ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಹೆಬ್ರಿ: ಪಿರ್ಯಾದಿದಾರರಾದ ಪುಟ್ಟಸ್ವಾಮಿ ಇವರು KA.20.D.4892 ನೇ ಶ್ರೀ ಗಣೇಶ್ ಬಸ್ಸಿನಲ್ಲಿ ನಿರ್ವಾಹಕರಾಗಿದ್ದು. ದಿನಾಂಕ: 30/03/2022 ರಂದು ಸದ್ರಿ ಬಸ್ಸಿನಲ್ಲಿ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಶಿವಮೊಗ್ಗ –ಹೆಬ್ರಿ ಮಾರ್ಗವಾಗಿ ಉಡುಪಿ ಕಡೆಗೆ ಹೋಗುತ್ತಿದ್ದು. ಸದ್ರಿ ಬಸ್ಸು ಸಮಯ ಸುಮಾರು ಬೆಳಿಗ್ಗೆ 08-30 ಗಂಟೆಗೆ ಹೆಬ್ರಿ ಗ್ರಾಮದ ಕನ್ಯಾನ ಎಂಬಲ್ಲಿಗೆ ತಲುಪಿದಾಗ ಬಸ್ಸನ್ನು ಚಲಾಯಿಸುತ್ತಿದ್ದ ರಾಘುವೇಂದ್ರ ಇವರು ಬಸ್ಸನ್ನು ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿದ ಪರಿಣಾಮ ಬಸ್ಸು ಚಾಲಕನ ಹತೋಟಿ ತಪ್ಪಿ ರಸ್ತೆಯ ತೀರಾ ಎಡಬದಿಗೆ ಹೋಗಿ ಕಚ್ಚಾ ರಸ್ತೆಯ ಚರಂಡಿಯ ಬದಿಯಲ್ಲಿರುವ ಒಂದು ದೊಡ್ಡ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಮುಂದಿನ ಭಾಗವು ಜಖಂ ಅಗಿರುವುದಲ್ಲದೇ ಪಿರ್ಯಾದಿದಾರರಿಗೆ ಹಾಗೂ ಬಸ್ಸಿನಲ್ಲಿದ್ದ ಸುಮಾರು 10 ರಿಂದ 15 ಪ್ರಯಾಣಿಕರಿಗೆ  ನೋವಾಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  13/2022 ಕಲಂ:279, 337 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

 • ಕಾಪು: ಪಿರ್ಯಾದಿ ಜ್ಯೋತಿ ಇವರ ಮನೆಯ ಹತ್ತಿರ ಮಧ್ವ ಭಟ್ ರವರ ಮನೆಯಿದ್ದು, ಮಧ್ವ ಭಟ್ ಮತ್ತು ಪಿರ್ಯಾದಿದಾರರಿಗೆ ಕೆಲವು ವರ್ಷಗಳಿಂದ ವೈಮನಸ್ಸಿರುತ್ತದೆ.  ದಿನಾಂಕ 29.03.2022 ರಂದು ಸಮಯ ಸಂಜೆ 6.00  ಗಂಟೆಯ ಸಮಯಕ್ಕೆ ನೆರೆಮನೆಯ ಮಧ್ವ ಭಟ್ ರವರು ಪಿರ್ಯಾದಿದರರ ಜಾಗಕ್ಕೆ  ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಏಕಾಏಕಿ ಪಿರ್ಯಾದಿದಾರರ ಮೈಗೆ ಕೈ ಹಾಕಿ ಹಿಡಿದು ದೂಡಿದ್ದು, ಪಿರ್ಯಾದಿದಾರರು ಬಿದ್ದಿದ್ದು, ಆಗ ಆತ ಅಲ್ಲಿಯೇ ಇದ್ದ ಕೋಲಿನಿಂದ  ಪಿರ್ಯಾದಿದಾರರ ಎಡಕೈಗೆ ಹೊಡೆದಿದ್ದು, ಪರಿಣಾಮ ಎಡಕೈಗೆ ಗಾಯವಾಗಿದ್ದು, ಪಿರ್ಯಾದಿದಾರರು ಬೊಬ್ಬೆ ಹಾಕಿದ್ದು ಆಗ ಆತ ಇವತ್ತು ನಿನ್ನನ್ನು ಬಿಟ್ಟಿದ್ದೇನೆ, ಮುಂದಕ್ಕೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಸಿ ಕೋಲನ್ನು ಬಿಸಾಡಿ ಅಲ್ಲಿಂದ ಹೋಗಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  32/2022  ಕಲಂ: 447, 504, 354, 324, 506 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
 • ಅಜೆಕಾರು: ಪಿರ್ಯಾದಿ ಹರೀಶ್ ಬಿ ಅಂಚನ್  ಇವರು ದಿನಾಂಕ: 30/03/2022 ರಂದು ಮಧ್ಯಾಹ್ನ 3:45 ಗಂಟೆಯ ಸುಮಾರಿಗೆ ತನ್ನ ಬಾಬ್ತು  KA 20 P 1853 ನೇ ನಂಬ್ರದ ಓಮಿನಿ ವಾಹನವನ್ನು ತೊಳೆಯುವ ಸಲುವಾಗಿ ತನ್ನ ನೆರೆ-ಕರೆಯವರಾದ ಪ್ರತೀಕ್ ಹಾಗೂ ವಿಜಯ್ ಎಂಬುವವರೊಂದಿಗೆ ಮನೆಯ ಹತ್ತಿರದ ಸುವರ್ಣ ನದಿಗೆ ಹೋಗುತ್ತಿದ್ದ ಸಮಯ ಹಿಂದಿನಿಂದ ಕಡ್ತಲ ನಿವಾಸಿಯಾದ ಸುಮನ ಎಂಬುವವರು ತನ್ನ ಬಾಬ್ತು  KL 57 C 5491 ನೇ ನಂಬ್ರದ ಮರಳು ತುಂಬಿದ ಟಿಪ್ಪರ್ ವಾಹನವನ್ನು ಅತೀ ವೇಗ & ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಓಮಿನಿ ವಾಹನಕ್ಕೆ ಡಿಕ್ಕಿಪಡಿಸಿ ಮುಂದಕ್ಕೆ ಹೋಗಿದ್ದು, ಪಿರ್ಯಾದಿದಾರರು ವಾಹನದ ಚಾಲಕ ಸುಮನ್ ರವರಲ್ಲಿ ವಾಹನವನ್ನು ನಿಲ್ಲಿಸುವಂತೆ ತಿಳಿಸಿದ ಮೇರೆಗೆ ವಾಹನವನ್ನು ನಿಲ್ಲಿಸಿ ಪಿರ್ಯಾದಿದಾರರ ಬಳಿ ಬಂದು ಯಾಕೆ ವಾಹನವನ್ನು ಅಡ್ಡ ನಿಲ್ಲಿಸಿದ್ದು, ಅವಾಚ್ಯ ಶಬ್ದಗಳಿಂದ ಬೈದು ಏಕಾ-ಏಕಿ ಪಿರ್ಯಾದಿದಾರರ ಬಲ ಭುಜಕ್ಕೆ ಹಲ್ಲೆ ನಡೆಸಿ ಅಲ್ಲಿಂದ ತನ್ನ ವಾಹನವನ್ನು ತೆಗೆದುಕೊಂಡು ಹೋಗಿರುತ್ತಾನೆ. ಟಿಪ್ಪರ್ ವಾಹನವು ಪಿರ್ಯಾದಿದಾರರ ಓಮಿನಿ ವಾಹನಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಓಮಿನಿಯ ಎದುರುಗಡೆಯ ಬಂಪರ್ ಹಾಗೂ ಗ್ಲಾಸ್ ಜಖಂ ಆಗಿದ್ದು,  ಬಲಬದಿಯ ಡೋರ್ ಉಜ್ಜಿರುತ್ತದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  12/2022 ಕಲಂ 279,323,504  ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ. 

 

ಮನುಷ್ಯ ಕಾಣೆ ಪ್ರಕರಣ

 • ಕುಂದಾಪುರ: ಪಿರ್ಯಾದಿ ಗಿರಿಜಾ ಪೂಜಾರ್ತಿ ಇವರು ಅವರ ಮಗ 28 ವರ್ಷ ಪ್ರಾಯದ ವಿನಯ ಎಂಬುವವರೊಂದಿಗೆ ವಾಸಿಸುತ್ತಿದ್ದು  ದಿನಾಂಕ  28-03-2022 ರಂದು 08:30 ಗಂಟೆಗೆ ಪಿರ್ಯಾದುದಾರರು ಕೂಲಿ ಕೆಲಸಕ್ಕೆ ಮನೆಯಿಂದ ಹೋದಾಗ ವಿನಯ ಮನೆಯಲ್ಲಿ ಮಲಗಿಕೊಂಡಿದ್ದು ಆನಂತರ ಮದ್ಯಾಹ್ನ15:00 ಗಂಟೆಗೆ ಕೆಲಸ ಮುಗಿಸಿ ವಾಪಾಸು ಮನೆಗೆ ಬಂದಾಗ ವಿನಯ ಕಾಣದೇ ಇದ್ದು ರಾತ್ರಿ ವೇಳೆ ವಾಪಾಸು ಬರಬಹುದಾಗಿ ಪಿರ್ಯಾದುದಾರರು ಕಾಯುತ್ತಿದ್ದು  ವಿನಯರವರು ವಾಪಾಸು ಬಾರದೇ ಇದ್ದು ಈ ಬಗ್ಗೆ ನೆರೆಹೊರೆಯವರಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಲಾಗಿ  ವಿನಯರವರು ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 40/2022 ಕಲಂ: Man Missing ನಂತೆ ಪ್ರಕರಣ ದಾಖಲಾಗಿರುತ್ತದೆ. 

ಅಸ್ವಾಭಾವಿಕ ಮರಣ ಪ್ರಕರಣ

 • ಕಾಪು: ಪಿರ್ಯಾದಿ ಪಿ. ಕುಮಾರ ಇವರು ಏಣಗುಡ್ಡೆ ಗ್ರಾಮದ ಕಾರುಣ್ಯ ಆಶ್ರಯಧಾಮ ವೃದ್ಧಾಶ್ರಮದ ಅಧ್ಯಕ್ಷರಾಗಿದ್ದು ಸುಮಾರು 2 ವರ್ಷಗಳ ಹಿಂದೆ ಉಡುಪಿ ಸಹಾಯವಾಣಿಯವರು  ಅಣ್ಣಪ್ಪ ನಾಯಕ್ ಪ್ರಾಯ : 65 ವರ್ಷ ರವರನ್ನು ಕರೆದುಕೊಂಡು ಬಂದು ಪಿರ್ಯಾದಿದಾರರ ಆಶ್ರಮಕ್ಕೆ ಬಿಟ್ಟಿದ್ದು,  ಅಣ್ಣಪ್ಪ ನಾಯಕ್ ರವರಿಗೆ ವೀಪರಿತ ಶರಾಬು ಕುಡಿಯುವ ಅಭ್ಯಾಸವಿದ್ದು, ಆಶ್ರಮದಲ್ಲಿ ಶರಾಬು ಕುಡಿತ ಇಲ್ಲದೇ ಇದ್ದು, ಇದರಿಂದಾಗಿ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಅಲ್ಲದೇ ಅವರ ಆರೋಗ್ಯ ಇತ್ತೀಚೆಗೆ ಹದಗೆಟ್ಟಿದ್ದು, ಈ ಬಗ್ಗೆ ಚಿಕಿತ್ಸೆ ಕೊಡಿಸಿ ವೈದ್ಯರಿಂದ ಔಷಧಿ ತೆಗೆದುಕೊಂಡಿರುವುದಾಗಿದೆ. ದಿನಾಂಕ 29-03-2022 ರಂದು ಅಣ್ಣಪ್ಪ  ನಾಯಕ್ ರಾತ್ರಿ 8.00 ಗಂಟೆಯಿಂದ ದಿನಾಂಕ 30-03-2022 ರಂದು ಬೆಳಗ್ಗೆ 08.30 ಗಂಟೆಯ ಮಧ್ಯಾವಧಿಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಆಶ್ರಮ ಸಮೀಪ ಇರುವ ಬಾವಿಗೆ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 06/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಉಡುಪಿ  ತಾಲೂಕು  76 ಬಡಗುಬೆಟ್ಟು ಗ್ರಾಮದ  ಬಾಡಿಗೆ ಮನೆಯಲ್ಲಿ ವಾಸವಿದ್ದ ಫಿರ್ಯಾದಿ ಶ್ರೀಮತಿ ಶಶಿಕಲಾ ಇವರ ಮಗಳಾದ ಜಯಶ್ರೀ (41ವರ್ಷ) ರವರು  ಥೈರಾಯ್ಡ್‌  ಖಾಯಿಲೆಯಿಂದ ಬಳಲುತ್ತಿದ್ದು. ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಪಿರ್ಯಾದುದಾರರ  ಮಗಳಾದ ಜಯಶ್ರಿಗೆ ದಿನಾಂಕ:30/03/2022 ರಂದು ಮಧ್ಯಾಹ್ನ ಸುಮಾರು 2:30  ಗಂಟೆಯ ಸುಮಾರಿಗೆ  ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಉಡುಪಿಯ ಜಿಲ್ಲಾ ಆಸ್ಪತ್ರೆಗೆ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಸಾಯಂಕಾಲ ಸುಮಾರು 3:50 ಗಂಟೆಗೆ ದಾಖಲಿಸಿದ್ದು, ವೈದ್ಯರು ಪರೀಕ್ಷಿಸಿ ಜಯಶ್ರೀಯು ಆಸ್ಪತ್ರೆಗೆ ಕರೆ ತರುವಾಗಲೇ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 06/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 31-03-2022 12:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080