ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಅಂಬ್ರೋಸ್ ದಯಾನಂದ ಅಮ್ಮಣ್ಣ (65), ತಂದೆ: ಸುಂದರ ಮೇಶಕ್ ಅಮ್ಮಣ್ಣ, ವಾಸ:ಮನೆ ನಂ: 14-77A3 ನಿಸ್ಸಿ ವಾಸುಕಿ ನಗರ ನೀರಿನ ಟ್ಯಾಂಕಿನ ಬಳಿ ಉದ್ದಿನ ಹಿತ್ಲು ಕೊಡವೂರು ತೆಂಕನಿಡಿಯೂರು ಗ್ರಾಮ ಮತ್ತು ಅಂಚೆ ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ದಿನಾಂಕ 29/01/2022ರಂದು ತಾನು ಸವಾರಿ ಮಾಡುತ್ತಿದ್ದ KA-20-ES-2952ನೇ ಸ್ಕೂಟರ್ ನ್ನು ಆದಿ ಉಡುಪಿ ಕಡೆಯಿಂದ ಕೊಡವೂರು ಮನೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಂಜೆ 6:15 ಗಂಟೆಗೆ ಅಂಬಲಪಾಡಿ ಗ್ರಾಮದ ಆದಿ ಉಡುಪಿ ಸಂತೆ ಮಾರ್ಕೆಟ್ ರಸ್ತೆ ಎದುರು ತಲುಪುವಾಗ ಸಂತೆ ಮಾರ್ಕೆಟ್ ಒಳಗಡೆಯಿಂದ ಹೊಸ ಟಿ.ವಿ.ಎಸ್ ಸ್ಕೂಟರ್ ನ್ನು ಅದರ ಸವಾರ ದುಡುಕುತನ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿ ಪಿರ್ಯಾದಿದಾರರ ಸ್ಕೂಟರ್ ನ ಬಲಬದಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಹಣೆ, ಮೂಗು ಮತ್ತು ಎಡಕೈಗೆ ಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 09/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ  29/01/2022 ರಂದು 14:30 ಗಂಟೆಗೆ ಪಿರ್ಯಾದಿದಾರರಾದ  ಸರ್ಜಿತ್ ಶೆಟ್ಟಿ (32), ತಂದೆ: ದಿವಂಗತ. ಸುಬ್ಬಣ್ಣ ಶೆಟ್ಟಿ ವಾಸ: ತಾಯಿ ಮನೆ,ಮೂಡುಬಗೆ, ಅಂಪಾರು ಅಂಚೆ   ಮತ್ತು ಗ್ರಾಮ  ಕುಂದಾಪುರ ತಾಲೂಕು  ಇವರು  ಹೆಬ್ರಿ ತಾಲೂಕಿನ  ಅಲ್ಬಾಡಿ  ಗ್ರಾಮದ ಕೊಂಜಾಡಿ  ಎಂಬಲ್ಲಿ  KA-20-ES-1423 ನೇ ನಂಬ್ರದ   ಮೋಟಾರ್  ಸೈಕಲ್‌‌ಆಕ್ಟಿವ್ ಹೊಂಡಾ ಮೋಟಾರ್  ಸೈಕಲ್‌‌ನಲ್ಲಿ ಹಿಂಬದಿ ಸವಾರನಾಗಿ ಕುಳಿತ್ತುಕೊಡು   ಹೋಗುತ್ತಿರುವಾಗ  ಆರೋಪಿ ಮೋಟಾರ್  ಸೈಕಲ್‌‌ನ್ನು  ಅತೀ ವೇಗ  ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಹೋಗುತ್ತಿದ್ದು ಈ ಸಮಯ  ಯಾವುದೋ ಕಾಡು  ಪ್ರಾಣಿ ಅಡ್ಡ ಬಂದ ಕಾರಣ, ಮೋಟಾರ್ ಸೈಕಲ್‌‌ಗೆ ಬ್ರೆಕ್ ಹಾಕಿದ್ದು ಆಗ ಮೋಟಾರ್  ಸೈಕಲ್‌‌ ಆರೋಪಿಯ ಹತೋಟಿ ತಪ್ಪಿ ರಸ್ತೆಯ ಬದಿ  ಮಣ್ಣು ರಸ್ತೆಯಲ್ಲಿ ಬಿದ್ದಿದ್ದು, ಇದರ ಪರಿಣಾಮ ಪಿರ್ಯಾದಿದಾರರ  ಎಡಕಾಲಿನ  ಮೂಳೆಗೆ ಹಾಗೂ ಹಣೆಯ ಎಡಭಾಗಬಲ್ಲಿ ರಕ್ತ  ಗಾಯವಾಗಿರುತ್ತದೆ. ಮೋಟಾರ್  ಸೈಕಲ್‌‌ಸವಾರ  ಪ್ರಮೋದ ಇತನ ಎದೆಯ ಬಲ ಭಾಗಕ್ಕೆ ನೋವಾಗಿದ್ದು, ಚಿಕಿತ್ಸೆ  ಬಗ್ಗೆ ಕೊಟೇಶ್ವರದ   ಡಾ. ಎನ್.ಆರ್, ಆಚಾರ್ಯ  ಆಸ್ಪತ್ರೆಗೆ  ದಾಖಲಾಗಿ  ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 17/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ  ಪ್ರಕರಣ

  • ಉಡುಪಿ: ದಿನಾಂಕ 30/01/2022 ರಂದು ವಾಸಪ್ಪ ನಾಯ್ಕ್, ಪೊಲೀಸ್ ಉಪನಿರೀಕ್ಷಕರು-2, ಉಡುಪಿ ನಗರ ಪೊಲೀಸ್‌ ಠಾಣೆ ಇವರು ಹೊಯ್ಸಳ ವಾಹನದಲ್ಲಿ ಉಡುಪಿ ಪೇಟೆಯಲ್ಲಿ ಹಗಲು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಕರಾವಳಿ ಬೈಪಾಸ್ ಬಳಿ ಇರುವ ಗಂಗೊತ್ರಿ ಬಾರ್ & ರೆಸ್ಟೊರೆಂಟ್ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಓರ್ವ ವ್ಯಕ್ತಿ ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿರುವ ಬಗ್ಗೆ ಮಾಹಿತಿ ದೊರೆತಿದ್ದು, ದಾಳಿ ನಡೆಸಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಮಂಜುನಾಥ (38), ತಂದೆ: ನಾಗಪ್ಪ, ವಾಸ:ಖಾನಾ ಹೊಸಳ್ಳಿ ಹೋಬಳಿ, ಕಾನಮಡಗು ಗ್ರಾಮ, ಕೂಡ್ಲಗಿ ತಾಲೂಕು ಬಳ್ಳಾರಿ ಜಿಲ್ಲೆ, ಹಾಲಿ ವಾಸ: ಫ್ರಾಂಕಿರವರ ಬಾಡಿಗೆ ಮನೆ, ನಯಾಂಪಳ್ಳಿ, ಪುತ್ತೂರು ಗ್ರಾಮ, ಉಡುಪಿ ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಾನು ಕಮೀಷನ್‌ ಹಣಕೋಸ್ಕರ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಹಣವನ್ನು ಸಂಗ್ರಹಿಸುತ್ತಿದ್ದು, ತಾನು ಸಂಗ್ರಹಿಸುತ್ತಿದ್ದ ಹಣವನ್ನು 2ನೇ ಆಪಾದಿತ ಗಣೇಶ್ ಅಂಬಾಗಿಲು ಎಂಬವರಿಗೆ ಕೊಡುತ್ತಿರುವುದಾಗಿ ತಿಳಿಸಿದ್ದು, ಆಪಾದಿತನ ವಶದಿಂದ ಮಟ್ಕಾ ಜುಗಾರಿ ಆಟಕ್ಕೆ ಸಂಗ್ರಹಿಸಿದ ನಗದು ಹಣ ರೂಪಾಯಿ 3,370/- ಮತ್ತು ಮಟ್ಕಾ ನಂಬ್ರ ಬರೆದ ಚೀಟಿ- 2, ಬಾಲ್‌ಪೆನ್‌ ಒಂದು ಮತ್ತು ಆತನ ವಶದಲ್ಲಿದ್ದ ರಿಯಲ್ ಮಿ ಮೊಬೈಲ್-1ನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 16/2022, ಕಲಂ: 78(1)(3) KP Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 30/01/2022 ರಂದುವಾಸಪ್ಪ ನಾಯ್ಕ್, ಪೊಲೀಸ್ ಉಪನಿರೀಕ್ಷಕರು-2, ಉಡುಪಿ ನಗರ ಪೊಲೀಸ್‌ ಠಾಣೆ ಹೊಯ್ಸಳ ವಾಹನದಲ್ಲಿ ಉಡುಪಿ ಪೇಟೆಯಲ್ಲಿ ಹಗಲು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಕರಾವಳಿ ಬೈಪಾಸ್ ಬಳಿ ಇರುವ ಕ್ಲೇ ಆರ್ಟ್ಸ್ ಎಂಬ ಹೆಸರಿನ ಅಂಗಡಿಯ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ  ಅಂದರ್ ಬಾಹರ್‌ ಇಸ್ಪೀಟು ಜುಗಾರಿ ಆಟ ಆಡುತ್ತಿರುವ ಬಗ್ಗೆ ದೊರೆತ ಮಾಹಿತಿಯಂತೆ ಧಾಳಿ ನಡೆಸಿ ಅಂದರ್‌ ಬಾಹರ್‌ ಇಸ್ಪೀಟು ಜುಗಾರಿ ಆಟವಾಡುತ್ತಿದ್ದ 1.ಗಣೇಶ್ ಯಲ್ಲಪ್ಪ ಬೆಳವಣಕಿ, ಹುನಗುಂದ ತಾಲೂಕು ಬಾಗಲಕೋಟೆ ಜಿಲ್ಲೆ, 2.ಸಂತೋಷ ಮುತ್ತಪ್ಪ ಕೊಣೇರಿ, ಬಾದಾಮಿ ತಾಲೂಕು ಬಾಗಲಕೋಟೆ ಜಿಲ್ಲೆ, 3.ಮಾಲತೇಶ್‌ಚಂದ್ರಪ್ಪ ತೆರದಹಳ್ಳಿ  ಬ್ಯಾಡಗಿ, ಹಾವೇರಿ ಜಿಲ್ಲೆ, 4. ಮುತ್ತುರಾಜ್‌ಈರಪ್ಪ ಸುರಪುರ, ಬಾಗಲಕೋಟೆ ಜಿಲ್ಲೆ, 5. ಅಂಗಡಿ ಕೊಟ್ರೇಶ್‌ಹಗರಿಬೊಮ್ಮನಹಳ್ಳಿ, ವಿಜಯನಗರ ಜಿಲ್ಲೆ, 6. ಸೋಮನಗೌಡ ಸುರಪುರ,ಯಾದಗಿರಿ ಜಿಲ್ಲೆ, 7. ಹಣಮಂತ ಫಕೀರಪ್ಪ ಅಲ್ಲೂರು  ಬಾಗಲಕೋಟೆ ಜಿಲ್ಲೆ, 8. ಶಿವಪ್ಪ ಹನುಮಪ್ಪ ಮೇಟಿ ಬಾಗಲಕೋಟೆ ಜಿಲ್ಲೆ, 9. ಚೆನ್ನಪ್ಪ ಫಕೀರಪ್ಪ ನಾಮದಾರಿ ಉಪ್ಪೂರು,ಉಡುಪಿ ತಾಲೂಕು, 10. ಬಸನಗೌಡಮಲ್ಲನಗೌಡ ಪಾಟೀಲ್ ಬಾಗಲಕೋಟೆ ಇವರನ್ನು ಹಾಗೂ ಆಟಕ್ಕೆ ಬಳಸಿದ  ಒಟ್ಟು ನಗದು ಹಣ 5750/- ರೂಪಾಯಿ,  ಇಸ್ಪೀಟು ಆಟಕ್ಕೆ ಬಳಸಿದ ಹಳೆಯ ದಿನಪತ್ರಿಕೆ-1, ಇಸ್ಪೀಟು ಎಲೆಗಳು-52, ಆರೋಪಿತರುಗಳ ವಶವಿದ್ದ ರೂಪಾಯಿ 30,000/- ಮೌಲ್ಯದ 4 ವಿವೋ,1 ಒಪ್ಪೊ ಕಂಪೆನಿಯ ಮೊಬೈಲ್‌ಗಳನ್ನು  ಸ್ವಾಧೀನಪಡಿಸಿಕೊಂಡು, ಆರೋಪಿತರನ್ನು ದಸ್ತಗಿರಿ ಮಾಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 15/2022, ಕಲಂ: 87 KP Act ರಂತೆ ಪ್ರಕರಣ ದಾಖಲಾಗಿರುತ್ತದೆ.      

ಇತರ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ಗಾಯತ್ರಿ ಆರ್ ರಾವ್ , ಗಂಡ: ರವಿಪ್ರಕಾಶ, ವಾಸ: ಭಗವತೀ ಲೇಔಟ್  ದುರ್ಗಾಪರಮೇಶ್ವರಿ ದೇವಸ್ಥಾನದ ಹತ್ತಿರ ಪುತ್ತೂರು ಮತ್ತು  ಪಿರ್ಯಾದಿದಾರರ  ಗಂಡ ರವಿಪ್ರಕಾಶ್ ರಾವ್ ಸೇರಿ  ತೊಟ್ಟಂ ನಲ್ಲಿ ಆಶ್ರಿತ್ ಮಿಲ್ಕ್  ಪಾರ್ಲರ್  ಅಂಗಡಿ  ಇಟ್ಟುಕೊಂಡು ಜೀವನ ನಡೆಸುತ್ತಿದ್ದು , ಪಿರ್ಯಾದಿದಾರರ  ಗಂಡನ  ತಮ್ಮನಾದ ಚಂದ್ರಕಾಂತ  ಯಾವಾಗಲೂ ಮಧ್ಯಸೇವನೆ ಮಾಡಿ   ಬಂದು  ಜಗಳ ಮಾಡುತ್ತಿದ್ದು ದಿನಾಂಕ 30/01/2022 ರಂದು  ಬೆಳಿಗ್ಗೆ 11:00 ಗಂಟೆಗೆ ಚಂದ್ರಕಾಂತನು ಮಧ್ಯಸೇವನೆ ಮಾಡಿಕೊಂಡು ಪಿರ್ಯಾದಿದಾರರ ಅಂಗಡಿ ಒಳಗೆ ಬಂದು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದು , ಅಲ್ಲದೆ  ಪಿರ್ಯಾದಿದಾರರ ಗಂಡನಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಲ್ಲಿ  ಕಲ್ಲಿನಿಂದ  ಪಿರ್ಯಾದಿದಾರರ ಗಂಡನಿಗೆ ಹೊಡೆಯಲು ಕಲ್ಲು ಬಿಸಾಡಿದಾಗ ಪಿರ್ಯಾದಿದಾರರು  ತಪ್ಪಿಸಿಕೊಂಡಾಗ ಕಲ್ಲು ಅಂಗಡಿ ಪಕ್ಕದಲ್ಲಿ ನಿಲ್ಲಿಸಿದ  KA-51–MJ– 4250 ಕಾರಿಗೆ ತಾಗಿ ಕಾರು ಜಖಂ ಗೊಂಡಿರುತ್ತದೆ ,ಅಲ್ಲದೆ ಪಿರ್ಯಾದಿದಾರರಿಗೆ  ಮತ್ತು ಪಿರ್ಯಾದಿದಾರರ ಗಂಡನಿಗೆ ಬೆದರಿಕೆ  ಹಾಕಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 13/2022 ಕಲಂ: 504, 506, 427, 448 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
     

ಇತ್ತೀಚಿನ ನವೀಕರಣ​ : 31-01-2022 09:31 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080