ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

  • ಉಡುಪಿ:ಪಿರ್ಯಾದುದಾರ ಅಶೋಕ ಗೌಡ, ಪ್ರಾಯ: 46 ವರ್ಷ ತಂದೆ: ಕರಿಯಪ್ಪ ವಾಸ: ಜನನ ಸಾಗರ ಫ್ಲಾಟ್‌, ರಾಮಕೃಷ್ಣ ನಗರ 2ನೇ ಕ್ರಾಸ್‌, ಹನುಮಂತ ನಗರ, ಪುತ್ತೂರು ಗ್ರಾಮ, ಉಡುಪಿ ತಾಲೂಕು ಇವರು ಸಂತೆಯಲ್ಲಿ ದಿನಸಿ ವ್ಯಾಪಾರ ಕೆಲಸ ಮಾಡಿಕೊಂಡಿದ್ದು, ದಿನಾಂಕ 29/12/2021 ರಂದು ಮಂಗಳೂರಿನಿಂದ ತನ್ನ ಇಕೊ ವಾಹನ ನಂಬ್ರ: KA 19 MB 659 ನೇದರಲ್ಲಿ ದಿನಸಿ ಸಾಮಾಗ್ರಿಗಳನ್ನು ತುಂಬಿಸಿಕೊಂಡು ಬಂದು, ವಾಹನಕ್ಕೆ ಲಾಕ್‌ ಮಾಡಿ ಪುತ್ತೂರು ಗ್ರಾಮದ ಹನುಮಂತ ನಗರ ರಾಮಕೃಷ್ಣ ನಗರ 2ನೇ ಕ್ರಾಸ್‌ನಲ್ಲಿರುವ ಪಿರ್ಯಾದುದಾರರ ಮನೆಯ ಮುಂದೆ ನಿಲ್ಲಿಸಿದ್ದು, ದಿನಾಂಕ 29/12/2021 ರಂದು 21:00 ಗಂಟೆಯಿಂದ ದಿನಾಂಕ 30/12/2021 ರಂದು ಬೆಳಿಗ್ಗೆ 05:00 ಗಂಟೆ ನಡುವಿನ ಸಮಯದಲ್ಲಿ ಯಾರೋ ಕಳ್ಳರು ವಾಹನದ ಚಾಲಕ ಸೀಟಿನ ಬದಿಯ ಬಾಗಿಲು ಹಾಗೂ ಹಿಂಬದಿಯ ಬಾಗಿಲು ತೆರೆದು ವಾಹನದಲ್ಲಿದ್ದ ಸುಮಾರು ರೂ. 35,000 ಬೆಲೆಬಾಳುವ ದಿನಸಿ ಸಾಮಾಗ್ರಿಗಳನ್ನು ಕಳವು ಮಾಡಿಕೊಂಡಿದ್ದು ಹೋಗಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 197/2021, ಕಲಂ: 379  ಐ ಪಿ ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣ

  • ಬ್ರಹ್ಮಾವರ : ಪಿರ್ಯಾದುದಾರ ಪ್ರಕಾಶ್ಚಂದ್ರ ಶೆಟ್ಟಿ   (40), ತಂದೆ: ದಿ. ನರಸಿಂಹ ಶೆಟ್ಟಿ ವಾಸ: ನಾರ್ಕಳಿ, ಹಳಗೇರಿ ಮನೆ, ಹರ್ಕೂರು ಗ್ರಾಮ ಮತ್ತು ಅಂಚೆ, ಕುಂದಾಪುರ  ತಾಲೂಕು ಇವರು ದಿನಾಂಕ 28/12/2021 ರಂದು ಪಿರ್ಯಾದಿದಾರರು ತನ್ನ ಬಾಬ್ತು KA.20.EG.6292 ನೇ ಹೊಂಡಾ ಆ್ಯಕ್ಟಿವಾ ಸ್ಕೂಟರ್ ನಲ್ಲಿ ಬ್ರಹ್ಮಾವರ ಕಡೆಯಿಂದ ಕೋಟ ಕಡೆಗೆ ರಾ.ಹೆ 66 ರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ಮಧ್ಯಾಹ್ನ 3:40 ಗಂಟೆ ಸುಮಾರಿಗೆ ಬ್ರಹ್ಮಾವರ ತಾಲೂಕು ವಾರಂಬಳ್ಳಿ ಗ್ರಾಮದ ಉಪ್ಪಿನಕೋಟೆ ಜಂಕ್ಷನ್ ತಲುಪುವಾಗ ಸಾಸ್ತಾನ ಕಡೆಯಿಂದ ಆರೋಪಿಯು ತನ್ನ ಬಾಬ್ತು KA.20.AB.0377 ನಂಬ್ರದ Tata Intra ಗೂಡ್ಸ್ ರಿಕ್ಷಾವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಉಪ್ಪಿನಕೋಟೆ ಜಂಕ್ಷನ್ ನಲ್ಲಿ ಯಾವುದೇ ಸೂಚನೆ ನೀಡದೇ ಏಕಾಏಕಿ ಉಪ್ಪಿನಕೋಟೆ ಕಡೆಗೆ ಹೋಗಲು ರಾ.ಹೆ 66 ಕ್ಕೆ  ವಾಹನ ಚಲಾಯಿಸಿದ್ದು ಆಗ ಆತನ ವಾಹನ ಎಡಬದಿಯ ಮಧ್ಯ ಭಾಗ ಫಿರ್ಯಾದಿದಾರರ ಸ್ಕೂಟರ್‌ಗೆ ಢಿಕ್ಕಿಯಾಗಿರುತ್ತದೆ,  ಪರಿಣಾಮ ಫಿರ್ಯಾದಿದಾರರು ಸ್ಕೂಟರ್ ಸಮೇತ ಟಾರ್ ರಸ್ತೆಯ ಮೇಲೆ ಬಿದ್ದು ಅವರ ಎಡಕಾಲಿನ ಪಾದದ ಮೇಲ್ಬಾಗ ಮಾಂಸ ಹರಿದುಹೋದ ರಕ್ತಗಾಯ, ಎಡಕಾಲಿನ ಹಿಮ್ಮಡಿ ಗಾಯವಾಗಿರುತ್ತದೆ ( ಆರೋಪಿಯು ಫಿರ್ಯಾದಿದಾರರಿಗೆ ಆಸ್ಪತ್ರೆಯ ವೆಚ್ಚ ನೀಡುವುದಾಗಿ ಹೇಳಿದ್ದು ಈಗ ಆಸ್ಪತ್ರೆ ವೆಚ್ಚ ಜಾಸ್ತಿಯಾಗಿರುವುದರಿಂದ ಹಣ ನೀಡಲು ನಿರಾಕರಿಸಿರುವುದರಿಂದ ಫಿರ್ಯಾದಿದಾರರು ದೂರು ನೀಡಲು ವಿಳಂಬ ವಾಗಿರುತ್ತದೆ.) ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 210/2021 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.  

ಅಸ್ವಾಭಾವಿಕ ಮರಣ ಪ್ರಕರಣ

  •  ಕುಂದಾಪುರ :ಫಿರ್ಯಾದಿ  ರಾಜೇಶ್ ಪ್ರಾಯ: 27 ವರ್ಷ ತಂದೆ: ಸಂಜೀವ ದೇವಾಡಿಗವಾಸ: ಕೊಳೆಹಿತ್ಲು , ಹರೇಗೋಡು, ಕಟ್‌ ಬೆಲ್ತೂರು  ಗ್ರಾಮ ಕುಂದಾಪುರ ತಾಲೂಕು ಇವರ ತಮ್ಮ ವಿಷ್ನೇಶ (24)  ನು ಬೆಂಗಳೂರಿನ ಖಾಸಗಿ ಸಾಪ್ಟವೇರ್‌  ಕಂಪನಿಯಲ್ಲಿ ಕೆಲಸ  ಮಾಡಿಕೊಂಡಿದ್ದು ಕೋವಿದ್ 19 ಹಿನ್ನಲೆಯಲ್ಲಿ  ಪ್ರಸ್ತುತ  ಊರಿಗೆ ಬಂದು ವರ್ಕ ಪ್ರಮ್ ಹೋಂನಲ್ಲಿ ಗಣಕಯಂತ್ರದಲ್ಲಿ   ಕೆಲಸ ಮಾಡಿಕೊಂಡಿರುವುದಾಗಿದೆ.  ಈತನು ನಿನ್ನೆ ದಿನಾಂಕ: 29/12/2021 ರಂದು ರಾತ್ರಿ ಸುಮಾರು 8.30 ಗಂಟೆಗೆ ಊಟ ಮಾಡಿ ಮನೆಯ ಕೋಣೆಯಲ್ಲಿ ಮಲಗಿಕೊಂಡಿದ್ದು ದಿನಾಂಕ: 30/12/2021 ರಂದು ಬೆಳಿಗ್ಗೆ  ಸುಮರು 5 .00 ಗಂಟೆಗೆ  ಈತನ ಅಜ್ಜನಾದ ಹೆರಿಯ ದೇವಾಡಿಗರು  ಎದ್ದು ವಿಷ್ನೇಶನು  ಮಲಗಿದ್ದ  ಕೋಣೆಗೆ ಹೋಗಿ ನೋಡಲಾಗಿ  ಇಲ್ಲದೇ ಇದ್ದದನ್ನು ಕಂಡು ಮನೆಯವರಿಗೆ ತಿಳಿಸಿರುತ್ತಾರೆ ಕೂಡಲೇ   ಹುಡುಕಾಡಲಾಗಿ   ಮನೆಯ  ಎದುರಿರುವ  ಮಕ್ಕಿಮನೆ ಆನಂದ ಪೂಜಾರಿಯವರಿಗೆ ಸೇರಿದ  ಗೇರು ಮರಕ್ಕೆ  ಲೈನಾನ್ ಹಗ್ಗದಿಂದ ತನ್ನ ಕುತ್ತಿಗೆಗೆ ಬಿಗಿದುಕೊಂಡು  ಮರದಲ್ಲಿ  ನೇತಾಡುವ ಸ್ಥಿತಿಯಲ್ಲಿ ಕಂಡು ಬಂದಿರುತ್ತದೆ. ಕೂಡಲೇ ಅಕ್ಕಪಕ್ಕದವರೆಲ್ಲ ಸೇರಿಕೊಂಡು  ಜೀವ ಇರಬಹುದೆಂದು ತಿಳಿದು ಕತ್ತಿಯಿಂದ ಹಗ್ಗವನ್ನು ತುಂಡರಿಸಿ  ಕೆಳಗಿಳಿಸಿ ನೋಡಲಾಗಿ  ಮೃತ ಪಟ್ಟಿರುವುದು ದೃಡಪಟ್ಟಿರುತ್ತದೆ. ಮೃತನು ತನ್ನ ತಂದೆಯ ಆಧಾರ್ ಕಾರ್ಡಿನ ಪ್ರತಿಯಲ್ಲಿ  Moble APP ನಲ್ಲಿ  ಸಾಲವನ್ನು  ಮಾಡಿದ್ದು ಅದನ್ನು ತೀರಿಸಲಾಗದೇ  ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ   ಡೆತ್ ನೋಟ್ ಬರೆದಿರುತ್ತಾನೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣಾ ಠಾಣಾ ಯುಡಿಆರ್‌‌ ನಂ: 38/2021  ಕಲಂ:  174  ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.  

ಇತ್ತೀಚಿನ ನವೀಕರಣ​ : 30-12-2021 05:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080