ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಮಣಿಪಾಲ: ಪಿರ್ಯಾದಿದಾರರಾದ ಚೇತನ್ ಸಿ ಕೆ ಪ್ರಾಯ: 30 ವರ್ಷ, ತಂದೆ: ಚಂದ್ರಶೇಖರ್ ವಾಸ: 7-195, ಕೆಳನೇಜಾರು,ನಿಡಂಬಳ್ಳಿ ರಸ್ತೆ, ಅಂಗನವಾಡಿ ಬಳಿ, ಮೂಡು ತೋನ್ಸೆ ಗ್ರಾಮ,ಕಲ್ಯಾಣಪುರ ಅಂಚೆ, ಉಡುಪಿ. ತಾಲೂಕು ಮತ್ತು ಜಿಲ್ಲೆ ಇವರು ದಿನಾಂಕ : 31/03/2022 ರಂದು ಬೆಳಿಗ್ಗೆ ಕೆಲಸಕ್ಕೆಂದು KA-20-EQ-6533 ನೇ Suzuki Access 125 Scooter ನಲ್ಲಿ ರಾಜೀವನಗರ ಮುಖಾಂತರ ಟ್ಯಾಪ್ಮಿ ರಸ್ತೆಯ ಇಳಿಜಾರು ಪ್ರದೇಶದಲ್ಲಿ ಶಾಂತಿನಗರ – ಹಿರೇಬೆಟ್ಟು ಮುಖ್ಯರಸ್ತೆಯಲ್ಲಿ ಸುಮಾರು 08:45 ಗಂಟೆಗೆ ಹೋಗುತ್ತಿರುವಾಗ ತಾಂಗೋಡಿ ಕ್ರಾಸ್ ಬಳಿ ಟ್ಯಾಪ್ಮಿ ಕಾಲೇಜು ಕಡೆಯಿಂದ ಶಾಂತಿನಗರ ಕಡೆಗೆ ಬರುತ್ತಿದ್ದ KA-20-AB-3846 ನೇ ಲಾರಿ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರ ಬಲ ಬದಿಗೆ ಚಲಾಯಿಸಿದ ಪರಿಣಾಮ ಲಾರಿಯ ಹಿಂಬದಿಯ ಚಕ್ರವು ಪಿರ್ಯಾದಿದಾರರ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ್ ರಸ್ತೆಗೆ ಬಿದ್ದು, ಅವರ ಎಡಕಾಲಿನ ಮೊಣಗಂಟುಬಳಿ ಗುದ್ದಿದ ಹಾಗೂ ಪರಚಿದ ಗಾಯವಾಗಿರುತ್ತದೆ ಹಾಗೂ ಸ್ಕೂಟರ್ ಜಖಂ ಗೊಂಡಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 49/2022 ಕಲಂ :279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಮೊಹಮ್ಮದ್ ಮುಸ್ತಾಫ್ ಪ್ರಾಯ:34 ವರ್ಷ, ತಂದೆ: ಎಂ ಅಬ್ಬಾಸ್ ವಾಸ: ಮಸೀದಿ ಬಳಿ, ಮರವಂತೆ ಮರವಂತೆ ಗ್ರಾಮ ಬೈಂದೂರು ತಾಲೂಕು ಇವರು ಬೈಂದೂರಿನ ಸೆಲ್ ಇನ್ ಟೌನ್ ಮೊಬೈಲ್ ಅಂಗಡಿಯಲ್ಲಿ ಸಂಬಂದಿ ತೌಸಿಫ್ ಅಹಮ್ಮದ್ ರವರ ಜೊತೆ ಯಲ್ಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ 30/03/2022 ರಂದು ಮೊಬೈಲ್ ಅಂಗಡಿ ಕೆಲಸ ಮುಗಿಸಿ ತೌಸಿಫ್ ಅಹಮ್ಮದ್ ರವರ ಮೋಟಾರು ಸೈಕಲ್ ನಂಬ್ರ KA-20-ET-0876 ನೇದರಲ್ಲಿ ಸಹ ಸವಾರರಾಗಿ ಕುಳಿತುಕೊಂಡು ಬೈಂದೂರಿನಿಂದ ರಾ ಹೆ 66 ರಲ್ಲಿ ಮರವಂತೆಯ ಮನೆಗೆ ಹೊರಟು, ಉಪ್ಪುಂದ ಗ್ರಾಮದ ಅಂಬಾಗಿಲು ಪ್ಲೈ ಓವರ್ ಮೇಲೆ ರಾ ಹೆ 66 ರ ರಲ್ಲಿ ಹೋಗುತ್ತಿರುವಾಗ ರಾತ್ರಿ 8:45 ಗಂಟೆಗೆ ಪಿರ್ಯಾದಿದಾರರ ಹಿಂದಿನಿಂದ KA-20-AA-3944 ನೇ ಈಚರ್ ವಾಹನ ಚಾಲಕನು ಆತನ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸಹ ಸವಾರರಾಗಿ ಕುಳಿತುಕೊಂಡಿದ್ದ ಮೋಟಾರು ಸೈಕಲ್ ನ್ನು ಓವರ್ ಟೇಕ್ ಮಾಡಿ, ನಿರ್ಲಕ್ಷತನದಿಂದ ಯಾವುದೇ ಸೂಚನೆ ನೀಡದೇ ಒಮ್ಮೇಲೆ ಎಡಕ್ಕೆ ಚಲಾಯಿಸಿ, ಮೋಟಾರ್ ಸೈಕಲ್ ಸವಾರ ತೌಸೀಪ್ ಅಹಮ್ಮದ್ ಅಂತರ ಕಾಯ್ದುಕೊಂಡಿದ್ದರೂ ಕೂಡಾ ಒಮ್ಮಲೇ ಈಚರ್ ವಾಹನವನ್ನು ನಿಲ್ಲಿಸಿದ ಪರಿಣಾಮ ತೌಸಿಪ್ ಅಹಮ್ಮದ್ ರವರು ಚಲಾಯಿಸುತ್ತಿದ್ದ ಮೋಟಾರು ಸೈಕಲ್ ಈಚರ್ ವಾಹನದ ಹಿಂಬದಿ ಬಲಭಾಗಕ್ಕೆ ಹೋಗಿ ಡಿಕ್ಕಿ ಹೊಡೆದಿದ್ದು, ಪರಿಣಾಮ ಪಿರ್ಯಾದಿದಾರರು ಹಾಗೂ ಮೋಟಾರು ಸೈಕಲ್ ಸವಾರ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರಿಗೆ ಎಡಕಾಲು ಮೂಳೆ ಮುರಿತ ಹಾಗೂ ಎರಡು ಭುಜ ಮತ್ತು ದವಡೆಗೆ ಗುದ್ದಿದ ನೋವು, ಮೋಟಾರು ಸೈಕಲ್ ಸವಾರ ತೌಸಿಪ್ ಅಹಮ್ಮದ್ ರವರಿಗೆ ಮೂಗಿನ ಕೆಳಗೆ, ಹೊಟ್ಟೆಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಗಾಯಗೊಂಡ ತೌಸೀಪ್ ಅಹಮ್ಮದ್ ರವರನ್ನು ಚಿಕಿತ್ಸೆಬಗ್ಗೆ ಮಣಿಪಾಲ ಕೆ.ಎಂ ಸಿ ಆಸ್ಪತ್ರೆಗೂ, ಪಿರ್ಯಾದಿದಾರರನ್ನು ಕುಂದಾಪುರ ಚಿನ್ಮಯಿ ಆಸ್ಪತ್ರೆಗೂ ಒಳರೋಗಿಯಾಗಿ ದಾಖಲಿಸಿರುತ್ತಾರೆ . ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 67/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 31/03/2022 ರಂದು KA-20-MD-7107ನೇ ನಂಬ್ರದ ಕಾರನ್ನುಬಲಾಯಿಪಾದೆ ಕಡೆಯಿಂದ ಅಂಬಲಪಾಡಿ ಕಡೆಗೆ ರಾ.ಹೆ 66 ರಲ್ಲಿ ಚಲಾಯಿಸಿಕೊಂಡು ಬಂದು ಅಂಬಲಪಾಡಿ ಗ್ರಾಮದ ಸ್ವಾಗತ ಗೋಪುರದ ಸ್ವಲ್ಪ ಮುಂದೆ ಹುಂಡೈ ಆಟೋ ಲ್ಯಾಂಡ್ ಕಂಪ್ಲೀಟ್ ಕಾರ್ ಕೇರ್ ಸೆಂಟರಿನ ಎದುರು ತಲುಪಿ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದು ಬೆಳಿಗ್ಗೆ 09:15 ಗಂಟೆಗೆ ಬಲಾಯಿಪಾದೆ ಕಡೆಯಿಂದ ಅಂಬಲಪಾಡಿ ಕಡೆಗೆ KA-20-AB-0156 ರಿಕ್ಷಾಚಾಲಕ ಮಹಮ್ಮದ್ ಶಾಕೀಬ್ ಎಂಬಾತ ತನ್ನ ರಿಕ್ಷಾವನ್ನು ಚಲಾಯಿಸಿಕೊಂಡು ಬಂದು KA-20-MD-7107ನೇ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಹಿಂಭಾಗ ಮತ್ತು ಆಟೋ ರಿಕ್ಷಾ ಜಖಂಗೊಂಡಿದ್ದು,ಆಟೋ ರಿಕ್ಷಾ ಚಾಲಕನ ಕಾಲಿಗೆ ಗಂಭೀರ ಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 31/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 31-03-2022 06:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080