ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಗಂಗೊಳ್ಳಿ: ದಿನಾಂಕ 30/07/2021 ರಂದು ಪಿರ್ಯಾದಿದಾರರಾದ ಮೊಹಮ್ಮದ್ ಸಲೀಮ್ (42), ತಂದೆ: ಮೊಹಮ್ಮದ್ ಇಸ್ಮೈಲ್ ಸಾಹೇಬ್, ವಾಸ:  ಡೋರ್‌.ನಂ 4-367(A), ತವಕಲ್- ತು-ಅಲ್ಲಾ, 80 ಬಡಗಬೆಟ್ಟು, ಅಲೇವೂರ್‌ರೋಡ್‌, ಶಾಂತಿ ನಗರ, ಮಣಿಪಾಲ, ಉಡುಪಿ ತಾಲೂಕು ಇವರ ಅಣ್ಣ ಮೊಹಮ್ಮದ್ ಸಮೀರ್ ಎಂಬುವವರು KA-20-D-5550 TOYOTA ETIOS ಕಾರನ್ನು ಚಲಾಯಿಸಿಕೊಂಡು ಮಣಿಪಾಲ ಶಾಂತಿ ನಗರದಿಂದ ನಾವುಂದಕ್ಕೆ ಎನ್‌.ಹೆಚ್‌-66 ರಲ್ಲಿ ಹೋಗುತ್ತಿರುವಾಗ 3:30 ಗಂಟೆಗೆ ಕಾರು ಮರವಂತೆಯ ವರಹ ಮಹಾರಾಜ ಸ್ವಾಮಿ ದೇವಸ್ಥಾದ ಸಮೀಪ ತಲುಪುವಾಗ ಒಂದು ಲಾರಿಯು ಕಾರನ್ನು ಓವರ್‌ಟೇಕ್‌ ಮಾಡಿಕೊಂಡು ಮುಂದೆ ಹೋಗುವಾಗ ಮೊಹಮ್ಮದ್ ಸಮೀರ್ ರವರು ತಾವು ಚಲಾಯಿಸುತ್ತಿದ್ದ ಕಾರನ್ನು ಒಮ್ಮೆಲೇ ಎಡ ಬದಿಗೆ ತಿರುಗಿಸಿದ್ದರಿಂದ ಕಾರು ರಸ್ತೆಯ ಎಡ ಬದಿ ಇರುವ STAR ಸಿಮೆಂಟ್‌ಬ್ಲಾಕ್‌ಗೆ ಢಿಕ್ಕಿ  ಹೊಡೆದ ಪರಿಣಾಮ ಕಾರಿನ ಮುಂಭಾಗದ ಇಂಜಿನ್, ಬೊನೆಟ್, ರೇಡಿಯೇಟರ್, ಬಂಪರ್‌, ಹೆಡ್‌ಲೈಟ್‌, ಮುಂದಿನ ಗ್ಲಾಸ್ ಮತ್ತು ಎಡ ಬದಿಯ ಬಾಡಿ ತುಂಬಾ ಜಖಂಗೊಂಡಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 71/2021 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ಹರೀಶ ಕುಮಾರ್ (44), ತಂದೆ: ಶೇಖರ ಬಿ, ವಾಸ: ಮಂಜು ಗಣೇಶ ನಿಲಯ, ದೊಡ್ಡಣಗುಡ್ಡೆ, ಕರಂಬಳ್ಳಿ 5 ನೇ ರಸ್ತೆ ಕುಂಜಿಬೆಟ್ಟು ಪೋಸ್ಟ್ ಉಡುಪಿ ಇವರ ಆಣ್ಣ ಸತೀಶ ಕುಮಾರ್ (54) ರವರು ದಿನಾಂಕ 28/07/2021 ರಂದು 16:00  ಗಂಟೆಗೆ ಮನೆಯಿಂದ ಕಾಣೆಯಾಗಿದ್ದು, ಸಂಬಂಧಿಕರು ಹಾಗೂ ಸ್ನೇಹಿತರು ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 98/2021 ಕಲಂ:ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.    

ಕೊಲೆ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಮಹೇಂದ್ರ ಶೆಟ್ಟಿ(35), ತಂದೆ:  ಜಗನ್ನಾಥ  ಶೆಟ್ಟಿ, ವಾಸ:ಸುಮಪ್ರಿಯ  ಹೌಸ್‌ , ಕೂಡಾಲು ,  ಯಡಾಡಿ ಮತ್ಯಾಡಿ ಗ್ರಾಮ, ಕುಂದಾಪುರ ತಾಲೂಕು ಇವರ ತಮ್ಮ ಅಜೇಂದ್ರ ಶೆಟ್ಟಿ ಇವರು ಕಾಳಾವರ ನಂದಿಕೇಶ್ವರ ಕಾಂಪ್ಲೆಕ್ಸ್‌‌‌ನಲ್ಲಿ ಅನೂಪ್‌ ಎಂಬುವವ‌ನೊಂದಿಗೆ ಪಾಲುದಾರಿಕೆಯಲ್ಲಿ ಫೈನಾನ್ಸ್‌‌ ವ್ಯವಹಾರ ನಡೆಸಿಕೊಂಡಿರುತ್ತಾರೆ. ದಿನಾಂಕ 30/07/2021 ರಂದು ಅಜೇಂದ್ರನು ರಾತ್ರಿ ಮನೆಗೆ ಬಾರದ ಕಾರಣ ಆತನಿಗೆ ಫೋನ್ ಮಾಡಿದಾಗ ಸಂಪರ್ಕಕ್ಕೆ ಸಿಗದ ಕಾರಣ ಸ್ನೇಹಿತರಿಗೆ ಫೊನ್ ಮಾಡಿ ರಾತ್ರಿ  11:15 ಗಂಟೆಗೆ ಕಾಳಾವರಕ್ಕೆ ಬಂದು ಫೈನಾನ್ಸ್‌‌‌‌‌ನಲ್ಲಿ ನೋಡುವಾಗ ಫೈನಾನ್ಸ್‌‌‌ನ ರೂಮಿನಲ್ಲಿ  ಅಜೇಂದ್ರ ಶೆಟ್ಟಿಯು ಕುಳಿತಲ್ಲಿಯೇ  ವಾಲಿಕೊಂಡು ಬಿದ್ದಿದ್ದು, ಆತನ ಕೆನ್ನೆಯ ಬಳಿ  ಕಡಿದ  ಗಾಯವಾಗಿ ರಕ್ತ ಹರಿಯುತ್ತಿತ್ತು  ಕೂಡಲೇ ಸ್ನೇಹಿತರೊಂದಿಗೆ ಸೇರಿ ರಕ್ಷಿತ್‌ ರವರ ಕಾರಿನಲ್ಲಿ  ಅಜೇಂದ್ರನನ್ನು ಕೋಟೇಶ್ವರ  ಎನ್.ಆರ್ ಆಚಾರ್ಯ  ಆಸ್ವತ್ರೆಗೆ  ಕರೆದುಕೊಂಡು  ಹೋದಲ್ಲಿ ವೈದ್ಯರು  ಅಜೇಂದ್ರನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.   ಅನೂಪ್‌‌‌ನಿಗೆ  ಪೋನ್‌ ಮಾಡಿದಲ್ಲಿ  ಅನೂಪ್‌‌ನ   ಪೋನ್‌ ಸ್ವಿಚ್‌ಅಪ್‌ ಆಗಿರುತ್ತದೆ.   ಪಕ್ಕದ  ಅಂಗಡಿಯ ರಾಘವೇಂದ್ರ  ಹೆಬ್ಬಾರ್‌ರಲ್ಲಿ ವಿಚಾರಿಸಿದಾಗ  ಅನೂಪ್‌ ಮತ್ತು ಅಜೇಂದ್ರನು  ರಾತ್ರಿ  8:30  ಗಂಟೆ  ತನಕ   ಪೈನಾನ್ಸ್‌ನಲ್ಲಿ   ಒಟ್ಟಿಗೆ   ಇರುವ ಬಗ್ಗೆ  ತಿಳಿಸಿರುತ್ತಾರೆ.     ಅಜೇಂದ್ರ ಶೆಟ್ಟಿ ಯವರು ಅನೂಪ್‌ನೊಂದಿಗೆ  ಪೈನಾನ್ಸ್  ವ್ಯವಹಾರ ಮಾಡಿಕೊಂಡಿದ್ದು, ಈ ಮದ್ಯೆ ಇವರೊಳಗೆ ವ್ಯವಹಾರ ಹಾಗೂ  ಹಣಕಾಸಿನ  ಬಗ್ಗೆ  ಸಂಬಂಧಿಸಿ ಅಜೇಂದ್ರನೊಂದಿಗೆ ಅನೂಪನು ತಕರಾರು ಮಾಡಿರುವ  ವಿಚಾರವನ್ನು ತಮ್ಮ ನನ್ನಲ್ಲಿ ಈ ಮೊದಲು ತಿಳಿಸಿದ್ದ   ಅಲ್ಲದೇ  ಈಗ  ತಮ್ಮ  ಹೊಸದಾಗಿ  ಖರೀದಿಸಿದ  ಕಾರಿನ  ಬಗ್ಗೆ ಕೂಡಾ  ಅನೂಪ್‌‌‌ನಿಗೆ  ಅಸಮಾಧಾನವಿರುವ ಬಗ್ಗೆ  ಅಜೇಂದ್ರನು ತಿಳಿಸಿದ್ದು, ಇದೇ  ವೈಮನಸ್ಸಿನಿಂದ  ಅನೂಪ್‌ನು ಅಜೇಂದ್ರನನ್ನು ಯಾವುದೋ  ಆಯುಧದಿಂದ  ಹಲ್ಲೆಮಾಡಿ  ಕೊಲೆ ಮಾಡಿರಬೇಕು. ಅಲ್ಲದೇ  ಅಜೇಂದ್ರನು ಯಾವಾಗಲೂ ಕುತ್ತಿಗೆಯಲ್ಲಿ ಚಿನ್ನದ ಚೈನ್‌‌ನ್ನು  ಧರಿಸುತ್ತಿದ್ದು ಅದು ಈಗ ಅತನ  ಕುತ್ತಿಗೆಯಲ್ಲಿರುವುದಿಲ್ಲ.   ಅಲ್ಲದೇ  ಆತನು ಖರೀದಿಸಿರುವ  ಹೊಸ  ಹೊಂಡಾ  ಸಿಟಿ  ಬಿಳಿ ಕಾರನ್ನು ಕೂಡಾ ಅನೂಪ್‌‌‌‌ನೇ ಸುಲಿಗೆ ಮಾಡಿಕೊಂಡು ಹೋಗಿರುವ ಬಗ್ಗೆ ಅನುಮಾನವಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 55/2021 ಕಲಂ: 397, 302 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 31-07-2021 09:39 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080