ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ವಶ

  • ಹಿರಿಯಡ್ಕ: ದಿನಾಂಕ 31/03/2023 ರಂದು ಬೆಳಿಗ್ಗೆ 7 ಗಂಟೆಗೆ   ಪಿ.ಎಸ್‌.ಐ ಅನಿಲ್.ಬಿ.ಎಂ ರವರಿಗೆ  ಹಿರಿಯಡ್ಕ ಬಸ್ ನಿಲ್ದಾಣ ಬಳಿ ಒರ್ವ ವ್ಯಕ್ತಿ  ಪ್ಲಾಸ್ಟಿಕ್ ತೊಟ್ಟೆಯಲ್ಲಿ ಮಧ್ಯಪಾನವನ್ನು  ಮಾರಾಟ ಮಾಡುತ್ತಿರುವುದಾಗಿ  ಬಾತ್ಮಿದಾರರು ನೀಡಿದ  ಖಚಿತ ಮಾಹಿತಿಯಂತೆ ಸಿಬ್ಬಂದಿಯೊಂದಿಗೆ ಹಾಗೂ  ಪಂಚರ ಸಮಕ್ಷಮ ಬೆಳಿಗ್ಗೆ 7:30 ಗಂಟೆಗೆ ದಾಳಿ ನಡೆಸಿ ಹಿರಿಯಡ್ಕ ಬಸ್ ನಿಲ್ದಾಣ ಬಳಿ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಮಧ್ಯಪಾನ ಪ್ಯಾಕ್‌‌ಗಳನ್ನು  ತುಂಬಿಕೊಂಡು  ಮಾರಾಟ ಮಾಡುತ್ತಿದ್ದ ಮಹೇಂದ್ರ ಪ್ರಭು ಎಂಬಾತನನ್ನು  ವಶಕ್ಕೆ  ಪಡೆದು ಆತನ ಬಳಿ ಇದ್ದ Original Choice ವಿಸ್ಕಿಯ 90 ML ನ 12 ಟೆಟ್ರಾ ಪ್ಯಾಕ್‌ಗಳು, Jhon Bull ವಿಸ್ಕಿಯ 180 MLನ 8   ಪ್ಲಾಸ್ಟಿಕ್ ಬಾಟಲಿ ( ಒಟ್ಟು 2.52 ಲೀ ವಿಸ್ಕಿ ಅಂದಾಜು ಮೌಲ್ಯ 900 ರೂ) ,ವಿಸ್ಕಿ ಹಾಕಲಾಗಿದ್ದ ಪ್ಲಾಸ್ಟಿಕ್ ತೊಟ್ಟೆ, 300/- ರೂ ನಗದು ಹಣ, 1 ಮೊಬೈಲ್ ಫೋನ್‌‌ನ್ನು ಮಹಜರು ಮುಖೇನಾ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ  23/2023    ಕಲಂ 32, 34 KE Act ರಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಣಿಪಾಲ: ಪಿರ್ಯಾದಿ: ಶೃತಿ ಶೆಣೈ ಪ್ರಾಯ:50 ವರ್ಷ ಗಂಡ:ಪಿ ಗಣೇಶ್‌ ಶೆಣೈವಾಸ;1-43 ಶೆಣೈ ಹೌಸ್‌ ಕೆಳ ಪರ್ಕಳ  ಹೆರ್ಗಾ ಗ್ರಾಮ ಇವರ ತಂದೆ ಸದಾಶಿವ ಕಾಮತ್‌ ಎಂ  ಪ್ರಾಯ: 81 ವರ್ಷ ರವರಿಗೆ 3 ವರ್ಷದಿಂದ ಮಾನಸಿಕ ಖಾಯಿಲೆ ಇದ್ದು ಈ ಬಗ್ಗೆ ಬಾಳಿಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಇವರು ತನ್ನ ಮನೆಯಾದ ಮಣಿಪಾಲದ ಈಶ್ವರನಗರದಲ್ಲಿರುವ ಮಹೇಶ್ವರಿ ಆಪಾರ್ಟ್‌ ಮೆಂಟ್‌ ನ ರೂಮ್‌ ನಂಬರ್‌ 102 ರಲ್ಲಿ ವಾಸವಾಗಿದ್ದು ದಿನಾಂಕ: 30.03.2023 ರಂದು ಸಂಜೆ 07.10 ಗಂಟೆಯಿಂದ  ದಿನಾಂಕ 30.03.2023 ರಂದು ಸಂಜೆ 07.50  ಗಂಟೆಯ ನಡುವಿನ ಸಮಯದಲ್ಲಿ ಮಾನಸಿಕ ಖಾಯಿಲೆಗೆ ಒಳಗಾಗಿ ಅಥವಾ ಇನ್ನವುದಾದೋ ಕಾರಣದಿಂದ ಮಹೇಶ್ವರಿ ಆಪಾರ್ಟ್‌ ಮೆಂಟ್‌ ಬಾಲ್ಕಿನಿಯಿಂದ ಕೆಳಗೆ ಬಿದ್ದು  ಮೃತ ಪಟ್ಟಿರುವುದಾಗಿದೆ.  ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್‌‌ ನಂಬ್ರ 14/2023 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾರ್ಕಳ: ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ನಿವಾಸಿ ರಮೇಶ ಸಪಳಿಗ, ಪ್ರಾಯ 68 ವರ್ಷ, ಇವರು ಮುಂಬಾಯಿಯಲ್ಲಿ ಹೊಟೇಲು ಕೆಲಸ ಮಾಡಿಕೊಂಡಿದ್ದವರು, ವಿಪರೀತ ಮದ್ಯಪಾನ ಮಾಡುತ್ತಿದ್ದು, ತನ್ನ ತಮ್ಮನ ಆನಾರೋಗ್ಯದ ಬಗ್ಗೆ ಊರಿಗೆ ಬಂದು, ಊರಿನಲ್ಲಿದ್ದವರು, ಊರಿಗೆ ಬಂದ ಬಳಿಕ ವಿಪರೀತ ಮದ್ಯಪಾನ ಮಾಡಿ ಸಿಕ್ಕ, ಸಿಕ್ಕಲೆಲ್ಲಾ ಬಿದ್ದುಕೊಳ್ಳುತ್ತಿದ್ದವರು, ದಿನಾಂಕ 29/03/2023 ರಂದು ರಾತ್ರಿ 9:00 ಗಂಟೆಗೆ ತಮ್ಮ ಮನೆಯಿಂದ ಮದ್ಯಪಾನ ಮಾಡಲು ಮುಂಡ್ಕೂರಿಗೆ ನಡೆದುಕೊಂಡು ಹೋದವರು ವಾಪಾಸು ಮನೆಗೆ ಬಾರದೇ ಇದ್ದು, ರಮೇಶ ಸಪಳಿಗ ಇವರ ಮೃತ ದೇಹ ದಿನಾಂಕ 31/03/2023 ರಂದು ಬೆಳಗ್ಗೆ 10:30 ಗಂಟೆಗೆ ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ನಾಗಬನದ ಸಮೀಪ ಹರಿಯುವ ಶಾಂಭವಿ ಹೊಳೆಯಲ್ಲಿ ಪತ್ತೆಯಾಗಿರುತ್ತದೆ. ರಮೇಶ್ ಸಪಳಿಗ ಇವರು ವಿಪರೀತ ಮದ್ಯಪಾನ ಮಾಡುವ ಕುಡಿಯುವ ಚಟವನ್ನು ಹೊಂದಿದ್ದು, ಅವರು ಮದ್ಯಪಾನ ಸೇವನೆ ಮಾಡಿ ನಡೆದುಕೊಂಡು ವಾಪಾಸು ಮನೆ ಕಡೆಗೆ ಬರುತ್ತಿರುವಾಗ ಅಕಸ್ಮಿಕವಾಗಿ ಕಾಲು ಜಾರಿ ಶಾಂಭವಿ ಹೊಳೆಯಲ್ಲಿ ಬಿದ್ದು ಮೃತಪಟ್ಟಿರುವ ಸಾಧ್ಯತೆ ಇದ್ದು, ರಮೇಶ ಸಪಳಿಗ ಇವರ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲ. ಈ ಬಗ್ಗೆ ಯೋಗೀಶ್ ಸಫಳಿಗ, ಪ್ರಾಯ: 29 ವರ್ಷ ತಂದೆ: ರಮೇಶ್ ಸಫಳಿಗ  ವಾಸ: ಭಾಗೀ ನಿಲಯ, ತೋಡಿ ಕರ್ಮಾರ್ ಕಾಂಜರಕಟ್ಟೆ ಇನ್ನಾ ಗ್ರಾಮ, ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣಾ  ಯು,ಡಿ,ಆರ್ ನಂಬ್ರ: 22/2023 ಕಲಂ: 174 ಸಿ,ಆರ್,ಪಿ,ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 31-03-2023 06:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080