ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ:   ದಿನಾಂಕ 27.10.2022 ರಂದು ಪಿರ್ಯಾದಿ ರಾಮಯ್ಯ ಜೋಗಿ  (53), ತಂದೆ: ದಿ. ಶೇಷ ಜೋಗಿ ವಾಸ: ಚಾಮುಂಡೇಶ್ವರಿ ದೇವಸ್ಥಾನದ ಬಳಿ , ಯಡ್ತಾಡಿ ಗ್ರಾಮ ರವರು ತನ್ನ ಮಗ ಸವಾರಿ ಮಾಡುತ್ತಿದ್ದ ಸ್ಕೂಟಿಯಲ್ಲಿ ಸಹಸವಾರನಾಗಿ ಕುಳಿತು ಸೈಬ್ರಕಟ್ಟೆಯಿಧ ಯಡ್ತಾಡಿ ಕಡೆಗೆ ಹೋಗುತ್ತಿರುವಾಗ ರಾತ್ರಿ 10:30 ಗಂಟೆ ಸುಮಾರಿಗೆ ಯಡ್ತಾಡಿ ಗ್ರಾಮದ ಸೈಬ್ರಕಟ್ಟೆ-ಯಡ್ತಾಡಿ ಮಲಸಾವುರಿ ದೇವಸ್ತಾನದ ಹತ್ತಿರ ಇರುವ ತಿರುವು ರಸ್ತೆ ಬಳಿ ಅವರ ಹಿಂದಿನಿಂದ ಅಂದರೆ ಸೈಬ್ರಕಟ್ಟೆ ಕಡೆಯಿಂದ ಆರೋಪಿ ಮಂಜುನಾಥ ಸಫಲಿಗ ರವರು ಅವರ  KA.20.EL.5368 ನೇ ಮೋಟಾರ್‌ ಸೈಕಲ್‌ ನಲ್ಲಿ ಅಭಿಷೇಕ್‌ ರವರನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಫಿರ್ಯಾದಿದಾರರ ಸ್ಕೂಟಿಯನ್ನು ಓವರ್‌ಟೇಕ್‌ ಮಾಡಿ ಮುಂದಕ್ಕೆ ಹೋಗಿ ತಿರುವು ರಸ್ತೆಯಲ್ಲಿ ಆರೋಪಿಯ ಹತೋಟಿ ತಪ್ಪಿ ಮೋಟಾರ್‌ ಸೈಕಲ್‌ ಸಮೇತ ಇಬ್ಬರೂ ಥಾರು ರಸ್ತೆಯ ಮೇಲೆ ಬಿದ್ದರು ಈ ಅಫಘಾತದಿಂದ ಆರೋಪಿ ಸವಾರನ ಕೈಕಾಳಿಗೆ ಸಣ್ಣ ತರಚಿದ ಗಾಯವಾಗಿದ್ದು ಸಹ ಸವಾರ ಅಭಿಷೇಕ್‌ ರವರ ತಲೆಗೆ ತೀವೃ ರಕ್ತಗಾಯ ಕಿವಿಗೆ ಕೆನ್ನೆಗೆ ಭುಜಗಳಿಗೆ, ಕೈಕಾಲುಗಳಿಗೆ ಅಲ್ಲಿಲ್ಲಿ ರಕ್ತಗಾಯವಾಗಿದ್ದು ಅವರು ಪ್ರಜ್ಙಾಹೀನ ರಾಗಿರುತ್ತಾರೆ. ಕೂಡಲೇ ಅಭಿಷೇಕ್‌ ರವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 180/2022 ಕಲಂ : 279, 338 IPC ಯಂತೆ ಪ್ರಕರಣ ದಾಖಲಿಸಿರುತ್ತಾರೆ.
  • ಕಾರ್ಕಳ : ದಿನಾಂಕ 29/10/2022 ರಂದು ಬೆಳಗ್ಗೆ 07:50 ಗಂಟೆಗೆ ಕಾರ್ಕಳ ತಾಲೂಕು ಮಾಳ ಗ್ರಾಮದ ಮಾಳ ಚೆಕ್ ಪೊಸ್ಟ್ ನಿಂದ 1.5 ಕಿ.ಮೀ ದೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ದೇವಿಪ್ರಸಾದ್ ಎಂಬವರು ತನ್ನ ಮೋಟಾರು ಸೈಕಲ್ ನಂಬ್ರ KA19EL6785   ನೇ ಯದನ್ನು ಕಾರ್ಕಳ ಕಡೆಯಿಂದ ಎಸ್ ಕೆ ಬಾರ್ಡರ್  ಕಡೆಗೆ  ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಎಸ್ ಕೆ ಬಾರ್ಡರ್ ಕಡೆಯಿಂದ   ಕಾರ್ಕಳ ಕಡೆಗೆ KA18C5279 ನೇ ಪಿಕಪ್ ವಾಹನದ ಚಾಲಕ ಕೇಶವ ತನ್ನ ವಾಹನವನ್ನು ಅತಿವೇಗ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಬಲಭಾಗಕ್ಕೆ ಚಲಾಯಿಸಿಕೊಂಡು  ಬಂದು ದೇವಿಪ್ರಸಾದ್ ಶೆಟ್ಟಿ  ರವರ  ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ದೇವಿಪ್ರಸಾದ್ ಶೆಟ್ಟಿ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು, ಅವರ ಬಲಕೈ,ಬಲತೊಡೆ, ಹಾಗೂ ತಲೆಗೆ ರಕ್ತಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಶಶಿಕಾಂತ್ ವಾಗ್ಳೆ (27), ತಂದೆ: ದಯಾನಂದ ವಾಗ್ಳೆ  ವಾಸ: ಸರಕಾರಿ ಪ್ರಥಮ ದರ್ಜೆ ಕಾಲೇಜ್ ಬಳಿ,  ಮುನಿಯಾಲು ವರಂಗ ಗ್ರಾಮ ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 136/2022 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿರುತ್ತಾರೆ.
  • ಹಿರಿಯಡ್ಕ: ಪಿರ್ಯಾದಿ ತನುಜ ಶೆಟ್ಟಿ  (46) ಗಂಡ: ಸುವೀನ್‌ ಸಾಗರ್‌ ವಾಸ: ವೈಶಾಲಿ  4 ನೇ ಕ್ರಾಸ್‌‌ ಇಂದ್ರಾಣಿ  ದೇವಾಸ್ಥಾನದ ರಸ್ತೆ ಇಂದ್ರಾಳಿ  ಶೀವಳ್ಳಿ ಗ್ರಾಮ ಇವರು  ದಿನಾಂಕ: 29/10/2022 ರಂದು ತನ್ನ  ಬಾಬ್ತು KA-19-MM-4264 ನೇ ಕಾರಿನಲ್ಲಿ  ಪೆರ್ಡೂರು ದೇವಾಸ್ಥಾನಕ್ಕೆ ಹೋಗಿ ವಾಪಾಸು ಮಣಿಪಾಲಕ್ಕೆ   ರಾಹೆ 169 ಎ ರಲ್ಲಿ ಬರುತ್ತಾ   ಮದ್ಯಾಹ್ನ ಸಮಯ ಸುಮಾರು 1:00 ಗಂಟೆಗೆ ಬೊಮ್ಮಾರಬೆಟ್ಟು ಗ್ರಾಮದ   ಪಿ,ಯು ಕಾಲೇಜ್‌  ಬಳಿ  ತಲುಪುವಾಗ  ತನ್ನ ಎದುರಿನಿಂದ ಅಂದರೆ  ಹಿರಿಯಡ್ಕ ಕಡೆಯಿಂದ  ಪೆರ್ಡೂರು ಕಡೆಗೆ  ಓರ್ವ  ಮೋಟಾರ್‌ ಸವಾರ ಮೋಟಾರ್‌  ಸೈಕಲನ್ನು ಆತನ ಮುಂದಿನಿಂದ ಪೆರ್ಡೂರು ಕಡೆಗೆ ಹೋಗುತ್ತಿದ್ದ ಇಕೋ ಸ್ಪೋರ್ಟ್ಸ ಕಾರನ್ನು ಬಲಭಾಗದಿಂದ ಓವರ್‌ ಟೇಕ್‌ ಮಾಡಿಕೊಂಡು ಅತೀ ವೇಗ ಹಾಗೂ ಅಜಾಗರೂಕತೆಯಿಂದ ವ್ಹೀಲಿಂಗ್ ಮಾಡುತ್ತಾ ಸವಾರಿ ಮಾಡಿಕೊಂಡು  ಇಕೋ ಸ್ಪೋರ್ಟ್ಸ  ಕಾರನ್ನು ಹಿಂದಿಕ್ಕಿ ಮುಂದೆ ತೀರಾ ಬಲಭಾಗಕ್ಕೆ ಬಂದು  ಪಿರ್ಯಾದುದಾರರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರಿನ ಎದುರು ಬಲ ಭಾಗಕ್ಕೆ  ಢಿಕ್ಕಿ ಹೊಡೆದಿದ್ದು, ಪರಿಣಾಮ ಆತನು ರಸ್ತೆಗೆ ಬಿದ್ದಿರುತ್ತಾನೆ. ಆಗ ಸದ್ರಿ ಮೋಟಾರು ಸೈಕಲ್ ಸವಾರನು ಇಕೋ ಸ್ಪೋರ್ಟ್ಸ ಕಾರಿನ ಅಡಿ ಸಿಲುಕುವುದನ್ನು ತಪ್ಪಿಸುವ ಸಲುವಾಗಿ ಸದರಿ ಕಾರನ್ನು ಅದರ ಚಾಲಕನು  ರಸ್ತೆಯ ತೀರಾ ಎಡ ಭಾಗಕ್ಕೆ ಚಲಾಯಿಸಿದ ಕಾರಣ ಸದರಿ ಕಾರು ರಸ್ತೆ ಬದಿಯ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ಚರಂಡಿ ಆಚೆಗೆ ಹೋಗಿರುತ್ತದೆ.   ಅಪಘಾತದಿಂದ ಮೋಟಾರು ಸೈಕಲ್‌‌ ಸವಾರನ  ತಲೆಗೆ ತೀವೃ ಸ್ವರೂಪದ ರಕ್ತಗಾಯವಾಗಿದ್ದು ಪ್ರಜ್ಞಾ ಹೀನನಾಗಿರುತ್ತಾನೆ. ನಂತರ ಅಲ್ಲಿ  ಜನ ಸೇರಿದ್ದು ಮೋಟಾರ್‌ ಸೈಕಲ್‌ ಸವಾರ ಪುತ್ತಿಗೆಯ ವಾಸಿ ಸ್ಟ್ಯಾಲಿನ್  ವಯಸ್ಸು ಸುಮಾರು 16-17 ವರ್ಷ ಎಂದು ತಿಳಿಸಿರುತ್ತಾರೆ.  ಮೋಟಾರ್‌ ಸೈಕಲ್‌  ಸಂಪೂರ್ಣ ಜಖಂಗೊಂಡಿದ್ದು ಅದರ ನೊಂದಣಿ ನಂಬ್ರ: DL-65-AC-2617 ಆಗಿರುತ್ತದೆ. ಹಾಗೂ ಪೆರ್ಡೂರು ಕಡೆ ಹೋಗುತ್ತಿದ್ದ ಕಾರಿನ ನಂಬ್ರ: KA-20-MC-1326 ನೇ ಇಕೋ ಸ್ಪೋರ್ಟ್ಸ್‌ ಕಾರು ಆಗಿದ್ದು ಸದ್ರಿ ಕಾರಿನ ಮೇಲೆ ವಿದ್ಯುತ್‌ ಕಂಬ ಬಿದ್ದು ಕಾರು ಜಖಂಗೊಂಡಿದ್ದು ಅಲ್ಲದೆ ಅದರ ಎರ್‌ ಬ್ಯಾಗ್‌ ತೆರೆದಿರುತ್ತದೆ . ಪಿರ್ಯಾದುದಾರರ ಕಾರಿನ ಎರ್‌ಬ್ಯಾಗ್‌ ಕೂಡ ತೆರೆದಿದ್ದು ಅಲ್ಲದೆ ಎದುರು ಬಲಭಾಗ ಜಖಂಗೊಂಡಿರುತ್ತದೆ ಗಾಯಗೊಂಡ ಸ್ಟಾಲಿನ್‌ನನ್ನು ಅಲ್ಲಿ ಸೇರಿದವರು ಒಂದು ಅಂಬುಲೆನ್ಸನಲ್ಲಿ ಕಳುಹಿಸಿಕೊಟ್ಟಿದ್ದು, ಬಳಿಕ ತಿಳಿಯಲಾಗಿ  ಗಾಯಗೊಂಡ ಮೋಟಾರು ಸೈಕಲ್ ಸವಾರ ಸ್ಟ್ಯಾಲಿನ್ ನನ್ನು ಚಿಕಿತ್ಸೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿ ವೈಧ್ಯರು ಆತನನ್ನು  ಪರೀಕ್ಷಿಸಿ ಮೃತಪಟ್ಟಿರುವ ಬಗ್ಗೆ  ತಿಳಿಸಿರುವುದಾಗಿ  ತಿಳಿದು ಬಂದಿರುತ್ತದೆ  ಈ ಅಪಘಾತಕ್ಕೆ ಮೋಟಾರು ಸೈಕಲ್ ನಂಬ್ರ DL-65-AC-2617 ನೇದರ ಸವಾರ ಮೃತ ಸ್ಟ್ಯಾಲಿನ್ ರವರ ಅತೀವೇಗ ಹಾಗೂ ಅಜಾಗರೂಕತೆಯಯ ಸವಾರಿಯೇ ಕಾರಣವಾಗಿರುತ್ತದೆ. ಈ ಬಗ್ಗೆ ಹಿರಿಯಡಕ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 70/2022      ಕಲಂ: 279, 304 (A) IPC & 4 R/W 181 IMV ACT ಯಂತೆ ಪ್ರಕರಣ ದಾಖಲಿಸಿರುತ್ತಾರೆ.

ಅಸ್ವಾಭಾವಿಕ ಮರಣ ಪ್ರಕರಣ:

  • ಹೆಬ್ರಿ:  ಪಿರ್ಯಾದಿ ಮೀನಾ (49 ವರ್ಷ)  ಗಂಡ; ಗೋಪಾಲ ನಜ್ರರಿ ವಾಸ: ಚೆಲ್ಲಕಾರ್ , ದೇಕಿಯಾಜುಳ್ಳಿ,     ಸೋನಿತ್ ಪುರ  ಜಿಲ್ಲೆ ,  ಅಸ್ಲಾಂ  ರಾಜ್ಯ ಇವರು ತನ್ನ ಗಂಡ ಗೋಪಾಲ್ ನಜ್ರರಿ (57) ಮತ್ತು ಸಂಬಂಧಿ ರುದ್ರ ಬಸ್ಮಾತಲಿ ಇವರೊಂದಿಗೆ ಶಿವಪುರದ ಮುಳ್ಳುಗುಡ್ಡೆಯ ಎಸ್.ಎಸ್ ಇಂಡಸ್ಟೀಸ್ ಗೇರು ಬೀಜ ಪ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡು ಪ್ಯಾಕ್ಟರಿಯ ಬದಿಯಲ್ಲಿರುವ ಬಿಡಾರದಲ್ಲಿ ವಾಸ ಮಾಡಿ ಕೊಂಡಿರುವುದಾಗಿದೆ.  ದಿನಾಂಕ; 29/10/2022 ರಂದು ಗೋಪಾಲ ನಜ್ರರಿ ರವರು ಸಂಜೆ 5-00 ಗಂಟೆಯ ತನಕ ಗೇರು ಬೀಜ ಪ್ಯಾಕ್ಟರಿಯಲ್ಲಿ ಕೆಲಸ ಮಾಡಿ ಬಿಡಾರಕ್ಕೆ ಹೋದವರಿಗೆ ಅರಾಮ ಇರದ ಕಾರಣ ಬಿಡಾರದಲ್ಲಿ ಮಲಗಿದವರು ಸಂಜೆ ಸುಮಾರು 5-30 ಗಂಟೆಗೆ ಮನೆಯಲ್ಲಿ ವಾಂತಿ ಮಾಡಿದ್ದು. ಅವರನ್ನು ಪಿರ್ಯಾದಿದಾರರು ಅರೈಕೆ ಮಾಡಿದಾಗ ಮಾತನಾಡದ ಕಾರಣ ಅವರನ್ನು ಚಿಕಿತ್ಸೆಯ ಬಗ್ಗೆ 108 ಅಂಬುಲೈನ್ಸ್ ವಾಹನದಲ್ಲಿ ರಾತ್ರಿ ಸುಮಾರು 9-25 ಗಂಟೆಗೆ ಹೆಬ್ರಿ ಸರಕಾರಿ ಅಸ್ಪತ್ರೆಗೆ ತಂದು ವೈದ್ಯರಲ್ಲಿ ತೋರಿಸಿದಾಗ ವೈದ್ಯರು ಪರೀಕ್ಷಿಸಿ ಅವರು ಮೃತ ಪಟ್ಟಿರುತ್ತಾರೆಂದು ತಿಳಿಸಿದ್ದು. ಮೃತರು ಹೃದಯಾಘಾತದಿಂದ ಮೃತ ಪಟ್ಟಿರುವ ಸಾದ್ಯತೆ ಇರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ UDR NO 31/2022 U/s 174 CRPC ಯಂತೆ ಪ್ರಕರಣ ದಾಖಲಿಸಿರುತ್ತಾರೆ.

ಹೆಂಗಸು ಕಾಣೆ ಪ್ರಕರಣ

  • ಪಡುಬಿದ್ರಿ : ಪಿರ್ಯಾದಿ: ಶ್ರೀಕಾಂತ್ ಮರಿಯಪ್ಪ ಹರಿಜನ, (33)ಮರಿಯಪ್ಪ ನೀಲಪ್ಪ ಹರಿಜನ, ವಾಸ: ಮಾರನ ಬೀಡ ಗ್ರಾಮ, ಇವರು  9 ವರ್ಷದ ಹಿಂದೆ ದೀಪಾ(28) ಎಂಬವರನ್ನು ಪ್ರೀತಿಸಿ ಮದುವೆ ಆಗಿದ್ದು ಮಗಳು ಸಿಂಚನ, ಮಗ ಶ್ರೇಯಸ್  ಎಂಬ ಇಬ್ಬರು ಮಕ್ಕಳಿದ್ದು, ಸುಮಾರು 8 ವರ್ಷಗಳ ವರಗೆ ಅನೋನ್ಯವಾಗಿದ್ದು ಬಳಿಕ ಸುಮಾರು 1 ವರ್ಷದ ಹಿಂದೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಸಣ್ಣ ಸಣ್ಣ ವಿಚಾರಕ್ಕೆ ಜಗಳವಾಡುತ್ತಿದ್ದು ಇದರ ಬಗ್ಗೆ ಹೆಂಡತಿಗೆ ಬುದ್ದಿವಾದ ಹೇಳುವ ಬಗ್ಗೆ ಪಿರ್ಯಾದುದಾರರು ಹೆಂಡತಿಯನ್ನು ಅವರ ತಾಯಿಯ ಮನೆಗೆ ಕರೆದುಕೊಂಡು ಹೋಗಿದ್ದು ದೀಪಾರವರು ಅವರ ತಾಯಿಯ ಮನೆಯಲ್ಲೇ ಇದ್ದು ಸುಮಾರು 4 ತಿಂಗಳ ನಂತರ ಹಾನಗಲ್‌ನ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಪಿರ್ಯಾದಿದಾರರ ಮೇಲೆ ದೂರನ್ನ ನೀಡಿದ್ದು ಇಬ್ಬರಿಗೂ ಅನೋನ್ಯತೆಯಿಂದ ಇರುವಂತೆ ಬುದ್ದಿವಾದ ಹೇಳಿ ಕಳುಹಿಸಿರುತ್ತಾರೆ.  ಬಳಿಕ ಪಿರ್ಯಾದಿದಾರರು ಹೆಂಡತಿ ದೀಪಾ ಮತ್ತು ಮಗ ಶ್ರೇಯಸ್‌ನನ್ನು ಜೊತೆಯಲ್ಲಿ ಕರೆದುಕೊಂಡು  ಕೆಲಸಕ್ಕಾಗಿ ಸುಮಾರು 15 ದಿನಗಳ ಹಿಂದೆ ಪಡುಬಿದ್ರಿಗೆ ಬಂದು ಪಡುಬಿದ್ರಿಯ ಸುಣ್ಣದ ಗೂಡು ಎಂಬಲ್ಲಿನ ಇಮ್ತಿಯಾಜ್ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಪಿರ್ಯಾದುದಾರರು ಟಿಪ್ಪರ್ ಲಾರಿ ಚಾಲಕನಾಗಿ ಕೆಲಸಮಾಡಿಕೊಂಡಿದ್ದು, ದಿನಾಂಕ: 22.10.2022 ರಂದು ಪಿರ್ಯಾದುದಾರರು ಹಾಗೂ ಅವರ ಹೆಂಡತಿ ದೀಪಾ ರವರೊಂದಿಗೆ ಗಲಾಟೆ ಮಾಡಿಕೊಂಡಿದ್ದು ಈ ವಿಚಾರದಲ್ಲಿ ಮರುದಿನ  ದೀಪಾಳ ತಮ್ಮ ಸುನೀಲ ಹಾಗೂ ಸಂಬಂದಿ ಮೋಹನ ರವರು ಮನೆಗೆ ಬಂದು ಪಿರ್ಯಾದುದಾರರೊಂದಿಗೆ ಜಗಳ ಮಾಡಿ ಹೋಗಿರುತ್ತಾರೆ. ಬಳಿಕ ಪಿರ್ಯಾದುದಾರರು ಹೆಂಡತಿಯೊಂದಿಗೆ ಅನೋನ್ಯತೆಯಿಂದ ಇದ್ದು ಈ ದಿನ ದಿನಾಂಕ: 29.10.2022 ರಂದು ಬೆಳಿಗ್ಗೆ 08:00 ಗಂಟೆಗೆ ಎಂದಿನಂತೆ ಕೆಲಸದ ಬಗ್ಗೆ ಪಿರ್ಯಾದುದಾರರು ಮನೆಯಿಂದ ಹೋಗಿದ್ದು ಮನೆಯಲ್ಲಿ ಹೆಂಡತಿ ಮತ್ತು ಮಗ ಇದ್ದು ಸಂಜೆ 6:00 ಗಂಟೆಗೆ ಹೆಂಡತಿ ಜೊತೆ ಮಾತನಾಡಲು ಪಿರ್ಯಾದಿದಾರರು ಪಕ್ಕದ ಮನೆಯವರಾದ ಬಸವರಾಜ್ ಎಂಬವರಿಗೆ  ಕರೆಮಾಡಿ ಪೋನ್‌ ಕೊಡುವಂತೆ ತಿಳಿಸಿದ್ದು ಆ ಸಮಯ ಮನೆಯ ಬಾಗಿಲು ಹಾಕಿರುವುದಾಗಿ ಮನೆಯಲ್ಲಿ ಯಾರೂ ಇಲ್ಲದಿರುವುದಾಗಿ ತಿಳಿಸಿರುತ್ತಾರೆ. ಪಿರ್ಯಾದುದಾರರು ಕೂಡಲೇ ಮನೆಗೆ ಬಂದು ನೋಡಿದಾಗ ಬಾಗಿಲು ಚಿಲಕ ಹಾಕಿದ್ದು ಮನೆಯ ಒಳಗಡೆ ಹೋದಾಗ ಹೆಂಡತಿ ಮತ್ತು ಮಗನ ಬಟ್ಟೆ ಬರೆಗಳು ಇಲ್ಲದೇ ಇದ್ದು ಅಕ್ಕ ಪಕ್ಕದವರನ್ನು ಸಂಬಂದಿಕರನ್ನು ವಿಚಾರಿಸಿದಾಗ ಹೆಂಡತಿ ಮತ್ತು ಮಗ ಪತ್ತೆ ಆಗಿರುವುದಿಲ್ಲ. ದಿನಾಂಕ: 29.10.2022 ರಂದು ಬೆಳಿಗ್ಗೆ 08:00 ಗಂಟೆಯಿಂದ ಸಂಜೆ 6:00 ಗಂಟೆಯ ಮದ್ಯಾವಧಿಯಲ್ಲಿ ಪಿರ್ಯಾದುದಾರರ ಹೆಂಡತಿ ದೀಪಾ ಮತ್ತು ಮಗ ಶ್ರೇಯಸ್ ಎಂಬವರು ಯಾರಿಗೂ ಹೇಳದೆ ಮನೆಯಿಂದ ಹೋದವರು   ಈವರೆಗೆ ವಾಪಾಸ್ಸು ಮನೆಗೆ ಬಾರದೇ ಹಾಗೂ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ. ಈ ಬಗ್ಗೆಪಡುಬಿದ್ರಿ ಪೊಲೀಸ್ ಠಾಣೆ. ಅಪರಾಧ ಕ್ರಮಾಂಕ : 137/2022, ಕಲಂ: ಹೆಂಗಸು ಮತ್ತು ಮಗು ಕಾಣೆ.  ಯಂತೆ ಪ್ರಕರಣ ದಾಖಲಿಸಿರುತ್ತಾರೆ.

ಇತ್ತೀಚಿನ ನವೀಕರಣ​ : 30-10-2022 11:01 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080