ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಕಾರ್ಕಳ: ದಿನಾಂಕ 30/05/2022 ರಂದು 20:00 ಗಂಟೆಗೆ ಕಾರ್ಕಳ ತಾಲೂಕು, ನಿಟ್ಟೆ ಗ್ರಾಮದ ಆನಂದ್ ಬಾರ್ ಬಳಿ ಹಾದು ಹೋಗುವ ಪರಪ್ಪಾಡಿ-ಬಾರಾಡಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಪಿರ್ಯಾದುದಾರರಾದ ಶೇಸಪ್ಪರವರು ಪರಪ್ಪಾಡಿ ಜಂಕ್ಷನ್ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿರುವಾಗ ಪರಪ್ಪಾಡಿ ಜಂಕ್ಷನ್ ಕಡೆಯಿಂದ ಬಾರಾಡಿ ಕಡೆಗೆ ಸ್ಕೂಟರ್ ನಂಬ್ರ KA20EE8556 ನೇಯದರ ಸವಾರನು ಸ್ಕೂಟರಿನ ಹೆಡ್ ಲೈಟನ್ನು ಹಾಕದೆ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ಡಾಮಾರು ರಸ್ತೆಗೆ ಬಿದ್ದಿದ್ದು, ಅಲ್ಲದೆ ಸ್ಕೂಟರ್ ಸವಾರನು ಕೂಡಾ ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದಿದ್ದು, ಅಪಘಾತದಿಂದ ಪಿರ್ಯಾದುದಾರರ ಎಡಕಾಲು, ಎಡಭುಜಕ್ಕೆ ಗುದ್ದಿದ ನೋವು ಹಾಗೂ ಹುಬ್ಬಿನ ಬಳಿ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 72/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕೋಟ: ಪಿರ್ಯಾದಿ ಸುರೇಂದ್ರ ಪೂಜಾರಿ ಇವರರು ಕುಂದಾಪುರದ ಬೇಕರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ 30/05/2022  ರಂದು ರಾತ್ರಿ ಕೆಲಸ ಇದ್ದುದರಿಂದ ತನ್ನ ಬಾಭ್ತು KA20.EX.7423 ನೇ ನಂಬ್ರದ ಮೋಟಾರು ಸೈಕಲ್ ನಲ್ಲಿ ತನ್ನ ಮನೆಯಾದ ಗುಂಡ್ಮಿಯಿಂದ  ಹೊರಟು ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹಾದು ಹೋಗುವ ಮುಖ್ಯ ರಾಹೆ 66 ರ ರಸ್ತೆಯಲ್ಲಿ ಕುಂದಾಪುರದ ಕಡೆಗೆ ಹೋಗುತ್ತಿರುವಾಗ ಬ್ರಹ್ಮಾವರ ತಾಲ್ಲೂಕು, ಮಣೂರು ಗ್ರಾಮದ ಮಳಲು ಸ್ವಾಮಿ ದೇವಸ್ಥಾನದ ಎದುರು ಸಮಯ ಸುಮಾರು ಸಂಜೆ 5:30 ಗಂಟೆಗೆ ಕರಕಲ್ ಕಟ್ಟೆ ಕಡೆಯಿಂದ KA20.AA.5157 ನೇ ನಂಬ್ರದ ಗೂಡ್ಸ ರಿಕ್ಷಾದ ಚಾಲಕ ಅಬ್ದುಲ್ ರಶೀದ್ ಎಂಬವನು ತನ್ನ ಗೂಡ್ಸ ರಿಕ್ಷಾವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಯಾವುದೇ ಸೂಚನೆ ನೀಡದೇ ಒಮ್ಮೇಲೆ ಮುಖ್ಯ ರಾಹೆ 66 ರ ರಸ್ತೆಗೆ ಬಂದು ಫಿರ್ಯಾದಿದಾರರ ಮೋಟಾರು ಸೈಕಲ್ ಎಡ ಬದಿಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು  ರಸ್ತೆಗೆ  ಬಿದ್ದಿದ್ದರಿಂದ ಫಿರ್ಯಾದಿದಾರರ ಎಡ ಕಾಲಿನ ಕೋಲು ಕಾಲು ಹಾಗೂ ಎಡ ಕೆನ್ನೆಯ ಬಳಿ  ತೀವ್ರ ತರದ  ರಕ್ತ ಗಾಯವಾಗಿದ್ದು  ಅವರನ್ನು  ಕೋಟೇಶ್ವರ ಎನ್.ಆರ್. ಆಚಾರ್ಯ  ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 74/2022 ಕಲಂ:279.338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿ ಶ್ರೀಧರ ದೇವಾಡಿಗ ಇವರು ದಿನಾಂಕ: 29/05/2022 ರಂದು ಕುಂದಾಪುರ ತಾಲ್ಲೂಕು, ತೆಕ್ಕಟ್ಟೆ ಗ್ರಾಮದ ಗಣೇಶ ವೈನ್ಸ್ ಎದುರು ಇರುವಾಗ ಸಂಜೆ ಸಮಯ ಸುಮಾರು 7:30 ಗಂಟೆಗೆ KA20EP.9170  ನೇ ಮೋಟಾರು ಸೈಕಲ್ ಸವಾರ ರವಿ ಎಂಬವನು ತನ್ನ ಮೋಟಾರು ಸೈಕಲ್ ನ್ನು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಹಾದು ಹೋಗುವ ಮುಖ್ಯ ರಾಹೆ 66 ರ ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಗಣೇಶ ವೈನ್ಸ್ ಎದುರು ರಾಹೆ 66 ರ ರಸ್ತೆಯ ಪೂರ್ವದ ಅಂಚಿನ ಬಳಿ ರಸ್ತೆ ದಾಟಲು ನಿಂತಿದ್ದ ನಾರಾಯಣ ದೇವಾಡಿಗ ಎಂಬರಿಗೆ ಡಿಕ್ಕಿ ಹೊಡೆದ ಪರಿಣಾಮ ನಾರಾಯಣ ದೇವಾಡಿಗರು ರಸ್ತೆಗೆ ಬಿದ್ದಿದ್ದರಿಂದ ಅವರ ತಲೆಯ ಹಿಂಭಾಗ ತೀವ್ರ ತರದ  ರಕ್ತ ಗಾಯವಾಗಿದ್ದು ಅವರನ್ನು ಕೋಟೇಶ್ವರ ಎನ್.ಆರ್. ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರ ಸೂಚನೆಯಂತೆ ನಂತರ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 75/2022 ಕಲಂ:279.338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 31-05-2022 05:46 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080