ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 29/12/2022 ರಂದು ಪಿರ್ಯಾದಿ ರಾಘವೇಂದ್ರ (27), ತಂದೆ: ಚಂದ್ರ ನಾಯ್ಕ, ವಾಸ: ಆವರ್ಸೆ, ಬಂಡ್ಸಾಲೆ, ಆವರ್ಸೆ ಅಂಚೆ & ಗ್ರಾಮ, ಬ್ರಹ್ಮಾವರ ರವರು ಅವರ ತಮ್ಮ ರವೀಂದ್ರನ KA-20 EY-3028  ನೇ ನಂಬ್ರದ ಮೋಟಾರ್‌ ಸೈಕಲ್‌ ನಲ್ಲಿ ರವೀಂದ್ರನನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಮನೆಯಿಂದ ಗೋಳಿಯಂಗಡಿ – ಬಾರ್ಕೂರು ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಬರುತ್ತಾ ಮಧ್ಯಾಹ್ನ ಸುಮಾರು 2:30 ಗಂಟೆಯ ಸಮಯಕ್ಕೆ ಹೆಗ್ಗುಂಜೆ ಗ್ರಾಮದ ಹಳೆಯಂಗಡಿ ತಿರುವಿನ ಬಳಿ ತಲುಪುವಾಗ ಅವರ ಎದುರಿನಿಂದ ಅಂದರೆ ಬಾರ್ಕೂರು ಕಡೆಯಿಂದ ಮಂದಾರ್ತಿ ಕಡೆಗೆ ಆರೋಪಿ ಇಮ್ತಿಯಾಜ್‌ ಬಾಷಾ ರವರು ಅವರ  KA-20 D-9839 ನೇ ನಂಬ್ರದ ಬಸ್ಸನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆಯ ಬಲಭಾಗಕ್ಕೆ ಬಂದು ಇವರು ಸವಾರಿ ಮಾಡುತ್ತಿದ್ದ  ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದಿರುವುದಾಗಿದೆ. ಈ ಅಪಘಾತದ ಪರಿಣಾಮ ಮೋಟಾರ್‌ ಸೈಕಲ್‌ ಸಮೇತ  ಬಿದ್ದು, ರಾಘವೇಂದ್ರರವರಿಗೆ ತರಚಿದ ಗಾಯವಾಗಿದ್ದು, ಸಹಸವಾರ ಅವರ  ತಮ್ಮ ರವೀಂದ್ರನ ಬಲ ಕಾಲಿನ ಮೊಣಗಂಟಿನ ಕೆಳಗೆ ಮೂಳೆ ಮುರಿತ ಹಾಗೂ ಮುಖ ಮತ್ತು ಬಲ ಭುಜದಲ್ಲಿ ತರಚಿದ ಗಾಯವಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 219/2022 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕುಂದಾಫುರ: ದಿನಾಂಕ 29/12/2022 ರಂದು ಮಧ್ಯಾಹ್ನ ಸುಮಾರು 2:45  ಗಂಟೆಗೆ,  ಕುಂದಾಪುರ  ತಾಲೂಕಿನ,   ಆನೆಗಳ್ಳಿ ಗ್ರಾಮದ ಹೇರಿಕುದ್ರು ಸೇತುವೆಯ ಬಳಿ, ಎನ್‌. ಹೆಚ್‌66  ರಸ್ತೆಯಲ್ಲಿ, ಆಪಾದಿತ ರಾಘವೇಂದ್ರ   ಎಂಬವರು  KA02-MQ-7305ನೇ ಕಾರನ್ನು ಕುಂದಾಪುರ  ಕಡೆಯಿಂದ ತಲ್ಲೂರು ಕಡೆಗೆ  ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಕೊಂಡು ಬಂದು, ಅದೇ ದಿಕ್ಕಿನಲ್ಲಿ ಪಿರ್ಯಾದಿದಾರರಾದ  ಚಂದ್ರಯ್ಯ ಆಚಾರ್‌ (60) ತಂದೆ ಶೀನ ಆಚಾರ್ ವಾಸ:  ಕಂಚಿಕಾನ್‌ರಸ್ತೆ,  ಅಂಬಾಗಿಲು, ಉಪ್ಪುಂದ ಗ್ರಾಮ ಕುಂದಾಪುರ  ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-20-EA-8908ನೇ ಬೈಕನ್ನು ಓವರ್‌ಟೇಕ್‌ ‌ಮಾಡಿ ಮುಂದೆ ಹೋಗಿ ಯಾವುದೇ ಸೂಚನೆ ನೀಡದೇ ಕಾರನ್ನು ರಸ್ತೆಯ  ಬಲಬದಿಯಿಂದ ಎಡಬದಿಗೆ ಚಲಾಯಿಸಿದಾಗ,  ಚಂದ್ರಯ್ಯ ಆಚಾರ್ ರವರ ಬೈಕ್‌‌ ಆಪಾದಿತನ ಕಾರಿನ ಹಿಂಬದಿಗೆ ತಾಗಿ ಅಪಘಾತಕ್ಕೆ ಒಳಗಾಗಿ ಬೈಕ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡು ಕುಂದಾಪುರ ಆದರ್ಶ  ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ  ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಫುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 140/2022 ಕಲಂ: 279, 337 ಐ ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ದಿನಾಂಕ 29/12/2022 ರಂದು ಭಾಸ್ಕರ ಶೆಟ್ಟಿ ರವರು ಅವರ KA-20 EH-9190 TVS XL ಮೋಟಾರ್‌ ಸೈಕಲ್‌ ನ್ನು ಚಾರ ಹಂದಿಕಲ್ಲು ಕಡೆಯಿಂದ ಚಲಾಯಿಸಿಕೊಂಡು ಬೇಳಂಜೆ-ಹೆಬ್ರಿ ಮುಖ್ಯ ರಸ್ತೆಯನ್ನು ತಲುಪಿ ಹೆಬ್ರಿ ಕಡೆಗೆ ಹೋಗುತ್ತಿರುವಾಗ ಅವರು ಸಮಯ ಸುಮಾರು ಸಂಜೆ 04:00 ಗಂಟೆಗೆ ಚಾರ ಬಸ್‌ ನಿಲ್ದಾಣದ ದಿಂದ ಸ್ವಲ್ಪ ಮುಂದೆ ತಲುಪುವಾಗ ಅವರ ಎದುರುಗಡೆಯಿಂದ ಅಂದರೆ ಹೆಬ್ರಿ ಕಡೆಯಿಂದ ಚಾರ ಕಡೆಗೆ KA-51 AA-8678 ನೇ ನಂಬ್ರದ ಲಾರಿಯನ್ನು ಅದರ ಚಾಲಕ ಶ್ಯಾಮ್.ಕೆ.ಎ ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಭಾಸ್ಕರ ಶೆಟ್ಟಿ ರವರು ಚಲಾಯಿಸುತ್ತಿದ್ದ ಮೋಟಾರ್‌ ಸೈಕಲ್‌ ಗೆ ಢಿಕ್ಕಿ ಪಡಿಸಿ ಲಾರಿಯನ್ನು ನಿಲ್ಲಿಸದೇ ಮೋಟಾರ್‌ ಸೈಕಲ್‌ ಸಮೇತ ಭಾಸ್ಕರ ಶೆಟ್ಟಿ ರವರನ್ನು ರಸ್ತೆಯಲ್ಲಿ ಎಳೆದುಕೊಂಡು ಪರಿಣಾಮ ಅವರ ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ.  ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 74/2022 ಕಲಂ: 279, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಅಮಾಸೆಬೈಲು: ದಿನಾಂಕ 25/12/2022 ರಂದು ರಾತ್ರಿ ಯಾರೋ ಕಳ್ಳರು ಕುಂದಾಪುರ ತಾಲೂಕು ರಟ್ಟಾಡಿ ಗ್ರಾಮದ ರಟ್ಟೇಶ್ವರ ದೇವಸ್ಥಾನದ ಒಳ ಪ್ರವೇಶಿಸಿ ಹೆಬ್ಬಾಗಿಲಿನ ಹತ್ತಿರ ಇರುವ ಕಾಣಿಕೆ ಡಬ್ಬಿ ಹಾಗೂ ನಾಗ ದೇವರ ಹತ್ತಿರ ಇರುವ ಕಾಣಿಕೆ ಡಬ್ಬಿಯ ಬೀಗ ಮುರಿದು ಕಾಣಿಕೆ ಹಣವನ್ನು ಹಾಗೂ ಕಛೇರಿಯ ಬಾಗಿಲು ತೆರೆದು ಒಳ ಪ್ರವೇಶಿಸಿ ಸಿಸಿ ಕ್ಯಾಮರಾದ ಹಾರ್ಡ್‌ ಡಿಸ್ಕ್‌ ಅನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಾಣಿಕೆ ಡಬ್ಬಿ ಹಣ ಸುಮಾರು 40,೦೦೦ ರೂಪಾಯಿ ಮತ್ತು ಹಾರ್ಡ್‌ ಡಿಸ್ಕ್‌ ನ ಮೌಲ್ಯ ಸುಮಾರು 7000 ರೂಪಾಯಿಗಳಾಗಿದ್ದು ಕಳವು ಮಾಲಿನ ಅಂದಾಜು ಮೌಲ್ಯ ಸುಮಾರು 47,೦೦೦ ರೂಪಾಯಿಗಳಾಗಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 35/2022 ಕಲಂ: 457,380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾಧ ರಮ್ಯ (28) ಗಂಡ: ಸತೀಶ ಪೂಜಾರಿ, ವಾಸ: ಕಳಿ, ಪೂಜಾರಿ ಮನೆ, ಆಲೂರು ಗ್ರಾಮ ಮತ್ತು ಅಂಚೆ, ಕುಂದಾಪುರ ತಾಲೂಕು ಇವರ ತಾಯಿಯಾದ ನಾಗು ಪೂಜಾರ್ತಿ (54) ರವರು ಸುಮಾರು 15 ವರ್ಷದಿಂದ ಮಾನಸಿಕ ಖಿನ್ನತೆಯಿಂದ ಬಳಲುತಿದ್ದು ಈ ಬಗ್ಗೆ ಚಿಕಿತ್ಸೆ ಮಾಡಿದರು ಗುಣಮುಖರಾಗದೇ ಇದ್ದು, ಅದೇ ವಿಷಯದಲ್ಲಿ ಮನನೊಂದು ದಿನಾಂಕ 29/12/2022 ರಂದು ಸಮಯ ಸುಮಾರು 16:00 ಗಂಟೆಗೆ ಕುಂದಾಪುರ  ತಾಲೂಕು ಆಲೂರು ಗ್ರಾಮದ  ಕಳಿ ಎಂಬಲ್ಲಿರುವ ರಮ್ಮ ರವರ ಮನೆಯಲ್ಲಿ  ಯಾವುದೋ ವಿಷ ಪದಾರ್ಥವನ್ನು ಸೇವಿಸಿ ನರಳಾಡುತ್ತಿದ್ದವರನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈಧ್ಯರು ನಾಗು ಪೂಜಾರ್ತಿ ರವರನ್ನು ಪರೀಕ್ಷಿಸಿ 17:15 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ.    ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಯು.ಡಿ.ಆರ್ ಕ್ರಮಾಂಕ 30/2022 ಕಲಂ: 174‌ ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ . 

ಇತ್ತೀಚಿನ ನವೀಕರಣ​ : 30-12-2022 10:09 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080