ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ವಿಲ್ಪೇಡ್  ಪ್ರಕಾಶ್ ಕ್ವಾಡ್ರಸ್ (41), ತಂದೆ:  ವಲೇರಿಯನ್  ಕ್ವಾಡ್ರಸ್, ವಾಸ:  ಸಾಗರ್  ಸಂದೇಶ ಹೌಸ್  ಸನ್ಯಾಸಿಮಠ  ಹತ್ತಿರ ,ಕೆಮ್ಮಣ್ಣು ಪೋಸ್ಟ್ ಇವರು ಗುಡ್ಯಂ ಮಹಾಕಾಳಿ ದೇವಸ್ಥಾನದ ಹತ್ತಿರ ಜಮೀನು ಹೊಂದಿದ್ದು, ದಿನಾಂಕ 29/11/2021 ರಂದು ತನ್ನ  KA-20-V-4766 ನಂಬ್ರದ ಮೋಟಾರು ಸೈಕಲ್‌ನಲ್ಲಿ ಮನೆಯಿಂದ ತನ್ನ ಜಮೀನಿಗೆ ಹೊಗಿ ವಾಪಾಸು ಬರುತ್ತಿರುವಾಗ ಬೆಳಿಗ್ಗೆ 8:30 ಗಂಟೆಗೆ ಕೆಮ್ಮಣ್ಣು–ಪನಕಟ್ಟೆ ಮುಖ್ಯ ರಸ್ತೆಯ ಕೆಮ್ಮಣ್ಣು ಹೈಸ್ಕೂಲ್ ಕ್ರಾಸ್ ಬಳಿ ಬಲಕ್ಕೆ ತಿರುಗಿಸುತ್ತಿರುವಾಗ ಅವರ ಹಿಂದಿನಿಂದ ಕೆಮ್ಮಣ್ಣು ಕಡೆಯಿಂದ KA-20-EK-4274  ನಂಬ್ರದ ಮೋಟಾರು ಸೈಕಲ್‌ ನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಸವಾರ ಹಾಗೂ ಸಹ ಸವಾರಳು ಮೋಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಬಲಕಾಲಿನ ಪಾದದ ಬಳಿ ರಕ್ತಗಾಯ ಹಾಗೂ ಮೊಣಕಾಲಿಗೆ ತರಚಿದ ಗಾಯ ಮತ್ತು ಡಿಕ್ಕಿ ಹೊಡೆದ ಸವಾರನಿಗೆ ಸಣ್ಣಪುಟ್ಟ ತರಚಿದ ಗಾಯ ಹಾಗೂ  ಸಹ ಸವಾರಳಿಗೆ ತಲೆ, ಕಾಲು , ಕೈ ಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 130/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾದ ಬಸಮ್ಮ  (32), ಗಂಡ: ಕನಕಪ್ಪ, ವಾಸ: ನಾರಿನ್ಯಾಳ, ತಾವರಕೆರೆ ಅಂಚೆ, ಕುಷ್ಠಗಿ ತಾಲೂಕು, ಕೊಪ್ಪಳ ಜಿಲ್ಲೆ  ಮತ್ತು ಅವರ ಗಂಡ ದಿನಾಂಕ 28/11/2021 ರಂದು 6:00 ಗಂಟೆಗೆ ಹೆರ್ಗಾ ಗ್ರಾಮದ ದೇವಿನಗರದ ಬಳಿ  ಅತ್ರಾಡಿ – ಮಣಿಪಾಲ ರಸ್ತೆಯನ್ನು ದಾಟಲು ರಸ್ತೆಯ ಎಡಬದಿಯಲ್ಲಿ ನಿಂತಿದ್ದಾಗ ಆತ್ರಾಡಿ ಕಡೆಯಿಂದ ಮಣಿಪಾಲ ಕಡೆಗೆ KA-20-B-4574 ನೇ ಟಿಪ್ಪರ್ ಲಾರಿಯನ್ನು ಅದರ ಚಾಲಕ ಸುಕೇಶ್ ಶೆಟ್ಟಿಗಾರ್ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲ ಭಾಗದ ಸೊಂಟದ ಕೆಳಬದಿಯಲ್ಲಿ ರಕ್ತಗಾಯ, ಸೊಂಟದ ಒಳ ಭಾಗಕ್ಕೆ ತೀವ್ರ ಜಖಂ ಉಂಟಾಗಿರುತ್ತದೆ, ಪಿರ್ಯಾದಿದಾರರನ್ನು ಅವರ ಗಂಡ ಹಾಗೂ ಆರೋಪಿ ಟಿಪ್ಪರ್ ಚಾಲಕ ಉಪಚರಿಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 156/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ವೇದಾವತಿ (38), ಗಂಡ :  ರವಿ ಪ್ರಸಾದ, ವಾಸ : ಪೆರ್ಲ ಅಡ್ಡಳ್ಳಿ ಮನೆ ಉಜೀರೆ ಅಂಚೆ ಬೆಳ್ತಂಗಡಿ ತಾಲೂಕು ದ.ಕ. ಜಿಲ್ಲೆ ಇವರ ಗಂಡ ರವಿ ಪ್ರಸಾದ ರವರು ದಿನಾಂಕ 29/11/2021 ರಂದು ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತನ್ನ KA-70-M-0642 ನೇದಲ್ಲಿ ಮಂಗಳೂರು ಕಡೆಯಿಂದ ಕಾಪು ಕಡೆಗೆ ಬರುತ್ತಿರುವಾಗ ಅದೇ ರಸ್ತೆಯಲ್ಲಿ ಮೂಳೂರು ಗ್ರಾಮದ ಸುನ್ನಿ ಸೆಂಟರ್ ಬಳಿ ಹನುಮಂತ ತನ್ನ ಲಾರಿ ನಂಬ್ರ KA-04-V-3411 ನೇದನ್ನು ನಿರ್ಲಕ್ಷತನದಿಂದ ಯಾವುದೇ ಸೂಚನೆ ನೀಡದೇ ರಸ್ತೆಯ ಪಶ್ಚಿಮ ಬದಿಯ ಟಾರು ರಸ್ತೆಗೆ  ತಾಗಿಸಿ ನಿಲ್ಲಿಸಿದ ಲಾರಿಗೆ  ಸಮಯ ಮಧ್ಯಾಹ್ನ 1:45 ಗಂಟೆಗೆ ಪಿರ್ಯಾದಿದಾರರ ಗಂಡ ಢಿಕ್ಕಿ ಹೊಡೆದ ಪರಿಣಾಮ ಅವರ ತಲೆಗೆ ಬಲಬದಿ ಕೆನ್ನೆಗೆ ಎಡಬದಿ ಕಾಲು ಜಖಂಗೊಂಡಿದ್ದು ಅವರಿಗೆ ಸ್ಥಳೀಯರು ಚಿಕಿತ್ಸೆಯ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ಅಲ್ಲಿನ ವೈದ್ಯರು ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುವುದಾಗಿದೆ. ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 176/2021  ಕಲಂ: 279,  337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ಶಿವರಾಯ ಪೂಜಾರಿ(38), ತಂದೆ:ಚಿಕ್ಕಯ್ಯ ಪೂಜಾರಿ, ವಾಸ: ಮೋಹನ್ ನಿಲಯ, ಕಳವಾಡಿ, ಬೈಂದೂರು ಗ್ರಾಮ ಮತ್ತು ತಾಲೂಕು ಇವರ ಅಣ್ಣನ ಮಗ ಸುನೀಲ್ ಕುಮಾರ್ (18) ಮಣಿಪಾಲದ ಈಶ್ವರನಗರದಲ್ಲಿರುವ ಟಿ.ಎಂ.ಎ.ಪೈ ಪಾಲಿಟೆಕ್ನಿಕ್ ನಲ್ಲಿ 1ನೇ ವರ್ಷದ ಮೆಕ್ಯಾನಿಕ್ ಡಿಪ್ಲೋಮಾ ವ್ಯಾಸಂಗ ಮಾಡಿಕೊಂಡಿದ್ದು 1 ತಿಂಗಳಿನಿಂದ  ಕಾಲೇಜು ಪ್ರಾರಂಭವಾದ ಕಾರಣ ಸುನೀಲ್ ಕುಮಾರ್ ಚಾರ್ವಿಕ್ ಪಿ ಜಿ ಯಲ್ಲಿ ವಾಸವಿದ್ದನು, ಆತನಿಗೆ ಪಿ ಜಿ ಯಲ್ಲಿ ಉಳಿದುಕೊಳ್ಳಲು ಇಷ್ಟವಿಲ್ಲದೇ ಇದ್ದು ಈ ಬಗ್ಗೆ ಅವನ ತಂದೆ- ತಾಯಿಯವರಲ್ಲಿ ಹೇಳಿದಾಗ ಅವರು ಮುಂದಿನ ವರ್ಷ ಹಾಸ್ಟೆಲ್ ಸಿಗುತ್ತದೆ ಅಲ್ಲಿಯವರೆಗೂ ಪಿ ಜಿ ಯಲ್ಲಿ ಇರುವಂತೆ ಸಮಾಧಾನಪಡಿಸಿದ್ದು, ಇದೇ ಚಿಂತೆಯಿಂದ ಅಥವಾ ಇತರೆ ಯಾವುದೋ ಹೇಳೀಕೊಳ್ಳಲಾಗದ ಕಾರಣದಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 29/11/2021 ರಂದು ಬೆಳಿಗ್ಗೆ 09:45 ಗಂಟೆಯಿಂದ 12:00 ಗಂಟೆ ಮಧ್ಯಾವಧಿಯಲ್ಲಿ ತಾನು ವಾಸವಿದ್ದ ಪಿಜಿ ಯ ಕೋಣೆಯ ಸೀಲಿಂಗ್ ಫ್ಯಾನಿಗೆ ಬಟ್ಟೆ ಕಟ್ಟಿ ಕುತ್ತಿಗೆಗೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 40/2021 ಕಲಂ: 174 ಸಿ ಆರ್ ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ ರಮೇಶ್‌ ಗಾಣಿಗ (51), ತಂದೆ: ಗಣಪಯ್ಯ ಗಾಣಿಗ, ತಾರಿಬೇರು ಅಂಚೆ ಆಲೂರು ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 29/11/2021 ರಂದು ಬೆಳಿಗ್ಗೆ 08:30 ಗಂಟೆಗೆ ಮನೆಯ ಸಮೀಪ ಇರುವ ಸೋಮನಾಥೇಶ್ವರ ದೇವಸ್ಥಾನಕ್ಕೆ ಹೋಗಿ ವಾಪಾಸು ಮನೆಗೆ ಬರಲು ದೇವಸ್ಥಾನದ ಬಳಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಆರೋಪಿತ ಯೋಗೀಶ ಪೂಜಾರಿ ಏಕಾಏಕಿ ಪಿರ್ಯಾದಿದಾರರ ಬಳಿ ಬಂದು ಈ ಜಾಗ ದೇವಸ್ಥಾನದ ಜಾಗ ಅಲ್ಲ ಇದು ನನ್ನ ಜಾಗ ಇಲ್ಲಿ ತಿರುಗಬಾರದು ಎಂದು ಹೇಳುತ್ತಾ ಅವಾಚ್ಯ ಶಬ್ಧಗಳಿಂದ ಬೈದು ಅಲ್ಲಿಯೇ ಇದ್ದ ಒಂದು ಮರದ ದೊಣ್ಣೆಯಿಂದ ಪಿರ್ಯಾದಿದಾರರ ಮುಖಕ್ಕೆ, ಎದೆಗೆ ಮತ್ತು ಬೆನ್ನಿಗೆ ಹೊಡೆಯುತ್ತಿರುವಾಗ ಆರೋಪಿತನ ಹೆಂಡತಿ ಶಾಂತರವರು ಪಿರ್ಯಾದಿದಾರರನ್ನು ಹಿಡಿದುಕೊಂಡಿದ್ದು ಆ ಸಮಯ ಆರೋಪಿ ಯೋಗೀಶ ಪೂಜಾರಿಯು ಪಿರ್ಯಾದಿದಾರರ ಕುತ್ತಿಗೆಯಲ್ಲಿದ್ದ  ಚಿನ್ನದ ಸರವನ್ನು ತುಂಡು ಮಾಡಿದ್ದು ಅದು ಬಿದ್ದು ಹೋಗಿರುತ್ತದೆ. ಆಪಾದಿತ ಯೋಗೀಶ ಪೂಜಾರಿಯು ಪಿರ್ಯಾದಿದಾರರಿಗೆ ಜೀವ ಬೆದರಿಕೆ ಹಾಕಿರುತ್ತಾನೆ. ಆರೋಪಿತರು ಹಲ್ಲೆ ನಡೆಸಿರುವುದರಿಂದಪಿರ್ಯಾದಿದಾರರಿಗೆ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಹೋದಲ್ಲಿ ಅಲ್ಲಿ ಪರೀಕ್ಷಿಸಿದ ವೈಧ್ಯಾಧಿಕಾರಿಯವರು ಪಿರ್ಯಾದಿದಾರರನ್ನು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 109/2021 ಕಲಂ: 324, 341, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 27/11/2021 ರಂದು ನಿರಂಜನ ಗೌಡ,   ಪೊಲೀಸ್ ಉಪನಿರೀಕ್ಷಕರು, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಇವರು ಕುಂದಾಪುರ ತಾಲೂಕು  ಕಾವ್ರಾಡಿ ಗ್ರಾಮದ ಜನತಾ ಕಾಲೋನಿಯ ನೂರಾನಿ ಮಸೀದಿಯ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಸ್ತು ಮಾಡುತ್ತಿರುವಾಗ ಆರೋಪಿತರಾದ ಸಬೀಲ್ ಬೆಟ್ಟೆ (27), ತಂದೆ: ದಿ. ಬೆಟ್ಟೆ ಹಸನ್ ಸಾಹೇಬ್, ವಾಸ:ಅಮ್ಮನಬೆಟ್ಟು, ಜನತಾ ಕಾಲೋನಿ, ಕಂಡ್ಲೂರು, ಕಾವ್ರಾಡಿ ಗ್ರಾಮ, ಕುಂದಾಪುರ ಎಂಬಾತನು ಗಾಂಜಾ ಸೇವನೆ ಮಾಡಿದ ಬಗ್ಗೆ ಅನುಮಾನ ಬಂದ ಮೇರೆಗೆ ಆರೋಪಿತನನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೇನ್ಸಿಕ್ ಮೆಡಿಸಿನ್ ವಿಭಾಗದ  ವೈದ್ಯರ ಮುಂದೆ ಹಾಜರು ಪಡಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿದ್ದು ದಿನಾಂಕ 29/11/2021 ರಂದು ಗಾಂಜಾ ಸೇವಿಸಿದ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೇನ್ಸಿಕ್ ಮೆಡಿಸಿನ್ ವಿಭಾಗದ  ವೈದ್ಯರು ದೃಡಪತ್ರವನ್ನು ನೀಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 67/2021 ಕಲಂ: 27 (B) NDPS ACT ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 28/11/2021 ರಂದು ಸಿಪಿಐ(ಎಂ) ಪಕ್ಷದ 7ನೇ ಜಿಲ್ಲಾ ಸಮ್ಮೇಳನ ಸಭೆ ನಡೆಸಲು ಮಾತ್ರ ಅನುಮತಿ ಇದ್ದು, ಬೆಳಿಗ್ಗೆ 11:00 ಗಂಟೆಗೆ ಯಾವುದೇ ಪೂರ್ವಾನುಮತಿ ಇಲ್ಲದೆ ಕೋವಿಡ್‌-19 ನಿಯಮಗಳನ್ನು ಉಲ್ಲಂಘನೆ ಮಾಡಿ ಉಡುಪಿ ಬೋರ್ಡ್‌ಹೈಸ್ಕೂಲ್‌ನಿಂದ ಬ್ರಹ್ಮಗಿರಿ ವೃತ್ತದ ತನಕ ಮೆರವಣಿಗೆ ನಡೆಸಿದ್ದು, ಇದರಲ್ಲಿ ಕೆಲವರು ಮಾಸ್ಕ್‌ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಕೋವಿಡ್‌-19 ಸೋಂಕು ಹರಡುವುದನ್ನು ತಡೆಗಟ್ಟುವ ಬಗ್ಗೆ ಇರುವ ಆದೇಶವನ್ನು ಉಲ್ಲಂಘನೆ ಮಾಡಿರುವುದಾಗಿ ಡಾ. ಉದಯ ಕುಮಾರ್‌ಶೆಟ್ಟಿ, ಪೌರಾಯುಕ್ತರು, ಉಡುಪಿ ನಗರ ಸಭೆ, ಉಡುಪಿ ಇವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 175/2021 ಕಲಂ: 269, 270 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 30-11-2021 09:40 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080