ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ರವಿ ವಿ ಸುವರ್ಣ ( 57), ತಂದೆ: ದಿ. ವಿಠೋಬ ಗುರಿಕಾರ, ವಾಸ: ವಿಜಯ ದರ್ಶ, ದಾಮೋದರ ತೋಟ, ವಿದ್ಯಾ ಪ್ರಬೋಧಿನಿ ಶಾಲೆಯ ಬಳಿ, ಎರ್ಮಾಳು ಬಡಾ ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಹಾಗೂ ಅವರ ಚಿಕ್ಕಪ್ಪ ಗೋಪಾಲ ಎ ಕರ್ಕೆರ (68)ಇವರು ದಿನಾಂಕ 30/03/2023 ರಂದು ಕಾಪು ತಾಲೂಕು ಬಡಾ ಗ್ರಾಮ ಉಚ್ಚಿಲದ ಮಹಾಲಕ್ಷ್ಮೀ ದೇವಸ್ಥಾನದ ಸತ್ಯನಾರಾಯಣ ಪೂಜೆಗೆಂದು ಹೋಗಿ ಪೂಜೆ ಮುಗಿಸಿ ವಾಪಾಸ್ಸು ಮನೆಗೆ ನಡೆದುಕೊಂಡು ಹೋಗುತ್ತಾ 14:00 ಗಂಟೆಗೆ ದೇವಸ್ಥಾನದ ಎದುರು ರಾಷ್ಟ್ರೀಯ ಹೆದ್ದಾರಿ-66 ರ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯ ಬದಿಯಲ್ಲಿ ನಿಂತಿರುವ KA-19-HB-6246 ನೇ ನಂಬ್ರದ ಸ್ಕೂಟರ್ ಸವಾರ ಜೈ ಪ್ರಕಾಶ್ ತನ್ನ ಸ್ಕೂಟಿಯನ್ನು ರಾಷ್ಟ್ರೀಯ ಹೆದ್ದಾರಿ-66 ರ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ರಸ್ತೆಯ ಬದಿಯಲ್ಲಿ ನಿಂತಿದ್ದ ಪಿರ್ಯಾದಿದಾರರ ಚಿಕ್ಕಪ್ಪ ಗೋಪಾಲ ಎ ಕರ್ಕೆರ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಗೋಪಾಲ ಎ ಕರ್ಕೆರ ರವರು ರಸ್ತೆಗೆ ಬಿದ್ದಿದ್ದು, ಸ್ಕೂಟಿಯ ಸವಾರ ಜೈ ಪ್ರಕಾಶ್ ಹಾಗೂ ಸಹ ಸವಾರ ಪರೀಶ್ ರವರೂ ಸಹ ಸ್ಕೂಟಿಯ ಸಮೇತ ರಸ್ತೆಗೆ ಬಿದ್ದಿರುತ್ತಾರೆ.  ಅಪಘಾತದಿಂದ ಗೋಪಾಲ ಎ ಕರ್ಕೆರ ರವರ ತಲೆಗೆ, ಕೈಗೆ, ಸೊಂಟಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿ ಮೂಗು ಮತ್ತು ಬಾಯಿಯಲ್ಲಿ ರಕ್ತ ಬಂದು ಪ್ರಜ್ಞಾಹೀನರಾಗಿದ್ದು, ಸ್ಕೂಟರ್ ಸವಾರ ಜೈ ಪ್ರಕಾಶ್‌‌ ನ ಮುಖಕ್ಕೆ, ಕೈ-ಕಾಲುಗಳಿಗೆ ಗಾಯಗಳಾಗಿದ್ದು, ಸಹ ಸವಾರ ಪರೀಶ್‌ ನಿಗೆ ಸಾಧಾರಣ ಸ್ವರೂಪದ ಗಾಯವಾಗಿರುತ್ತದೆ. ನಂತರ ಗಾಯಾಳುಗಳನ್ನು ಅಂಬುಲೆನ್ಸ್ ನಲ್ಲಿ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಗೋಪಾಲ ಎ ಕರ್ಕೆರ ಹಾಗೂ ಜೈ ಪ್ರಕಾಶ್ ರವರನ್ನು ಒಳರೋಗಿಗಳಾಗಿ ದಾಖಲಿಸಿದ್ದು, ಪರೀಶ್ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ. ನಂತರ ಚಿಕಿತ್ಸೆಯಲ್ಲಿದ್ದ ಗೋಪಾಲ ಎ ಕರ್ಕೆರ ರವರು ಚಿಕಿತ್ಸೆಗೆ ಸ್ಪಂದಿಸದೇ 18:40 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 41/2023, ಕಲಂ: 279, 337, 304(A)ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: : ದಿನಾಂಕ  29/03/2023 ರಂದು ರಾಮದಾಸ್ ಹೆಗ್ಡೆ ರವರು ಅವರ KA-20-ER-4636 ನೇ ದ್ವಿಚಕ್ರ ವಾಹನವನ್ನು  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಬೆಳಿಗ್ಗೆ 10:30 ಗಂಟೆಗೆ  ಹೆಬ್ರಿ ಗ್ರಾಮದ ಹೆಬ್ರಿ ಅನಂತಕೃಷ್ಣ ರೆಸಿಡೆನ್ಸಿ ಬಳಿ ತಲುಪುವಾಗ ದ್ವಿಚಕ್ರ ವಾಹನವನ್ನು ಒಮ್ಮೇಲೆ ತಿರುಗಿಸಿ ಬ್ರೇಕ್ ಹಾಕಿದ ಪರಿಣಾಮ ದ್ವಿಚಕ್ರ ವಾಹನವು ಆತನ ಹತೋಟಿ ತಪ್ಪಿ ಸ್ಕಿಡ್ ಆಗಿ ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದಿರುತ್ತಾರೆ ಪರಿಣಾಮ ಅವರ ತಲೆಯ ಎಡಭಾಗಕ್ಕೆ ತೀವ್ರ ಸ್ವರೂಪದ ಜಖಂ ಆಗಿರುವುದಲ್ಲದೇ ಎಡಕೈ ಮತ್ತು ಎಡಕಾಲಿಗೆ  ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 16/2023 ಕಲಂ: 279, 338 ಐಪಿಸಿಯಂಥೆ ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು: ಪಿರ್ಯಾದಿದಾರರಾದ ರಾಜು ಕುಲಾಲ (34), ತಂದೆ: ಕೊರಗು ಕುಲಾಲ, ವಾಸ:ಕೇಲಾಡಿ ಹಕ್ಲು ಮನೆ ಬೆಳ್ಳಾಲ  ಗ್ರಾಮ  ಕುಂದಾಪುರ  ತಾಲೂಕು ಉಡುಪಿ ಜಿಲ್ಲೆ ಇವರು  ದಿನಾಂಕ 29/03/2023 ರಂದು 19:30 ಗಂಟೆಗೆ ಹೂವಿನ ವ್ಯಾಪರ ಮುಗಿಸಿ KA-20-EK-7001 ಹೊಂಡಾ ಆ್ಯಕ್ಟಿವಾ ಮೋಟಾರು ಸೈಕಲ್‌ನ್ನು  ಕೆರಾಡಿಯಿಂದ  ಬೆಳ್ಳಾಲ ಕಡೆಗೆ ಕೆರಾಡಿ – ನೇರಳಕಟ್ಟೆ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದಾಗ ಕುಂದಾಪುರ  ತಾಲೂಕು  ಬೆಳ್ಳಾಲ  ಗ್ರಾಮದ  ಎರ್‌ಟೇಲ್‌ಟವರ್‌ ಬಳಿ ಪಿರ್ಯದಿದಾರರ ಎದುರಿನಿಂದ  ನೇರಳಕಟ್ಟೆ  ಕಡೆಯಿಂದ  ಕೆರಾಡಿ  ಕಡೆಗೆ  KA-20-EE-9972 ನೇ ಮೋಟಾರು ಸೈಕಲ್‌ನ್ನು  ಅದರ  ಸವಾರ ಆರೋಪಿ ಲೊಕೇಶ  ಹಿಂಬದಿ ಸಹಸವಾರರಾಗಿ ಜಯಲಕ್ಷ್ಮೀ ಯವರನ್ನು ಕುಳ್ಳಿರಿಸಿಕೊಂಡು ವೇಗವಾಗಿ ದುಡುಕಿನಿಂದ ತೀರ ಬಲಬದಿಗೆ  ಚಲಾಯಿಸಿ ಪಿರ್ಯಾದಿದಾರಾರ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್‌ಸವಾರರು ಮೋಟಾರು ಸೈಕಲ್‌ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ  ಕೈಗೆ ಭುಜಕ್ಕೆ, ತಲೆಗೆ, ಬಲ ಕಾಲಿನ ಮಣಿಗಂಟಿಗೆ ಗುದ್ದಿದ ಒಳ ಜಖುಂ ನೋವು ಉಂಟಾಗಿ ಕುಂದಾಪುರ ಸರಕಾರಿ ಆಸ್ಪತ್ರೆ ಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ದಾಖಲಾಗಿರುತ್ತಾರೆ. ಜಯಲಕ್ಷ್ಮೀ ಯವರಿಗೆ  ತಲೆಗೆ ರಕ್ತ ಗಾಯ ಎಡಕಾಲಿನ ಹೆಬ್ಬೆರಳು ಮತ್ತು ಬಲಕಾಲಿನ ಒಂದು ಬೆರಳಿಗೆ ಗುದ್ದಿದ ಒಳ ಜಖುಂ ಉಂಟಾಗಿದ್ದು ಹಾಗೂ ಆರೋಪಿ ಲೊಕೇಶಗೆ ಎಡ ಕೈಯ ಭುಜಕ್ಕೆ ಗುದ್ದಿದ ಒಳ ಜಖುಂ ಆಗಿದ್ದು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 19/2023 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾದ ಕೇತನ  (25), ತಂದೆ: ಕರುಣಾಕರ ಶೆಟ್ಟಿ, ವಾಸ: ಮನೆ ನಂ: 4-231 , ನಾಲ್ಕುದ್ರು ಬಾರ್ಕೂರು ಪೋಸ್ಟ್ಹನೇಹಳ್ಳಿ ಬ್ರಹ್ಮಾವರ ಉಡುಪಿ ಇವರು ದಿನಾಂಕ 28/03/2023 ರಂದು KA-20-EA-9741 ನೇಯ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಲ್ಲಿ ಹಿಂಬದಿಯ ಸವಾರನಾಗಿ ಪ್ರತೀಕ್ ರವರನ್ನು ಕುರಿಸಿಕೊಂಡು ಮಣ್ಣಪಳ್ಳ ರಸ್ತೆಯಲ್ಲಿ ಹೋಗುತ್ತಿರುವಾಗ ಬೆಳಿಗ್ಗೆ 08:20 ಕ್ಕೆ ಗಂಟೆಗೆ ಪಿರ್ಯಾದಿದಾರರ ಮುಂದುಗಡೆಯಿಂದ ಹೋಗುತ್ತಿದ್ದ LV 2021400370 ನಂಬ್ರದ ಇಲೇಕ್ಟ್ರಿಕಲ್ ಸ್ಕೂಟರ್ ನ ಸವಾರ ಯಾವುದೇ ಸೂಚನೆ ನೀಡದೆ ಏಕಾಎಕಿ ಬಲಕ್ಕೆ ಚಲಾಯಿಸಿದ ಪರಿಣಾಮ  ಪಿರ್ಯಾದಿದಾರರ ಮೋಟಾರ್ ಸೈಕಲ್  ಡಿಕ್ಕಿ ಹೊಡೆದಿದ್ದು ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ್ ರಸ್ತೆಗೆ ಬಿದ್ದಿದ್ದು ಎಡ ಕಾಲಿಗೆ ತೀವ್ರ ಸ್ವರೂಪದ ರಕ್ತಗಾಯವಾಗಿರುತ್ತದೆ, ನಂತರ ಪ್ರತೀಕ್ ರವರು ಪಿರ್ಯಾದಿದಾರರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲದ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 82/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ವಸಂತ ದೇವಾಡಿಗ (28), ತಂದೆ : ಗೋವಿಂದ ದೇವಾಡಿಗ, ವಾಸ:ಹೋಗಿ  ಹೊಳೆಮನೆ  ಕಂಬದಕೋಣೆ ಗ್ರಾಮ ಬೈಂದೂರು ತಾಲೂಕು ಇವರು  ರಿಕ್ಷಾ ಚಾಲಕರಾಗಿದ್ದು ದಿನಾಂಕ 28/03/2023 ರಂದು ಬಾಡಿಗೆ ನಿಮಿತ್ತ ಬಿಜೂರಿಗೆ ಬಂದಿದ್ದು ಅಲ್ಲಿಂದ ವಾಪಾಸು  ಕಂಬದಕೋಣೆಗೆ ಹೊಗಲು ಯು ಟರ್ನ್ ಬಳಿ ರಾಷ್ಟ್ರೀಯ ಹೆದ್ದಾರಿ-66 ಪಶ್ಚಿಮ ಬದಿಯಾ ರಸ್ತೆಯಲ್ಲಿ ನಿಲ್ಲಿಸಿಕೊಂಡಿರುವಾಗ ಕುಂದಾಪುರ ಕಡೆಯಿಂದ ಸವಾರರಾದ ಪ್ರವೀಣಾ ಹಾಗೂ ಹಿಂಬದಿ ಬಚ್ಚಿ ಎಂಬುವವರು ತಮ್ಮ ಸ್ಕೂಟರ್ ನಂಬ್ರ KA-20-EW-5609 ಟಿ.ವಿಎಸ್ ಜ್ಯೂಪಿಟರ್ ನೇದರಲ್ಲಿ ಬಂದು ಬಿಜೂರು ಯು ಟರ್ನ ಬಳಿ ಕುಂದಾಪುರ ಕಡೆಗೆ ಹೋಗಲು ಮೋಟರ್‌ ಸೈಕಲ್ ನ್ನು  ನಿಲ್ಲಿಸಿಕೊಂಡು ಬಲಬದಿಗೆ  ಚಲಾಯಿಸಲು ಇಂಡಿಕೇಟರ್ ಹಾಕಿ   ತಿರುಗಿಸುವ  ಸಮಯದಲ್ಲಿ ಸಂಜೆ 19:30 ಗಂಟೆಗೆ ಕುಂದಾಪುರ ಕಡೆಯಿಂದ ಸವಾರ ರಾಜೇಶ ಹಾಗೂ ಹಿಂಬದಿ‌ ಸವಾರ ಮಣೆಕಂಠ ಮೋಟಾರ್‌ ಸೈಕಲ್‌  ನಂಬ್ರ KA-47-U-9691 ಹಿರೋ ಸೂಪರ್ ಸ್ಲ್ಪೆಂಡರ್ ನೇದನ್ನು ಅತೀ ವೇಗ  ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ರಸ್ತೆಯ ತೀರ ಎಡಬದಿಗೆ ಚಲಾಯಿಸಿ  ರಸ್ತೆಯ ಬಲಬದಿಯಲ್ಲಿ ಯು ಟರ್ನ ಬಳಿ ಇಂಡಿಕೇಟರ್ ಹಾಕಿ ತಿರುಗಿಸಲು ನಿಂತು ಕೊಂಡಿದ್ದ ಸ್ಕೂಟರ್ ಗೆ  ಬಲಬದಿಗೆ ಡಿಕ್ಕಿ ಹೊಡೆದ ಪರಿಣಾಮ  ಸ್ಕೂಟರ್ ನಲ್ಲಿದ್ದ ಇಬ್ಬರು ಸವಾರರು ಹಾಗೂ  ಮೋಟಾರ್‌ ಸೈಕಲ್ ನಲ್ಲಿದ್ದ  ಇಬ್ಬರು ಸವಾರರು ರಸ್ತೆಗೆ ಬಿದ್ದು ಸ್ಕೂಟರ್ ಚಲಾಯಿಸುತ್ತಿದ್ದ ಪ್ರವೀಣಾ ರವರಿಗೆ ಬಲ ಹಾಗೂ ಎಡಕಾಲಿಗೆ  ರಕ್ತ ಗಾಯವಾಗಿ ಹಿಂಬದಿ ಸವಾರ  ಬಚ್ಚಿ ರವರಿಗೆ ಹಣೆಗೆ ರಕ್ತಗಾಯ  ಎಡಕಣ್ಣಿನ ಭಾಗಕ್ಕೆ ಹಾಗೂ ಬಲಕೈಗೆ ಜಖಂ   ಆಗಿರುತ್ತದೆ. ಮತ್ತು ಎಡಕಾಲಿಗೆ  ಸೊಂಟಕ್ಕೆ ಗುದ್ದಿದ ಒಳನೋವು  ಉಂಟಾಗಿರುತ್ತದೆ. ಅಪಘಾತ ಪಡಿಸಿದ ಮೋಟಾರ್‌ ಸೈಕಲ್ ಸವಾರ ರಾಜೇಶ್ ರವರಿಗೆ ಎಡಕೈಗೆ ಜಖಂ ಹಣೆಗೆ  ಒಳ ಜಖಂ  ಆಗಿರುತ್ತದೆ.  ಸಹಸವಾರನಾದ ಮಣೆಕಂಠ ರವರಿಗೆ  ಸಣ್ಣಪುಟ್ಟ ಗಾಯವಾಗಿರುತ್ತದೆ. ಪಿರ್ಯಾದಿದಾರರು ಹಾಗೂ ಇತರರು ಗಾಯಾಳುಗಳನ್ನು ಉಪಚರಿಸಿ ಚಿಕಿತ್ಸೆಯ ಬಗ್ಗೆ ಸ್ಥಳಕ್ಕೆ 108 ಅಂಬುಲೆನ್ಸ್ ವಾಹನವನ್ನು ತರಿಸಿ  ಬೈಂದೂರು ಸರಕಾರಿ ಆಸ್ಪತ್ರೆಗೆ ಕಳುಹಿಸಿ  ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿರುತ್ತಾರೆ.  ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 51/2023 ಕಲಂ: 279, 337  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ವರುಣ್ ಭಟ್ ಎಮ್ (31), ತಂದೆ: ನರಸಿಂಹ ಭಟ್,  ವಾಸ: ಶ್ರೀ ದುರ್ಗಾ ನಿವಾಸ ಕಲ್ಲಟ್ಟೆ ಬಜಗೊಳಿ ಅಂಚೆ,ಮುಡಾರು ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರ ತಂದೆ ನರಸಿಂಹ ಭಟ್ (67) ಇವರು ನಿವೃತ್ತ ಶಿಕ್ಷಕರಾಗಿದ್ದು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದು,  ದಿನಾಂಕ 30/03/2023 ರಂದು ಬೆಳಿಗ್ಗೆ 11:10 ಗಂಟೆಗೆ ಮನೆಯ ಸಮಿಪದ ತೋಟದ ಕೆರೆಯ ನೀರಿನ ಮಟ್ಟ ನೋಡಲು ಹೋದವರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿವರನ್ನು ಕೆರೆಯಿಂದ ಮೇಲಕ್ಕೆತ್ತಿ ಚಿಕಿತ್ಸೆಯ ಬಗ್ಗೆ ಬಜಗೊಳಿಯ ಆರೂರು ಕ್ಲಿನಿಕ್ ಗೆ ಕರೆತಂದು ಅಲ್ಲಿಯ ವೈದ್ಯರ ಮುಂದೆ ಹಾಜರು ಪಡಿಸಿದಲ್ಲಿ ವೈದ್ಯರು  ನರಸಿಂಹ ಭಟ್ ಅವರನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 21/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಆಶಾ (36), ಗಂಡ:ಉದಯ ಕುಮಾರ್, ವಾಸ: ಜಾರಿಗೆ ಕಟ್ಟೆ, ಮುಂಡ್ಕೂರು ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರ ಗಂಡ ಉದಯ ಕುಮಾರ್ (38) ಇವರು ಅನಾರೋಗ್ಯದಲ್ಲಿದ್ದ ತಮ್ಮ ತಂದೆಯವರ ಆರೈಕೆಯ ಬಗ್ಗೆ 15 ದಿನಗಳ ಹಿಂದೆ ತಂದೆಯ ಮನೆಯಾದ ಕಾಂತಾವರ ಗ್ರಾಮದ ಬೇಲಾಡಿ ಎಂಬಲ್ಲಿಗೆ ಹೋಗಿ, ಬೇಲಾಡಿಯಲ್ಲಿದ್ದು, ಪಿರ್ಯಾದಿದಾರರು ಪ್ರತಿ ದಿನ ಪೋನ್ ಕರೆ ಮಾಡಿ ಮಾತನಾಡುತ್ತಿದ್ದವರು ಕಳೆದ 8 ದಿನಗಳಿಂದ ಪಿರ್ಯಾದಿದಾರರ ಪೋನ್ ಕರೆಯನ್ನು ಸ್ವೀಕರಿಸದೆ ಇದ್ದುದನ್ನು ಕಂಡು ಪಿರ್ಯಾದಿದಾರರು ಬೇಲಾಡಿಗೆ ಹೋಗಿ ಗಂಡನ ಮನೆಯವರಲ್ಲಿ ವಿಚಾರಿಸಿದಾಗ, ಉದಯ ಕುಮಾರ್ ಇವರು ದಿನಾಂಕ 25/03/2023 ರಂದು ಮಧ್ಯಾಹ್ನ 2:00 ಗಂಟೆಗೆ ಕಾರ್ಕಳಕ್ಕೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವರು ಬೇಲಾಡಿಗೂ ಹೋಗದೇ, ಪಿರ್ಯಾದಿದಾರರ ಮನೆಗೆ ವಾಪಾಸು ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 44/2023 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.   

ಮಟ್ಕಾ ಜುಗಾರಿ ಪ್ರಕರಣ

  • ಕೋಟ: ದಿನಾಂಕ 30/03/2023 ರಂದು ಮಧು ಬಿ.ಇ,  ಪೊಲೀಸ್ ಉಪನಿರೀಕ್ಷಕರು (ಕಾನೂನು ಮತ್ತು ಸುವ್ಯವಸ್ಥೆ) , ಕೋಟ ಪೊಲೀಸ್ ಠಾಣೆ  ಇವರಿಗೆ  ಬ್ರಹ್ಮಾವರ ತಾಲೂಕು ಗುಂಡ್ಮಿ  ಗ್ರಾಮದ ಸಾಸ್ತಾನ ಪೇಟೆಯಲ್ಲಿರುವ ಗೂಡಂಗಡಿಯ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಮಾಹಿತಿ ಬಂದಂತೆ ದಾಳಿ ನಡೆಸಿ ಮಟ್ಕಾ ಜುಗಾರಿ ಆಟ ಆಡುತ್ತಿದ್ದ ವಿಶ್ವನಾಥ ದೇವಾಡಿಗ (40), ತಂದೆ:ಗೋಪಾಲ ದೇವಾಡಿಗ, ವಾಸ:ಹಾಡಿಕೆರೆ ಬೆಟ್ಟು ಕೋಟ ಗಿಳಿಯಾರು ಗ್ರಾಮ ಬ್ರಹ್ಮಾವರ ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ಅವನ ಬಳಿ ಜುಗಾರಿ ಆಟಕ್ಕೆ ಬಳಸಿದ ನಗದು ಒಟ್ಟು 1,500/- ರೂಪಾಯಿ ಹಾಗೂ ಮಟ್ಕಾ ಚೀಟಿ ಮತ್ತು ಆತನ ಶರ್ಟ ಕಿಸೆಯಲ್ಲಿ ಇದ್ದ ಬಾಲ್ ಪೆನ್ ಅನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 52/2023  ಕಲಂ: 78(1)(3) KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 31-03-2023 09:37 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080