ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ:  ದಿನಾಂಕ:31/01/2022 ರಂದು ಬೆಳ್ಳಿಗ್ಗೆ ಸುಮಾರು 10:15 ಗಂಟೆಗೆ ಕುಂದಾಪುರ ಬಸ್ರೂರು ಗ್ರಾಮದ ಪಾನಕದಕಟ್ಟೆ ಎಂಬಲ್ಲಿ SH-52ನೇ ದರ ಎಡಬದಿಯ ಮಣ್ಣು ರಸ್ತೆಯಲ್ಲಿ ನಿಲ್ಲಿಸಿಕೊಂಡಿದ್ದ KA20EK-1083ನೇ Honda Activa ಮೋಟಾರು ಸೈಕಲನ್ನು ಆಪಾದಿತ ಸವಾರ ಮೊಯಿದೀನ್ ಸಾಹೇಬ್ ರವರು ಯಾವುದೇ ಸೂಚನೆ ನೀಡದೆ ಒಮ್ಮೆಲ್ಲೆ ವೇಗ ಮತ್ತು ನಿರ್ಲಕ್ಷತನದಿಂದ SH-52ನೇ ಡಾಮಾರು ರಸ್ತೆಗೆ ತಿರುಗಿಸಿ ದೂರುದಾರ  ಪಂಜು ಪ್ರಾಯ:45 ವರ್ಷ ತಂದೆ:ಮರ್ಲು ಪೂಜಾರಿ ವಾಸ:ಹೊಸಮನೆದೊಂಬೆ ಪಡುವರಿ ಗ್ರಾಮ ರವರು ಕುಂದಾಪುರದ ಕಡೆಯಿಂದ ಶಂಕರನಾರಾಯಣ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ KA20V-3606 ನೇ ಮೋಟಾರು ಬೈಕಿಗೆ ಡಿಕ್ಕಿಹೊಡೆದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದ ಪಂಜುರವರಿಗೆ ಎಡಕಾಲಿನ ಮಣಿಗಂಟೆಗೆ ಮೂಳೆ ಮುರಿತದ  ಒಳಜಖಂ ಹಾಗೂ ರಕ್ತಗಾಯ, ಎಡಕೈಗೆ ತರಚಿದ ರಕ್ತ ಗಾಯ ಉಂಟಾಗಿದ್ದು ಚಿಕಿತ್ಸೆಗೆ ಕುಂದಾಪುರದ ಚಿನ್ಮಯ ಆಸ್ಪತ್ರೆಗೆ ದಾಖಲಾಗಿರುತ್ತಾರೆ.ಈ ಬಗ್ಗೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ:17/2022 ಕಲಂ:279,338  ಭಾ,ದಂ,ಸಂ ರಂತೆ   ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ

  • ಉಡುಪಿ: ಮಾನ್ಯ ನ್ಯಾಯಾಲಯದ  ಖಾಸಗಿ ಪಿರ್ಯಾದಿ ನಂಬ್ರ: 05/2022 ರಂತೆ ಪಿರ್ಯಾದಿ ಸಾಮಿಯಾ(24), ಗಂಡ: ಫವಾಜ್ ಅಹಮ್ಮದ್, ತಂದೆ: ಬಿ.ಎಮ್ ಎನ್ವ ರ್, ವಾಸ; ದಾರುಲ್ ಸಲಾಂ ಶಾಲೆಯ ಬಳಿ ಹೂಡೆ, ಪಡುತೋನ್ಸೆ ಗ್ರಾಮ, ಉಡುಪಿ ತಾಲೂಕು ಇವರು 1 ನೇ ಆರೋಪಿ.ಫವಾಜ್ ಅಹ್ಮದ್(30) ತಂದೆ: ಇಜಾಝ್ ಅಹ್ಮದ್ ಯೊಂದಿಗೆ ದಿನಾಂಕ: 17/07/2016 ರಂದು ವಿವಾಹವಾಗಿದ್ದು, ಪಿರ್ಯಾದಿದಾರರಿಗೆ ಆರೋಪಿತರುಗಳು .ಫವಾಜ್ ಅಹ್ಮದ್(30)ತಂದೆ: ಇಜಾಝ್ ಅಹ್ಮದ್ 2.ಇಝಾದ್ ಅಹ್ಮದ್(64)ತಂದೆ:ಉಮ್ಮರ್ ಸಾಹೇಬ್3.ರೆಹನಾ(52), ಗಂಡ: ಇಝಾದ್ ಅಹ್ಮದ್ , ಮೇಲಿನ ಎಲ್ಲರ ವಿಳಾಸ: ಕೋಟೆ ಬಾಗಿಲು.ಮೂಡುಬಿದ್ರೆ, ದ.ಕ ಜಿಲ್ಲೆ. ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದು, 1 ನೇ ಆರೋಪಿಯು ಪಿರ್ಯಾದಿದಾರರು ಹಾಗೂ ಮಗನನ್ನು ನೋಡಿಕೊಳ್ಳದೇ ಇದ್ದುದ್ದರಿಂದ  ಪಿರ್ಯಾದಿದಾರರು  ಮಾನ್ಯ ನ್ಯಾಯಾಲಯದಲ್ಲಿ ಕೌಟುಂಬಿಕ ದೌರ್ಜನ್ಯ ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ದೂರು ಸಲ್ಲಿಸಿರುತ್ತಾರೆ. ದಿನಾಂಕ: 14/01/2022 ರಂದು ವಿಚಾರಣೆಯ ಬಗ್ಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆಯನ್ನು ಮುಗಿಸಿ ಹೊರಗಡೆ ಬರುವಾಗ  ನ್ಯಾಯಾಲಯದ ಹಿಂಬದಿ ರಸ್ತೆಯಲ್ಲಿ  ಆರೋಪಿಗಳು ಸಮಾನ ಉದ್ದೇಶದಿಂದ ಅಕ್ರಮ ಕೂಟ ಮಾಡಿಕೊಂಡು ಪಿರ್ಯಾದಿದಾರರನ್ನು ಹಿಂಬಾಲಿಸಿಕೊಂಡು ಬಂದು  ಹೆಸರೆತ್ತಿ  ಪಿರ್ಯಾದಿದಾರರ ಮಾನಕ್ಕೆ ಭಂಗ ಉಂಟಾಗುವಂತೆ ಕೈ ರಟ್ಟೆ ಹಿಡಿದು ಬಲವಾಗಿ ಎಳೆದು  ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ ನಮ್ಮ ಮೇಲೆ  ಕೇಸು ಹಾಕುತ್ತೀಯಾ ನಿನ್ನನ್ನು ನಾವು ಸುಮ್ಮನೆ ಬಿಡುವುದಿಲ್ಲ, ಇನ್ನು ಮುಂದೆ ನ್ಯಾಯಾಲಯಕ್ಕೆ ಬರಕೂಡದು, ಇವತ್ತೆ ನಿನಗೆ ಕೊನೆಯ ದಿನ ಇನ್ನೂ ನಮ್ಮ ವಿಷಯಕ್ಕೆ ಬರಬೇಡ ನಾನು ವಿದೇಶಕ್ಕೆ  ಹೋಗಿ ನಿನ್ನನ್ನು ಹಾಗೂ ನಿನ್ನ ಮನೆಯವರನ್ನು ಜನ ಕಳುಹಿಸಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಮಹಿಳಾ ಠಾಣಾ ಅಪರಾಧ ಕ್ರಮಾಂಕ 10/2022 ಕಲಂ: 341, 354, 504, 506 ಜೊತೆಗೆ 34  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಹೆಬ್ರಿ: ಫಿರ್ಯಾದಿ ಸುಲೋಚನಾ ಪ್ರಾಯ 49 ವರ್ಷ ಗಂಡ: ವಿಶ್ವನಾಥ ಪೂಜಾರಿವಾಸ: ಸನ್ನಿಧಿ ನಿಲಯಸಂಕ್ರಮಕ್ಕಿ ಚಾರ ಗ್ರಾಮ ಹೆಬ್ರಿ ಇರವ ತಮ್ಮ ಸುಧಾಕರ ಪ್ರಾಯ 48 ವರ್ಷ ರವರು ಚಾಲಕ ವೃತ್ತಿಯನ್ನು ಮಾಡಿಕೊಂಡಿದ್ದು ಅವರು ಮದ್ಯಪಾನ ಮಾಡುವ ಚಟವನ್ನು ಹೊಂದಿರುತ್ತಾರೆ ಅಲ್ಲದೇ ಅವರು ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಅವರಿಗೆ ಚಿಕಿತ್ಸೆಯನ್ನು ಮಾಡಿಸಿದರೂ ಗುಣಮುಖರಾಗಿರುವುದಿಲ್ಲ ಇದೇ ವಿಚಾರದಲ್ಲಿ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:30/01/2022 ರಂದು ರಾತ್ರಿ 07:00 ಗಂಟೆಯಿಂದ  ದಿನಾಂಕ:31/01/2022 ರಂದು ಬೆಳಿಗ್ಗೆ 07:00 ಗಂಟೆಯ ಮಧ್ಯಾವಧಿಯಲ್ಲಿ  ಚಾರ ಗ್ರಾಮದ ಸಂಕ್ರಮಕ್ಕಿ ಎಂಬಲ್ಲಿರುವ ಅವರ ಮನೆಯ ಎದುರಿನ ಮರಕ್ಕೆ ನೈಲಾನ್ ಹಗ್ಗವನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯವಿಲ್ಲ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ UDR NO 07/2022 U/s 174 CRPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಗಂಡಸು ಕಾಣೆ

  •  ಬ್ರಹ್ಮಾವರ ತಾಲೂಕು, ಚಾಂತಾರು ಗ್ರಾಮದ ಸಿದ್ಧಾರ್ಥ ರೆಸಿಡೆನ್ಸಿ ರೂಮ್‌ನಂಬ್ರ 403 ಎಂಬಲ್ಲಿ ಪಿರ್ಯಾದಿ ಸುಮಿತ್ರ(ಪ್ರಾಯ:40), ಗಂಡ: ರಮೇಶ ಮಹಾಬಲ ಮರಕಾಲ, ವಾಸ: 403 ಸಿದ್ದಾರ್ಥ ರೆಸಿಡೆನ್ಸಿ, ಚಾಂತಾರು ಗ್ರಾಮ , ಬ್ರಹ್ಮಾವರ ಇವರೊಂದಿಗೆ ವಾಸವಾಗಿರುವ ಅವರ ಗಂಡ ರಮೇಶ ಮಹಾಬಲ ಮರಕಾಲ(49 ವರ್ಷ) ಎಂಬವರು ಬಾರ್ಕೂರಿನಲ್ಲಿ ಬಟ್ಟೆ ಅಂಗಡಿ ವ್ಯವಹಾರ ಮಾಡಿಕೊಂಡಿದ್ದು, ಕೋರೋನಾ ಕಾರಣದಿಂದ ವ್ಯವಹಾರ ಇಲ್ಲದೇ ಹಣದ ಸಮಸ್ಯೆ ಇರುವುದಾಗಿ ಪಿರ್ಯಾದಿದಾರರಲ್ಲಿ ಹೇಳಿಕೊಂಡಿದ್ದರು. ದಿನಾಂಕ:26/01/2022 ರಂದು ಬೆಳಿಗ್ಗೆ 5:30 ಗಂಟೆಗೆ ಧರ್ಮಸ್ಥಳಕ್ಕೆ ಹೋಗಿ ಬರುವುದಾಗಿ ಹೇಳಿ ತನ್ನ ಮೊಬೈಲ್‌‌ನ್ನ ಮನೆಯಲ್ಲಿಯೇ ಬಿಟ್ಟುಹೋದವರು ಈವರೆಗೂ ಮನೆಗೆ ಬಂದಿರುವುದಿಲ್ಲ.ಅವರ ಬಗ್ಗೆ ಸಂಬಂಧಿಕರಲ್ಲಿ,ಸ್ನೇಹಿತರಲ್ಲಿ ವಿಚಾರಿಸಿದ್ದಲ್ಲಿ  ಈ ವರೆಗೂ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ 16/2022 ಕಲಂ ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಲಾಗಿದೆ.


     

ಇತ್ತೀಚಿನ ನವೀಕರಣ​ : 31-01-2022 06:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080