ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

  • ಕೋಟ: ಪಿರ್ಯಾದಿ ಸಿಬಿಚೇನ ಜೋಸೆಫ್ ಇವರು ದಿನಾಂಕ 29/11/2022 ರಂದು ರಾತ್ರಿ 9.15 ಗಂಟೆಗೆ ಮನೆಯಲ್ಲಿರುವಾಗ ನೆರೆಕೆರೆಯ ವಾಸಿಗಳಾದ ಲಲಿತಾ ಆಚಾರ್ತಿ ಹಾಗೂ ಆಕೆಯ ಮಗಳ ಗಂಡ ಶ್ರೀನಾಥ ಆಚಾರಿ  ಎಂಬವರು ಪಿರ್ಯಾದಿದಾರರ ಕೃಷಿ ತೋಟಕ್ಕೆ ನುಗ್ಗಿ  ತೋಟದಲ್ಲಿ ನೀರು ಸರಬರಾಜಿಗೆಂದು ಅಳವಡಿಸಿದ ಸುಮಾರು 7 ಸ್ಪಿಂಕ್ಲರ್  ಹಾಗೂ ಪೈಪ್ ಲೈನ್ ಗಳನ್ನು ತುಂಡು ಮಾಡಿ ಸುಮಾರು 25.000 ನಷ್ಟ ಉಂಟು ಮಾಡಿರುತ್ತಾರೆ  ,ಅದಕ್ಕೆ ಆಕ್ಷೇಪಿಸಿದಕ್ಕೆ ಹೊಡೆಯಲು ಬಂದಿರುತ್ತಾರೆ  ಎಂಬಿತ್ಯಾದಿ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 211/2022 ಕಲಂ: 447.427 ಜೊತೆಗೆ 34 ಐಪಿಸಿ ಯಂತೆ  ಪ್ರಕರಣ ದಾಖಲಾಗಿರುತ್ತದೆ.

 ಹೆಂಗಸು ಕಾಣೆ ಪ್ರಕರಣ

  • ಕೋಟ:  ಶ್ರೀಮತಿ ಸಂಪೂರ್ಣ ಪ್ರಾಯ 55 ವರ್ಷ ರವರು  ದಿನಾಂಕ 29/11/2022 ರಂದು  ಬೆಳಿಗ್ಗೆ  10.30 ಗಂಟೆಗೆ   ಬೇಳೂರು ಗ್ರಾಮ ಕುಂದಾಪುರ ತಾಲೂಕು ಇಲ್ಲಿನ ಮನೆಯಿಂದ ಕುಂದಾಪುರದ ಸೊಸೈಟಿಗೆ ಲೋನ್ ಕಟ್ಟಲು ಹೋಗುವುದಾಗಿ ಹೇಳಿ ಹೋದವರು  ಈ ವರೆಗೂ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 212/2022 ಕಲಂ: ಹೆಂಗಸು  ಕಾಣೆಯಂತೆ  ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ ‌

  • ಬೈಂದೂರು: ಪಿರ್ಯಾದಿ ಸಂದೀಪ ಇವರ ಅಣ್ಣ ಸಂತೋಷ ದೇವಾಡಿಗ ಇವರು  ಸೈಂಟ್ ತೋಮಸ್ ಸ್ಕೂಲ್ ನ ಬಸ್ ಚಾಲಕರಾಗಿ ಹಾಗೂ ರಿಕ್ಷಾದಲ್ಲಿ ಬಾಡಿಗೆ ಮಾಡಿಕೊಂಡು ಜೀವನ ಮಾಡುತ್ತಿದ್ದು ದಿನಾಂಕ : 29-11-2022 ರಂದು ಬೆಳಿಗ್ಗೆ ಕೆಲಸದ ಬಗ್ಗೆ ಮನೆಯಿಂದ ಹೋದವರು ರಾತ್ರಿ ಕೆಲಸ  ಮುಗಿಸಿ ಮನೆಗೆ ಬಂದವರು  ವಾಪಾಸು  ರಾತ್ರಿ 11-30 ಗಂಟೆಗೆ ಮನೆಯವರಲ್ಲಿ ನನಗೆ ರೈಲ್ವೇ ಸ್ಟೇಷನ್ ನಲ್ಲಿ ರಿಕ್ಷಾ ಬಾಡಿಗೆ ಇದೆ ಎಂದು ಹೇಳಿ ಮನೆಯಿಂದ ನಡೆದುಕೊಂಡು ರೈಲ್ವೇಸ್ಟೇಷನ್ ಕಡೆಗೆ ಹೋದವರು ಬೈಂದೂರು ಗ್ರಾಮದ ವಿದ್ಯಾನಗರ ರೈಲ್ವೇ ಗೇಟ್ ನ ಬಳಿ ರೈಲ್ವೇ ಹಳಿಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಮಯ  ಅಥವಾ ರೈಲ್ವೇ ಹಳಿಯನ್ನು ದಾಟುವ ವೇಳೆಯಲ್ಲಿಯೋ ದಿನಾಂಕ  29-11-2022 ರಂದು ರಾತ್ರಿ 11-30 ಗಂಟೆಯಿಂದ ದಿನಾಂಕ :   30-11-2022 ರ ಬೆಳಿಗ್ಗೆ 08-45 ಗಂಟೆಯ ಮಧ್ಯಾವಧಿಯಲ್ಲಿ ಯಾವುದೋ ರೈಲು ಡಿಕ್ಕಿ ಹೊಡೆದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯು.ಡಿ.ಆರ್ 62/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 30-11-2022 06:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080