ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಹೆಬ್ರಿ: ದಿನಾಂಕ 29/10/2021 ರಂದು ಪಿರ್ಯಾದಿದಾರರಾದ  ಗಣೇಶ.ಎಂ (28), ತಂದೆ: ಮಂಜುನಾಥ, ವಾಸ: ಸುರೇಖಾ ನಗರ ಜೋಡುಕಟ್ಟೆ ಮಿಯಾರು ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಇವರು ತನ್ನ ಕೆಲಸಗಾರರಾದ ಸೈಯದ್ ಅಸೀಪ್, ಮಂಜುನಾಥ ಗೌಡ, ಮಹದೇವ, ನಾಗರಾಜ, ವಿ.ಆರ್.ಪಿ ಮಂಜುನಾಥ , ಕ್ಲೀನರ್ ಶ್ರೀಜಿತ್, ಎಂ.ಎಸ್ ಮಣಿಕಂಠ ರವರ ಜೊತೆ ಚಾಲಕ ಯಜ್ಞೇಶ್ ರವರೊಂದಿಗೆ KA-20-C-2325 ನೇ ಟಾಟಾ 909 ನೇ ವಾಹನದಲ್ಲಿ ಕುಳಿತು ಕೊಂಡು ಶಿವಮೊಗ್ಗದ ಶಿಕಾರಿಪುರದ ತೋಗರ್ಸಿ ಕಡೆಯಿಂದ ಕಾರ್ಕಳ ಕಡೆಗೆ ಹೊರಟಿದ್ದು. ಸಮಯ ಮದ್ಯಾಹ್ನ 1:15 ಗಂಟೆಗೆ ನಾಡ್ಪಾಲು ಗ್ರಾಮದ ಸೋಮೇಶ್ವರ ಘಾಟಿಯ ಅಗುಂಬೆ ಕಡೆಯಿಂದ ಬರುವ 10 ನೇ ತಿರುವಿನ ಬಳಿ ತಲುಪಿದಾಗ ವಾಹನವನ್ನು ಚಲಾಯಿಸುತ್ತಿದ್ದ ಯಜ್ಞೇಶ್ ಇವರು ವಾಹನವನ್ನು ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿದ ಪರಿಣಾಮ ವಾಹನವು ಚಾಲಕನ ಹತೋಟೀ ತಪ್ಪಿ ರಸ್ತೆಯ ಬಲಬದಿಯ ತಡೆ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ತಡೆಗೋಡೆಯು ಮುರಿದು ವಾಹನವು ಸುಮಾರು 50-60 ಅಡಿ ಕೆಳಗೆ ಕಂದಕಕ್ಕೆ ಉರುಳಿಕೊಂಡು ಮಗುಚಿ ಬಿದ್ದ ಪರಿಣಾಮ ವಾಹನದಲ್ಲಿದ್ದರು ವಾಹನದಿಂದ ಕಳಗೆ ಎಸೆಯಲ್ಪಪಟ್ಟಿದ್ದು. ಇದ್ದರಿಂದ ಪಿರ್ಯಾದಿದಾರರಿಗೆ ಮತ್ತು ಮಂಜುನಾಥ ಗೌಡ, ಮಹದೇವ , ಸೈಯದ್ ಅಸೀಪ್ ಮತ್ತು ನಾಗರಾಜ್ ರವರಿಗೆ ತೀವ್ರ ಸ್ವರೂಪದ ಗಾಯವಾಗಿದ್ದು. ಚಾಲಕ ಯಜ್ಞೇಶ್, ಕ್ಲೀನರ್ ಶ್ರೀಜಿತ್  ಮತ್ತು ಇಬ್ಬರು ಲೋಡರ್ ಗಳಾದ ವಿ.ಆರ್.ಪಿ ಮಂಜುನಾಥ ಮತ್ತು ಮಣಿಕಂಠ ಇವರುಗಳು ಕಂದಕದಲ್ಲಿರುವ ಶಿಲೆಕಲ್ಲಿನ ಮೇಲೆ ಬಿದ್ದ ಪರಿಣಾಮ ಅವರಿಗೆ ತೀವ್ರ ಸ್ವರೂಪದ ಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 64/2021 ಕಲಂ: 279, 337, 338, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 29/10/2021 ರಂದು 16: 25 ಗಂಟೆಗೆ KL-54-K-4999  ನೇ ಕಾರನ್ನು ಅದರ ಚಾಲಕನಾದ ಶ್ರೀಹರಿ ಮಂಚಿಕೆರೆ ಬಳಿ ಹಾದು ಹೋಗಿರುವ ಮಣಿಪಾಲ- ಅಲೆವೂರು ಮುಖ್ಯ ರಸ್ತೆಯಲ್ಲಿ ಮಣಿಪಾಲದಿಂದ ಅಲೆವೂರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ತನ್ನ ಪಥವನ್ನು ಬಿಟ್ಟು ರಸ್ತೆಯ ತೀರಾ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು  ರಸ್ತೆಯಲ್ಲಿ ಮಣಿಪಾಲದ ಕಡೆಗೆ ಉಮೇಶ್‌ ಮಡಿವಾಳ ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ  KA-20-R-274 ನೇ ಮೋಟಾರ್‌ ಸೈಕಲ್‌‌ಗೆ ಡಿಕ್ಕಿಹೊಡೆದು ಅಪಘಾತಪಡಿಸಿ ಮೋಟಾರ್ ಸೈಕಲ್‌  ಮತ್ತು ಉಮೇಶ್‌ ಮಡಿವಾಳ ರವರನ್ನು ತಳ್ಳಿಕೊಂಡು ಹೋದ ಪರಿಣಾಮ  ಉಮೇಶ್‌ ಮಡಿವಾಳ ರವರ ಕೈ ಮತ್ತು ಕಾಲಿಗೆ  ಜಜ್ಜಿದ ಗಾಯ ಮತ್ತು  ತಲೆ ಮತ್ತು ಮೈಕೈಗೆ ತೀವ್ರ ಸ್ವರೂಪದ ರಕ್ತ ಗಾಯ ಹಾಗೂ ಎರಡೂ ವಾಹನಗಳು ಜಖಂಗೊಂಡಿರುತ್ತವೆ. ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆ ದಾಖಲಿಸಲಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 142/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ ದಿನೇಶ ಎಮ್. ಮೊಗವೀರ (37), ತಂದೆ: ದಿ: ಬಚ್ಚ ಮೊಗವೀರ, ವಾಸ: ಗದ್ದೆಮನೆ, ಪಡುಕೋಣೆ ಹಡವು  ಗ್ರಾಮ, ಬೈಂಧೂರು  ತಾಲೂಕು ಇವರ ತಂದೆ ಬಚ್ಚ ಮೊಗವೀರ (75) ಇವರು ದಿನಾಂಕ 29/10/2021 ರಂದು ಬೈಂದೂರು ತಾಲೂಕು  ಹಡವು ಗ್ರಾಮದ ಪಡುಕೋಣೆ ಸಾವತಿ ಬೆಟ್ಟುವಿನಲ್ಲಿ ತಮಗೆ ಸೇರಿದ ಗದ್ದೆಯಲ್ಲಿ ಕೃಷಿ ಕೆಲಸ ಮಾಡಿಕೊಂಡಿರುವಾಗ ಮದ್ಯಾಹ್ನ 12:00 ಗಂಟೆಗೆ ಎದೆನೋವು ಕಾಣಿಸಿಕೊಂಡು ತೀವ್ರವಾಗಿ ಅಸ್ವಸ್ಥರಾಗಿ ಗದ್ದೆಯಲ್ಲಿ ಬಿದ್ದಿದ್ದು ಬಚ್ಚ ಮೊಗವೀರರವರನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ 13:40 ಗಂಟೆಗೆ ವೈದ್ಯರು ಪರೀಕ್ಷಿಸಿ ಬಚ್ಚ ಮೊಗವೀರರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯುಡಿಆರ್‌ ಕ್ರಮಾಂಕ 32/2021 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಕುಂದಾಪುರ ಕಸಬಾ ಗ್ರಾಮದ ಮೀನು ಮಾರ್ಕೇಟ್ ಎದುರಿನ ಪಿರ್ಯಾದು ಉಮೇಶ ಕೆ ಇವರ ಸ್ವಂತ ಕಟ್ಟಡದ ಕೋಣೆಯಲ್ಲಿ ಶಿರಸಿ ಮೂಲದ ಗಂಗಮ್ಮ 65 ವರ್ಷ ರವರು ಅವರ ಸಂಬಂಧಿಯಾದ ಸುರೇಶ ಎಂಬುವವರೊಂದಿಗೆ  ವಾಸವಾಗಿದ್ದು, ದಿನಾಂಕ 27-10-2021 ರಂದು ಬೆಳಿಗ್ಗೆ 07:45 ಗಂಟೆ ಗಂಗಮ್ಮರವರು ಪಿರ್ಯಾದುದಾರರ ಅಂಗಡಿಯಿಂದ ಮಾಂಸ ತೆಗೆದುಕೊಂಡು ಹೋಗಿದ್ದು, ನಂತರ ಗಂಗಮ್ಮರವರನ್ನುಯಾರೂ ನೋಡದೇ ಇದ್ದು ದಿನಾಂಕ 29-10-2021 ರಂದು  12:45   ಗಂಟೆಯ ವೇಳೆಗೆ ಪಿರ್ಯಾದಿದಾರರಾದ ಉಮೇಶ ಕೆ (56), ತಂದೆ: ಬಾಬು ಕೆ, ವಾಸ: ಅಗ್ನಿಗುಡ್ಡು ಕಂಪೌಂಡ್, ಈಸ್ಟ್ ಬ್ಲಾಕ್ ರಸ್ತೆ, ಕುಂದಾಪುರ ಕಸಬಾ ಗ್ರಾಮ, ಕುಂದಾಪುರ ತಾಲೂಕು ಇವರ ಕಟ್ಟಡದ ಬಳಿ ಹೋದಾಗ ಬಾಗಿಲು ಅರ್ಧ ತೆರೆದಿದ್ದು ಒಳಗಡೆ ನೋಡಲಾಗಿ ನೆಲೆದ ಮೇಲೆ ಮಲಗಿದ್ದ ಸ್ಥಿತಿಯಲ್ಲಿ ಗಂಗಮ್ಮರವರ ದೇಹ ಕಂಡುಬಂದಿದ್ದು,  ದೇಹವು ಕಪ್ಪಾಗಿದ್ದು ಮೈಮೇಲೆ ಗುಳ್ಳೆಗಳಿದ್ದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 44/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ಪಿರ್ಯಾದಿದಾರರಾದ ಮಾಧವ (25), ತಂದೆ: ಮಹೇಶ, ವಾಸ: ಲಲಿತಾ ನಿಲಯಖಜಾನೆ ಶಿವಪುರ ಗ್ರಾಮ ಹೆಬ್ರಿ ತಾಲೂಕು ಇವರ ತಂದೆ ಮಹೇಶ (65) ರವರು ಸುಮಾರು ವರ್ಷಗಳಿಂದ ಮದ್ಯಪಾನ ಮಾಡುವ ಚಟವನ್ನು ಹೊಂದಿದ್ದು ಇದರಿಂದ ಅವರ ಆರೋಗ್ಯ ಕೆಟ್ಟು ಹೋಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಇದೇ ವಿಚಾರದಲ್ಲಿ ಮನನೊಂದು ದಿನಾಂಕ 29/10/2021 ರಂದು ಬೆಳಿಗ್ಗೆ 09:00 ಗಂಟೆಯಿಂದ ಮಧ್ಯಾಹ್ನ 03:00 ಗಂಟೆಯ ಮಧ್ಯಾವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯ ಶಿವಪುರ ಗ್ರಾಮ ಖಜಾನೆ ಎಂಬಲ್ಲಿರುವ ವಾಸದ ಮನೆಯ ಕೋಣೆಯಲ್ಲಿರುವ ಪಕ್ಕಾಸಿಗೆ ಸೀರೆಯ ತುದಿಯನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್‌ ಕ್ರಮಾಂಕ 36/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಬ್ರಹ್ಮಾವರ: ದಿನಾಂಕ 29/10/2021 ರಂದು ಪಿರ್ಯಾದಿದಾರರಾದ ಗಣೇಶ್‌ ನಾಯ್ಕ (40), ತಂದೆ: ದಿ. ವೆಂಕಟೇಶ್‌ ನಾಯ್ಕ, ವಾಸ: ಕಂಗಿಬೆಟ್ಟು ಹಲುವಳ್ಳಿ ಗ್ರಾಮ , ಬ್ರಹ್ಮಾವರ ತಾಲೂಕು ಇವರ ತಮ್ಮ ಸುರೇಶ್‌ ನಾಯ್ಕ (35) ಇವರನ್ನು ಸಂಜೆ ವೇಳೆಗೆ ಅವರ ಮನೆಯ ಪರಿಸರದ ರಿಕ್ಷಾ ಚಾಲಕ ಆರೋಪಿ ಮಹೇಶ್‌ ಕುಲಾಲ್‌ ರವರು ರಿಕ್ಷಾದಲ್ಲಿ ಕರೆದುಕೊಂಡು ಹಲುವಳ್ಳಿ ಗ್ರಾಮದ ಕಂಗಿಬೆಟ್ಟು ಹಾಲಿನ ಡೈರಿಯಿಂದ ಪಶು ಆಹಾರದ ಚೀಲವನ್ನು ರಿಕ್ಷಾದಲ್ಲಿ ತಂದು, ಪಶು ಆಹಾರದ ಚೀಲವನ್ನು ಕಂಗಿಬೆಟ್ಟು ಪ್ರಭಾವತಿ ಶೆಡ್ತಿ ರವರ ಮನೆಗೆ ಹಾಕಲು ಸುರೇಶ್‌ ನಾಯ್ಕ ರವರು ಚೀಲವನ್ನು ತಲೆಯ ಮೇಲೆ ಹೊತ್ತುಕೊಂಡು ಸಂಜೆ 6:00 ಗಂಟೆಗೆ ಪ್ರಭಾವತಿ ಶೆಡ್ತಿ ಅವರ ಮನೆಯ ಮೆಟ್ಟಿಲ ಬಳಿ ಹೋಗುವಾಗ ಎಡವಿ ಬಿದ್ದು, ಕುತ್ತಿಗೆಯ ಭಾಗಕ್ಕೆ ಒಳ ಜಖಂ ಆಗಿ ತೀವೃ ಅಸ್ವಸ್ಥರಾಗಿ ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದು, ಆಗ ಆರೋಪಿಯು ಸುರೇಶ್‌ ನಾಯ್ಕ ರವರನ್ನು ಅವರ ಮನೆಯ ಬಳಿಗೆ ಕರೆದುಕೊಂಡು ಬಂದು ತಕ್ಷಣ ಚಿಕಿತ್ಸೆಯ ಬಗ್ಗೆ ಕರೆದುಕೊಂಡು ಹೋಗದೇ ನಿರ್ಲಕ್ಷ ವಹಿಸಿರುತ್ತಾರೆ. ಪಿರ್ಯಾದಿದಾರರ ಮನೆಯವರು ಅಂಬುಲೆನ್ಸ್‌ ಗೆ ಫೋನ್‌ ಮಾಡಿದ್ದು ಅದು ಬರುವುದು ತಡವಾಗುತ್ತದೆ ಎಂದು ತಿಳಿದು,  ಮನೆಯವರು ಆರೋಪಿಗೆ ಗದರಿಸಿ ಒತ್ತಾಯ ಮಾಡಿದ ಬಳಿಕ ಆರೋಪಿಯು ಸುರೇಶ್‌ ನಾಯ್ಕ ರವರನ್ನು ಚಿಕಿತ್ಸೆ ಬಗ್ಗೆ  ಬ್ರಹ್ಮಾವರ ಮಹೇಶ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಯ  ವೈದ್ಯರು ಪರೀಕ್ಷಿಸಿ ಸುರೇಶ್‌ ನಾಯ್ಕ ರವರು ಈಗಾಗಲೇ ದಾರಿ ಮಧ್ಯೆ ಮೃತ ಪಟ್ಟಿರುವುದಾಗಿ ಸಂಜೆ 6:45 ಗಂಟೆಗೆ ತಿಳಿಸಿರುತ್ತಾರೆ. ಎಂಬ ವಿಚಾರ ಪಿರ್ಯಾದಿದಾರರಿಗೆ ಅವರ ಅಣ್ಣ ಮಗಳು ಪೂರ್ಣಿಮಾಳು ತಿಳಿಸಿರುವುದಾಗಿದೆ. ಸುರೇಶ್‌ ನಾಯ್ಕ ರವರ ಮರಣಕ್ಕೆ ಕ್ಲಪ್ತ ಸಮಯದಲ್ಲಿ ಚಿಕಿತ್ಸೆಯ ಬಗ್ಗೆ ಆರೋಪಿ ಕರೆದುಕೊಂಡು ಹೋಗದೇ ಅನಗತ್ಯ ವಿಳಂಬ ಮಾಡಿ ನಿರ್ಲಕ್ಷ ವಹಿಸಿರುವುದೇ ಕಾರಣವಾಗಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 183/2021 ಕಲಂ: 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ದಿವಾಕರ್ ಇವರ ವಾಟ್ಸ್ ಅಫ್ ನಂಬ್ರಕ್ಕೆ ಅಪರಿಚಿತ ವ್ಯಕ್ತಿಗಳು ವಾಯ್ಸ್ ಸಂದೇಶ ಕಳುಹಿಸಿ ಪಿರ್ಯಾದಿದಾರಿಗೆ 25 ಲಕ್ಷ ಹಣ ಬಹುಮಾನ ಬಂದಿರುವುದಾಗಿ ತಿಳಿಸಿದ್ದಲ್ಲದೆ ಈ ಬಗ್ಗೆ ದಾಖಲಾತಿಗಳನ್ನು ವಾಟ್ಸ್ ಅಫ್ ಗೆ ಕಳುಹಿಸಿ ಪಿರ್ಯಾದಿದಾರರನ್ನು ನಂಬಿಸಿದಲ್ಲದೆ ನಂತರ  ಯಾರೋ ಅಪರಿಚಿತ ವ್ಯಕ್ತಿಗಳು ದೂರವಾಣಿ ಕರೆ ಮಾಡಿ, ವಿವಿಧ ಇಲಾಖೆಯ ಅಧಿಕಾರಿಗಳೆಂದು ನಂಬಿಸಿ ಬಹುಮಾನದ ಮೊತ್ತಕ್ಕೆ ಡಿಪಾಸಿಟ್ ಹಣವನ್ನು ಕಟ್ಟುವಂತೆ ತಿಳಿಸಿ ಎಸ್.ಬಿ.ಐ, ಐಡಿಬಿಐ ಬ್ಯಾಂಕ್ ಗಳ ವಿವಿಧ ಖಾತೆಗಳನ್ನು ನೀಡಿದ್ದು, ಇದನ್ನು ನಂಬಿ ಪಿರ್ಯಾದಿದಾರರು Jaldi Cash ನಿಂದ ರೂಪಾಯಿ 1,90,000/- ಹಾಗೂ IDBI Bank ಉಡುಪಿಯಿಂದ ರೂಪಾಯಿ 3,73,150/-  ರಂತೆ ಒಟ್ಟು ರೂಪಾಯಿ 5,63,150/- ಹಣವನ್ನು ಡಿಪಾಸಿಟ್ ಮಾಡಿರುತ್ತಾರೆ. ಪಿರ್ಯಾದಿದಾರರಿಗೆ  ಬಹುಮಾನದ ಹಣವನ್ನು ನೀಡದೆ,  ಡಿಪಾಸಿಟ್ ಮಾಡಿಸಿಕೊಂಡ ಹಣವನ್ನು ಕೂಡ ವಾಪಾಸ್ಸು ನೀಡದೆ ಒಟ್ಟು ರೂಪಾಯಿ 5,63,150/- ಹಣವನ್ನು ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 55/2021 ಕಲಂ: 66(c), 66(d) ಐ.ಟಿ. ಆಕ್ಟ್  420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 30-10-2021 10:23 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080