ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ:  ಪಿರ್ಯಾದಿ: ಪ್ರಪುಲ್ಲ (62) ತಂದೆ: ಸಂಜಿವ ರಾವ್ ಉಪ್ಪೂರು ಗ್ರಾಮ ಇವರ ಹೆಂಡತಿಯ ತಮ್ಮ ಶಂಕರ ಕೆ . 53 ವರ್ಷ ಎಂಬುವರು ದಿನಾಂಕ 29.12.2022 ರಂದು ತನ್ನ  ka20ed5928 ನೆ ಮೋಟಾರ್ ಸೈಕಕಲ್ ನಲ್ಲಿ ಉಡುಪಿ ಸರ್ವಿಸ್  ಬಸ್ಟ್ಯಾಂಡ್ ನಿಂದ ಕಲ್ಸಂಕ ಅಂಬಾಗಿಲು ಮಾರ್ಗವಾಗಿ ತನ್ನ ಮನೆಯಾದ ಕೊಳಲಗಿರಿಗೆ ಹೋಗುತ್ತಿರುವಾಗ ಸಮಯ ಸುಮಾರು 22.30 ಗಂಟೆಗೆ ಅಂಬಾಗಿಲು ಜಂಕ್ಷನ್ ತಲುಪುವಾಗ ಸಂತೆಕಟ್ಟೆ ಕಡೆಯಿಂದ ಕರಾವಳಿ ಕಡೆಗೆ ರಾ.ಹೆ 66 ರ ಸಾರ್ವಜನಿಕ ಡಾಂಬಾರು ರಸ್ತೆಯಲ್ಲಿ mh04ku4009 ನೇ ಲಾರಿ ಚಾಲಕ ಶಿಜಿತ್ ಎ ಎಂಬುವರು ತನ್ನ ಬಾಪ್ತು ಲಾರಿಯನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಶಂಕರ್ ಕೆ ರವರ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಶಂಕರ್ ಕೆ ರವರು ಬೈಕ್ ಸಮೇತ ರಸ್ತೆಗೆ ಬಿದ್ದು ಅವರ ತಲೆಗೆ ಗಂಭಿರ ಸ್ವರೂಪದ ಗಾಯ ಹಾಗು ಕೈ ಕಾಲುಗಳಿಗೆ ರಕ್ತಗಾಯವಾಗಿದ್ದು ಮಾತನಾಡದೆ ಇದ್ದವರನ್ನು ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ಅಜ್ಜರಕಾಡಿಗೆ ಕರೆದುಕೊಂಡು ಹೋಗಿ ಅಲ್ಲಿ ಪರೀಕ್ಷಿಸಿದ ವೈಧ್ಯರು ಶಂಕರ ಕೆ ರವರು ಈಗಾಗಲೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಉಡುಪಿ ಸಂಚಾರ ಠಾಣೆ ಅಪರಾಧ ಕ್ರಮಾಂಕ 110/2022 ಕಲಂ: 279, 304(ಎ)  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಪಡುಬಿದ್ರಿ: ಪಿರ್ಯಾದಿ ಪ್ರಸಾದ್ ಕೆ ಜಾನ್, ಪ್ರಾಯ: 38 ವರ್ಷ, ತಂದೆ: ಜಾನ್, ವಾಸ: ಕಟ್ಟಯಲ್ ವೀಡ್, ಕುರುಲಾಯಿ ಅಂಚೆ ಮತ್ತು ಗ್ರಾಮ ಇವರು  ದಿನಾಂಕ: 29.12.2022 ರಂದು ಅವರ ಪರಿಚಯದ ಜ್ಯೋತೀಷ್ ಕೆ ಜೋಸೆಫ್ ಎಂಬುವರ ಬಾಬ್ತು KL-11-Y-1289 ನೇ ನಂಬ್ರದ ಮೋಟಾರ್ ಸೈಕಲ್ಲಿನಲ್ಲಿ ಸಹ ಸವಾರರಾಗಿ ಕುಳಿತುಕೊಂಡು ಕಾರವಾರದಿಂದ ಕೇರಳಕ್ಕೆ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯಲ್ಲಿ ಹೋಗುತ್ತಾ ಸಮಯ ಸುಮಾರು 11:00 ಗಂಟೆಯ ವೇಳೆಗೆ ಉಡುಪಿ ಜಿಲ್ಲೆ ಕಾಪು ತಾಲೂಕು ತೆಂಕ ಎರ್ಮಾಳು ಗ್ರಾಮದ ಅಶೋಕ ಎಂಬುವರ ಹೋಟೆಲ್ ಎದುರು ತಲುಪುತ್ತಿದ್ದಂತೆ, ರಸ್ತೆಯ ಎಡಬದಿಯಲ್ಲಿ ನಿಂತಿದ್ದ KA-48-4615 ನೇ ನಂಬ್ರದ  ಟೆಂಪೋವನ್ನು ಅದರ ಚಾಲಕ ಆನಂದ ಭಜಂತ್ರಿ ಎಂಬಾತನು ಯಾವುದೇ ಸೂಚನೆ ನೀಡದೇ ತನ್ನ ಟೆಂಪೋವನ್ನು ಒಮ್ಮೆಲೇ ರಾಷ್ಟ್ರೀಯ ಹೆದ್ದಾರಿ-66 ಕ್ಕೆ ಪ್ರವೇಶಿಸಿ ಪಿರ್ಯಾದಿದಾರರು ಸಂಚರಿಸುತ್ತಿದ್ದ ಮೋಟಾರ್ ಸೈಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್‌ಸೈಕಲ್ ಸವಾರ ಹಾಗೂ ಸಹ ಸವಾರರು ಮೋಟಾರ್‌‌ಸೈಕಲ್ ಸಮೇತ ರಸ್ತೆಗೆ ಬಿದ್ದಿರುತ್ತಾರೆ. ಸದ್ರಿ ಅಪಘಾತದಿಂದ ಪಿರ್ಯಾದಿದಾರರ ಎಡಕೈ ಭುಜದ ಬಳಿ ಹಾಗೂ ಬಲಕೈಗೆ ಸಣ್ಣಪುಟ್ಟ ತರಚಿದ ಗಾಯವಾಗಿದ್ದು, ಮೋಟಾರ್  ಸೈಕಲ್ ಸವಾರ ಜ್ಯೋತೀಷ್ ಕೆ ಜೋಸೆಫ್ ರವರ ಎಡಕಾಲಿನ ಮೂಳೆ ಮುರಿತ ಮತ್ತು ಕೈಕಾಲುಗಳಿಗೆ ತರಚಿದ ಗಾಯಗಳಾಗಿದ್ದು, ಚಿಕಿತ್ಸೆಯ ಬಗ್ಗೆ ಸುರತ್ಕಲ್‌‌‌ನ ಅಥರ್ವ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪಿರ್ಯಾದಿದಾರರು ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದು, ಜ್ಯೋಯತೀಷ್ ಕೆ ಜೋಸೆಫ್ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 170/2022 ಕಲಂ 279,  337, 338 ಐಪಿಸಿ. ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ಪಿರ್ಯಾದಿ ಶರತ್ ಕಿಣಿ (31) ತಮದೆ: ಅಚ್ಚುತ್ ಕಿಣಿ ವಾಸ: ಶ್ರೀ ಮಹಾಲಸಾ ಸಭಾಭವನ ಮಲ್ಪೆ ಕೊಡವೂರು ಗ್ರಾಮ ಇವರು  ತಂದೆ ಅಚ್ಚುತ್ ಕಿಣಿ (69 ವರ್ಷ)  ರವರಿಗೆ  ಚಿಕ್ಕದಿನಿಂದಲೆ  ಮೈತುಂಬಾ  ಚರ್ಮದ ಮೇಲೆ  ಬಿಳಿ ಕಲೆಯ ರೋಗವಿದ್ದು ,ಇತ್ತೀಚಿಗೆ ಒಂದು ವಾರದ ಹಿಂದೆ  ಹರ್ನಿ ಶಸ್ತ್ರಚಿಕಿತ್ಸೆ  ಆಗಿರುತ್ತದೆ.  ಶಸ್ತ್ರ ಚಿಕಿತ್ಸೆಗೆ ಹೆಚ್ಚು ಹಣ ಖರ್ಚಾಗಿದ್ದು, ನಾನು ಹೊರೆಯಾಗಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದು, ದಿನಾಂಕ:29-12-2022 ರಂದು ರಾತ್ರಿ 10:00 ಗಂಟೆಗೆ ಊಟ ಮಾಡಿ ಮಲಗಿದವರು  ದಿನಾಂಕ: 30-12-2022 ರಂದು ಬೆಳಿಗ್ಗೆ 5:15 ಗಂಟೆಗೆ ಪಿರ್ಯಾದಿದಾರರು ಎದ್ದು ನೋಡಿದಾಗ ಪಿರ್ಯಾದಿದಾರರ ತಂದೆ ಕಾಣದೆ  ಇದ್ದು ಪಿರ್ಯಾದಿದಾರು ಮನೆಯ ಆಸುಪಾಸು  ಹುಡುಕಾಡಿದರೂ  ಸಿಕ್ಕಿರುವುದಿಲ್ಲ. ನಂತರ ಮನೆಯವರು ಹಾಗೂ ಇತರರೊಂದಿಗೆ  ಕಲ್ಮಾಡಿ, ಬಾಪುತೋಟ, ಬಂದರು ಕಡೆ ಹುಡುಕಾಡಿ , ಸೀವಾಕ್ ವೇ   ಬೀಚ್  ಕಡೆ ಹುಡುಕಾಡುವಾಗ ಬೆಳಿಗ್ಗೆ  06:30 ಗಂಟೆಗೆ  ಸಮುದ್ರದ  ತೀರದಲ್ಲಿ ಪಿರ್ಯಾದಿದಾರರ ತಂದೆಯವರ ಮೃತದೇಹ ದೊರತಿದ್ದು, ಮೃತದೇಹವನ್ನು  ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಮಲ್ಪೆ  ಠಾಣಾ ಯುಡಿಆರ್ ನಂಬ್ರ 74/2022 . ಕಲಂ- 174ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕುಂದಾಪುರ: ಪಿರ್ಯಾದಿ: ನಾರಾಯಣ ಸ್ವಾಮಿ ಪ್ರಾಯ: 24 ವರ್ಷ, ತಂದೆ: ಅಶ್ವತಪ್ಪ , ವಾಸ: ಬಿ ಬ್ಲಾಕ್, 10 ನೇ ವಾರ್ಡ,ಬಾಪೂಜಿ ನಗರ, ಕುಂಬಾರ ಪೇಟೆ ಇವರ ಅಣ್ಣನಾದ ಶ್ರಿನಾಥ್  25 ವರ್ಷ ಇವರು ದಿನಾಂಕ 28/12/2022 ರಂದು ಶಬರಿಮಲೆ ಯಾತ್ರೆ ಮುಗಿಸಿ ಬಂದು ಕುಂದಾಪುರದ ಆನೆಗುಡ್ಡೆ ದೇವಸ್ಥಾನದ ಬಳಿ ಬಸ್ಸನ್ನು  ನಿಲ್ಲಿಸಿದ ಸಮಯ ಬಸ್ ನ ಟಾಪ್ ನಲ್ಲಿ ಮಲಗಿದ್ದವನು ಆಕಸ್ಮಿಕವಾಗಿ ಬಸ್ಸಿನ ಮೇಲಿಂದ ಕೆಳಗೆ ನೆಲಕ್ಕೆ ಬಿದ್ದು  ಅಸ್ವಸ್ಥಗೊಂಡವನನ್ನು  ಕುಂದಾಪುರ ಸರ್ಕಾರಿ  ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ  ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಚಿಕಿತ್ಸೆ ಪಡೆಯುತ್ತಿದ್ದ  ಅಣ್ಣನು ದಿನಾಂಕ 30/12/2022 ರಂದು ರಾತ್ರಿ 01:25 ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ    ವೈಧ್ಯರು ತಿಳಿಸಿರುತ್ತಾರೆ. ಫಿರ್ಯಾಧಿದಾರರ ಅಣ್ಣ ಶ್ರೀನಾಥನು ಬಸ್ಸಿನ ಟಾಪ್ ನ ಮೇಲೆ ನಿದ್ರಿಸುತ್ತಿದ್ದವನು  ಆಕಸ್ಸಿಕವಾಗಿ ಜಾರಿ  ನೆಲಕ್ಕೆ ಬಿದ್ದು ತಲೆಗೆ ತೀವ್ರ ಗಾಯಗೊಂಡವನು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ಠಾಣೆ  UDR No 49/2022 ಕಲಂ: 174 CrPC  ಯಂತೆ ಪ್ರಕರಣ ದಾಖಲಿಸಲಾಗಿದೆ.

ಗಂಡಸು ಕಾಣೆ ಪ್ರಕರಣ

  • ಬ್ರಹ್ಮಾವರ: ಬ್ರಹ್ಮಾವರ ತಾಲೂಕು, ಚೇರ್ಕಾಡಿ ಗ್ರಾಮದ, ಬಾಯರ್‌ಬೆಟ್ಟು ಎಂಬಲ್ಲಿ ವಾಸವಾಗಿರುವ ಫಿರ್ಯಾದಿ ನವೀನ (30), ತಂದೆ: ಗಣಪ ನಾಯ್ಕ, ತಂದೆ: ಪುಣಚೂರು ಕಂಬ್ಳಿ ಮಜಲು, ಬೆಳ್ಳಂಪಳ್ಳಿ ಗ್ರಾಮ ಇವರ ಮಾವನಾದ ನಾಗೇಶ ನಾಯ್ಕ, (ಪ್ರಾಯ: 41 ವರ್ಷ) ಎಂಬವರು ದಿನಾಂಕ 27.12.2022 ರಂದು ರಾತ್ರಿ 10:00 ಗಂಟೆಯಿಂದ 12:00 ಗಂಟೆಯ ಮಧ್ಯಾವಧಿಯಲ್ಲಿ ಮನೆಯಿಂದ ಕಾಣೆಯಾಗಿರುತ್ತಾರೆ. ಅವರನ್ನು ಹುಡುಕಾಡಿದ್ದಲ್ಲಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ 220/2022 ಕಲಂ : ಗಂಡಸು ಕಾಣೆಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 30-12-2022 06:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080