ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಸೌಮ್ಯ (30), ಗಂಡ: ಸುರೇಂದ್ರ , ವಾಸ : ಸಿಂಡಿಕೇಟ್‌ ಬ್ಯಾಂಕ್‌ ಬಳಿ ಪಿತ್ರೋಡಿ ಅಂಚೆ ಉದ್ಯಾವರ ಗ್ತಾಮ  ಉಡುಪಿ ತಾಲೂಕು ಇವರು ದಿನಾಂಕ 30/05/2021 ರಂದು ತನ್ನ ಅತ್ತೆ ವನಜ ರವರೊಂದಿಗೆ ಉದ್ಯಾವರ ಗ್ರಾಮದ ಬೋಳಾರಗುಡ್ಡೆಯಿಂದ ಪಿತ್ರೋಡಿ ಕಡೆಗೆ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಪಿತ್ರೋಡಿ ಸೇತುವೆ ಬಳಿ ಇರುವ ರಾಜ್‌ ಚಿಕನ್‌ಸ್ಟಾಲ್‌ ಬಳಿ ತಲುಪುತ್ತಿದ್ದಂತೆ ಬೆಳಿಗ್ಗೆ 11:30 ಗಂಟೆಗೆ ವಿಶ್ವನಾಥ್‌ ರವರು ತನ್ನ KA-20-AA-7935  ನೇ ಟೆಂಪೋವನ್ನು ಯಾವುದೇ ಸೂಚನೆ ನೀಡದೇ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಒಮ್ಮೇಲೆ  ಹಿಂದಕ್ಕೆ ಚಲಾಯಿಸಿ, ಪಿರ್ಯಾದಿದಾರರ ಅತ್ತೆ ವನಜರವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದಿದ್ದು,  ಪಿರ್ಯಾದಿದಾರರು ಉಪಚರಿಸಿ ನೋಡಲಾಗಿ ಅವರಿಗೆ ಎಡಕೈಯ ಕೋಲು ಕೈಗೆ ಗುದ್ದಿದ ನೋವು, ತಲೆಗೆ ರಕ್ತ ಗಾಯ ಮತ್ತು ಎಡಕಣ್ಣಿನ ಕೆಳಭಾಗದಲ್ಲಿ ತರಚಿದ ಗಾಯವಾಗಿದ್ದು,  ಅಲ್ಲಿ ಸೇರಿದ ಜನರ ಸಹಾಯದಿಂದ ಒಂದು ವಾಹನದಲ್ಲಿ  ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ಅಲ್ಲಿನ ವೈದ್ಯರು ಪಿರ್ಯಾದಿದಾರರ ಅತ್ತೆ ವನಜ ರವರಿಗೆ ಒಳರೋಗಿಯನ್ನಾಗಿ  ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 93/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 30/05/2021 ರಂದು ಪಿರ್ಯಾದಿದಾರರಾದ ರಾಜೇಶ್ ಪೂಜಾರಿ (37), ತಂದೆ: ಗೋಪಾಲ ಪೂಜಾರಿ, ವಾಸ: ಮಲ್ಲಿಕಾ ನಿಲಯ, ಚಕ್ಕುಲಿಕಟ್ಟೆ, ನರ್ನಾಡು, ಉಪ್ಪೂರು ಗ್ರಾಮ, ಬ್ರಹ್ಮಾವರ ತಾಲೂಕು ಇವರು ರಾಜೇಶ್ ಪೂಜಾರಿ (37) ರವರು ಅಗತ್ಯ ಬಾಡಿಗೆ ಬಗ್ಗೆ  ಅವರ ಟಾಟಾ ACE ವಾಹನದಲ್ಲಿ ಉಪ್ಪೂರು ಲಕ್ಷ್ಮೀನಗರ ದಿಂದ ಬೆಳ್ಮಾರು ಮಾರ್ಗವಾಗಿ ಆರೂರು ಕಡೆಗೆ ಹೋಗುತ್ತಿರುವಾಗ ಸಂಜೆ 5:15 ಗಂಟೆಗೆ ಊಪ್ಪೂರು ಗ್ರಾಮದ ನರ್ನಾಡು ಎಂಬಲ್ಲಿ ಅವರ ಎದುರಿನಿಂದ ಆರೂರು ಕಡೆಗೆ ವಿಶ್ವನಾಥ ಆಚಾರ್ಯ ಎಂಬುವವರು KA-20-ER-6497  ನೇ ಮೋಟಾರ್ ಸೈಕಲ್‌ನಲ್ಲಿ ಸವಾರಿ ಮಾಡುತ್ತಿದ್ದು, ಅದೇ ಸಮಯ ಅವರ ಎದುರಿನಿಂದ ಅಂದರೆ ಆರೂರುನಿಂದ ಲಕ್ಷ್ಮೀನಗರದ ಕಡೆಗೆ ಆರೋಪಿ ರೂಪೇಶ್ ರಾವ್ ಅವರ KA-20-U-3856 ನೇ ಮೋಟಾರ್ ಸೈಕಲ್‌ನಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲ ಭಾಗಕ್ಕೆ ಸವಾರಿಮಾಡಿಕೊಂಡು ಬಂದು ವಿಶ್ವನಾಥ ಆಚಾರ್ಯ ರವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್‌ಗೆ  ಡಿಕ್ಕಿಹೊಡೆದಿರುತ್ತಾರೆ. ಈ ಅಪಘಾತದಿಂದ ಎರಡೂ ಮೋಟಾರ್ ಸೈಕಲ್ ಸಮೇತ ಸವಾರರು ರಸ್ತಗೆ ಬಿದ್ದು  ಪರಿಣಾಮ ವಿಶ್ವನಾಥ ಆಚಾರ್ಯ ರವರ ಮುಖಕ್ಕೆ, ತಲೆಗೆ ತೀವ್ರ ರಕ್ತಗಾಯವಾಗಿದ್ದು ಹಾಗೂ ಆರೋಪಿ ರೂಪೇಶ್ ರಾವ್ ರವರ ಕಾಲು ಮತ್ತು ಕೈಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 103/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಮಂಜುಳಾ ಜೆ ನಾಯಕ್‌ (33), ಗಂಡ: ಜಗದೀಶ್‌ ನಾಯಕ್‌, ವಾಸ: ಜ್ಯೋತಿ ಸ್ಟೋರ್ಸ್, ಜೋಡುರಸ್ತೆ, ಕುಕ್ಕುಂದೂರು, ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರ ತಂದೆ ರಘುನಾಥ ಕಾಮತ್‌(64 ) ಎಂಬುವವರು ಉಡುಪಿಯ ನೂತನ್‌ ಸಿಲ್ಕ್ಸ್‌ ಎಂಬಲ್ಲಿ ಕೆಲಸ ಮಾಡಿಕೊಂಡಿದ್ದವರು ಲಾಕ್‌ಡೌನ್‌ ಕಾರಣ ಮನೆಯಲ್ಲಿಯೇ ಇದ್ದು, ತನಗೆ ಸರಿಯಾದ ಕೆಲಸ ಇಲ್ಲದೇ ಇರುವುದರಿಂದ ಅಲ್ಲದೇ ಅವರು ತನ್ನ ಸ್ವಂತ ದುಡಿಮೆಯಿಂದಲೇ ಜೀವನ ಸಾಗಿಸುವ ಇಚ್ಚೆ ಉಳ್ಳವರಾಗಿದ್ದು, ಆ ಕಾರಣದಿಂದಲೇ ತನ್ನ ತಂದೆ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 27/04/2021 ರಂದು ಬೆಳಿಗ್ಗೆ 08:30 ಗಂಟೆಯಿಂದ 10:00 ಗಂಟೆಯ ಮಧ್ಯಾವಧಿಯಲ್ಲಿ ಮನೆಯಿಂದ ಹೊರಗಡೆ ಹೋದವರು ಯಾವುದೋ ವಿಷ ಪದಾರ್ಥ ಸೇವಿಸಿ ಬಂದು ನರಳುತ್ತಿದ್ದವರನ್ನು ಉಡುಪಿಯ ಟಿ.ಎಂ.ಎ ಪೈ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದಾಗ ನನ್ನ ತಂದೆ ಚಿಕಿತ್ಸೆಯಲ್ಲಿರುತ್ತಾ, ಚಿಕಿತ್ಸೆ ಫಲಕಾರಿಯಾಗದೇ  ದಿನಾಂಕ 30/05/2021 ರಂದು ಬೆಳಿಗ್ಗೆ 09:00 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 22/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಕಾಪು: ಕೋವಿಡ್-19 ಕೋರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ  ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶ ಮತ್ತು ಮೇಲಾಧಿಕಾರಿಗಳ ಸೂಚನೆಯಂತೆ ಅನಗತ್ಯವಾಗಿ ಓಡಾಟ ನಿಷೇಧಿಸಿದ್ದು, ಈ ಬಗ್ಗೆ  ಪ್ರಕಾಶ್, ಪೊಲೀಸ್ ವೃತ್ತ ನಿರೀಕ್ಷಕರು, ಕಾಪು ವೃತ್ತ ಇವರು ಸಿಬ್ಬಂದಿಯವರೊಂದಿಗೆ ರೌಂಡ್ಸ್‌‌ ಕರ್ತವ್ಯದಲ್ಲಿರುವಾಗ  ಆದೇಶ ಉಲ್ಲಂಘಿಸಿ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದಾರೆ ಎಂಬುದಾಗಿ ದೊರೆತ ಮಾಹಿತಿ ಬಂದ ಮೇರೆಗೆ ಭಾರತ್‌‌ ನಗರಕ್ಕೆ ಹೋಗಿ ನೋಡಲಾಗಿ ಓರ್ವ ವ್ಯಕ್ತಿ ತವಕ್ಕಲ್ ಸ್ಟೋರ್ ಜನರಲ್ ಸ್ಟೋರ್‌ ತೆರೆದು ಗ್ರಾಹಕರಿಗೆ ವಸ್ತುಗಳನ್ನು ನೀಡುತ್ತಿದ್ದು , ಅಂಗಡಿಯಲ್ಲಿದ್ದವರ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ನಝೀರ್ (32), ತಂದೆ: ಉಮ್ಮರ್ ಸಾಬಾ,  ವಾಸ: ಆಸ್ಮಾ ಮಂಜಿಲ್, ಭಾರತ್‌‌ ನಗರ ಉಳಿಯಾರಗೋಳಿ ಗ್ರಾಮ ಕಾಪು ತಾಲೂಕು  ಎಂದು ತಿಳಿಸಿದ್ದು ತಾನು ತವಕ್ಕಲ್  ಸ್ಟೋರ್ ಎಂಬ ಅಂಗಡಿಯ ಮಾಲಿಕನಾಗಿದ್ದು ದಿನಾಂಕ 30/05/2021 ರಂದು ಸಂಜೆ 6:15 ಗಂಟೆಯವರೆಗೂ ಅಂಗಡಿಯನ್ನು ತೆರದಿಟ್ಟುಕೊಂಡು ಗ್ರಾಹಕರಿಗೆ ದಿನಸಿ ಸಾಮಾನುಗಳನ್ನುಕೊಟ್ಟು ಘನ ಕರ್ನಾಟಕ ಸರಕಾರವು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ ನಿಯಮ ಉಲ್ಲಂಘಿಸಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 94/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 30/05/2021 ರಂದು ತೇಜಸ್ವಿ ಟಿ, ಪೊಲೀಸ್ ಉಪನಿರೀಕ್ಷಕರು, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಇವರು ರೌಂಡ್ಸ್ ನಲ್ಲಿರುವಾಗ ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ಕೋವಿಡ್ ಕರ್ಪ್ಯೂ ವಿಧಿಸಿ ಆದೇಶ ಹೊರಡಿಸಿದ್ದು ಈ ಕರ್ಪ್ಯೂ ಜಾರಿಗೊಳಿಸುವ ಬಗ್ಗೆ ಪೋಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು ಈ ಸಮಯದಲ್ಲಿ ಅನಗತ್ಯವಾಗಿ ಸಾರ್ವಜನಿಕರ ಓಡಾಟಕ್ಕೆ ನಿಷೇಧ ಇದ್ದರೂ ಕೂಡಾ ಕಾರ್ಕಳ ತಾಲೂಕು ನೂರಾಳ್ ಬೆಟ್ಟು ಗ್ರಾಮದ ಕೂಡ್ಯ ಎಂಬಲ್ಲಿ ಇರುವ ಸಾರ್ವಜನಿಕ ಹಾಡಿಯಲ್ಲಿ ಗುಂಪು ಸೇರಿಕೊಂಡು ಕೋಳಿ ಅಂಕ ಆಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ದಾಳಿ ನಡೆಸಿ ಆಪಾದಿತ 1) ಶ್ರೀಧರ (39), ತಂದೆ:ಪೆರ್ಮು, ವಾಸ:ವರಿಮಾರು ನಾರಾವಿ ಅಂಚೆ ಮತ್ತು ಗ್ರಾಮ ಬೆಳ್ತಂಗಡಿ ಎಂಬಾತನನ್ನು ವಶಕ್ಕೆ ಪಡೆದಿದ್ದು, ಉಳಿದ ಮೂವರು ಸ್ಥಳದಿಂದ ಓಡಿ ಪರಾರಿ ಆಗಿರುತ್ತಾರೆ.  ಕೋಳಿ ಅಂಕಕ್ಕೆ ಬಳಸಿದ  ನಗದು ರೂಪಾಯಿ 610/-, ಕಪ್ಪು ಹಾಗೂ ಕಂದು ಮಿಶ್ರ ಬಣ್ಣದ ಮತ್ತು , ಕೆಂಪು,ಕಂದು ಹಾಗೂ ಬಿಳಿ ಮಿಶ್ರಿತ ಬಣ್ಣದ ಹುಂಜಾ ಕೋಳಿ-2, ಬಾಲು ಕತ್ತಿ-2 ಮತ್ತು ಕೋಳಿ ಕಾಲಿಗೆ ಕಟ್ಟಿದ ಹಗ್ಗ 2 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 65/2021   ಕಲಂ: 269 ಐಪಿಸಿ &   87 ,93 K P ACT ರಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 31-05-2021 09:37 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080