ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಹಿರಿಯಡ್ಕ: ದಿನಾಂಕ 30/03/2021 ರಂದು ಪಿಯಾದಿದಾರರಾದ ಕಾರ್ತಿಕ್ ಎ.ಜೆ. (23), ತಂದೆ: ಜಯ, ವಾಸ: 2-19, ಆಚಾರಿ ಗುಂಡಿ ತೋಟ, ಅಂಬಲಪಾಡಿ ಗ್ರಾಮ, ಉಡುಪಿ ತಾಲೂಕು ಇವರು KA-20-ER-7036 ನೇ ಮೋಟಾರ್ ಸೈಕಲನ್ನು ಕಾರ್ಕಳದಿಂದ ಉಡುಪಿ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಾ13:00 ಗಂಟೆಗೆ ಆತ್ರಾಡಿ ಗ್ರಾಮದ ಮದಗ ಎಂಬಲ್ಲಿಗೆ ತಲುಪುವಾಗ ಉಡುಪಿ ಕಡೆಯಿಂದ ಹಿರಿಯಡ್ಕ ಕಡೆಗೆ KA-30-A-1841 ನೇ ಟಿಪ್ಪರ್ ಲಾರಿ ಚಾಲಕ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಟಿಪ್ಪರನ್ನು ಚಲಾಯಿಸಿಕೊಂಡು ತಿರುವಿನಲ್ಲಿ ತೀರಾ ಬಲಭಾಗಕ್ಕೆ ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದುದರಿಂದ ಪಿರ್ಯಾದಿದಾರರ ಬಲಕಾಲಿನ ಮೊಣಗಂಟಿಗೆ ರಕ್ತಗಾಯವಾಗಿದ್ದು, ಅಲ್ಲದೆ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ಜಖಂಗೊಂಡಿರುತ್ತದೆ. ಪಿರ್ಯಾದಿದಾರರನ್ನು ಟಿಪ್ಪರ್ ಲಾರಿ ಚಾಲಕ ಕೆಎಂಸಿ ಆಸ್ಪತ್ರೆ ಮಣಿಪಾಲಕ್ಕೆ ದಾಖಲಿಸಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 17/2021 ಕಲಂ: 279 , 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ಪಿರ್ಯಾದಿದಾರರಾದ ನಾಗರಾಜ (35), ತಂದೆ: ಕೃಷ್ಣ ಗಾಣಿಗ, ವಾಸ: ಗೋಪಾಲ ಕೃಷ್ಣ ನಿಲಯ ಹರೆಗೋಡು ಕಟ್ ಬೆಲ್ತೂರು ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 29/03/2021 ರಂದು ತನ್ನ ಟಿಪ್ಪರಿನಲ್ಲಿ ಜಲ್ಲಿ ತರಲೆಂದು ಸೈಬ್ರಕಟ್ಟೆ ತನ್ನ ಮನೆಯಿಂದ ಹೊರಟಿದ್ದು, ಪಿರ್ಯಾದಿದಾರರ ಜೊತೆಯಲ್ಲಿ ಪಿರ್ಯಾದಿದಾರರ ಟಿಪ್ಪರ್ KA-21-B-5592 ನೇದರಲ್ಲಿ  ಚಾಲಕ ಪ್ರದೀಪ ಕುಂದಾಪುರ ಕಡೆಯಿಂದ ಕೋಟ ಕಡೆಗೆ ಚಲಾಯಿಸಿಕೊಂಡು ಹೊರಟಿದ್ದು,  ಬೆಳಿಗ್ಗಿನ ಜಾವ 2:30 ಗಂಟೆಯ ಸಮಯಕ್ಕೆ NH 66 ರ ಮಣೂರು ಗ್ರಾಮದ ಇಂದ್ರಪ್ರಸ್ಥ ಹೋಟೆಲ್ ಎದುರು ಬರುತ್ತಿರುವಾಗ ಪಿರ್ಯಾದಿದಾರರ ಎದುರು ಹೋಗುತ್ತಿದ್ದ KA-21-B-5592 ಟಿಪ್ಪರ್ ಚಾಲಕ ಪ್ರದೀಪ ರಸ್ತೆಯ ಅರ್ಧದಲ್ಲಿ ನಿಲ್ಲಿಸಿದ್ದ ಕಂಟೈನರ್ ಲಾರಿ KA-20-D-4404ನೇದಕ್ಕೆ  ಹೋಗಿ ಹಿಂದಿನಿಂದ ಗುದ್ದಿರುತ್ತಾನೆ. ಪ್ರದೀಪನ ಹಿಂದಿನಿಂದ ಟಿಪ್ಪರ್ ಚಲಾಯಿಸಿಕೊಂಡು ಬರುತ್ತಿದ್ದ ಪಿರ್ಯಾದಿದಾರರು ಕೂಡಲೇ ಹೋಗಿ ನೋಡಿದಾಗ ಪ್ರದೀಪನ ಹೊಟ್ಟೆ ಎದೆಯ ಭಾಗ ಬಾಯಿಯ ಬಳಿ ಒಳ ಜಖಂ ಆಗಿರುವುದಾಗಿ ತಿಳಿಯಿತು.ಟಿಪ್ಪರ್ ನ ಎದುರು ಭಾಗ ಸಂಪೂರ್ಣ ಜಖಂ ಆಗಿದ್ದು,ಕಂಟೈನರ್ ಲಾರಿ ಚಾಲಕ ಸತೀಶನು ರಸ್ತೆಯ ಮಧ್ಯೆ ಲಾರಿಯನ್ನು ನಿಲ್ಲಿಸಿದ್ದು ಈ ಬಗ್ಗೆ ಯಾವುದೇ ಸೂಚನೆಯನ್ನು ನೀಡದೇ ,ಹಾಗೂ ವಾಹನ ನಿಲ್ಲಿಸುವ  ,ವಾಹನಗಳು ನಿಧಾನವಾಗಿ ಚಲಿಸುವ ಯಾವುದೇ ಸಂಚಾರಿ ಫಲಕವನ್ನು ಅಳವಡಿಸದಿರುವುದರಿಂದ ಹಾಗೂ ಯಾವುದೇ ಇಂಡಿಕೇಟರ್ ಹಾಕದೇ ಇರುವುದರಿಂದ ಪ್ರದೀಪನು ತಿಳಿಯದೇ ಕಂಟೈನರ್ ಗೆ ಹಿಂದಿನಿಂದ ಗುದ್ದಿರುತ್ತಾನೆ. ನಂತರ ಪ್ರದೀಪನನ್ನು ಪಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ಕುಂದಾಪುರ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಅಲ್ಲಿಂದ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 56/2021  ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ಸುದರ್ಶನ ಭೋಜ ಕೋಟ್ಯಾನ್ (32), ತಂದೆ: ದಿ. ಭೋಜ ಕೋಟ್ಯಾನ್, ವಾಸ: 1/54, ಚಿಕ್ಕಮ್ಮ ನಿಲಯ, ಸಾಲಿಕೇರಿ ಅಂಚೆ, ಹಾರಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಇವರ ತಾಯಿ ಉಷಾ ಬಿ. ಕೋಟ್ಯಾನ್(58) ಎಂಬುವವರು ದಿನಾಂಕ 16/03/2021ರಂದು ರಾತ್ರಿ 11:30 ಗಂಟೆಗೆ ಅಡುಗೆ ಮನೆಯಲ್ಲಿ ಗ್ಯಾಸ್ ಒಲೆಯ ಮೇಲೆ ಇರಿಸಿದ್ದ ಹಾಲಿನ ಪಾತ್ರೆಯನ್ನು ಕೆಳಗೆ ಇಳಿಸಲು ಗ್ಯಾಸ್ ಒಲೆಯ ಹತ್ತಿರ ಹೋದಾಗ ಅದರ ಬೆಂಕಿ ಆಕಸ್ಮಿಕವಾಗಿ ಅವರು ಧರಿಸಿದ್ದ ನೈಲಾನ್ ನೈಟಿಗೆ ತಾಗಿ ಬೆಂಕಿ ಹತ್ತಿಕೊಂಡಿದ್ದು, ಆ ಸಮಯದಲ್ಲಿ ಅವರು ಬೊಬ್ಬೆ ಹೊಡೆದಾಗ ಮನೆಯ ಹಾಲ್‌ನಲ್ಲಿದ್ದ ಅವರ ಮಗ ಪ್ರದೀಪ್ ಕೋಟ್ಯಾನ್ ರವರು ಬಂದು ಕೈಯಿಂದ ಬೆಂಕಿ ಆರಿಸಲು  ಪ್ರಯತ್ನಿಸಿದ್ದು, ಅಷ್ಟರೊಳಗೆ  ಉಷಾ ಬಿ. ಕೋಟ್ಯಾನ್ ರವರ ಹೊಟ್ಟೆಯ ಭಾಗದಿಂದ ಕುತ್ತಿಗೆಯ ತನಕ ಬೆನ್ನಿಗೆ ಹಾಗೂ ತೊಡೆಗೆ ಸುಟ್ಟ ಗಾಯವಾಗಿದ್ದು, ಅಲ್ಲದೇ ಬೆಂಕಿಯನ್ನು ನಂದಿಸಲು ಬಂದ ಪ್ರದೀಪ್ ಕೋಟ್ಯಾನ್ ರವರ ಕೈ, ಎದೆ, ಮುಖ ಸುಟ್ಟು ಗಾಯವಾಗಿರುತ್ತದೆ. ಗಾಯಗೊಂಡ ಇಬ್ಬರನ್ನೂ ಕೂಡ ಚಿಕಿತ್ಸೆಯ ಬಗ್ಗೆ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ದಿನಾಂಕ 17/03/2021 ರಂದು ವೈಧ್ಯರ ಸಲಹೆ ಮೇರೆಗೆ ಉಷಾ ಬಿ. ಕೋಟ್ಯಾನ್ ರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈಧ್ಯರು ಪರೀಕ್ಷಿಸಿ 56% ಸುಟ್ಟ ಗಾಯಗೊಂಡಿರುವ ಬಗ್ಗೆ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿಕೊಂಡಿದ್ದು, ದಿನಾಂಕ 30/03/2021 ರಂದು ಉಷಾ ಬಿ. ಕೋಟ್ಯಾನ್ ರವರು ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆಯಲ್ಲಿರುತ್ತಾ ಮಧ್ಯಾಹ್ನ 2:20 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಬಗ್ಗೆ ವೈಧ್ಯರು ತಿಳಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 21/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

 • ಕಾಪು: ದಿನಾಂಕ 30/03/2021 ರಂದು ಪಿರ್ಯಾದಿದಾರರಾದ ಸುಗುಣ (52), ಗಂಡ : ದಿ. ರಾಜು ಅಮೀನ್, ವಾಸ : ಪದ್ಮನಾಭ ನಿಲಯ ಹಳೆಯ ಹೈಸ್ಕೂಲ್ ಹತ್ತಿರ ಪಿತ್ರೋಡಿ  ಉದ್ಯಾವರ ಗ್ರಾಮ  ಉಡುಪಿ ತಾಲೂಕು ಇವರು ತಾಯಿ ಕಮಲ  ಮತ್ತು ಚಿಕ್ಕಮ್ಮ ಸುಂದರಿಯವರೊಂದಿಗೆ ಮನೆಯಲ್ಲಿ ಇರುವಾಗ ಬೆಳಗ್ಗೆ 09:30 ಗಂಟೆಗೆ ಪಿರ್ಯಾದಿದಾರರ ಜಾಗದಲ್ಲಿರುವ ಕಲ್ಲುಗಳನ್ನು ನೆರೆಮನೆಯ ನಿವಾಸಿ ಸರಸ್ವತಿ ಎಂಬುವವರು ಅವರ ಜಾಗದ ಕಡೆಗೆ ಹಾಕುತ್ತಿದ್ದು, ಅದನ್ನು ಪಿರ್ಯಾದಿದಾರರ ಚಿಕ್ಕಮ್ಮ ಸುಂದರಿಯವರು ಸರಸ್ವತಿಯವರಲ್ಲಿ ಕಲ್ಲುಗಳನ್ನು ನಾವು ತೆಗೆಯುತ್ತೇವೆ. ನೀವು ಮುಟ್ಟಬೇಡಿ ಎಂದು ಹೇಳಿದಾಗ ಸರಸ್ವತಿಯವರು ಸುಂದರಿಯವರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದು ಆಗ ಮನೆಯಲ್ಲಿದ್ದ ಪಿರ್ಯಾದಿದಾರರು ಪಿರ್ಯಾದಿದಾರರ ತಾಯಿ,  ಚಿಕ್ಕಮ್ಮ ಕಲ್ಲು ಇರಿಸಿದ ಜಾಗಕ್ಕೆ ಬಂದು ಕಲ್ಲು ತೆಗೆಯಬೇಡಿ ಎಂದು ಮೂರು ಜನ  ಹೇಳಿದ್ದು, ಸರಸ್ವತಿಯವರು ಅವರ ಮಾತನ್ನು ಕೇಳದೆ ಅವರಿಗೆ ಬೈಯುತ್ತಿದ್ದು ಅದೇ ಸಮಯಕ್ಕೆ ಸರಸ್ವತಿಯವರ ಮಗ ಅನುರಾಜ್ ತನ್ನ ಮನೆಯಿಂದ ಕೈಯಲ್ಲಿ ಕಬ್ಬಿಣದ ರಾಡ್‌ನ್ನು ಹಿಡಿದುಕೊಂಡು ಓಡಿ ಬಂದು ಪಿರ್ಯಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ  ಕೈಯಲ್ಲಿದ್ದ ರಾಡ್‌ನಿಂದ ಸುಂದರಿಯವರಿಗೆ ಬೀಸಿದಾಗ ಅಲ್ಲಿಯೇ ಇದ್ದ ಪಿರ್ಯಾದಿದಾರರ ತಾಯಿ ಕಮಲ ರವರ ಬಲಕೈಯ ಮಣಿ ಗಂಟಿಗೆ ತಾಗಿದ್ದು ಪರಿಣಾಮ ಪಿರ್ಯಾದಿದಾರರ ತಾಯಿ ಅಲ್ಲಿಯೇ ಕುಸಿದು  ಬಿದ್ದು ಇದರಿಂದ ಬಲಕೈಯ  ಮಣಗಂಟಿಗೆ ಗಾಯವಾಗಿದ್ದು ಬಿದ್ದ ಪರಿಣಾಮ ಸೊಂಟ ಮತ್ತು ಕಾಲುಗಳಿಗೆ ನೋವುಂಟಾಗಿರುತ್ತದೆ, ಪಿರ್ಯಾದಿದಾರರು ಬೊಬ್ಬೆ ಹಾಕಿದ್ದು ಆಗ ಸರಸ್ವತಿ ಮತ್ತು ಅನುರಾಜ ಕೈಯಲ್ಲಿ ಇದ್ದ ಕಬ್ಬಿಣದ ರಾಡನ್ನು ಹಿಡಿದುಕೊಂಡು ಹೋಗುವಾಗ ಜೀವ ಸಹಿತ ಬಿಡುವುದಿಲ್ಲ ಎಂದು ಹೇಳಿ ಹೋಗಿರುವುದಾಗಿ ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 49/2021 ಕಲಂ: 447, 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 31-03-2021 09:41 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080