ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣಗಳು:

  • ಉಡುಪಿ : ಪಿರ್ಯಾದುದಾರರು ಪ್ರವೀಣ್‌ ಕೋಟ್ಯಾನ್‌ ಪ್ರಾಯ 45 ವರ್ಷ ತಂದೆ: ಶ್ರೀಧರ ಕೋಟ್ಯಾನ್‌ ವಾಸ: ಮೇಲ್ದಡ್ಡು ಮನೆ, ನಂ: 4-77, ನಂದಳಿಕೆ ಗ್ರಾಮ ಇವರು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವುಡ್‌ಲ್ಯಾಂಡ್‌ ಹೋಟೇಲ್‌ ನಲ್ಲಿ ವೈಟರ್‌ ಆಗಿ ಕೆಲಸ ಮಾಡಿಕೊಂಡಿದ್ದು, ಅದೇ ಹೋಟೇಲ್‌ ನಲ್ಲಿ ಕಳೆದ 45 ದಿನಗಳಿಂದ ಕೆಲಸ ಮಾಡಿಕೊಂಡಿದ್ದ ಮಂಡ್ಯ ಮೂಲದ ರಾಘು ವೈ.ಎಸ್‌ ಅಂದಾಜು ಪ್ರಾಯ 27 ವರ್ಷ ಎಂಬಾತನು ದಿನಾಂಕ 26/11/2021 ರಂದು ವುಡ್‌ಲ್ಯಾಂಡ್‌ ಹೋಟೇಲ್‌ನ ಸ್ಟಾಫ್‌ರೂಮ್‌ನಲ್ಲಿ ಪಿರ್ಯಾದುದಾರರು ಮಲಗಿರುವಾಗ ಮಧ್ಯಾಹ್ನ 12:10 ಗಂಟೆಗೆ ಪಿರ್ಯಾದುದಾರರ ಬಾಬ್ತು ಜಿಯೋ ಸಿಮ್‌ ನಂಬ್ರ: 9964575534 ಇರುವ VIVO Y15 ಮೊಬೈಲ್‌ ಕಳವು ಮಾಡಿಕೊಂಡು ಹೋಗಿದ್ದು, ಸದ್ರಿ ಮೊಬೈಲ್‌ನಲ್ಲಿದ್ದ ಪಿರ್ಯಾದುದಾರರ ಬಾಬ್ತು ಕರ್ನಾಟಕ ಬ್ಯಾಂಕ್‌ ಅಕೌಂಟ್‌ ನಂಬ್ರ: 8022500101708501 ನೇದರ ಯುಪಿಐ ಖಾತೆ ಗೂಗಲ್‌ ಪೇ ಯನ್ನು ಉಪಯೋಗಿಸಿ ಒಟ್ಟು ರೂ. 78,850/- ನ್ನು ಖರ್ಚು ಮಾಡಿರುತ್ತಾನೆ. ಕಳವಾದ ಮೊಬೈಲ್‌ನ ಅಂದಾಜು ಮೌಲ್ಯ ರೂ. 5,000/- ಆಗಬಹುದು.ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  176/2021 ಕಲಂ 379 IPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣಗಳು:

  • ಶಿರ್ವ:  ದಿನಾಂಕ 29.11.2021 ರಂದು ಪಿರ್ಯಾದಿ ಅಮೀನಾ (45)ಗಂಡ: ಮೊಹಮ್ಮದ್‌ ಸನಾವುಲ್ಲಾ ವಾಸ: ಬದ್ರಿಯ ಮಂಜಿಲ್‌, ನ್ಯಾರ್ಮಶಿರ್ವ ಅಂಚೆ ಮತ್ತು ಗ್ರಾಮ, ಕಾಪು ಇವರು  ಮಗಳು  ಸಮೀರಾ ಬಾನು ರವರೊಂದಿಗೆ  ಮನೆಯಾದ ಶಿರ್ವ ಗ್ರಾಮದ ನ್ಯಾರ್ಮ  ಎಂಬಲ್ಲಿರುವ  ಬದ್ರಿಯಾ  ಮಂಜಿಲ್‌ ನಲ್ಲಿರುವಾಗ ಸಮಯ ಸುಮಾರು ಸಾಯಂಕಾಲ 7:00 ಗಂಟೆಗೆ  ಆರೋಪಿಗಳಾದ ಸನಾವುಲ್ಲಾ, ಶೌಕತ್‌, ಅತ್ತೇರಿ  ಮತ್ತು . ಹಸೈನಾರ್‌ ರವರು ಸಮಾನ ಉದ್ದೇಶಗಳಿಂದ  ಪಿರ್ಯಾದಿದಾರರ ಮನೆಯ ಒಳಗೆ  ಅಕ್ರಮ  ಪ್ರವೇಶ  ಮಾಡಿ  ಪಿರ್ಯದಿದಾರರನ್ನು ತಡೆದು  ನಿಲ್ಲಿಸಿ ಬಳಿಕ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದುದಲ್ಲದೆ ಆರೋಪಿ ಅತ್ತೇರಿ ಪಿರ್ಯಾದಿದಾರರಿಗೆ ಕೈಯಿಂದ ಕೆನ್ನೆಗೆ, ಮೈಕೈಗೆ  ಹೊಡೆದುದಲ್ಲದೆ,  ಆರೋಪಿ  ಶೌಕತ್‌ ಈತನು ಪಿರ್ಯಾದಿದಾರರಿಗೆ  ಹೊಡೆಯಲು ಬಂದಿದ್ದು, ಬಳಿಕ  ಆರೋಪಿತರೆಲ್ಲರೂ ಪಿರ್ಯಾದಿದಾರರಿಗೆ ಹಾಗೂ  ಸಮೀರಾ ಬಾನು ರವರಿಗೆ  ನಿಮ್ಮನ್ನು ಜೀವ  ಸಹಿತ ಬಿಡುವುದಿಲ್ಲ  ಎಂಬುದಾಗಿ   ಕೊಲೆ ಬೆದರಿಕೆ  ಹಾಕಿರುವುದಾಗಿದೆ.  ಈ ಘಟನೆಗೆ  ಪಿರ್ಯಾದಿದಾರರ ಹಾಗೂ ಗಂಡ ಸನಾವುಲ್ಲ ರವರ ಸಂಸಾರದ  ವೈವಾಹಿಕ ಸಮಸ್ಯೆಯೇ ಕಾರಣವಾಗಿರುತ್ತದೆ. ಆದುದರಿಂದ  ಪಿರ್ಯಾದಿದಾರರ  ಮನೆಯ ಒಳಗಡೆ  ಅಕ್ರಮ ಪ್ರವೇಶ  ಮಾಡಿ  ತಡೆದು ನಿಲ್ಲಿಸಿ  ಅವಾಚ್ಯ ಶಬ್ದಗಳಿಂದ ಬೈದು  ಕೊಲೆ  ಬೆದರಿಕೆ ಹಾಕಿದ ಗಂಡ  ಸನಾವುಲ್ಲಾ,  ಶೌಕತ್‌,  ಅತ್ತೇರಿ ಮತ್ತು ಹಸೈನಾರ್‌ ರವರುಗಳ  ವಿರುದ್ಧ  ಸೂಕ್ತ ಕಾನೂನು  ಕ್ರಮ ಕೈಗೊಳ್ಳುವಂತೆ ಪಿರ್ಯಾದಿದಾರರು ದೂರು ನೀಡಿದ್ದು ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 72/2021   ಕಲಂ  341, 447, 448, 504, 506 r/w 34 IPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಮಟ್ಕ ಜುಗಾರಿ ಪ್ರಕರಣ

  • ಕೋಟ: ದಿನಾಂಕ 30/11/2021 ರಂದು ಪಿರ್ಯಾದಿದಾರರು  ಪುಷ್ಪ ಪೊಲೀಸ್‌ ಉಪನಿರೀಕ್ಷಕರು (ತನಿಖೆ), ಕೋಟ ಪೊಲೀಸ್‌ ಠಾಣೆ ರವರು ಠಾಣೆಯಲ್ಲಿರುವಾಗ  11:00 ಗಂಟೆಗೆ ತೆಕ್ಕಟ್ಟೆ ಗ್ರಾಮದ ಬೀಟ್ ಸಿಬ್ಬಂದಿ ಹೆಚ್ ಸಿ 50 ಅಶೋಕ ಶೆಟ್ಟಿ ರವರು ಕರೆ ಮಾಡಿ ಠಾಣಾ ವ್ಯಾಪ್ತಿಯ ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮದ ತೆಕ್ಕಟ್ಟೆ ನಂದೀಕೇಶ್ವರ ದೇವಾಸ್ಥಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಮಾಹಿತಿ ನೀಡಿದಂತೆ ಪಂಚರನ್ನು ಬರಮಾಡಿಕೊಂಡು, ಹೆಚ್‌.ಸಿ. 50 ಅಶೋಕ ಶೆಟ್ಟಿ. ಹೆಚ್ ಸಿ 126 ರಾಜು  ರವರುಗಳನ್ನು ಕರೆದುಕೊಂಡು ಇಲಾಖಾ ಜೀಪ್‌ ನಂಬ್ರ KA 20 G 0238 ನೇದರಲ್ಲಿ ಠಾಣೆಯಿಂದ ಮಾಹಿತಿ ಬಂದ ಸ್ಥಳಕ್ಕೆ ಹೊರಟು 11-20   ಘಂಟೆಗೆ ಸ್ಥಳಕ್ಕೆ ತಲುಪಿ ಜೀಪನ್ನು ನಂದಿಕೇಶ್ವರ  ದೇವಸ್ಥಾನದ  ಹತ್ತಿರ ಮರೆಯಲ್ಲಿ ನಿಲ್ಲಿಸಿ ನೋಡಿದಲ್ಲಿ ತೆಕ್ಕಟ್ಟೆ ನಂದಿಕೇಶ್ವರ ದೇವಸ್ಥಾನದಿಂದ 50 ಅಡಿ ಉತ್ತರ ಪಶ್ಚಿಮಕ್ಕೆ ತೆಕ್ಕಟೆ –ಉಳ್ತೂರು ಡಾಮಾರು ರಸ್ತೆಯಲ್ಲಿ  ತೆಕ್ಕಟ್ಟೆ ಕಡೆಗೆ ಹೋಗುವ ರಸ್ತೆಯ ಪಶ್ಚಿಮ ಬದಿಯಲ್ಲಿ ಸಾರ್ವಜನಿಕರು ಗುಂಪು ಸೇರಿದ್ದು ಓರ್ವ ವ್ಯಕ್ತಿ 1 ರೂಪಾಯಿಗೆ 70 ರೂಪಾಯಿ ಎಂದು ಜೋರಾಗಿ ಕೂಗುತ್ತಿದ್ದು ಸಂಖ್ಯೆಗಳ ಮೇಲೆ ಸಾರ್ವಜನಿಕರು ಹಣವನ್ನು ಪಣವಾಗಿ ಕಟ್ಟುತ್ತಿದ್ದಿರುವುದು ಕಂಡು ಬಂದಿರುತ್ತದೆ.ಅವರುಗಳು ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟದಲ್ಲಿ ನಿರತರಾಗಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ನಡೆಸುವ ಬಗ್ಗೆ ಸಿಬ್ಬಂದಿಗಳಿಗೆ ಸೂಚಿಸಿ 11:30 ಗಂಟೆಗೆ ದಾಳಿ ನಡೆಸಿದಲ್ಲಿ ಸಮವಸ್ತ್ರದಲ್ಲಿದ್ದವರನ್ನು ಕಂಡ ಸಾರ್ವಜನಿಕರು ಸ್ಥಳದಿಂದ ಓಡಿ ಹೋಗಿದ್ದು ಸದ್ರಿ ಸ್ಥಳದಲ್ಲಿದ್ದ ಮಟ್ಕಾ ಜುಗಾರಿ ಆಟದಲ್ಲಿ ನಿರತ ಆರೋಪಿಯನ್ನು  ಸುತ್ತುವರಿದು ಹಿಡಿದು ವಿಚಾರಿಸಿದಲ್ಲಿ ಸ್ವಂತ ಲಾಭಕ್ಕಾಗಿ ಮಟ್ಕಾ ಜುಗಾರಿ ಆಟದಲ್ಲಿ ನಿರತರಾಗಿರುವ ಬಗ್ಗೆ ತಿಳಿಸಿರುತ್ತಾನೆ ಆತನು ಮಟ್ಕಾ ಜುಗಾರಿ ಆಟಕ್ಕೆ ಬಳಸಿದ  ಒಟ್ಟು  800/-ರೂಪಾಯಿ ಹಾಗೂ ಆತನ ಕೈಯಲ್ಲಿದ್ದ ಮಟ್ಕಾಚೀಟಿ ಹಾಗೂ ಬಾಲ್ ಪೆನ್ ನ್ನು ಮುಂದಿನ ಕಾನೂನು ಕ್ರಮದ ಬಗ್ಗೆ ಪ್ರಕರಣ ದಾಖಲಿಸುವರೆ ವರದಿ ಮತ್ತು ಸ್ವತ್ತುಗಳನ್ನು ಹಾಜರುಪಡಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 204/2021 ಕಲಂ: 78 (i)(iii)KP ACT  ರಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 30-11-2021 06:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080