾಗಿದ್ದು. ಗಾಯಾಳು ಮಣಿಪಾಲ ಕೆ.ಎಂ.ಸಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ಈ ಘಟನೆಯು KA.20.B.6756 ನೇ ಟಿಪ್ಪರ್ ಲಾರಿಯ ಚಾಲಕ ಪರಮೇಶ್ ಇವರ ನಿರ್ಲಕ್ಷತನದ ಚಾಲನೆಯಿಂದ ಅಗಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 54/2021 ಕಲಂ:279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೊಲ್ಲೂರು: ಪಿರ್ಯಾದಿ ಪದ್ಮವತಿ ಶೆಡ್ತಿ ಇವರು ದಿನಾಂಕ: 30/08/2021 ರಂದು  ಮದ್ಯಾಹ್ನ 1-00 ಗಂಟೆಗೆ ಹೊಸೂರು ಗ್ರಾಮದ  ಈರನಮಕ್ಕಿ  ಸರಕಾರಿ ಗಾಳಿ ಹಾಡಿ ಬಳಿ  ಮೇಯಲು ಬಿಟ್ಟ ದನವನ್ನು  ಮನೆಯ ಕೊಟ್ಟಿಗೆಗೆ ಹೊಡೆದುಕೊಂಡು ಬರಲು  ನಿಡೂಟ್ಟಿ ಈರನಮಕ್ಕಿ ಡಾಂಬರು ರಸ್ತೆಯ  ಮಣ್ಣು ರಸ್ತೆಯ ಅಂಚಿನಲ್ಲಿ   ನಡೆದುಕೊಂಡು ಹೋಗುತ್ತಿದ್ದಾಗ ನಿಡೂಟ್ಟಿ ಕಡೆಯಿಂದ ಈರನಮಕ್ಕಿ  ಕಡೆಗೆ ಆರೋಪಿ ಅರುಣ್ ಕುಮಾರ್ ಶೆಟ್ಟಿ KA 20 X9271 ನೇ ಮೋಟಾರ್ ಸೈಕಲ್ ನ್ನು ವೇಗವಾಗಿ ಅಜಗಾರೂಕತೆಯಿಂದ ಚಲಾಯಿಸಿಕೊಂಡು ಬಂದು  ಮೋಟಾರ್ ಸೈಕಲ್  ನ ವೇಗವನ್ನು ನಿಯಂತ್ರಿಸಲಾಗದೇ ತೀರ ಎಡಕ್ಕೆ ಚಲಾಯಿಸಿ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ  ಪಿರ್ಯಾದಿದಾರರು ರಸ್ತೆಗೆ ಬಿದ್ದು ಬಲಕಾಲು ತೊಡೆಯ ಮೂಳೆಗೆ ತೀವ್ರ ತರಹದ ಒಳನೋವು ಉಂಟಾಗಿ  ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ  ಚಿಕಿತ್ಸೆಯಲ್ಲಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 28/2021 ಕಲಂ:279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಮಟ್ಕಾ ಪ್ರಕರಣ

 • ಬೈಂದೂರು: ದಿನಾಂಕ 31/08/2021  ರಂದು 10:00 ಗಂಟೆಗೆ ಪವನ್ ನಾಯಕ್  ಪೊಲೀಸ್ ಉಪನಿರೀಕ್ಷಕರು ಬೈಂದೂರು ಪೊಲೀಸ್ ಠಾಣೆ ಇವರಿಗೆ ಬೈಂದೂರು ತಾಲೂಕು ಯಡ್ತರೆ ಗ್ರಾಮದ ಬೈಂದೂರು ಅಂಡರ್ ಪಾಸ್ ನ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ನಡೆಯುತ್ತಿದೆ ಎಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಲು ಸದ್ರಿ ಮಾಹಿತಿ ಬಂದ ಸ್ಥಳಕ್ಕೆ ಸಿಬ್ಬಂದಿ ಹಾಗೂ ಪಂಚರೊಂದಿಗೆ 10:45 ಗಂಟೆಗೆ ದಾಳಿ ನಡೆಸಿ ಆರೋಪಿತ ಮಹಾಬಲ ಪ್ರಾಯ 47 ವರ್ಷ, ತಂದೆ; ದುರ್ಗಾ ವಾಸ; ಮಾಸ್ತಿಕಟ್ಟೆ, ಪಡುವರಿ ಗ್ರಾಮ, ಬೈಂದೂರು ತಾಲೂಕು ಈತನನ್ನು ವಶಕ್ಕೆ ಪಡೆದಿದ್ದು. ಆತನು ತನ್ನ ಸ್ವಂತ ಲಾಭಕೋಸ್ಕರ ಅಕ್ರಮವಾಗಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಒಪ್ಪಿಕೊಂಡಿದ್ದು ನಂತರ ಆತನ ಕೈಯಲ್ಲಿದ್ದ ಮಟ್ಕಾ ಜುಗಾರಿ ಆಟದಿಂದ ಅಕ್ರಮವಾಗಿ ಸಂಗ್ರಹಿಸಿದ ನಗದು ಹಣ ರೂ 1255/-,ಮಟ್ಕಾ ನಂಬ್ರ ಬರೆದ ಚೀಟಿ-1 ಹಾಗೂ ಬಾಲ್ ಪೆನ್ನು-1 ನ್ನು ಪಂಚರುಗಳ ಸಮಕ್ಷಮ ಸ್ವಾಧೀನಪಡಿಸಿಕೊಂಡಿದ್ದು ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 143/2021  ಕಲಂ 78(1) (3)  ಕೆ. ಪಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಕುಂದಾಪುರ: ಪಿರ್ಯಾದಿ ಸುಂದರ ಖಾರ್ವಿ ಇವರು KA 20 EF 8520 ನೇ ಮೋಟಾರ್ ಸೈಕಲಿನ ಮಾಲಕರಾಗಿದ್ದು ದಿನಾಂಕ 16-07-2021 ರಂದು ಬೆಳಗ್ಗೆ 08:00 ಗಂಟೆಗೆ ಸದ್ರಿ ಬೈಕನ್ನು ಕುಂದಾಪುರ ತಾಲೂಕು ವಡೇರಹೋಬಳಿ ಗ್ರಾಮದ ಶಾಸ್ತ್ರಿ ಸರ್ಕಲ್ ನ ಮಂಗಳಾ ಸ್ಟೋರ್ ಎದುರು  ನಿಲ್ಲಿಸಿ ಕೆಲಸಕ್ಕೆ ಹೋಗಿದ್ದು ವಾಪಾಸು 11:30 ಗಂಟೆಗೆ ಬಂದು ನೋಡಲಾಗಿ ಮೋಟಾರ್ ಸೈಕಲ್  ನಿಲ್ಲಿಸಿದ ಜಾಗದಲ್ಲಿ ಇದ್ದಿರುವುದಿಲ್ಲ. ಸದ್ರಿ ಮೋಟಾರ್ ಸೈಕಲನ್ನು  ಯಾರೋ ಕಳ್ಳರು 16-07-2021 ರಂದು 08:00 ಗಂಟೆಯಿಂದ 11:30 ಗಂಟೆಯ ಮಧ್ಯಾವಧಿಯಲ್ಲಿ ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಬೈಕಿನ  ಮೌಲ್ಯ 17875 ರೂಗಳಾಗಿರುತ್ತದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 98/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 31-08-2021 06:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080