ಅಭಿಪ್ರಾಯ / ಸಲಹೆಗಳು


 • ಅಪಘಾತ ಪ್ರಕರಣಗಳು

  ಗಂಗೊಳ್ಳಿ: ಫಿರ್ಯಾದಿದಾರರಾದ ಭಾಸ್ಕರ ಪೂಜಾರಿಯವರು ದಿನಾಂಕ: 30-07-2022 ರಂದು ಬೆಳಿಗ್ಗೆ ತನ್ನ ಹೆಂಡತಿಯ ಅಣ್ಣ ನಂದೀಶ್ ಪೂಜಾರಿಯವರ  ಜೊತೆ ಅವರ ಬಾಬ್ತು KA-20 EH-1707 ನೇ ಬೈಕ್ ನಲ್ಲಿ ಸಹಸವಾರನಾಗಿ ಕುಳಿತುಕೊಂಡು ಪೈಂಟಿಂಗ್ ಕೆಲಸದ ಬಗ್ಗೆ ನಾರ್ಕಳಿಯಿಂದ ಹೊರಟು ಗುಡ್ಡೆಯಂಗಡಿ ರಸ್ತೆಯಲ್ಲಿ ಉಪ್ಪುಂದದ ಕಡೆಗೆ ಹೋಗುತ್ತಿರುವಾಗ ಕುಂದಾಪುರ ತಾಲೂಕು ಹರ್ಕೂರು ಗ್ರಾಮದ ಹರ್ಕೂರು ಜಂಕ್ಷನ್ ನಿಂದ ಸ್ವಲ್ಪ ಮುಂದಕ್ಕೆ  ತಲುಪುವಾಗ  ಬೆಳಿಗ್ಗೆ ಸಮಯ ಸುಮಾರು 8:00 ಗಂಟೆಗೆ ಬೀಡಾಡಿ ದನ ಬೈಕಿಗೆ ಅಡ್ಡ ಬಂದಾಗ ಬೈಕ್ ಚಲಾಯಿಸುತ್ತಿದ್ದ  ನಂದೀಶ್ ಪೂಜಾರಿಯವರು ದನವನ್ನು ತಪ್ಪಿಸುವ ಭರದಲ್ಲಿ  ಒಮ್ಮೆಲೇ  ಬ್ರೇಕ್ ಹಾಕಿದ ಪರಿಣಾಮ ಬೈಕ್ ಸ್ಕಿಡ್ ಆಗಿ ನಿಯಂತ್ರಣ ತಪ್ಪಿ ಹಿಂಬದಿ ಕುಳಿತಿದ್ದ ಫಿರ್ಯಾದಿದಾರರು ಬೈಕ್ ನಿಂದ ಜಾರಿ ಕೆಳಗೆ ಬಿದ್ದಿದ್ದು ಪರಿಣಾಮ ಫಿರ್ಯಾದಿದಾರರ ಬಲ ಕಾಲಿನ ಮೂಳೆ ಮುರಿತ ಉಂಟಾಗಿ  ಕೈಕಾಲುಗಳಿಗೆ ಅಲ್ಲಲ್ಲಿ ಸಣ್ಣಪುಟ್ಟ ಪೆಟ್ಟಾಗಿದ್ದು ಚಿಕಿತ್ಸೆ ಬಗ್ಗೆ ವಾಹನದಲ್ಲಿ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ  ಕರೆದುಕೊಂಡು ಹೋದಲ್ಲಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಈ ಘಟನೆಗೆ KA-20 EH-1707 ನೇ ಬೈಕ್ ಸವಾರ ನಂದೀಶ್ ಪೂಜಾರಿಯವರ ಅತೀವೇಗ ಹಾಗೂ ನಿರ್ಲಕ್ಷತನದ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌  ಠಾಣೆ ಅಪರಾಧ ಕ್ರಮಾಂಕ 67/2022 ಕಲಂ: 279, 338  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಬ್ರಹ್ಮಾವರ: ಪಿರ್ಯಾದಿ ಶಾಲಿನಿ ಇವರು ದಿನಾಂಕ 30.07.2022 ರಂದು ಮನೆಯಿಂದ  ಆರೋಪಿ ಅಭಿಜಿತ್‌ನು ಸವಾರಿ ಮಾಡುತ್ತಿದ್ದ ಆತನ ಬಾಬ್ತು KA.20.V.7782 ನೇ ಮೋಟಾರ್‌ ಸೈಕಲ್‌ನಲ್ಲಿ ಸಹಸವಾರಿಣಿಯಾಗಿ ಕುಳಿತು ಕೊಂಡು ಬ್ರಹ್ಮಾವರ ತಾಲೂಕು ಕಛೇರಿಗೆ ಕೆಲಸಕ್ಕೆಂದು ಬರುತ್ತಾ ಬೆಳಿಗ್ಗೆ 09:30 ಗಂಟೆಯ ಸಮಯಕ್ಕೆ 52 ನೇ ಹೇರೂರು ಗ್ರಾಮದ, ಹೇರೂರು ಸೇತುವೆಯಿಂದ ಸ್ವಲ್ಪ ಮುಂದೆ, ರಾಹೆ 66 ರಲ್ಲಿ    ಬಂದಾಗ ಎದುರಿನಲ್ಲಿ ನಾಯಿಯೊಂದು ಒಮ್ಮೇಲೆ ಅಡ್ಡ ಬಂದಿದ್ದು, ಆಗ ಆರೋಪಿಯು ನಿರ್ಲಕ್ಷತನದಿಂದ ಒಮ್ಮೇಲೆ ಬ್ರೇಕ್‌ ಹಾಕಿದಾಗ ಮೋಟಾರ್‌ ಸೈಕಲ್‌ ಸ್ಕೀಡ್‌ ಆಗಿ ಬಿದ್ದು, ಮೋಟಾರ್‌ ಸೈಕಲ್‌ ಸ್ವಲ್ಪ ದೂರ ಎಲೆದುಕೊಂಡು ಹೋಗಿರುತ್ತದೆ. ಪರಿಣಾಮ ಪಿರ್ಯದಿದಾರರ ಬಲ ಕಾಲು ಹಿಂಬದಿ ಮೋಟಾರ್‌ ಸೈಕಲ್‌ ಚಕ್ರಕ್ಕೆ ಸಿಲುಕಿ ಹಾಕಿ ಕೊಂಡು, ಬಲ ಕಾಲಿನ ಹಿಮ್ಮಡಿಗೆ ರಕ್ತಗಾಯ ಹಾಗೂ ದೇಹದ ಇತರ ಕಡೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌  ಠಾಣೆ ಅಪರಾಧ ಕ್ರಮಾಂಕ 129/2022 ಕಲಂ: 279, 338  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಉಡುಪಿ: ಪಿರ್ಯಾದಿ ಸುರೇಶ್ ಕೋಟ್ಯಾನ್ ಇವರು ದಿನಾಂಕ: 30/07/2022ರಂದು ಸಂಜೆ 5:45 ಗಂಟೆಗೆ ಮೂಡನಿಡಂಬೂರು ಗ್ರಾಮದ ಗಾಂಧಿ ಆಸ್ಪತ್ರೆಯ ಎದುರುಗಡೆ ಹಾದು ಹೋಗಿರುವ ರಾ.ಹೆ 169(ಎ) ಸಾರ್ವಜನಿಕ ಡಾಮಾರು ರಸ್ತೆಯಲ್ಲಿಆರೋಪಿ ರಮೇಶ್ ಪೂಜಾರಿ ಈತನು ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ  ತಾನು ಚಲಾಯಿಸುತ್ತಿದ್ದ KA20C4979ನೇ ಬಸ್ಸನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ ಪಿರ್ಯಾದಿದಾರರು  KA20MC5146ನೇ ಕಾರಿನಲ್ಲಿ ಹೆಂಡತಿ ಶೀಲರವರೊಂದಿಗೆ ಬರುತ್ತಿದ್ದವರಿಗೆ ಹಿಂದುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಹಿಂಭಾಗ ಸಂಪೂರ್ಣ ಜಖಂಗೊಂಡಿರುತ್ತದೆ.ಅಲ್ಲದೇ ಡಿಕ್ಕಿಯ ರಭಸಕ್ಕೆ ಮುಂಭಾಗವು ಒಡೆದಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌  ಠಾಣೆ ಅಪರಾಧ ಕ್ರಮಾಂಕ 60/2022 ಕಲಂ: 279 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 31-07-2022 10:30 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080