ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 28/11/2022 ರಂದು ಪಿರ್ಯಾದಿದಾರರಾದ ಬಿ .ಎನ್ ಶಂಕರ ಪೂಜಾರಿ (64), ತಂದೆ: ದಿ. ಸುಕ್ರ ಪೂಜಾರಿ, ವಾಸ: ಶ್ರೀ ಲಕ್ಷ್ಮೀ, ನಡುಹಿತ್ಲು, ವಾರಮಬಳ್ಳಿ ಗ್ರಾಮ, ಬ್ರಹ್ಮಾವರ ತಾಲೂಕು ಇವರು 52 ನೇ ಹೇರೂರು ಗ್ರಾಮದ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಬಳಿ ಇರುವ ಶ್ರೀ  ಲಕ್ಷ್ಮೀ ಎಂಟರ್ ಪ್ರೈಸಸ್, ಬಿ.ಪಿ.ಸಿ.ಎಲ್ ಪೆಟ್ರೋಲ್ ಬಂಕ್ ನಲ್ಲಿದ್ದಾಗ ಆರೋಪಿ ಬಮ್ ಬಹದ್ದೂರ್ ತಾಪಾ ರವರು NL-01-AE-8549ನೇ ಕಂಟೈನರ್ ಗೂಡ್ಸ್ ಲಾರಿಗೆ ಡಿಸೇಲ್‌  ತುಂಬಿಸಿಕೊಂಡು ರಾತ್ರಿ 9:45 ಗಂಟೆಗೆ  ರಾಷ್ಟ್ರೀಯ ಹೆದ್ದಾರಿ 66 ಕ್ಕೆ ಹೋಗಲು ಪೆಟ್ರೋಲ್ ಬಂಕ್‌ ನಿಂದ ಲಾರಿಯನ್ನು ಅತೀ ವೇಗವಾಗಿ ಚಲಾಯಿಸಿಕೊಂಡು ಹೊರಟು ಸ್ವಲ್ಪ ಮುಂದೆ ಹೋಗಿ ಎಕಾ ಏಕಿ ನಿರ್ಲಕ್ಷತನದಿಂದ   ಒಮ್ಮೇಲೆ ಹಿಮ್ಮುಖವಾಗಿ ಚಲಾಯಿಸಿ ಸಿ.ಎನ್.ಜಿ ಪಂಪ್‌ ಗೆ ಡಿಕ್ಕಿ ಹೊಡೆದಿರುತ್ತಾನೆ. ಈ ಅಪಘಾತದಿಂದ ಸಿ.ಎ.ಜಿ ಪಂಪ್ ಜಖಂ ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 202/2022 ಕಲಂ : 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .    

ಕಳವು ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಸವಿತಾ (37), ಗಂಡ: ಶಶಿಧರ್‌ ಕೆ ಅಮೀನ್‌,  ವಿಳಾಸ: ಮನೆ ನಂಬ್ರ: 5-72ಎ,  ಬಿಎಂಎಂ ಶಾಲೆ ರಸ್ತೆ, ಬೈಲೂರು, 76-ಬಡಗುಬೆಟ್ಟು ಗ್ರಾಮ, ಉಡುಪಿ  ತಾಲೂಕು ಇವರು ದಿನಾಂಕ 29/11/2022 ರಂದು ಬೆಳಿಗ್ಗೆ 11:30 ಗಂಟೆಯಿಂದ 13:15 ಗಂಟೆ ನಡುವೆ ಮನೆಯಲ್ಲಿ ಯಾರೂ ಇಲ್ಲದೆ ಇರುವ ಸಮಯದಲ್ಲಿ ಯಾರೋ ಕಳ್ಳರು ಪಿರ್ಯಾದಿದಾರರ ಮನೆಯ ಹಿಂಬಾಲಿನ ಮೂಲಕ ಒಳಪ್ರವೇಶಿಸಿ, ಕಪಾಟಿನಲ್ಲಿದ್ದ 4 ಪವನ್ ನ ಚಿನ್ನದ ಚೈನ್-1, ಒಂದು ಪವನ್ ನ ಚಿನ್ನದ ಚೈನ್-1, 4 ಗ್ರಾಂ ನ ಬೆಂಡೋಲೆ-1 ಜೊತೆ, 4 ಗ್ರಾಂ ನ ಬ್ರೆಸ್ಲೈಟ್-1, 3 ಗ್ರಾಂ ನ ಬ್ರೆಸ್ಲೈಟ್-1, 4 ಗ್ರಾಂ ನ ಉಂಗುರ-1, 2 ಗ್ರಾಂ ನ ಉಂಗುರ-1 ಒಟ್ಟು 57 ಗ್ರಾಂ ಚಿನ್ನಾಭರಣ ಹಾಗೂ ನಗದು ರೂಪಾಯಿ 11,000/- ವನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ ರೂಪಾಯಿ 2,31,000/- ಆಗಿರುತ್ತದೆ . ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 174/2022 ಕಲಂ:  454, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಉಡುಪಿ: ಪಿರ್ಯಾದಿದಾರರಾದ ಬಿ. ಸತ್ಯನಾರಾಯಣ ಶೇಟ್‌ (59), ತಂದೆ: ದಿ. ಪಾಂಡುರಂಗ ಶೇಟ್‌, ವಾಸ: ಸರಸ್ವತಿ ಸದನ, ಮಾರುತಿ ವಿಥೀಕಾ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ಉಡುಪಿ ಕನಕದಾಸ ರಸ್ತೆಯಲ್ಲಿರುವ ಪಾಂಡುರಂಗ ಜುವೆಲ್ಲರ್ಸ್‌ ಎಂಬ ಅಂಗಡಿಯನ್ನು ನಡೆಸಿಕೊಂಡಿದ್ದು, ದಿನಾಂಕ 27/11/2022 ರಂದು 16:00 ಗಂಟೆಯಿಂದ 16:40 ಗಂಟೆ ನಡುವಿನ ಸಮಯದಲ್ಲಿ ಪಿರ್ಯಾದಿದಾರರ ಅಂಗಡಿಗೆ ಗ್ರಾಹಕರಂತೆ ಬಂದ ಇಬ್ಬರು ಅಪರಿಚಿತ ಮಹಿಳೆಯರು ಮತ್ತು ಓರ್ವ ಗಂಡಸು ಪಿರ್ಯಾದಿದಾರರ ಗಮನವನ್ನು ಬೇರೆಡೆಗೆ ಸೆಳೆದು 4 ಗ್ರಾಂ ತೂಕದ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ವತ್ತಿನ ಮೌಲ್ಯ ರೂಪಾಯಿ 22,000/- ಆಗಿರುತ್ತದೆ . ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 172/2022 ಕಲಂ:  379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಗಂಡಸು ಕಾಣೆ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ಗಣೇಶ ಆಚಾರ್ಯ (42), ತಂದೆ: ದಿ. ರಾಮಪ್ಪ ಆಚಾರ್ಯ, ಜಲಜ  ನಿಲಯ  ,ಲಕ್ಷ್ಮೀನಗರ ಕೊಡವೂರು ಅಣ್ಣ ಉದಯ ಆಚಾರ್ಯ(43) ರವರು ಪಿರ್ಯಾದಿದಾರರರೊಂದಿಗೆ  ವಾಸ ಮಾಡಿಕೊಂಡಿದ್ದು , 2 ವರ್ಷಗಳ ಹಿಂದೆ  ಪಾರ್ಶ್ವವಾಯು ಗೆ ಒಳಗಾಗಿ  ಮನೆಯಲ್ಲಿಯೆ ಇರುತ್ತಿದ್ದು, ಈ ಮೊದಲು ಪಿರ್ಯಾದಿದಾರರ ಅಣ್ಣ  ಮನೆಯಿಂದ ಹೊರಗಡೆ  ಹೋದವರು 10-15 ದಿನ ಬಿಟ್ಟು  ಮನೆಗೆ ಬರುತ್ತಿದ್ದರು. ದಿನಾಂಕ 30/10/2022 ರಂದು ಮಧ್ಯಾಹ್ನ 4:00 ಗಂಟೆಗೆ ಮನೆಯಿಂದ  ಹೋದವರು  ಬಂದಿರುವುದಿಲ್ಲ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 108/2022 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ಈಶ್ವರ  ಬಾಯ್ ತಾಂಡೇಲಾ(38),ತಂದೆ: ಬಲವಂತ ಬಾಯ್ ತಾಂಡೇಲಾ,ವಾಸ: ನವಸಾರಿ ,ಗುಜರಾತ್  ಇವರು ಬಾಂಬೆಯಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು ,ಗುಜರಾತ್ ನಲ್ಲಿ ತಂದೆ ,ತಾಯಿ , ಸಹೋದರರೊಂದಿಗೆ ವಾಸವಾಗಿರುತ್ತಾರೆ. ಪಿರ್ಯಾದಿದಾರರಾದ ಈಶ್ವರ  ಬಾಯ್ ತಾಂಡೇಲಾ(38), ತಂದೆ: ಬಲವಂತ ಬಾಯ್ ತಾಂಡೇಲಾ, ವಾಸ: ನವಸಾರಿ ,ಗುಜರಾತ್  ತಂದೆ ಬಲವಂತ ಬಾಯ್ ತಾಂಡೇಲ(58)  ರವರು 10 ದಿನಗಳ ಹಿಂದೆ ಊರಿಗೆ ಹೋಗುತ್ತೇನೆಂದು ತಿಳಿಸಿ ಬಂದಿದ್ದು , ದಿನಾಂಕ 26/11/2022  ರಂದು  ಉಡುಪಿಯ ವಿಶುಶೆಟ್ಟಿ ರವರು  ಪಿರ್ಯಾದಿದಾರರಿಗೆ  ಪೋನ್ ಮಾಡಿ  ಪಿರ್ಯಾದಿದಾರರ ತಂದೆ ಅನಾರೋಗ್ಯಕಕ್ಕೆ ಇಡಾಗಿದ್ದು  ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಆಸ್ಪತ್ರೆಗೆ  ದಾಖಲಿಸಿರುವುದಾಗಿ  ವಿಷಯ ತಿಳಿಸಿದಂತೆ ಪಿರ್ಯದಿದಾರರು  ಸಂಬಂದಿಕರೊಂದಿಗೆ  ಗುಜರಾತ್ ನಿಂದ  ರೈಲಿನಲ್ಲಿ ಹೊರಟಿರುತ್ತಾರೆ. ಪಿರ್ಯಾದಿದಾರರು ರೈಲಿನಲ್ಲಿ ಬರುತ್ತಿರುವಾಗ  ವಿಶು ಶೆಟ್ಟಿರವರು ದಿನಾಂಕ 28/11/2022  ರಂದು  ರಾತ್ರಿ 10:30 ಗಂಟೆಗೆ ಪೋನ್ ಮಾಡಿ ಬಲವಂತ ಬಾಯ್ ತಾಂಡೇಲ ರವರು  ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ . ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಅರ್‌ ಕ್ರಮಾಂಕ 70/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ಅರವಿಂದ  ಡಿ ಸಾಲ್ಯಾನ್ (44), ತಂದೆ: ದಾಮೋದರ್ ಸಲ್ಯಾನ್, ವಾಸ:ಗುರಿಕಾರ್  ನಿಲಯ,ಕಡೆಕಾರು ಇವರು ಕಡೇಕಾರು  ಜಂಕ್ಷನ್ ನಲ್ಲಿ ರಿಕ್ಷಾ ಇಟ್ಟುಕೊಂಡಿದ್ದು ಪಿರ್ಯಾದಿದಾರರ ನೆರೆಮನೆಯ ನಿವಾಸಿ ರಕ್ಷಿತ್  ರವರು  ಇತ್ತಿಚಿಗೆ  ಕೆಲವು ದಿನಗಳಿಂದ  ರಿಕ್ಷಾ ನಿಲ್ದಾಣಕ್ಕೆ ಬಂದು  ಪಿರ್ಯಾದಿದಾರರಿಗೆ ತೊಂದರೆ  ನೀಡುತ್ತಿದ್ದು, ದಿನಾಂಕ 28/11/2022 ರಂದು ಮಧ್ಯಾಹ್ನ 12:30  ಸಮಯಕ್ಕೆ  ಕಡೇಕಾರು ಜಂಕ್ಷನ್  ನಲ್ಲಿ  ಇರುವಾಗ  ರಕ್ಷಿತ್  ಮತ್ತು   ಇನ್ನೊಬ್ಬ  ವ್ಯಕ್ತಿ  ಅಲ್ಲಿಗೆ ಬಂದು ಪಿರ್ಯಾದಿದಾರರನ್ನು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ  ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ರಕ್ಷಿತ್ ನು ಕಬ್ಬಿಣದ  ರಾಡಿನಿಂದ ಪಿರ್ಯಾದಿದಾರರ ಎದೆಗೆ  ಹೊಡೆದಿದ್ದು , ಇನ್ನೊಬ್ಬ ವ್ಯಕ್ತಿ ಇಟ್ಟಿಗೆ ಯಿಂದ  ಪಿರ್ಯಾದಿದಾರರ ತಲೆಗೆ ಹೊಡೆದಿರುತ್ತಾನೆ. ಆ ಸಮಯ ಪಿರ್ಯಾದಿದಾರರು ನೆಲಕ್ಕೆ ಉರುಳಿದ  ಕೂಡಲೆ  ಆರೋಪಿತರು ಕಾಲಿನಿಂದ  ತುಳಿದು, ಒತ್ತಿ  ಹಿಡಿದು  ಮುಂದಕ್ಕೆ ನೋಡಿಕೊಳ್ಳುತ್ತೇನೆಂದು  ಎಂದು ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 107/2022 ಕಲಂ: 323, 324, 341, 504, 506 ಜೊತೆಗೆ  34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
     

ಇತ್ತೀಚಿನ ನವೀಕರಣ​ : 30-11-2022 09:54 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080