ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾಧ ಗೀತಾ ಉಮೇಶ್ ಪೂಜಾರಿ (40) ಗಂಡ: ಉಮೇಶ್ ಪೂಜಾರಿ ವಾಸ: “ಪೂಜಾಫಲ”, ಇಂದಿರನಗರ, ವಾರಂಬಳ್ಳಿ, ಬ್ರಹ್ಮಾವರ ಇವರ ಅಣ್ಣನಾದ ರಮೇಶ್ ಪೂಜಾರಿ (44) ರವರು ಬೆಂಗಳೂರಿನ ಐಡಿಯಲ್‌ ಏಕ್ಸ್‌ಪ್ರೆಸ್ ಕಾರ್ಗೋ ಕಂಪೆನಿಯ ಬುಕ್ಕಿಂಗ್‌ ವಿಭಾಗದಲ್ಲಿ ಕೆಲಸ  ಮಾಡಿಕೊಂಡಿದ್ದು ದಿನಾಂಕ 30/03/2021 ರಂದು ರಾತ್ರಿ 8:30 ಗಂಟೆಗೆ ಗೀತಾ ಉಮೇಶ್ ಪೂಜಾರಿ ರವರಿಗೆ ಕರೆಮಾಡಿ ತನಗೆ ರಕ್ತ ವಾಂತಿಯಾಗುತ್ತಿರುವುದಾಗಿ ಹೇಳಿದ್ದು ಗೀತಾ ಉಮೇಶ್ ಪೂಜಾರಿ ರವರು ಬೆಂಗಳೂರಿನಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುವಂತೆ ತಿಳಿಸಿರುತ್ತಾರೆ. ಗೀತಾ ಉಮೇಶ್ ಪೂಜಾರಿ ರವರ ಅಣ್ಣನು ದಿನಾಂಕ 30/03/2021 ರಂದು ಬೆಂಗಳೂರಿನಿಂದ ಕಂಪೆನಿಯ ಕಾರ್ಗೋ ಲಾರಿಯಲ್ಲಿ ಹೊರಟು, ಬೆಳಿಗ್ಗೆ  9:15 ಗಂಟೆಯ ಸುಮಾರಿಗೆ  ಉಡುಪಿಯ ಗುಂಡಿಬೈಲಿನ ವಿಜಯತಾರಾ ಹೋಟೆಲಿನ ಎದುರಿಗಿರುವ ಗೋಡೌನ್‌ ತಲುಪುವಾಗ ತೀವ್ರ  ಅಸ್ವಸ್ಥನಾದವನನ್ನು ಕೂಡಲೇ ಚಿಕಿತ್ಸೆಯ ಬಗ್ಗೆ ಲಾರಿ ಚಾಲಕ ಉಡುಪಿಯ ಆದರ್ಶ ಆಸ್ಪತ್ರೆಗೆ  ಕರೆ ತಂದಿದ್ದು,  ಪರೀಕ್ಷಿಸಿದ ವೈದ್ಯರು ರಮೇಶ ಪೂಜಾರಿಯವರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 14/2021 ಕಲಂ 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾಧ ರಂಗ(55) ತಂದೆ:ಅಂಗಾರ ವಾಸ: ಸಿದ್ಧಾರ್ಥ ನಗರ,ಅಲೆವೂರು ಮಂಚಿ, ಅಲೆವೂರು ಗ್ರಾಮ ಉಡುಪಿ ತಾಲೂಕು ಇವರು SLRM  80 ಬಡಗಬೆಟ್ಟು ಗ್ರಾಮದ ಕಸ ನಿರ್ವಹಣಾ ಘಟಕದಲ್ಲಿ ಸ್ವಚ್ಚ ಕರ್ಮಿಯಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 30/03/2021 ರಂದು 17:30 ಗಂಟೆಗೆ ಇತರೆ 5 ಜನ ಕಾರ್ಮಿಕರೊಂದಿಗೆ KA-20-AA-9527 ವಾಹನದಲ್ಲಿ ಕಸ ತುಂಬಿಸಿಕೊಂಡು ಟ್ಯಾಪ್ಮಿ ರಸ್ತೆಯಿಂದಾಗಿ ನೇತಾಜಿನಗರ ತಲುಪಿದಾಗ ನೇತಾಜಿನಗರದ ಗಣೇಶ್ ಎಂಬಾತನು ಆತನ KA-20-R-1199 ನೇ ಮೋಟಾರು ಸೈಕಲನ್ನು ರಂಗ ರವರು ಹೋಗುತ್ತಿದ್ದ ವಾಹನಕ್ಕೆ ಅಡ್ಡವಾಗಿ ನಿಲ್ಲಿಸಿ ವಾಹನದಲ್ಲಿದ್ದ 6 ಜನ ಸ್ವಚ್ಚತಾ ಕಾರ್ಮಿಕರನ್ನು ವಾಹನದಿಂದ ಕೆಳಗಿಳಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೆ ಕಲ್ಲಿನಿಂದ ರಂಗ ಹಾಗು ಸಂತೋಷ್ ಎಂಬವರಿಗೆ ಹೊಡೆದು ಇನ್ನು ಮುಂದೆ ಈ ರಸ್ತೆಯಲ್ಲಿ ಕಸ ತೆಗೆದುಕೊಂಡು ಬಂದರೆ ನಿಮ್ಮನ್ನೆಲ್ಲ ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಒಡ್ಡಿದ್ದಾಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 42/2021 ಕಲಂ: 341, 324, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 31-03-2021 06:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080