ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

 • ಕುಂದಾಪುರ: ದಿನಾಂಕ 29/12/2021 ರಂದು ಬೆಳಿಗ್ಗೆ 08:30 ಗಂಟೆಗೆ ಪಿರ್ಯಾದಿದಾರರಾದ ಭೋಜ ಕುಲಾಲ್ (66), ತಂದೆ:ಬೊಮ್ಮ ಕುಲಾಲ್, ವಾಸ: ತೆಂಕಬೆಟ್ಟು ಹಾರಿಯಾಡಿ, ಹೆಸ್ಕತ್ತೂರು ಗ್ರಾಮ ಕುಂದಾಪುರ ತಾಲೂಕು ಇವರ ಮಗ ರಾಘವೇಂದ್ರ ಎಂಬುವವರು ಎಂದಿನಂತೆ  ಆಟೋ ಬಾಡಿಗೆ ಹೋದವರು ಮಧ್ಯಾಹ್ನ ವಾಪಾಸ್ಸು 13:00 ಗಂಟೆಗೆ ಊಟಕ್ಕೆಂದು ಮನೆಗೆ ಬಂದವರು ಊಟ ಮಾಡದೆ ಕೈಯಲ್ಲಿ ನೈಲಾನ್  ಹಗ್ಗವನ್ನು ಹಿಡಿದು ಮನೆಯ ಪಕ್ಕದಲ್ಲಿರುವ ಹೊಳೆಯನ್ನು ದಾಟಿ ಹೆಸ್ಕತ್ತೂರು  ಗ್ರಾಮ  ಹಾರ್ಯಾಡಿ ಎಂಬಲ್ಲಿರುವ ರಾಮಚಂದ್ರ ಉಪಾಧ್ಯಾಯರ ಹಾಡಿಯಲ್ಲಿ ಮಧ್ಯಾಹ್ನ 1:00 ಗಂಟೆಯಿಂ 2:00 ಗಂಟೆಯ ಮಧ್ಯಾವದಿಯಲ್ಲಿ  ನೈಲಾನ್‌ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು  ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 37/2021 ಕಲಂ:  174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

 • ಕೋಟ: ಪಿರ್ಯಾದಿದಾರರಾದ ಸುಜಾತ (49) , ಗಂಡ: ಗೋಪಾಲ ಶೆಟ್ಟಿಗಾರ,  ವಾಸ:ಮೊಗವೀರ ಪೇಟೆ, ಕೊಕ್ಕರ್ಣೆ,  ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ ಇವರ ತಮ್ಮ ಭಾಸ್ಕರ ಶೆಟ್ಟಿಗಾರ (38) ಇವರು ಊರಿನಲ್ಲಿ ಟೈಲರ್  ಕೆಲಸ ಮಾಡಿಕೊಂಡಿದ್ದು ನಂತರ  ಬೆಂಗಳೂರಿನಲ್ಲಿ ಟೈಲರ್ ಕೆಲಸ ಮಾಡಿ ಬಳಿಕ ಎರಡು ವರ್ಷಗಳಿಂದ  ಮನೆಯಲ್ಲಿದ್ದು  ಒಂದು ವರ್ಷದಿಂದ  ಪಿರ್ಯಾದಿದಾರರ ಪರಿಚಯದ  ಜಯಾನಂದರವರು ಗುಲ್ಬರ್ಗದಲ್ಲಿರುವ ಹೋಟೇಲ್ ಕೆಲಸಕ್ಕೆ ಸೇರಿಸಿರುತ್ತಾರೆ.  ದಿನಾಂಕ 09/12/2021 ರಂದು ಪಿರ್ಯಾದಿದಾರರ ತಮ್ಮ ಊರಿಗೆ ಬಂದಿದ್ದು ನಂತರ ಜಯಾನಂದರವರು ದಿನಾಂಕ 23/12/2021  ರಂದು ಪುನಃ ಗುಲ್ಬರ್ಗಕ್ಕೆ ಹೋಟೇಲ್ ಕೆಲಸಕ್ಕೆ  ಹೋಗಲು ಸಂಜೆ  07:30 ಗಂಟೆಗೆ  ಗಣೇಶ ಟ್ರಾವೆಲ್ಸ್  ಬಸ್ಸ್ ರೂಟ್ ನಂಬ್ರ: 21 ರಲ್ಲಿ ಸಾಸ್ತಾನ ಟೋಲ್ ಗೇಟ್ ನಲ್ಲಿ ಭಾಸ್ಕರ ಶೆಟ್ಟಿಗಾರನನ್ನು  ಹತ್ತಿಸಿರುತ್ತಾರೆ. ದಿನಾಂಕ 24/12/2021 ರಂದು ಪಿರ್ಯಾದಿದಾರರ ತಮ್ಮ ಗುಲ್ಬರ್ಗ ಹೋಟೇಲ್ ಗೆ ತಲುಪಿಲ್ಲವಾಗಿ  ಜಯಾನಂದ ರವರು ತಿಳಿಸಿರುತ್ತಾರೆ. ಭಾಸ್ಕರ ಶೆಟ್ಟಿಗಾರ ರವರನ್ನು ಸಂಬಂಧಿಕರ ಮನೆಯಲ್ಲಿ ಹಾಗೂ ಕುಂದಾಪುರದ ಸುತ್ತಮುತ್ತ  ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 216 /2021 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಕೋಟ: ಪಿರ್ಯಾದಿದಾರರಾದ ರೋಹಿಣಿ (24), ತಂದೆ: ಸುದಾಕರ ಮರಕಾಲ, ವಾಸ: ಎತ್ತಿನಹಟ್ಟಿ, ಶಿರಿಯಾರ ಗ್ರಾಮ, ಬ್ರಹ್ಮಾವರ ತಾಲೂಕು ಇವರು ಕಲ್ಮರ್ಗಿಯ ವಿನಾಯಕ ಜ್ಯುವೆಲ್ಲರ್ಸ್ ನಲ್ಲಿ ಕೆಲಸಮಾಡಿಕೊಂಡಿದ್ದು ಅದೇ ಪರಿಸರದಲ್ಲಿ  ರಿಕ್ಷಾ ಚಾಲಕನಾಗಿರುವ ರಾಘವೇಂದ್ರನ ಜೊತೆ ಪರಿಚಯವಿರುತ್ತದೆ. ರಾಘವೇಂದ್ರನು ಪಿರ್ಯಾದಿದಾರರ ಜೊತೆ  ನನ್ನನ್ನು ಮದುವೆಯಾಗುವೆಂದು ಪೀಡಿಸುತ್ತಿದ್ದರಿಂದ ಪಿರ್ಯಾದಿದಾರರು ಈ ಬಗ್ಗೆ ಕೋಟ ಪೊಲೀಸ್ ಠಾಣೆಗೆ ದೂರು ನಿಡಿದ್ದು ಈ ಬಗ್ಗೆ ಕೋಟ ಪೊಲೀಸರು ರಾಘವೇಂದ್ರನನ್ನು ಕರೆಯಿಸಿ ಇನ್ನೂ ಮುಂದಕ್ಕೆ ಪಿರ್ಯಾದಿದಾರರ ತಂಟೆಗೆ ಹೋಗದಂತೆ ಮುಚ್ಚಳಿಕೆ ಬರೆಯಿಸಿ ಕಳುಹಿಸಿರುತ್ತಾರೆ, ಹೀಗಿರುವಾಗ ದಿನಾಂಕ 29/12/2021 ರಂದು ಮಧ್ಯಾಹ್ನ 01:30 ಕ್ಕೆ ಕಲ್ಮರ್ಗಿಯ ವಿನಾಯಕ ಜ್ಯುವೆಲ್ಲರ್ಸ್ ನ ಬಳಿ ಇರುವ ಶೌಚಾಲಯಕ್ಕೆ ಹೋದಾಗ  ರಾಘವೇಂದ್ರನು ಪಿರ್ಯಾದಿದಾರರನ್ನು ಕೊಲ್ಲುವ ಉದ್ದೇಶದಿಂದ ಕೈಯಲ್ಲಿ ಚಾಕುವನ್ನು ಹಿಡಿದುಕೊಂಡು ಬಲಕೈಗೆ ಚೂರಿಯಿಂದ ಗಾಯಗೊಳಿಸಿದ್ದಲ್ಲದೇ ಪಿರ್ಯಾದಿದಾರರ ಕುತ್ತಿಗೆಯನ್ನು ಕೈಯಿಂದ ಹಿಚುಕಿ ನೆಲಕ್ಕೆ ದೂಡಿ ಎದೆಗೆ ಕಾಲಿನಿಂದ ತುಳಿದಾಗ ಪಿರ್ಯಾದಿದಾರರು ಕೂಗಿಕೊಂಡಾಗ  ಬಿಲ್ಡಿಂಗ್ ನ ಮಾಲೀಕರಾದ ಪ್ರಖ್ಯಾತ್ ರವರು ಬರುವುದನ್ನು ನೋಡಿ ರಾಘವೇಂದ್ರನು ಚಾಕುವನ್ನು ಅಲ್ಲಿಯೇ ಬೀಸಾಡಿ ಓಡಿ ಹೋಗಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 217 /2021 ಕಲಂ: 341, 307, 324 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಕೋಟ: ಪಿರ್ಯಾದಿದಾರರಾದ ರಾಜೇಶ್ (30) , ತಂದೆ: ಗಣಪ, ವಾಸ: ಚಿಟ್ಟಿಬೆಟ್ಟು, ಕೋಟತಟ್ಟು ಗ್ರಾಮ, ಕೋಟ ಅಂಚೆ,  ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ ಇವರ ಮನೆಯಲ್ಲಿ  ದಿನಾಂಕ 27/12/2021 ರಂದು ಮದುವೆ ಪ್ರಯುಕ್ತ  ಪಿರ್ಯಾದಿದಾರರ  ಮೆಹಂದಿ ಶಾಸ್ತ್ರ  ಇದ್ದು  ರಾತ್ರಿ 08:00 ಗಂಟೆಯಿಂದ  ಪ್ರಾರಂಭವಾಗಿದ್ದು, ಕಾರ್ಯಕ್ರಮಕ್ಕೆ ಡಿ.ಜೆ ವ್ಯವಸ್ಥೆ ಮಾಡಲಾಗಿತ್ತು. ನೆಂಟರಿಸ್ಟರೆಲ್ಲ ಸೇರಿರುತ್ತಾರೆ. ಸುಮಾರು 10:00 ಗಂಟೆಯ ಸಮಯಕ್ಕೆ ಕಾರ್ಯಕ್ರಮ  ಮುಗಿಸುತ್ತಿರುವಾಗ ಕೋಟ ಪೊಲೀಸ್ ಠಾಣೆಯ ಠಾಣಾಧಿಕಾರಿ ಸಂತೋಷ್ ಬಿ.ಪಿ, ಹೆಚ್.ಸಿ ರಾಮಣ್ಣ, ಹೆಚ್.ಸಿ ಅಶೋಕ್ ಶೆಟ್ಟಿ, ಮಂಜುನಾಥ ಮತ್ತು ಇತರ ಸಿಬ್ಬಂದಿಯವರು  ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ನುಗ್ಗಿ ಪಿರ್ಯಾದಿದಾರರನ್ನು ಹಾಗೂ ಅಲ್ಲಿರುವವರನ್ನು ಉದ್ದೇಶಿಸಿ ಬೈದು ಲಾಠಿಯಿಂದ ಪಿರ್ಯಾದಿದಾರರ ಚಿಕ್ಕಪ್ಪ ಗಣೇಶ ಬಾರ್ಕೂರು  ಇವರಿಗೆ  ಹೊಡೆದು ಕಾಲಿನಿಂದ ನೆಲಕ್ಕೆ ಕೆಡವಿ ತುಳಿದು ಕಾಲರ್ ಪಟ್ಟಿ ಹಿಡಿದು ಜೀಪಿಗೆ ತುಂಬುತ್ತಿದ್ದಂತೆ  ಪಿರ್ಯಾದಿದಾರರು, ಅವರ ತಾಯಿ ಗಿರಿಜಾ, ಚಿಕ್ಕ ತಾಯಿ ಬೇಬಿ, ಹಾಗೂ ಹಿರಿಯ ಮಹಿಳೆಯರು ಒಟ್ಟಾಗಿ  ಪೊಲೀಸರ ಕಾಲಿಗೆ ಬಿದ್ದು ಬಿಟ್ಟು ಬಿಡಿ ಎಂದು ಅಂಗಲಾಚುತ್ತಿದ್ದಾಗ ಪೋಲೀಸರು ಲಕ್ಷ್ಮೀ ರವರಿಗೆ ಲಾಠಿಯಿಂದ ತಲೆಗೆ ಹೊಡೆದು ಬೂಟು ಕಾಲಿನಿಂದ ತುಳಿದಿರುವುದಲ್ಲದೇ ಸುದರ್ಶನ, ಗಿರೀಶ ಮತ್ತು ಸಚಿನ್ ಎಂಬುವವರಿಗೆ  ಕೈಯಿಂದ ಹೊಡೆದು ಕಾಲರ್ ಗೆ ಕೈ ಹಾಕಿ ಜೀಪಿಗೆ ತುಂಬಿ ಠಾಣೆಗೆ  ಕರೆದುಕೊಂಡು ಹೋಗಿರುವುದಲ್ಲದೇ  ಠಾಣೆಯಲ್ಲಿ ಎಲ್ಲರನ್ನೂ ವಿವಸ್ತ್ರಗೊಳಿಸಿ  ಸೆಲ್ ಒಳಗೆ ಹಾಕಿ  ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 214 /2021 ಕಲಂ: 322, 324, 504, 506 ಜೊತೆಗೆ 34 ಐಪಿಸಿ ಮತ್ತು 3(2)(V-a) Sc ST ACT ರಂತೆ ಪ್ರಕರಣ ದಾಖಲಾಗಿರುತ್ತದೆ.  
 • ಕೋಟ: ಪಿರ್ಯಾದಿದಾರರಾದ ಜಯರಾಮ ನಾಯ್ಕ ಎಲ್ (27) ಇವರು ಕೋಟ ಪೊಲೀಸ್ ಠಾಣೆಯಲ್ಲಿ ಕಾನ್ಸಟೇಬಲ್ ಆಗಿ ಕೆಲಸ ಮಾಡಿಕೊಂಡಿದ್ದು,  ದಿನಾಂಕ 27/12/2021 ರಂದು ಠಾಣಾ ಮೀಸಲು ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ  ಕರ್ತವ್ಯ ಮುಗಿಸಿ  ವಸತಿ ಗೃಹದಲ್ಲಿ ವಿಶ್ರಾಂತಿಯಲ್ಲಿರುವಾಗ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಸಂತೋಷ್ ಬಿ.ಪಿ ರವರು ರಾತ್ರಿ 10:45 ಗಂಟೆಗೆ  ಕರೆ ಮಾಡಿ ಕೋಟತಟ್ಟು ಗ್ರಾಮದ ಚಿಟ್ಟಿಬೆಟ್ಟುವಿನ ರಾಜೇಶ್ ಎಂಬುವವರ ಮನೆಯಲ್ಲಿ ಮೆಹಂದಿ ಕಾರ್ಯಕ್ರಮಕ್ಕೆ ಏರುಧ್ವನಿಯಲ್ಲಿ ಡಿಜೆ ಸೌಂಡ್ ನ್ನು ಹಾಕಿ ಮೆಹಂದಿ ಮನೆಯ ಎದುರಿನ ಸಾರ್ವಜನಿಕ ರಸ್ತೆಯಲ್ಲಿ ಸುಮಾರು 30-50 ಜನ ಮಧ್ಯ ಸೇವನೆ ಮಾಡಿ ಕೇಕೆ ಹಾಕುತ್ತಾ ನೃತ್ಯ ಮಾಡುತ್ತಿದ್ದು ಈ ಬಗ್ಗೆ  ಪಿರ್ಯಾದಿದಾರರು ಇಲಾಖಾ ಜೀಪಿನಲ್ಲಿ ಪಿ.ಎಸ್.ಐ ಸಂತೋಷ್ ರವರೊಂದಿಗೆ ರಾತ್ರಿ 11:10 ಗಂಟೆಗೆ ಸ್ಥಳಕ್ಕೆ ತಲುಪಿ ನೋಡಿದಲ್ಲಿ  ಆರೋಪಿತರಾದ 1) ರಾಜೇಶ್, 2) ಸುದರ್ಶನ್, 3) ಗಣೇಶ ಬಾರ್ಕೂರು, 4) ಸಚಿನ್, 5) ಗಿರೀಶ್, 6) ನಾಗೇಂದ್ರ ಪುತ್ರನ್, 7) ನಾಗರಾಜ ಪುತ್ರನ್  ಮತ್ತು ಇತರರು  ಡಿಜೆ ಸೌಂಡ್ ನ್ನು  ಜೋರಾಗಿ ಹಾಕಿಕೊಂಡು ನೃತ್ಯ ಮಾಡುತ್ತಿರುವುದು  ಕಂಡು ಬಂದಿದ್ದು ಈ ಬಗ್ಗೆ ಸ್ಥಳದಲ್ಲಿ ಹಾಜರಿದ್ದ ಸ್ಥಳೀಯ ನಿವಾಸಿ ಸುಬ್ರಹ್ಮಣ್ಯ ಉರಾಳ ರವರು ಪಿ.ಎಸ್ಐರವರ ಬಳಿ ತನ್ನ ತಾಯಿಗೆ ಹೃದಯ ಸಂಬಂಧಿ ತೊಂದರೆ ಇದ್ದು ಡಿಜೆ ಸೌಂಡ ನ್ನು ಮೆಲ್ಲನೆ ಇಡುವಂತೆ  112 ಗೆ ಮಾಹಿತಿ ನೀಡಿದ್ದು  112 ಸಿಬ್ಬಂದಿಯವರು ಸ್ಥಳಕ್ಕೆ ಬಂದಾಗ ಅವರಲ್ಲಿಯೂ ಸಹ  ಆರೋಪಿತರು ಉಡಾಫೆಯಾಗಿ ಮಾತನಾಡಿರುವುದಾಗಿ ತಿಳಿಸಿರುತ್ತಾರೆ. ಆಗ  ಪಿ.ಎಸ್.ಐ ರವರು  ಡಿಜೆ ಸೌಂಡ್ ನ್ನು  ಕಡಿಮೆ ಮಾಡುವಂತೆ ತಿಳಿಸಿದಾಗ ಆರೋಪಿತರು  ಗುಂಪು ಕಟ್ಟಿಕೊಂಡು ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಪಿ.ಎಸ್.ಐ ರವರ ಬಳಿ  ನೀವು ಏನು ಮಾಡಿತ್ತೀರಾ ನಾವು ಬಂದ್ ಮಾಡುವುದಿಲ್ಲ ಎಂದು ಉಡಾಫೆಯಾಗಿ ಮಾತನಾಡಿ ಸಮವಸ್ತ್ರದಲ್ಲಿದ್ದ ಪಿ.ಎಸ್.ಐ ರವರನ್ನು ಕೈಯಿಂದ ದೂಡಿರುತ್ತಾರೆ.  ಆಗ ಪಿರ್ಯಾದಿದಾರರು ಡಿಜೆಯನ್ನು ಬಂದ್ ಮಾಡಲು ಹೋದಾಗ ಆರೋಪಿತರು  ಪಿರ್ಯಾದಿದಾರರನ್ನು ಸುತ್ತುವರಿದು ದೊಣ್ಣೆಯಿಂದ ಎಡಕೈನ ತೋರು ಬೆರಳು ಮತ್ತು ಮಧ್ಯದ ಬೆರಳಿನ  ಬಳಿ ಹೊಡೆದು ಪಿರ್ಯಾದಿದಾರರು ಧರಿಸಿದ ಸಮವಸ್ತ್ರವನ್ನು ಹರಿದು ಹಾಕಿ ಅವಾಚ್ಯವಾಗಿ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿದೆ . ಪಿರ್ಯಾದಿದಾರರಿಗೆ ಆರೋಪಿತರು ಹಲ್ಲೆ ಮಾಡಿದ್ದರಿಂದ ದಿನಾಂಕ 28/12/2021 ರಂದು ಬೆಳಿಗ್ಗೆ ಕೈ ನೋವು ಜಾಸ್ತಿಯಾಗಿದ್ದರಿಂದ  ಸಿ.ಹೆಚ್.ಸಿ ಕೋಟಕ್ಕೆ ಹೋಗಿ ಚಿಕಿತ್ಸೆ ಪಡೆದು ನಂತರ ದಿನಾಂಕ 29/12/2021 ರಂದು  ನೋವು ಜಾಸ್ತಿಯಾದ ಕಾರಣ  ಕುಂದಾಪುರ ತಾಲೂಕು ಆಸ್ಪತ್ರೆಗೆ ಹೋಗಿ ಚಿಕಿತ್ಸೆಗೆ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 215 /2021 ಕಲಂ: 143, 147, 148, 323, 324,  353,  504, 506  ಜೊತೆಗೆ 149 ಐಪಿಸಿ ಮತ್ತು 3(1)(r),3(1)(s) 3 (2) (va) SC ST ACT 1989 ರಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 30-12-2021 09:52 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080