ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ : ಪಿರ್ಯಾದಿದಾರರಾದ ಪ್ರಸಾದ್‌‌‌‌‌ ಶ್ಯಾನ್‌‌ಭೋಗ್‌‌‌‌ (46),  ತಂದೆ ರಾಘವೇಂದ್ರ ಶ್ಯಾನ್‌‌ಭೋಗ್‌‌‌‌, ವಿಜಯಲಕ್ಷ್ಮೀ ನಿವಾಸ,  ತೆಕ್ಕಟ್ಟೆ, ಕುಂದಾಪುರ  ತಾಲೂಕು ಇವರು ದಿನಾಂಕ 30/05/2022  ರಂದು ಬೆಳಿಗ್ಗೆ  09:30 ಗಂಟೆಗೆ ತೆಕ್ಕಟ್ಟೆ  ಪ್ರಭು ಕ್ರೀಂ ಪಾರ್ಲರ್‌‌‌ನ  ಎದುರು  ಇರುವಾಗ ಉಡುಪಿ  ಕಡೆಯಿಂದ  ಕುಂದಾಪುರ  ಕಡೆಗೆ  ಒಂದು  ಸ್ಕೂಟಿ KA-20-EK-2373 ನ್ನು  ಅದರ  ಸವಾರ  ಉಡುಪಿ  ಕಡೆಯಿಂದ  ಕುಂದಾಪುರ  ಕಡೆಗೆ  ಸವಾರಿ  ಮಾಡಿಕೊಂಡು  ಹೋಗುತ್ತಿದ್ದು,  ಅಷ್ಟರಲ್ಲಿ  ಒಂದು  ಮೋಟಾರು  ಸೈಕಲ್‌‌‌‌‌ KA-20-EW-0998 ರ  ಸವಾರ ಉಡುಪಿ  ಕಡೆಯಿಂದ  ಕುಂದಾಪುರ  ಕಡೆಗೆ  ಅತೀವೇಗ  ಹಾಗೂ  ಅಜಾಗರೂಕತೆಯಿಂದ  ಸವಾರಿ  ಮಾಡಿಕೊಂಡು  ಬಂದು  ಸ್ಕೂಟಿಗೆ ಹಿಂದಿನಿಂದ  ಡಿಕ್ಕಿ  ಹೊಡೆದ ಪರಿಣಾಮ  ದ್ವಿಚಕ್ರ  ವಾಹನ  ಸವಾರರು  ವಾಹನ  ಸಮೇತ  ರಸ್ತೆಗೆ  ಬಿದ್ದು,  ಮೋಟಾರು  ಸೈಕಲ್‌‌‌‌‌‌‌ ಸವಾರ  ಸುರೇಂದ್ರ ದೇವಾಡಿಗ (40) ರವರಿಗೆ  ತಲೆಗೆ,  ಎದೆಗೆ,  ಎರಡೂ ಕಾಲಿನ  ಮೊಣಗಂಟಿಗೆ  ತೀವ್ರ ತರದ  ಗಾಯವಾಗಿದ್ದು,  ಮೋಟಾರು  ಸೈಕಲ್‌‌‌‌‌‌‌ ಸವಾರ  ಆರೋಪಿ  ವಿಶ್ವಾಸ್‌‌‌‌‌‌‌‌‌ ಗೆ  ಬಲಭುಜ,  ಬಲಕೈಗೆ  ತರಚಿದ  ಗಾಯವಾಗಿದ್ದು,  ಅವರನ್ನು  ಕೋಟೇಶ್ವರ ಎನ್‌‌‌‌‌‌‌.ಆರ್‌‌‌‌‌. ಆಚಾರ್ಯ  ಆಸ್ಪತ್ರೆಗೆ  ದಾಖಲಿಸಿದ್ದು,  ವೈದ್ಯರು  ಪರೀಕ್ಷಿಸಿ  ಅವರ  ಸಲಹೆಯಂತೆ  ಸುರೇಂದ್ರ  ದೇವಾಡಿಗರವರನ್ನು  ಹೆಚ್ಚಿನ  ಚಿಕಿತ್ಸೆಯ ಬಗ್ಗೆ  ಉಡುಪಿ  ಆದರ್ಶ  ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 73/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಶೈಲೇಶ್‌ ಶೆಟ್ಟಿ (38), ತಂದೆ: ದಿ. ಜಯರಾಮ ಶೆಟ್ಟಿ, ವಾಸ: ಕೊಡಮಜಲು ಮನೆ, ಬಳಕುಂಜೆ ಅಂಚೆ, ಮಂಗಳೂರು, ದ.ಕ. ಜಿಲ್ಲೆ ಇವರು ನವಯುಗ ಸಂಸ್ಥೆಯ ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಸೇಫ್ಟಿ ಆಫಿಸರ್‌ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 27/05/2022 ರಂದು ರಾತ್ರಿ 8:0೦ ಗಂಟೆಗೆ ಕಾಪು ತಾಲೂಕು ಹೆಜಮಾಡಿ ಗ್ರಾಮದ ಹೆಜಮಾಡಿ ಒಳರಸ್ತೆಗೆ ಹೋಗುವ ಟೋಲ್‌ಗೇಟ್‌ನಲ್ಲಿ KA-35-A-1553 ನೇ ನಂಬ್ರದ ಬಸ್‌ ಚಾಲಕ ಇಕ್ಬಾಲ್‌  ತನ್ನ ಬಸ್ಸನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಟೋಲ್‌ಗೇಟ್‌ನ ಎಡಭಾಗದ ಗೇಟ್‌ ಸೆನ್ಸಾರ್‌ ಕಂಬಕ್ಕೆ ಡಿಕ್ಕಿಪಡಿಸಿ ನಿಲ್ಲಿಸದೇ ಹೆಜಮಾಡಿ ಪೇಟೆ ಕಡೆಗೆ ಹೋಗಿದ್ದು, ಈ ಅಫಘಾತದಿಂದ ಟೋಲ್‌ಗೇಟ್‌ನ ಸೆನ್ಸಾರ್‌ ಕಂಬ ಸಂಪೂರ್ಣ ಜಖಂಗೊಂಡು ತುಂಡಾಗಿ ಬಿದ್ದಿದ್ದು, ಸಂಸ್ಥೆಗೆ  ರೂಪಾಯಿ 1,23,000/- ನಷ್ಟ ಉಂಟಾಗಿರುತ್ತದೆ.  ಬಸ್ಸಿನ ಮಾಲಕ ಸೆನ್ಸಾರ್‌ ಗೇಟ್‌ ಜಖಂಗೊಳಿಸಿದ ನಷ್ಟ ಭರಿಸುವುದಾಗಿ ಹೇಳಿ ಇದುವರೆಗೆ ನಷ್ಟ ಭರಿಸದೇ ಇದ್ದುದರಿಂದ ದೂರು ನೀಡಲು ವಿಳಂಭವಾಗಿರುತ್ತದೆ.  ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 68/2022, ಕಲಂ:279 ಐಪಿಸಿ ಮತ್ತು ಕಲಂ 134(ಬಿ) ಜೊತೆಗೆ 187 ಐಎಂವಿ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ದಿನಾಂಕ 29/05/2022 ರಂದು ಪಿರ್ಯಾದಿದಾರರಾದ ಸುಧಾಕರ ಪೂಜಾರಿ (39), ತಂದೆ: ಶೇಷ ಪೂಜಾರಿ, ವಾಸ: ಗರಡಿಬೆಟ್ಟು, ನಾವುಂದ ಗ್ರಾಮ ಬೈಂದೂರು ತಾಲೂಕು ಇವರು ಹೆಂಡತಿಯ ಅಣ್ಣ ಸುರೇಶ ಪೂಜಾರಿಯವರು ಮೂಲ್ಕಿಯಲ್ಲಿನ ಅವರ ಮನೆಯಲ್ಲಿ  ಏರ್ಪಡಿಸಿದ್ದ  ಔತಣ ಕೂಟಕ್ಕೆ ತನ್ನ ಹೆಂಡತಿ ಜಯಲಕ್ಷ್ಮೀ, ಮಾವ ರಾಮ ಪೂಜಾರಿ, ಬಾವ ಕಿಶೋರ್, ಹಾಗೂ ಕಿಶೋರನ ಹೆಂಡತಿ ಅನುಷಾ ರವರೊಂದಿಗೆ  KA-20-Z-5084 ನೇ ಹುಂಡೈ ಇಯೋನ್ ಕಾರಿನಲ್ಲಿ  ಹೋಗಿದ್ದು ರಾತ್ರಿ ಸಮಯ ಔತಣಕೂಟ ಮುಗಿಸಿ ವಾಪಾಸು ಬೈಂದೂರಿಗೆ ಹೊರಟಿದ್ದು ಕಾರನ್ನು ಕಿಶೋರ ರವರು ಚಲಾಯಿಸಿಕೊಂಡಿದ್ದು, ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬರುತ್ತಾ ಕಿಶೋರನು ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡಿದ್ದು  ರಾತ್ರಿ 11:30 ಗಂಟೆಗೆ ಕಿರಿಮಂಜೇಶ್ವರ ಗ್ರಾಮದ ಶಾಲೆಬಾಗಿಲು ಎಂಬಲ್ಲಿನ ಆದ್ರಗೋಳಿ ಕ್ರಾಸ್ ಬಳಿ ತಲುಪಿದಾಗ ದನವೊಂದು ರಸ್ತೆಗೆ ಓಡಿಬಂದ ಕಾರಣ, ದನವನ್ನು ತಪ್ಪಿಸುವ ಸಲುವಾಗಿ  ಕಿಶೋರ ರವರು ಕಾರನ್ನು ಎಡಕ್ಕೆ ತಿರುಗಿಸಿದ ಪರಿಣಾಮ ಕಾರು ಆತನ ಹತೋಟಿ ತಪ್ಪಿ ರಸ್ತೆಯ ಪಕ್ಕದ ಸಿಮೆಂಟ್ ಕಟ್ಟೆಯ ಮೇಲೆ ಚಲಿಸಿ ಮುಂದಕ್ಕೆ ಸಾಗಿ ರಸ್ತೆಯ ಬದಿಯಲ್ಲಿ  ಸೂಚನಾ ಫಲಕ ಹಾಕಿದ್ದ ಕಂಬಕ್ಕೆ ಡಿಕ್ಕಿ ಹೊಡೆದು ಮುಗುಚಿ ರಸ್ತೆಯ ಬದಿಗೆ ಬಿದ್ದಿದ್ದು, ಈ ಅಪಘಾತದ ಪರಿಣಾಮ ಪಿರ್ಯಾದಿದಾರರಿಗೆ ಬೆನ್ನಿಗೆ ಸೊಂಟಕ್ಕೆ  ಒಳ ಜಖಂ, ಎಡ ಕಿವಿಗೆ ಬಲಕೈಗೆ ರಕ್ತಗಾಯ, ಕಾಲಿಗೆ ಒಳ ಜಖಂ  ಆಗಿದ್ದು, ಕಾರನ್ನು ಚಲಾಯಿಸುತ್ತಿದ್ದ  ಕಿಶೋರನಿಗೆ ಎಡ ತೊಡೆಗೆ ಒಳ ಜಖಂ, ಮೈಕೈಗೆ ತರಚಿದ ಗಾಯವಾಗಿದ್ದು,, ಹಿಂಬದಿ ಸೀಟಿನಲ್ಲಿ ಕುಳಿತಿದ್ದ  ಪಿರ್ಯಾದಿದಾರರ ಹೆಂಡತಿ ಜಯಲಕ್ಷ್ಮೀ ರವರಿಗೆ,ಮುಖಕ್ಕೆ ರಕ್ತಗಾಯ, ಎಡಕಾಲಿಗೆ, ಸೊಂಟಕ್ಕೆ ಒಳ ಜಖಂ ಆಗಿದ್ದು, ಮಾವ ರಾಮ ಪೂಜಾರಿಯವರಿಗೆ ಎದೆಗೆ ಗುದ್ದಿದ ಜಖಂ ,ಬೆನ್ನಿಗೆ ಸೊಂಟಕ್ಕೆ ಒಳ ಜಖಂ , ತಲೆಗೆ ರಕ್ತಗಾಯ, ಬಲ ಕೈ ಜಖಂ ಆಗಿದ್ದು ಕಿಶೋರನ ಹೆಂಡತಿ ಅನುಷಾ ರವರಿಗೆ ಬೆನ್ನಿಗೆ, ಸೊಂಟಕ್ಕೆ ಒಳನೋವು, ಮುಖಕ್ಕೆ ರಕ್ತಗಾಯವಾಗಿರುತ್ತದೆ. ಗಾಯಾಳುಗಳನ್ನು ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿದ್ದು , ನಂತರ ಪಿರ್ಯಾದಿದಾರರ ಮಾವ ರಾಮ ಪೂಜಾರಿ ಹಾಗೂ ಹೆಂಡತಿ ಜಯಲಕ್ಷ್ಮೀ ರವರಿಗೆ ಪ್ರಥಮ ಚಿಕಿತ್ಸೆ ನೀಡಿ  ಹೆಚ್ಚಿನ ಚಿಕಿತ್ಸೆ ಬಗ್ಗೆ  ಮಣಿಪಾಲಕ್ಕೆ ಕಳುಹಿಸಿಕೊಟ್ಟಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 104/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹಿರಿಯಡ್ಕ: ದಿನಾಂಕ 29/05/2022 ರಂದು ಪಿರ್ಯಾದಿದಾರರಾದ ಆದಿತ್ಯ ಆಚಾರ್ಯ(25̧) ತಂದೆ: ಬಾಬುರಾಯ ಆಚಾರ್ಯ, ವಾಸ: ಜೋಡುಕಟ್ಟೆ, ಹಿರಿಯಡ್ಕ, ಬೊಮ್ಮರಬೆಟ್ಟು ಗ್ರಾಮ, ಉಡುಪಿ ತಾಲೂಕು ಇವರು ಸ್ನೇಹಿತರಾದ ಆಶೀಕ್ ಹಾಗೂ ಇತರರೊಂದಿಗೆ ಆಶಿಕ್ ನ ಅಕ್ಕನ ಮನೆಯಾದ ಪೆರ್ಡೂರಿಗೆ ತಂಬಿಲ ಊಟಕ್ಕೆ ಹೋಗಿ ವಾಪಾಸ್ಸು ಹಿರಿಯಡ್ಕಕ್ಕೆ ಬಂದು ಅಲ್ಲಿಂದ ಅವರವರ ಮೋಟಾರು ಸೈಕಲಿನಲ್ಲಿ ಮನೆಗೆ ಹೊರಟಿರುತ್ತಾರೆ. ಆಶಿಕನಿಗೆ ಜರ್ದಾ ತಿನ್ನುವ ಚಟ ಇದ್ದು ಹಿರಿಯಡ್ಕದಲ್ಲಿ ಅಂಗಡಿಗಳು ಮುಚ್ಚಿದ್ದುದರಿಂದ ಆತ್ರಾಡಿಯಲ್ಲಿ ಅಂಗಡಿ ಓಪನ್ ಇದ್ದರೆ ಜರ್ದಾ ತರುತ್ತೇನೆ ಎಂದು ಪಿರ್ಯಾದಿದಾರರಲ್ಲಿ ಹೇಳಿ ಅಲ್ಲಿಂದ ಹೊರಟು ಫಿಶ್ ಪಾಯಿಂಟ್ ಹೊಟೇಲ್ ಬಳಿ ಬರುತ್ತಿದ್ದಾಗ ರಾತ್ರಿ 11:50 ಗಂಟೆಗೆ ಒಂದು ಕಾರನ್ನು ಉಡುಪಿ ಕಡೆಯಿಂದ ಹಿರಿಯಡ್ಕ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲಾಯಿಸಿಕೊಂಡು ರಸ್ತೆಯ ತೀರಾ ಬಲಭಾಗಕ್ಕೆ ಬಂದು ಪಿರ್ಯಾದಿದಾರರ ಎದುರಿನಿಂದ ಹೋಗುತ್ತಿದ್ದ ಆಶಿಕ್ ನ ಮೋಟಾರು ಸೈಕಲಿಗೆ ಎದುರಿನಿಂದ ಢಿಕ್ಕಿ ಹೊಡೆದ ಪರಿಣಾಮ ಆಶಿಕ್ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಆತನಿಗೆ ಮುಖದ ಮೇಲೆ ರಕ್ತಗಾಯ, ಎಡಕೈಗೆ ಮೂಳೆ ಮುರಿತದ ಪೆಟ್ಟಾಗಿದ್ದು, ಎಡ ಬದಿಯ ಹಣೆಗೆ ಹಾಗೂ ದೇಹದ ಕೆಲವು ಭಾಗಗಳಿಗೆ ತರಚಿದ ರಕ್ತಗಾಯವಾಗಿದ್ದು, ಆತನನ್ನು ಚಿಕಿತ್ಸೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದಾಗಿದೆ. ಆಶೀಕ್ ನು ಸವಾರಿ ಮಾಡಿಕೊಂಡಿದ್ದ ಮೋಟಾರು ಸೈಕಲಿನ ನಂಬ್ರ KA-20-U-253 ಆಗಿದ್ದು, ಢಿಕ್ಕಿ ಹೊಡೆದ ಕಾರಿನ ನಂಬ್ರ  KA-19-C-8720 ಆಗಿರುತ್ತದೆ. ಕಾರಿನ ಚಾಲಕನ ಹೆಸರು ಜಮೀರ್ ಆಗಿರುತ್ತದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 28/2022    ಕಲಂ: 279. 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿದಾರರಾದ ಸುನೀತಾ (48), ತಂದೆ: ಕೃಷ್ಣ  ಪೂಜಾರಿ, ವಾಸ: ಜೆಡ್ಡು ಮನೆ, 41 ಶಿರೂರು , ಹರಿಖಂಡಿಗೆ ಇವರ  ಗಂಡ ಕೃಷ್ಣ ಪೂಜಾರಿ (50) ರವರು ಮೊದಲಿನಿಂದಲೂ  ವಿಪರೀತ ಕುಡಿತದ ಚಟವನ್ನು ಹೊಂದಿದ್ದು ಅಲ್ಲದೆ ಕೆಲವು ವರ್ಷಗಳಿಂದ ಬಲಗೈ ನೋವಿದ್ದು ಅಲ್ಲದೆ ಅವರು ವಿಪರೀತ  ಹಠದ ಸ್ವಾಭಾವದವರಾಗಿದ್ದು ಇದೇ ಕಾರಣದಿಂದ,  ಯಾವುದೋ ವೈಯಕ್ತಿಕ ಕಾರಣಗಳಿಂದ ಜೀವನದಲ್ಲಿ ಮನನೊಂದು ಜಿಗುಪ್ಸೆಗೊಂಡು ದಿನಾಂಕ 30/05/2022 ರಂದು ಬೆಳಿಗ್ಗೆ  11:30 ಗಂಟೆಯಿಂದ ಮಧ್ಯಾಹ್ನ 1:30 ಗಂಟೆಯ ಮಧ್ಯಾವಧಿಯಲ್ಲಿ ತನ್ನ ವಾಸದ ಮನೆಯ ಮಲಗುವ ಕೋಣೆಯ ಮರದ ಜಂತಿಗೆ ಸೀರೆಯ ಜರಿಯಿಂದ ಮಾಡಿದ ಹಗ್ಗವನ್ನು ಕಟ್ಟಿ ಇನ್ನೊಂದು ತುದಿಯಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 25/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತರ ಪ್ರಕರಣ

  • ಕಾಪು: ದಿನಾಂಕ 29/05/2022 ರಂದು ಬೆಳಗ್ಗೆ ಶ್ರೀಶೈಲ ಮುರಗೋಡ, ಪೊಲೀಸ್ ಉಪನಿರೀಕ್ಷಕರು, ಕಾಪು ಪೊಲೀಸ್ ಠಾಣೆ ಇವರು  ರೌಂಡ್ಸ್ ಕರ್ತವ್ಯದಲ್ಲಿರುವಾಗ ಉದ್ಯಾವರ ಗ್ರಾಮದ ಉದ್ಯಾವರ ಬಸ್‌ ನಿಲ್ದಾಣದ ಸಮೀಪ ಅನುಮಾನಾಸ್ಪದ ಓರ್ವ ವ್ಯಕ್ತಿ ಕಂಡು ಬಂದಿದ್ದು ಆತನು  ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿ ವಿಳಾಸ ತಿಳಿದುಕೊಳ್ಳಲಾಗಿ  ಆತನ ಹೆಸರು ಲಿಖಿತ್ (23), ತಂದೆ : ಸುರೇಶ ಪೂಜಾರಿ, ವಾಸ: ಗೌರವ ಹೋಮ್ ಗುಡ್ಡೆಯಂಗಡಿ ಉದ್ಯಾವರ ಗ್ರಾಮ ಉಡುಪಿ ತಾಲೂಕು, ಉಡುಪಿ ಜಿಲ್ಲೆ  ಎಂದು ತಿಳಿಸಿದ್ದು, ಆತನನ್ನು ವೈದ್ಯಕೀಯ ಪರೀಕ್ಷೆಯ ಬಗ್ಗೆ ಪ್ರೊಫೆಸರ್ ಅಂಡ್ ಹೆಡ್  ಕೆ.ಎಂ.ಸಿ ಪೊರೆನ್ಸಿಕ್ ವಿಭಾಗ ಮಣಿಪಾಲ ಇವರ  ಮುಂದೆ ಹಾಜರು ಪಡಿಸಿದ್ದು , ಪರೀಕ್ಷಿಸಿದ ವೈದ್ಯರು ದಿನಾಂಕ 30/05/2022 ರಂದು ಗಾಂಜಾ ಸೇವಿಸಿರುವ ಬಗ್ಗೆ ದೃಢ ಪತ್ರ ನೀಡಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 52/2022 ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.


ಇತ್ತೀಚಿನ ನವೀಕರಣ​ : 31-05-2022 09:40 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080