ಅಭಿಪ್ರಾಯ / ಸಲಹೆಗಳು

ಕೊಲೆ ಪ್ರಕರಣ

  • ಕಾರ್ಕಳ: ಕಾರ್ಕಳ ತಾಲೂಕು ಮುಡಾರು ಗ್ರಾಮದ ಮುಡ್ರಾಲು ಎಂಬಲ್ಲಿ ಇರುವ ಶ್ರೀದೇವಿ ಕ್ಯಾಶ್ಯೂ ಫ್ಯಾಕ್ಟರಿಗೆ ಪ್ರತಿವರ್ಷ ತಮಿಳುನಾಡಿನಿಂದ ಗೇರು ಬೀಜ ಲೋಡ್ ಬರುತ್ತಿದ್ದು ಅವರುಗಳು ಲಾರಿಯಲ್ಲಿ ಅನ್‌ಲೋಡ್ ಮಾಡಿ ಹೋಗುತ್ತಿದ್ದು ಅದರಂತೆ ದಿನಾಂಕ 30/01/2023 ರಂದು ಸಂಜೆ 4:00 ಗಂಟೆಗೆ ಗೇರುಬೀಜದ ಲೋಡ್ ಇರುವ ಲಾರಿಗಳು ಬಂದಿದ್ದು ಅವರುಗಳು ಅನ್ ಲೋಡ್ ಮಾಡಿ ಹೋಗಿದ್ದು ಇನ್ನೆರಡು ಲಾರಿಗಳು ಸಂಜೆ 05:30 ಗಂಟೆಗೆ ಬಂದಿದ್ದು ತಡವಾದ್ದರಿಂದ ಲಾರಿಯು ಅನ್‌ಲೋಡ್ ಆಗದೇ ಫ್ಯಾಕ್ಟರಿಯ ಬಳಿ ನಿಂತುಕೊಂಡಿದ್ದು ಲಾರಿಗಳ ಚಾಲಕ ಹಾಗೂ ಬದಲಿ ಚಾಲಕರುಗಳು ಕೂಡಾ ಅಲ್ಲಿಯೇ ಇದ್ದು ರಾತ್ರಿ 8:30 ಗಂಟೆಗೆ ಪಿರ್ಯಾದಿದಾರರಾದ ಪ್ರವೀಣ್ ಪೂಜಾರಿ (22),  ತಂದೆ: ಜಯ ಪೂಜಾರಿ, ವಾಸ: ಸುಮ್ಮ ಬನದ ಹತ್ತಿರ, ಬನತಪಲ್ಕೆ, ಅಂಗರಬೆಟ್ಟು, ಪಾಜಿನಡ್ಕ, ಬಜಗೊಳಿ ಅಂಚೆ ಮುಡಾರು ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆಇವರು  ಫ್ಯಾಕ್ಟರಿಯ ಮೇಲ್ಗಡೆ ಕೆಲಸ ಮಾಡುತ್ತಿರುವಾಗ ಲಾರಿ ನಿಲ್ಲಿಸಿದ ಸ್ಥಳದಿಂದ ಜೋರಾಗಿ ಬೊಬ್ಬೆ ಕೇಳಿದಾಗ ಅಲ್ಲಿಗೆ ಹೋಗಿ ನೋಡಿದಾಗ TN-69-BE-7279 ನೇ ನಂಬ್ರದ ಲಾರಿಯ ಚಾಲಕ ಮಣಿ ತಮಿಳುನಾಡು (36) ಎಂಬಾತನನ್ನು ಲಾರಿಯ ಎದುರುಗಡೆ ಆತನ ಕುತ್ತಿಗೆಗೆ ನೀಲಿ ಬಣ್ಣದ ಶಾಲ್ ನಿಂದ ಕುತ್ತಿಗೆಗೆ ಬಿಗಿದು ಎಡ ಕಾಲರ್ ಬೋನ್ ನ ಬಳಿ ಯಾವುದೋ ಆಯುಧದಿಂದ ಇರಿದು ಗಾಯಗೊಳಿಸಿ ಕೊಲೆ ಮಾಡಿರುವುದು ಕಂಡುಬಂದಿದ್ದು,  ಲಾರಿಯ ಇನ್ನೋರ್ವ ಚಾಲಕ ವೀರಬಾಹು ಹಾಗೂ ಮೃತ ಮಣಿ ಗಲಾಟೆ ಮಾಡಿಕೊಳ್ಳುತ್ತಿದ್ದು ಯಾವುದೋ ಕಾರಣದಿಂದ ಲಾರಿಯ ಇನ್ನೋರ್ವ ಚಾಲಕ ವೀರಬಾಹು ಮಣಿಯನ್ನು ಕೊಲೆ ಮಾಡಿರುವ ಬಗ್ಗೆ ಸಂಶಯ ಇರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 11/2023 ಕಲಂ: 302 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಕೊಲ್ಲೂರು: ದಿನಾಂಕ 30/01/2023 ರಂದು ಮಹೇಶ ಕಂಬಿ, ಪೊಲೀಸ್‌ ಉಪನಿರೀಕ್ಷಕರು(ಪ್ರಭಾರ), ಕೊಲ್ಲೂರು ಪೊಲೀಸ್‌ ಠಾಣೆ ಇವರಿಗೆ  ಬೈಂದೂರು ತಾಲೂಕು ಮುದೂರು ಗ್ರಾಮದ ಮುದೂರು ಮೈದಾನ  ಬಳಿ ಓರ್ವ ವ್ಯಕ್ತಿ ಗಾಂಜಾ ಸೇವನೆ ಮಾಡುತ್ತಿರುವುದಾಗಿ ಬಂದ ಮಾಹಿತಿಯಂತೆ ಸ್ಥಳಕ್ಕೆ ಹೋದಾಗ ಅಲ್ಲಿ ಒಬ್ಬ ವ್ಯಕ್ತಿಯು  ಅಮಲಿನಲ್ಲಿ ರುವುದು ಕಂಡುಬಂದಿದ್ದು, ಆತನನ್ನು   ಸೂಕ್ಷ್ಮವಾಗಿ ಪರಿಶೀಲಿಸಿದಾಗ ಆತನು  ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ  ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದ್ದು ರೆನ್ಸ್‌ (28)ಎಂಬುದಾಗಿ ತಿಳಿಸಿರುತ್ತಾನೆ.  ಆತನನ್ನು ವೈದ್ಯಕೀಯ ತಪಾಸಣೆ ಬಗ್ಗೆ  ಕುಂದಾಪುರ ಶ್ರೀಮಾತಾ ಆಸ್ಪತ್ರೆಯ ವೈಧ್ಯಾಧಿಕಾರಿ ರವರ  ಮುಂದೆ ಹಾಜರುಪಡಿಸಿದ್ದು,   ಆತನನ್ನು  ಪರೀಕ್ಷಿಸಿದ ವೈದ್ಯರು ಆತನು ಗಾಂಜಾ ಸೇವಿಸಿರುವುದು ದೃಢಪಟ್ಟಿರುವುದಾಗಿ ವರದಿ ನೀಡಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 02/2023 ಕಲಂ: 27(B)   NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು: ದಿನಾಂಕ 30/01/ 2023 ರಂದು ಮಹೇಶ ಕಂಬಿ, ಪೊಲೀಸ್‌ ಉಪನಿರೀಕ್ಷಕರು(ಪ್ರಭಾರ), ಕೊಲ್ಲೂರು ಪೊಲೀಸ್‌ ಠಾಣೆ ಇವರಿಗೆ  ಮುದೂರು ಉದಯನಗರ ಬಳಿ ಓರ್ವ ವ್ಯಕ್ತಿ ಕುಳಿತು ಗಾಂಜಾ ಸೇವನೆ ಮಾಡುತ್ತಿರುವುದಾಗಿ ಬಂದ ಮಾಹಿತಿಯಂತೆ ಸ್ಥಳಕ್ಕೆ ಹೋದಾಗ ಅಲ್ಲಿ ಒಬ್ಬ ವ್ಯಕ್ತಿಯು ತೂರಾಡಿಕೊಂಡು  ಅಮಲಿನಲ್ಲಿರುವುದು ಕಂಡು ಬಂದಿದ್ದು, ಆತನನ್ನು   ಸೂಕ್ಷ್ಮವಾಗಿ ಪರಿಶೀಲಿಸಿದಾಗ ಆತನು  ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ  ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದ್ದು ವಿನೀಶ್‌ (25) ಎಂಬುದಾಗಿ ತಿಳಿಸಿರುತ್ತಾನೆ. ಆತನನ್ನು ವೈದ್ಯಕೀಯ ತಪಾಸಣೆ ಬಗ್ಗೆ ಕುಂದಾಪುರ ಶ್ರೀಮಾತಾ ಆಸ್ಪತ್ರೆಯ ವೈಧ್ಯಾಧಿಕಾರಿ ರವರ  ಮುಂದೆ ಹಾಜರುಪಡಿಸಿದ್ದು,   ಆತನನ್ನು  ಪರೀಕ್ಷಿಸಿದ ವೈದ್ಯರು ಆತನು ಗಾಂಜಾ ಸೇವಿಸಿರುವುದು ದೃಢಪಟ್ಟಿರುವುದಾಗಿ ವರದಿ ನೀಡಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 03/2023 ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 31-01-2023 09:52 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080