ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ಫಿರ್ಯಾದುದಾರರಾದ ಅಬ್ದುಲ್‌ ರೆಹಮಾನ್‌ ರವರು ದಿನಾಂಕ 30.01.2023 ರಂದು ಬಾರ್ಕೂರು ಕಡೆಯಿಂದ ಮಂದಾರ್ತಿ ಕಡೆಗೆ ಅವರ ಬಾಬ್ತು ಗೂಡ್ಸ ವಾಹನವನ್ನು ಚಲಾಯಿಸಿಕೊಂಡು ಹೋಗುವಾಗ ಮಧ್ಯಾಹ್ನ 3:15 ಗಂಟೆಯ ಸಮಯಕ್ಕೆ ನಡೂರು ಗ್ರಾಮದ, ನಡೂರು ಕಲ್‌ ರಾಶಿ ಎಂಬಲ್ಲಿಗೆ ಸ್ವಲ್ಪ ಹಿಂದೆ ತಲುಪುವಾಗ ಮಂದಾರ್ತಿ ಕಡೆಯಿಂದ  ಆರೋಪಿ ಗಣೇಶ್‌ ರವರು KA.05.AE.2359 ನೇ ಮಿನಿ ಟೂರಿಸ್ಟ್‌ ಬಸ್ಸನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ವಲ್ಪ ತಿರುವು ರಸ್ತೆಯಲ್ಲಿ ಫಿರ್ಯಾದುದಾರರ ಎದುರಿನಲ್ಲಿ ಮಂದಾರ್ತಿ ಕಡೆಗೆ ಅಬ್ದುಲ್‌ ಶುಕರ್‌ ರವರು ಸವಾರಿ ಮಾಡುತ್ತಿದ್ದ KA.20.HA.2040 ನೇ ಹೊಂಡ ಆಕ್ಟಿವಾ  ಸ್ಕೂಟರಿಗೆ ಡಿಕ್ಕಿ ಹೊಡೆದಿರುವುದಾಗಿದೆ. ಈ ಅಪಘಾತದ ಪರಿಣಾಮ ಅಬ್ದುಲ್‌ ಶುಕುರ್‌ ರವರು ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದು ಅವರ ಬಲಕಾಲಿನ ಮಣಿ ಗಂಟಿನ ಮೇಲ್ಭಾಗ ಮೂಳೆ ಮುರಿತದ ತೀವ್ರ ಗಾಯ, ತಲೆಯ ಎಡ ಭಾಗ, ಭುಜದ ಎಡಭಾಗ ಹಾಗೂ ಮೈ, ಕೈ, ಬಾಯಿಗೆ ಅಲ್ಲಲ್ಲಿ  ತರಚಿದ ಗಾಯವಾಗಿರುತ್ತದೆ ಅಲ್ಲದೇ ಸ್ಕೂಟರ್‌ ಕೂಡ ಜಖಂ ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ  ಪೊಲೀಸ್‌ಠಾಣೆ ಅಪರಾಧ ಕ್ರಮಾಂಕ : 13/2023 : ಕಲಂ 279,  338  ಐಪಿಸಿರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 ಇತರ ಪ್ರಕರಣ

  • ಕಾರ್ಕಳ: ಪಿರ್ಯಾದಿ ಪ್ರೇಮಲತಾ ಇವರು ಠಾಣಾ ಸರಹದ್ದಿನ ದುರ್ಗಾ ಗ್ರಾಮದ, ತೆಳ್ಳಾರ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದುರ್ಗ ಇಲ್ಲಿ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ಶಾಲೆಗೆ 2022-23 ನೇ ಸಾಲಿನಲ್ಲಿ ಸರಕಾರದಿಂದ ಮಂಜೂರಾದ ಎರಡು ಕೊಠಡಿಗಳ ಕೆಲಸ ಕಾರ್ಯಗಳು ನಡೆಯುತ್ತಿದ್ದುದರಿಂದ ದಿನಾಂಕ 27/01/2023 ರಂದು ಶಾಲೆಗೆ ಸ್ಥಳೀಯ ರಜೆ ಇದ್ದು, ಇಲಾಖಾ ದೂರವಾಣಿ ಕರೆಯ ಪ್ರಯುಕ್ತ ಅಪರಾಹ್ನ 3:00 ಗಂಟೆಗೆ ಕರ್ತವ್ಯದ ಬಗ್ಗೆ ಶಾಲೆಗೆ ಹೋದಾಗ, ಶಾಲೆಯ ಆವರಣದಲ್ಲಿದ್ದ ಅಪಾದಿತ ಚಂದಪ್ಪ ಮೂಲ್ಯ ಎಂಬಾತನು, ಪಿರ್ಯದುದಾರರನ್ನು ಉದ್ದೇಶಿಸಿ  ಅವಾಚ್ಯವಾಗಿ ಬೈದು ಕೊಲೆ ಮಾಡದೆ ಬಿಡುವುದಿಲ್ಲ ಎಂದು ಜೀವಬೆದರಿಕೆ ಹಾಕಿ , ಹಲ್ಲೆ ಮಾಡಿ , ಪಿರ್ಯಾದುದಾರರು ನಿರ್ವಹಿಸುತ್ತಿದ್ದ  ಸರಕಾರಿ ಕರ್ತವ್ಯಕ್ಕೆ ಅಡ್ಡಪಡಿಸಿ, ಆತನ ಬಾಬ್ತು ವ್ಯಾಗನರ್ ಕಾರಿನಲ್ಲಿ ಸ್ಥಳದಿಂದ ಹೊರಟು ಹೋಗಿರುತ್ತಾನೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ  ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 12/2023 ಕಲಂ : 353, 354, 509, 323, 506 ಐಪಿಸಿರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಬೈಂದೂರು: ಫಿರ್ಯಾದಿದುದಾರರಾದ  ಶ್ರೀಮತಿ ಶೈಲಜಾ  ಎಂಬವರು  ಸಂತೋಷ ಬಿಲ್ಲವ ಎಂಬವನ ಜೊತೆಯಲ್ಲಿ ಗುರುಹಿರಿಯರು  ನಿಶ್ಚಯಿಸಿದಂತೆ  ಹಿಂದೂ ಸಂಪ್ರದಾಯದಂತೆ ದಿನಾಂಕ 21-01-2015 ರಂದು  ಮದುವೆಯಾಗಿರುತ್ತಾರೆ. ಮದುವೆಯ ನಂತರ  ಪಿರ್ಯಾದುದಾರರು ಉಪ್ಪುಂದ  ಗ್ರಾಮದ ಅಮ್ಮನವರ ತೊಪ್ಪಲು  ಎಂಬಲ್ಲಿ ಗಂಡನ ಮನೆಯಲ್ಲಿ  ಸಂಸಾರ ಮಾಡಿಕೊಂಡಿದ್ದರು. ಪಿರ್ಯಾದುದಾರರ  ಗಂಡ  ದುಬಾಯಿ ನಲ್ಲಿ ಶಿಪ್ಪಿಂಗ್  ಕಂಪೆನಿಯಲ್ಲಿ  ಉದ್ಯೋಗ ಮಾಡಿಕೊಂಡಿದ್ದರು.  ಪಿರ್ಯಾದುದಾರರಿಗೆ ಗಂಡ ಸಂತೋಷ ಬಿಲ್ಲವ   ಅವಾಚ್ಯ ಶಬ್ದಗಳಿಂದ ಬೈದು ,ಕೈ ಯಿಂದ ಹೊಡೆದು ಮಾನಸಿಕ ದೈಹಿಕಹಿಂಸೆ ನೀಡಿರುತ್ತಾನೆ. ಪಿರ್ಯಾದುದಾರರ ಗಂಡನ ಜೊತೆಯಲ್ಲಿ ಆತನ ಅಣ್ಣ  ರಾಘವೇಂದ್ರ ಎಂಬವನು ಇದ್ದಿದ್ದು ಆತನು ಕೂಡ ಪಿರ್ಯಾದುದಾರರಿಗೆ  ಬೈದು ನಿಂದಿಸಿ ಹಿಂಸೆನೀಡಿ ಬೆದರಿಕೆ ಹಾಕಿರುವುದಾಗಿದೆ.  ಈ ಬಗ್ಗೆ ಬೈಂದೂರು  ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 19/2023  ಕಲಂ: 498 A, 323, 504, 506 R/w 34   ಐಪಿಸಿರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಉಡುಪಿ: ದಿನಾಂಕ 29.01.2023 ರಂದು ಪಿರ್ಯಾದಿ ಫ್ರಾನ್ಸಿಸ್‌ ಪಿಯುಸ್ ಪುಟಾರ್ಡೋ ಇವರು ತಮ್ಮ ಪೆಟಿಎಮ್ ಪಾಸ್ಟ್ ಟ್ಯಾಗ್‌ ನಿಷ್ಕ್ರೀಯಾಗೊಂಡ ಬಗ್ಗೆ ಗೂಗಲ್ ನಲ್ಲಿ ಪೆ.ಟಿ.ಎಂ. ಫಾಸ್ಟ್ ಟ್ಯಾಗ್ ಎಪ್ಲಿಕೇಶನ್ ನ್ನು ಹುಡುಕಿದಲ್ಲಿ ಗೂಗಲ್ ನಲ್ಲಿ ಪೆ.ಟಿ.ಎಂ. ಹೆಲ್ಪ್ & ಸಪೋರ್ಟ್ ನಲ್ಲಿ ಕಂಡುಬಂದ  ಮೊಬೈಲ್‌ ನಂಬ್ರ +918249255475 ನೇದಕ್ಕೆ ಕರೆ ಮಾಡಿದಲ್ಲಿ ಆ ವ್ಯಕ್ತಿ ತಾನು ಪೆ.ಟಿ.ಎಂ. ಫಾಸ್ಟ್  ಟ್ರಾಗ್ ವೆಬ್‌‌ಸೈಟ್ ನ ಅಧಿಕಾರಿಯಾಗಿ ಎಂಬುದಾಗಿ ಪಿರ್ಯಾದಿದಾರರನ್ನು ನಂಬಿಸಿ, ಪಿರ್ಯಾದಿದಾರರ ಪೆಟಿಎಮ್ ಪಾಸ್ಟ್ ಟ್ಯಾಗ್‌ ಸರಿಪಡಿಸಿ ಕೊಡುವುದಾಗಿ ಪಿರ್ಯಾದಿದಾರರ ಮೊಬೈಲ್ ಗೆ ಬಂದ ಓ.ಟಿ.ಪಿ ಪಡೆದು ಪಿರ್ಯಾದಿದಾರರ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಸ್.ಬಿ ಖಾತೆ ಯಿಂದ  ರೂ.49,000/-,  ರೂ.19,999/-, ರೂ.19998, ರೂ.9,999/-, ರೂ.1,000/- ರಂತೆ ಒಟ್ಟು ರೂ.99,997/- ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿ, ಪಿರ್ಯಾದಿ ದಾರರಿಗೆ ನಷ್ಟ ಉಂಟು ಮಾಡಿರುವುದಾಗಿದೆ . ಈ ಬಗ್ಗೆ ಉಡುಪಿ ಸೆನ್‌   ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 13/2023 ಕಲಂ: 66(C), 66(D)ಐ.ಟಿ. ಆಕ್ಟ್ ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕಾರ್ಕಳ : ಪಿರ್ಯಾದಿ ರಾಮರಾಜ್ ಇವರು ಕುಂದಾಪುರ – ಉಡುಪಿ- ಹನುಮಾನ್ ಬಸ್‌ನಲ್ಲಿ ಕಂಡಕ್ಟರ್‌/ಕ್ಲೀನರ್‌ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 29.01.2023 ರಂದು ಮದ್ಯಾಹ್ನ 12.00 ಗಂಟೆಗೆ ಪಿರ್ಯಾದಿದಾರರು ಕಾರ್ಕಳ ತಾಲೂಕಿನ ಕಾರ್ಕಳ ಕಸಬಾ ಗ್ರಾಮದ  ಕಾರ್ಕಳ ಬಸ್‌ ನಿಲ್ದಾಣದಲ್ಲಿ ಬಸ್ಸಿನಿಂದ ಪ್ರಯಾಣಿಕರನ್ನು ಇಳಿಸಿ ಬಸ್ಸಿನ ಬಳಿ ನಿಂತುಕೊಂಡಿರುವಾಗ, ಆಪಾದಿತ ಮುಕ್ತುಂ ದುಬಾನ್ ಅಲ್ಲಿಗೆ ಬಂದು ಬಸ್ ಟೈಮಿಂಗ್ ವಿಚಾರದಲ್ಲಿ ಪಿರ್ಯಾದಿದಾರರ ಕಾಲರ್‌‌ ಹಿಡಿದು ಎಂದು ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆದು, ನಂತರ ಕಾಲಿನಿಂದ ಚಪ್ಪಲಿ ತೆಗೆದು ಚಪ್ಪಲಿಯಿಂದ ಹೊಡೆದು ಸಾರ್ವಜನಿಕ ಸ್ಥಳದಲ್ಲಿ ಅವಮಾನ ಮಾಡಿದ್ದು  ಪಿರ್ಯಾದಿದಾರ ರನ್ನು ಉದ್ದೇಶಿಸಿ ಕೊಲ್ಲದೇ ಬಿಡುವುದಿಲ್ಲಎಂದು   ಜೀವ ಬೆದರಿಕೆ  ಹಾಕಿರುತ್ತಾನೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 13/2023  ಕಲಂ 323,324, 504,506, 355   ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಮಣಿಪಾಲ: ದಿನಾಂಕ: 24.01.2023 ರಂದು 11:30 ಗಂಟೆಗೆ ಠಾಣಾ ಎ.ಎಸ್‌.ಐ ಶೀನ ಸಾಲ್ಯಾನ್‌  ಹಾಗೂ ಸಿಬ್ಬಂದಿ ಶುಭ ಇವರುಗಳು ಮಾದಕ ವಸ್ತು ಗಾಂಜಾವನ್ನುಸೇವಿಸಿರುವ ಸಂದೇಹದ ಮೇಲೆ Mohit Khare ಎಂಬಾತನನ್ನು  ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲ ವಿದ್ಯಾರತ್ನ ನಗರದ ಆಸ್ತಾ ಅಬೋಡ್ ಅಪಾರ್ಟ್ಮೆಂಟ್‌ ಬಳಿ ಸಾರ್ವಜನಿಕ ಸ್ಥಳದಲ್ಲಿ ವಶಕ್ಕೆ ಪಡೆದು ಠಾಣೆಗೆ ಹಾಜರುಪಡಿಸಿರುತ್ತಾರೆ, ಆತನನ್ನು ವಿಚಾರಣೆ ನಡೆಸಿ ಅದೇ ದಿನ ದಿನಾಂಕ: 24.01.2023 ರಂದು ಮಣಿಪಾಲ ಪೊಲೀಸ್‌ ಠಾಣಾ ಪ್ರಭಾರದಲ್ಲಿದ್ದ ಅಬ್ದುಲ್ ಖಾದರ್ ಪೊಲೀಸ್ ಉಪನಿರೀಕ್ಷಕರು ರವರು  ಸದರಿ ವ್ಯಕ್ತಿ ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಲು ಕಳುಹಿಸಿಕೊಟ್ಟಿದ್ದು, ಆರೋಪಿ Mohit Khare ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದೃಢಪತ್ರವನ್ನು ನೀಡಿರುತ್ತಾರೆ, ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 17/2023, ಕಲಂ: 27(b) NDPS Act ನಂತೆ  ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಮಣಿಪಾಲ: ದಿನಾಂಕ: 24.01.2023 ರಂದು 11:30 ಗಂಟೆಗೆ ಠಾಣಾ ಎ.ಎಸ್‌.ಐ ಶೀನ ಸಾಲ್ಯಾನ್‌  ಹಾಗೂ ಸಿಬ್ಬಂದಿ ಶುಭ ಇವರುಗಳು ಮಾದಕ ವಸ್ತು ಗಾಂಜಾವನ್ನುಸೇವಿಸಿರುವ ಸಂದೇಹದ ಮೇಲೆ Sakshi Shriyan ಎಂಬಾತಳನ್ನು  ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲ ವಿದ್ಯಾರತ್ನ ನಗರದ ಆಸ್ತಾ ಅಬೋಡ್ ಅಪಾರ್ಟ್ಮೆಂಟ್‌ ಬಳಿ ಸಾರ್ವಜನಿಕ ಸ್ಥಳದಲ್ಲಿ ವಶಕ್ಕೆ ಪಡೆದು ಠಾಣೆಗೆ ಹಾಜರುಪಡಿಸಿರುತ್ತಾರೆ, ಆತಳನ್ನು ವಿಚಾರಣೆ ನಡೆಸಿ ಅದೇ ದಿನ ದಿನಾಂಕ: 24.01.2023 ರಂದು ಮಣಿಪಾಲ ಪೊಲೀಸ್‌ ಠಾಣಾ ಪ್ರಭಾರದಲ್ಲಿದ್ದ ಅಬ್ದುಲ್ ಖಾದರ್ ಪೊಲೀಸ್ ಉಪನಿರೀಕ್ಷಕರು ರವರು  ಸದರಿ ವ್ಯಕ್ತಿ ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಲು ಕಳುಹಿಸಿಕೊಟ್ಟಿರುತ್ತಾರೆ. ಆರೋಪಿ Sakshi Shriyan ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದೃಢಪತ್ರವನ್ನು ನೀಡಿರುತ್ತಾರೆ, ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 18/2023, ಕಲಂ: 27(b) NDPS Act ನಂತೆ  ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 31-01-2023 06:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080