ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 31/07/2021 ರಂದು ಪಿರ್ಯಾದಿದಾರರಾದ ಹೇಮಾ ಎನ್. ಶೆಟ್ಟಿ (58), ಗಂಡ: ನಿತ್ಯಾನಂದ ಶೆಟ್ಟಿ, ವಾಸ:- ಬೈಲುಮನೆ, ಕಾಡೂರು, ಕಾಡೂರು ಗ್ರಾಮ, ಬ್ರಹ್ಮಾವರ ಇವರು ತನ್ನ ಗಂಡ ನಿತ್ಯಾನಂದ ಶೆಟ್ಟಿ, ರವರು ಸವಾರಿ ಮಾಡುತ್ತಿದ್ದ ಅವರ KA-20-EK-1415 ನೇ TVS Jupiter ದ್ವಿಚಕ್ರ ವಾಹನದಲ್ಲಿ ಸಹಸವಾರಿಣಿ ಆಗಿ ಕುಳಿತುಕೊಂಡು ಬ್ರಹ್ಮಾವರ – ಬಾರ್ಕೂರು ಮುಖ್ಯ ರಸ್ತೆಯಲ್ಲಿ ಬ್ರಹ್ಮಾವರ ಕಡೆಗೆ ಬರುತ್ತಾ ಬೆಳಿಗ್ಗೆ 09:30 ಗಂಟೆಗೆ ಹಂದಾಡಿ ಗ್ರಾಮದ, ಹಂದಾಡಿ ಮರ್ಬು ಕ್ರಾಸ್ ಸಮೀಪ ಮುಖ್ಯ ರಸ್ತೆಯನ್ನು ದಾಟಲು ಡಾಂಬರ್ ರಸ್ತೆಯ ತೀರಾ ಎಡಭಾಗದಲ್ಲಿ ಇಂಡಿಕೇಟರ್ ಹಾಕಿ ರಸ್ತೆಯ ಬಲಭಾಗಕ್ಕೆ ಹೋಗಲು ಅವರ ಗಂಡ ದ್ವಿಚಕ್ರ ವಾಹನವನ್ನು ನಿಲ್ಲಿಸಿಕೊಂಡಿರುವಾಗ ಅವರ ಹಿಂಭಾಗದಿಂದ ಅಂದರೆ ಬಾರ್ಕೂರು ಕಡೆಯಿಂದ ಬ್ರಹ್ಮಾವರ ಕಡೆಗೆ ಆರೋಪಿ ಸುನಿಲ್ ಪೂಜಾರಿ ಎಂಬವರು ತನ್ನ KA-53-HD-1388 ನಂಬ್ರದ ಯಮಹಾ ಮೋಟಾರ್ ಸೈಕಲ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಹೇಮಾ ಎನ್. ಶೆಟ್ಟಿ ಇವರಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿರುವುದಾಗಿದೆ. ಈ ಅಪಘಾತದ ಪರಿಣಾಮ ಎರಡೂ ವಾಹನಗಳು ರಸ್ತೆಗೆ ಬಿದ್ದು ಹೇಮಾ ಎನ್. ಶೆಟ್ಟಿ ರವರ ಹಣೆಯ ಎಡಭಾಗಕ್ಕೆ, ಎಡಕೈ ತೋರು ಬೆರಳು, ಉಂಗುರ ಬೆರಳಿಗೆ ರಕ್ತಗಾಯವಾಗಿ ಎಡಭುಜಕ್ಕೆ ಒಳಜಖಂ ಉಂಟಾಗಿರುತ್ತದೆ ಮತ್ತು ಹೇಮಾ ಎನ್. ಶೆಟ್ಟಿ ರವರ ಗಂಡ ನಿತ್ಯಾನಂದ ಶೆಟ್ಟಿ ರವರ ತಲೆಯ ಭಾಗಕ್ಕೆ, ಕಾಲಿಗೆ ಪೆಟ್ಟಾಗಿದ್ದು ಮಾತನಾಡುತ್ತಿಲ್ಲ, ಅಲ್ಲದೇ ಆರೋಪಿ ಸುನಿಲ್ ಪೂಜಾರಿ ರವರ ಮೈ, ಕೈ, ಕಾಲಿಗೆ ರಕ್ತಗಾಯವಾಗಿರುತ್ತದೆ. ಗಾಯಾಳು ಹೇಮಾ ಎನ್. ಶೆಟ್ಟಿ ರವರನ್ನು ಹಾಗೂ ಅವರ ಗಂಡನನ್ನು ಚಿಕಿತ್ಸೆಯ ಬಗ್ಗೆ ಬ್ರಹ್ಮಾವರದ ಮಹೇಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಹೇಮಾ ಎನ್. ಶೆಟ್ಟಿ ರವರನ್ನು ದಾಖಲಿಸಿಕೊಂಡಿದ್ದು, ಅವರ ಗಂಡನನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 146/2021 ಕಲಂ: 279, ,337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ವಂಚನೆ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಲಕ್ಷ್ಮಿ (32) ಗಂಡ: ಭೋಜ ಪಾಣಾರಾ ವಾಸ: ಕೊಟ್ರೆ ದರ್ಖಾಸು ಹೌಸ್, ಹೊಸ್ಮಾರ್ ಅಂಚೆ ಈದು ಗ್ರಾಮ ಕಾರ್ಕಳ ತಾಲೂಕು ಉಡುಪಿ ಇವರಿಗೆ ಹಸನ್ ಬಶೀರ್ ರವರು ನಿಮಗೆ ಮನೆ ಕಟ್ಟೆಲು ಬ್ಯಾಂಕ್ ನಲ್ಲಿ ಲೋನ್ ಮಾಡಿಕೊಡುತ್ತೇನೆ. ಬ್ಯಾಂಕ್ ನಲ್ಲಿ ವಾಹನ ಖರೀದಿಸುವ ಬಗ್ಗೆ ಸಾಲ ತೆಗೆದುಕೊಂಡು ವಾಹನ ಖರೀದಿಸಿ ಬಾಡಿಗೆಗೆ ಬಿಡುವಾ ಅದರ ಬಾಡಿಗೆಯಲ್ಲಿ ಜೀವನ ನಡೆಯುತ್ತದೆ ಎಂದು ಹೇಳಿದ್ದು ಅದಕ್ಕೆ ಒಪ್ಪಿಕೊಂಡಿದ್ದು, ಅದಾದ ಬಳಿಕ ಹಸನ್ ಬಶೀರ್ ರವರು ಅವರ ಸ್ನೇಹಿತರಾದ ಹುಸೇನ್ ಬಶೀರ್, ಹಾಗೂ ಹನೀಫ್ ರವರೊಂದಿಗೆ ಲಕ್ಷ್ಮಿ ರವರ ಮನೆಗೆ ಬಂದು ಇವರಲ್ಲಿ ವಾಹನ ಖರೀದಿ ಮಾಡಲು ಬ್ಯಾಂಕ್ ನಲ್ಲಿ 900000/-ಸಾಲ ತೆಗೆದುಕೊಳ್ಳುವ ಅದಕ್ಕೆ ಮೊದಲು 3,00,000/- ರೂಪಾಯಿ ಡೌನ್ ಪೇಮೆಂಟ್ ಹಣ ನೀಡಬೇಕು ನೀವು ಆ ಹಣವನ್ನು ಮಾತ್ರ ನೀಡಿ ಬಾಕಿ ಉಳಿದ ಹಣವನ್ನು ಸಾಲ ಮಾಡಿ ವಾಹನ ಖರೀದಿ ಮಾಡುವ, ಆ ವಾಹನವನ್ನು ಬಾಡಿಗೆಗೆ ಬಿಟ್ಟರೆ ನಿಮಗೆ ಹಣ ಬರುತ್ತದೆ ಎಂದು ಹೇಳಿ ಲಕ್ಷ್ಮಿ ರವರನ್ನು ನಂಬಿಸಿದ್ದು, ಅವರ ಮಾತನ್ನು ನಂಬಿದ ಇವರು ಫೈನಾನ್ಸ್ ನಲ್ಲಿ 3,00,000/- ರೂಪಾಯಿ ಹಣವನ್ನು ಸಾಲ ಮಾಡಿದ್ದು ಆರೋಫಿತರಾದ ಹಸನ್ ಬಶೀರ್, ಹುಸೇನ್ ಬಶೀರ್, ಹಾಗೂ ಹನೀಫ್ ರವರು ದಿನಾಂಕ 25/11/2019 ರಂದು ಲಕ್ಷ್ಮಿ ರವರ ಮನೆಗೆ ಬಂದಾಗ 3,00,000/- ಹಣವನ್ನು ಕೊಟ್ಟಾಗ ಆರೋಪಿತರು 2,80,000/- ರೂ ಹಾಗೂ 20,000/- ರೂ ಹಣವನ್ನು ಸ್ವೀಕರಿಸಿದ ಬಗ್ಗೆ ರಶೀದಿಯನ್ನು ಬರೆದುಕೊಟ್ಟಿರುತ್ತಾರೆ. ನಂತರ ಆರೋಪಿತರು ಹೊಸ್ಮಾರ್ ನ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಗೆ ಲಕ್ಷ್ಮಿ ರವರನ್ನು ಕರೆದುಕೊಂಡು ಹೋಗಿ ಬ್ಯಾಂಕ್ ಮೆನೆಜರ್ ರವರಿಗೆ ಪರಿಚಯ ಮಾಡಿಸಿ ವಾಹನ ಖರೀದಿ ಬಗ್ಗೆ ಸಾಲದ ಬಗ್ಗೆ ಮಾತನಾಡಿ ಅದಕ್ಕೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ಹಸನ್ ಬಶೀರ್ ರವರೇ ಬ್ಯಾಂಕ್ ಗೆ ನೀಡಿದ್ದು ಬ್ಯಾಂಕ್ ನಲ್ಲಿ 9,00,000/- ರೂ ಲಕ್ಷ್ಮಿ ರವರ ಹೆಸರಿನಲ್ಲಿ ಮಂಜೂರು ಮಾಡಿದ್ದು ಬ್ಯಾಂಕಿನವರು ಆ ಹಣವನ್ನು ಕರ್ವನ್ ಆಟೋಮೊಬೈಲ್ಸ್ ಶೋರೂಮ್ ನವರ ಅಕೌಂಟಿಗೆ ನೇರವಾಗಿ ಹಣವನ್ನು ಕಳುಹಿಸಿರುತ್ತಾರೆ. ಲಕ್ಷ್ಮಿ ಇವರ ಹೆಸರಿನಲ್ಲಿ ವಾಹನ ಸಾಲ ಮಾಡಿಸಿ ಆ ಹಣವನ್ನು ಅವರ ಖಾತೆಗೆ ವರ್ಗಾವಣೆ ಮಾಡಿಕೊಂಡು ಲಕ್ಷ್ಮಿ ರವರಿಗೆ ಹಣವನ್ನು ವಾಪಾಸ್ಸು ಕೊಡದೇ ಬ್ಯಾಂಕ್ ಗೆ ಹಣವನ್ನು ಸಂದಾಯ ಮಾಡದೇ, ವಾಹನವನ್ನು ಲಕ್ಷ್ಮಿ ರವರಿಗೆ ನೀಡದೇ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 92/2021 ಕಲಂ: 417, 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

 

ಇತ್ತೀಚಿನ ನವೀಕರಣ​ : 31-07-2021 07:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080